ಕುಂದಾಪುರ, ಫೆ.12: ಲೂರ್ದ್ ಮಾತೆಯ ಹಬ್ಬದಂದು ಫೆಬ್ರವರಿ 11 ರಂದು ಸಂಜೆ ಅತ್ಯಂತ ಪ್ರಾಚೀನ ದೇವಾಲಯವಾದ ಹೋಲಿ ರೋಜರಿ ದೇವಾಲಯದ ವಠಾರದಲ್ಲಿರುವ ಲೂರ್ದ್ ಮಾತೆಯ ಗ್ರೊಟ್ಟೊದ ಎದುರುಗಡೆ ಲೂರ್ದ್ ಮಾತೆಯ ಹಬ್ಬದ ಪ್ರಯುಕ್ತ ಭಕ್ತಿಭಾವದ ಜಪಮಾಲ ಭಕ್ತಿಯನ್ನು ಆಚರಿಸಲಾಯಿತು.
“ರೋಜರಿ ಮಾತೆಯು ಫ್ರಾನ್ಸ್ ದೇಶದ ಲೌರ್ಡೆಸ್ ಎಂಬ ಊರಿನಲ್ಲಿ, ಬರ್ನಾಡೇಟ್ ಸೌಬಿರಸ್ ಎಂಬ 14 ವರ್ಷದ ಹೆಣ್ಣು ಮಗಳಿಗೆ 1858 ರಲ್ಲಿ, 18 ಭಾರಿ ದರ್ಶನ ನೀಡಿದಳು, ಲೌರ್ಡೆಸ್ ಉರಿನಲ್ಲಿ ದರ್ಶನ ನೀಡಿದಕ್ಕೆ ರೋಜರಿ ಮಾತೆಗೆ ಅಲ್ಲಿ ಲೂರ್ದ ಮಾತೆಯೆಂದು ಕರೆಯಲ್ಪಟ್ಟರು. ಮುಂದೆ ಅದು ಪ್ರಸಿದ್ದ ಪವಾಡ ನಗರವಾಗಿ ಪರಿವರ್ತನೆಯ್ತು. ಇಂದು ಅಲ್ಲಿ ಮಿಲಿಯಾಕಟ್ಟಲೆ ಜನರು ಭೇಟಿ ನೀಡಿ ತಮ್ಮ ಕೋರಿಕೆ, ರೋಗ ಋಜಿನಾಗಳಗಳನ್ನು ಗುಣ ಪಡಿಸಿಕೊಳ್ಳುತ್ತಾರೆ. ಇಲ್ಲಿ ಕುಂದಾಪುರ ರೋಜರಿ ಮಾತಾ ಚರ್ಚಿನ ವಠಾರದಲ್ಲಿ ಹಲವಾರು ವರ್ಷಗಳಿಂದ ಲೂರ್ದ ಮಾತೆಯ ಗ್ರೊಟ್ಟೊವಿದೆ, ಇಲ್ಲಿಯು ಕೂಡ ಜಾತಿ ಭೇದವಿಲ್ಲದೆ ಜನರು ಬಂದು ಮೌನವಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ, ಇತರ ಧರ್ಮಿಯರಿಗೆ ದೇವರ ಮೇಲೆ ಇರುವ ನಂಬಿಕೆ ವಿಶೇಷವಾದದ್ದು, ಅವರು ತಮ್ಮ ಚಪ್ಪಲಿಗಳನ್ನು ತೆಗೆದಿಟ್ಟು ಭಕ್ತಿಭಾವದ, ಶ್ರದ್ದೆಯ ಪ್ರಾರ್ಥನೆ ನೋಡುವಾಗ ಹೆಮ್ಮೆಯೆನ್ನಿಸುತ್ತದೆ, ಅವರ ಭಕ್ತಿಯನ್ನು ನೋಡಿದಾಗ ಅವರಿಗೆ ರೋಜರಿ ಮಾತೆಯಿಂದ ಅವರ ಕೋರಿಕೆ ಇಡೇರಿರಬಹುದೆಂದು ನನ್ನ ನಂಬಿಕೆ, ಅವರ ಭಕ್ತಿ ನಮಗೆ ಆದರ್ಶವಾಗಲಿ. ದುಖ ಕಶ್ಟಗಳನ್ನು ಅನುಭವಿಸದೆ ನಮಗೆ ಆನಂದ ಸಿಗಲಾರದು. ನಮ್ಮ ಕಶ್ಟ ದುಖದಲ್ಲಿ ನಾವು ದೇವರ ಮಾತೆ ಮೇರಿ ಮಾತೆಯಲ್ಲಿ ಪ್ರಾರ್ಥಿಸಿ ಪರಿಹಾರ ಪಡೆದುಕೊಳ್ಳಣ’ ಎಂದು ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ತಮ್ಮ ಪ್ರವಚನದಲ್ಲಿ ತಿಳಿಸಿದರು.
ರೋಜರಿ ಚರ್ಚಿನ ಭಕ್ತರು ಜಪಮಾಲೆಯ ಪ್ರಾರ್ಥನ ವಿಧಿಯಲ್ಲಿ ಶ್ರದ್ದಾ ಭಕ್ತಿಯಿಂದ ಪಾಲ್ಗೊಂಡರು ಜಪಮಾಲ ಭಕ್ತಿಯ ನಂತರ ಲೂರ್ದ್ ಮಾತೆಯನ್ನು ಬಣ್ಣ ಬಣ್ಣದ ಮೇಣದ ಬತ್ತಿಗಳ ಮೂಲಕ ಮೆರವಣಿಗೆ ಮಾಡಲಾಯಿತು. ಭಕ್ತಾಧಿಗಳಿಗೆ ಉತ್ತಮ ಆರೋಗ್ಯ, ರೋಗ ಋಜಿನಗಳನ್ನು ಗುಣ ಆಗುವಂತೆ ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಸಹಾಯಕ ಧರ್ಮಗುರು ವಂ| ಅಶ್ವಿನ್ ಆರಾನ್ಹಾ ಶಿರದ ಮೆಲೆ ಕೈಯಿಟ್ಟು ಆಶಿರ್ವದಿಸಿದರು.
ಜಪಮಾಲ ಭಕ್ತಿಯ ಕಾರ್ಯಕ್ರಮವನ್ನು ಲೂರ್ದ್ ವಾಳೆಯವರು ನೇರವೆರಿಸಿದರು. ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸಂಗೀತ, ಲೂರ್ದ್ ವಾಳೆಯ ಪ್ರತಿನಿಧಿ ಫಾತಿಮಾ ವಾಜ್ ಉಪಸ್ಥಿತರಿದ್ದು. ಲೂರ್ದ್ ವಾಳೆಯ ಗುರಿಕಾರ ವಾಲ್ಟರ್ ಡಿಸೋಜಾ ವಂದಿಸಿದರು.
Month: February 2023
Novena preceding the Feast of Relic St. Anthony was held at Milagres Church – Jeppu /ಜೆಪ್ಪು ಮಿಲಾಗ್ರೆಸ್ ಚರ್ಚ್‌ನಲ್ಲಿ ಸೇಂಟ್ ಅಂತೋನಿಯವರ ರೆಲಿಕ್ ಹಬ್ಬದ ಪ್ರಯುಕ್ತ ಐದನೇ ದಿನದ ನೊವೆನಾ ನಡೆಯಿತು.
Mangaluru: Theme for the Day “Encourage Each other,and Speak Good words” The Novena Mass for the relic feast of St Anthony was held at Milagres Church at 6:00 p.m. Rev Fr Joseph Martis Parish Priest of Derebail was the main celebrant for mass. In his homily he spoke on the theme by highlighting different examples. Faith grows in good words, should encourage others to do good, when somebody does good encourage them. When someone does wrong correct them. Through our good words we develop we develop talents. Rev Fr. J B Crasta, Rev Fr Rupesh tauro, & Fr Larry Pinto con-celebrated the mass. At the end of the mass Fr Larry Pinto Conducted the Novena in honour of St Anthony during which special prayers were offered for all concreted Religious Men and women. St Agnes Choir Group sang and Joined in Thanksgiving
ಜೆಪ್ಪು ಮಿಲಾಗ್ರೆಸ್ ಚರ್ಚ್‌ನಲ್ಲಿ ಸೇಂಟ್ ಅಂತೋನಿಯವರ ರೆಲಿಕ್ ಹಬ್ಬದ ಪ್ರಯುಕ್ತ ಐದನೇ ದಿನದ ನೊವೆನಾ ನಡೆಯಿತು.
ಮಂಗಳೂರು: ಜೆಪ್ಪುವಿನ ಮಿಲಾಗ್ರೆಸ್ ಚರ್ಚ್‌ನಲ್ಲಿ ಪವಿತ್ರ ಆಂಥೋನಿಯವರ ಹಬ್ಬದ ಪೂರ್ವಭಾವಿ ನೊವೆನಾ ನಡೆಯಿತು.
“ಒಬ್ಬರಿಗೊಬ್ಬರು ಉತ್ತೇಜನ ನೀಡಿ, ಒಳ್ಳೆಯ ಮಾತುಗಳನ್ನು ಮಾತನಾಡಿ” ಎಂಬ ದಿನದ ವಿಷಯವಾಗಿ ಮಿಲಾಗ್ರೆಸ್ ಚರ್ಚ್‌ನಲ್ಲಿ ಸಂಜೆ 6:00 ಗಂಟೆಗೆ ಸೇಂಟ್ ಅಂತೋನಿಯವರ ಸ್ಮಾರಕ ಹಬ್ಬದ ನೊವೆನಾ ಮಾಸ್ ನಡೆಯಿತು. ದೇರೆಬೈಲ್‌ನ ವಂದನೀಯ ಫಾದರ್ ಜೋಸೆಫ್ ಮಾರ್ಟಿಸ್ ಪ್ಯಾರಿಷ್ ಪ್ರಧಾನ ಧರ್ಮಗುರುಗಳಾಗಿದ್ದು, ತಮ್ಮ ಪ್ರವಚನದಲ್ಲಿ ಅವರು ವಿಭಿನ್ನ ಉದಾಹರಣೆಗಳನ್ನು ಎತ್ತಿ ತೋರಿಸುವ ಮೂಲಕ ವಿಷಯದ ಕುರಿತು ಮಾತನಾಡಿದರು. ಒಳ್ಳೆಯ ಮಾತುಗಳಲ್ಲಿ ನಂಬಿಕೆ ಬೆಳೆಯುತ್ತದೆ, ಒಳ್ಳೆಯದನ್ನು ಮಾಡಲು ಇತರರನ್ನು ಪ್ರೋತ್ಸಾಹಿಸಬೇಕು, ಯಾರಾದರೂ ಒಳ್ಳೆಯದನ್ನು ಮಾಡಿದಾಗ ಅವರನ್ನು ಪ್ರೋತ್ಸಾಹಿಸಬೇಕು. ಯಾರಾದರೂ ತಪ್ಪು ಮಾಡಿದಾಗ ಅವರನ್ನು ಸರಿಪಡಿಸಿ. ನಮ್ಮ ಒಳ್ಳೆಯ ಮಾತುಗಳಿಂದ ನಾವು ಪ್ರತಿಭೆಯನ್ನು ಬೆಳೆಸಿಕೊಳ್ಳುತ್ತೇವೆ. ರೆವ್ ಫಾ. ಜೆ ಬಿ ಕ್ರಾಸ್ತಾ, ರೆವ್ ಫಾದರ್ ರೂಪೇಶ್ ತಾವ್ರೊ ಮತ್ತು ರೆವ್. ಫಾದರ್ ಲ್ಯಾರಿ ಪಿಂಟೊ ಸಾಮೂಹಿಕವಾಗಿ ಪ್ರಾರ್ಥನ ವಿಧಿಯನ್ನು ಆಚರಿಸಿದರು. ಫಾದರ್ ಲ್ಯಾರಿ ಪಿಂಟೊ ಅವರು ಸಂತ ಅಂತೋನಿಯವರ ಗೌರವಾರ್ಥ ನೊವೆನಾವನ್ನು ನಡೆಸಿದರು, ಈ ಸಂದರ್ಭದಲ್ಲಿ ಎಲ್ಲಾ ಧಾರ್ಮಿಕ ಪುರುಷ ಮತ್ತು ಮಹಿಳೆಯರಿಗೆ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ಸೇಂಟ್ ಆಗ್ನೆಸ್ ಗಾಯನ ಪಂಗಡ ಗಾಯನ ಮಾಡಿತು.
ಬೊಂದೆಲ್ ಸಂತ ಲಾರೆನ್ಸ್ ಅನುದಾನ ರಹಿತ ಶಾಲಾ ವಿದ್ಯಾರ್ಥಿ ಮಹಮ್ಮದ್ ಶಾಮಿ ರಾಜ್ಯ ಮಟ್ಟದ 100 ಮೀಟರ್ ಓಟಕ್ಕೆ ಆಯ್ಕೆ
ಮಂಗಳೂರು:ಬೊಂದೆಲಿನ ಸಂತಲಾರೆನ್ಸ್ ಅನುದಾನ ರಹಿತ ಶಾಲೆಯ 7ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ ಮಹಮ್ಮದ್ ಶಾಮಿ ದಕ್ಷಿಣ ಕನ್ನಡ ಜಿಲ್ಲೆಯಿಂದ 100 ಮೀಟರ್ ಓಟಕ್ಕೆ ಆಯ್ಕೆಯಾಗಿದ್ದು ಫೆಬ್ರವರಿ 20 ರಿಂದ 23ರವರೆಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯಮಟ್ಟದ ಅಥೆಟಿಕ್ ಸ್ಪರ್ಧೆಯಲ್ಲಿ ಸ್ಪರ್ಧಿಸಲಿದ್ದಾನೆ. ಮೊಹಮ್ಮದ್ ಶಾಮಿ ಇವನು ಕಮರುದ್ದೀನ್ ಹಾಗೂ ನಾಜಿಯಾ ರವರ ಪುತ್ರನಾಗಿದ್ದು ದೈಹಿಕ ಶಿಕ್ಷಕರಾದ ಯೋಗೇಶ್ ಕುಮಾರ್ ರವರ ವಿದ್ಯಾರ್ಥಿಯಾಗಿರುತ್ತಾನೆ.
Sandesha Foundation for Culture and Education along with Signis Karnataka and Spearhead Academy organised a State Level seminar on ‘Towards and Ethical Media’
Sandesha Foundation for Culture and Education in cooperation with Signis Karnataka and Spearhead Academy held a state level seminar on ‘Towards and Ethical Media’ for students, staff and delegates from all over Karnataka on February 8, 2023 to foster greater interest in media ethics, familiarize the participants with the different issues and provide a forum to exchange views on specific ethical issues in Media. The seminar had in total six sessions including the inaugural session, valedictory session and the four technical sessions. The one-day seminar was attended by 88 participants from different districts of Karnataka and students from the city colleges.
The seminar included a mix of lectures, technical sessions, and case studies through interaction with the participants. Bishop Henry D’souza, Chairman of Sandesha Foundation, Bishop of Bellary, the keynote speaker of the day called for accountability in media by being accurate and giving factual information. He also made aware of the twisting of facts using examples. Journalists should not tell what they want to but they to communicate what they ought to, he added. Discussions in the technical sessions revolved around Ethics of Indian Media: Aberrations and future challenges, Deconstructing Ethics in Journalism: How Indian Media is neglecting its social responsibility.
The seminar focused on specific ethical issues in media such as accuracy, verification, independence, allegiances, deception, fabrication, graphic images, image manipulation, sources and confidentiality, ethics and citizen Journalist. Participants welcomed the opportunity to exchange views on all the papers discussed.
The resource persons who presented papers include Dr.Padmakumar K, Head of the Department, Corporate Communication, ManipalInsitute of Communication, Fr. Sudeep Paul, Director, Sandesha Foundation for Culture and Education, Mr. Roshan Honest Raj, Vice Principal, Spearhead Academy, Mr. Prasad Shetty, Head of the Department, Alva’s College, Mr. RavirajKini, Head of the Department, Nitte Institute of Communication, Mr. HarsharajGatty, Research Scholar, Amrita University, Coimbatore, Mr. Verghese, Editor, Indian Catholic Matters, and Mr. Raymond D’cunha, Editor, Pingara.
The session were moderated by Dr. Cyril Victor, Director, Archdiocesan Communication Centre, Mr. Varghese, Editor, Indian Catholic Matters, Mr. Benedict, Editor, City Highlights, Fr. Anil Ivan Fernandes, Director, Canara Communications.
The speakers touched upon the present context of media where is growing disenchantment towards media, lack of trust, world press freedom Index, cross ownership patterns, pro-investor driven media, condition of journalists etc. The ethical issues were highlighted such as changing patterns of reporting, paid news, twisting facts, non issues as real issues, dwindling number of grass-root level reports, tendency to brand, fake news, mistaken news values of balance and accuracy. Gatekeeping methodology to tackle problems accuracy and verification. An enumeration of latest digital gatekeeping methods were discussed. The important to be reported are missing and non important issues are highlighted because of commercial interests etc.
Fr. Sudeep Paul, welcomed and gave seminar orientations, Fr. Richard Dsouza proposed vote of thanks. Fr. Victor Vijay Lobo, President, Signis India Mr. Canute Jeevan Pinto, Managing Trustee, Village TV Trust, Dr. John D’silva, Administrator, Spearhead Academy were present on the occasion.
Fourth Day – Novena preceding the Feast of Relic St. Anthony was held at Milagres Church / ಸಂತ ಆಂತೊನಿಯವರ ಪುಣ್ಯ ಸ್ಮರಣಿಕೆ ಹಬ್ಬದ ಪ್ರಯುಕ್ತ ನಾಲ್ಕನೆಯ ದಿನದ ನೊವೆನಾ ಪ್ರಾರ್ಥನೆಯು ಮಿಲ್ಲಾಗ್ರಿಸ್ ಚರ್ಚಿನಲ್ಲಿ ನೆರವೇರಿತು
ಮಂಗಳೂರು:ಸಂತ ಆಂತೊನಿಯವರ ಪುಣ್ಯ ಸ್ಮರಣಿಕೆ ಹಬ್ಬದ ಪ್ರಯುಕ್ತ ನಾಲ್ಕನೆಯ ದಿನದ ನೊವೆನಾ ಪ್ರಾರ್ಥನೆಯು ಮಿಲ್ಲಾಗ್ರಿಸ್ ಚರ್ಚಿನಲ್ಲಿ ನೆರವೇರಿತು.
ಬಜಾಲ್ ಚರ್ಚಿನ ಪ್ರಧಾನ ಗುರುಗಳಾದ ವಂದನೀಯ ಆಂಡ್ರ್ಯೂ ಡಿಸೋಜಾ ಪ್ರಧಾನ ಗುರುಗಳಾಗಿ ಪೂಜೆಯನ್ನು ನೆರವೇರಿಸಿದರು. ಅವರು ದಿನದ ವಿಷಯವಾದ , ದೇವರು ನಮಗೆ ಮಾಡಿದಂತಹ ಉಪಕಾರಗಳಿಗೆ ಸರ್ವರ ಮುಂದೆ ನಾವು ಕೃತಜ್ಞತೆ ಸಲ್ಲಿಸಬೇಕು ಎಂಬ ವಿಷಯದ ಮೇಲೆ ಪ್ರವಚನ ವಿತ್ತರು. ಸಂತ ಆಂತೊನಿ ಅಶ್ರಮದ ನಿರ್ದೆಶಕರಾದ ವಂದನೀಯ ಜೆ.ಬಿ. ಕ್ರಾಸ್ತಾ, ಸಹಾಯಕ ನಿರ್ದೆಶಕರಾದ ವಂದನೀಯ ರೂಪೇಶ್ ತಾವ್ರೊ, ವಂದನೀಯ ಲ್ಯಾರಿ ಪಿಂಟೊ ಹಾಗೂ ನೂರಾರು ಭಕ್ತಾದಿಗಳು ಪಾಲ್ಗೊಂಡರು. ನಾಲ್ಕನೆಯ ದಿನದ ನೊವೆನಾ ಪ್ರಾರ್ಥನೆಯಲ್ಲಿ ಶ್ರೀಸಾಮಾನ್ಯ ಮುಖಂಡರಿಗೋಸ್ಕರ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
Fourth Day – Novena preceding the Feast of Relic St. Anthony was held at Milagres Church
Mangaluru: Fourth Day – Novena preceding the Feast of Relic St. Anthony was held at Milagres Church
Theme for the Day “Thank God before all for all the goodness he has done” The Novena Mass for the relic feast of St Anthony was held at Milagres Church at 6:00 p.m. Rev Fr Andrew D’souza Parish Priest of Bajal. was the main celebrant for mass. In his homily he spoke on the theme by highlighting different examples. Of how we should speak about the goodness which we have received in our life Rev Fr. J B Crasta, Rev Fr Rupesh tauro, & Fr Larry Pinto con-celebrated the mass. At the end of the mass Fr Rupesh Tauro Conducted the Novena in honour of St Anthony during which special prayers were offered for all the Lay FaithFull Leaders. Valencia Church Choir Group sang and Joined in Thanksgiving.
ಪಿಎಸ್‍ಟಿ ಇಂಗ್ಲೀಷ್ ಹೆಚ್ಚುವರಿ ಶಿಕ್ಷಕರನ್ನು ಜಿಲ್ಲೆಯಲ್ಲೇ
ಉಳಿಸಲು ನೌಕರರ ಸಂಘದಿಂದ ಮನವಿ-ಸುರೇಶ್‍ಬಾಬು
ಕೋಲಾರ:- ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಹೆಚ್ಚುವರಿಯಾಗಿ ಗುರುತಿಸಿರುವ ಪಿಎಸ್‍ಟಿ ಇಂಗ್ಲೀಷ್ ಶಿಕ್ಷಕರನ್ನು ಆಯಾ ತಾಲ್ಲೂಕಿನಲ್ಲೇ ಉಳಿಸಲು ರಾಜ್ಯ ನೌಕರರ ಸಂಘದ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕಲು ಕ್ರಮವಹಿಸುವುದಾಗಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು ಶಿಕ್ಷಕರಿಗೆ ಭರವಸೆ ನೀಡಿದರು.
ಹೆಚ್ಚುವರಿಯಾಗಿರುವ ನಮ್ಮನ್ನು ಆಯಾ ತಾಲ್ಲೂಕಿನಲ್ಲೇ ಉಳಿಸಲು ಆಗ್ರಹಿಸಿ ಪಿಎಸ್‍ಟಿ ಇಂಗ್ಲೀಷ್ ಶಿಕ್ಷಕರು ನೀಡಿದ ಮನವಿ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಕೋಲಾರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಪಿಎಸ್‍ಟಿ ಇಂಗ್ಲೀಷ್ ಶಿಕ್ಷಕರನ್ನು ಹೆಚ್ಚುವರಿ ಪಟ್ಟಿಯಲ್ಲಿ ಗುರುತಿಸಲಾಗಿದೆ, ಆದರೆ ಎಲ್ಲಾ ತಾಲ್ಲೂಕುಗಳಲ್ಲೂ ಪಿಎಸ್‍ಟಿ ಇಂಗ್ಲೀಷ್ ಶಿಕ್ಷಕರ ಹುದ್ದೆಗಳು ಅಗತ್ಯ ಪ್ರಮಾಣದಲ್ಲಿ ಖಾಲಿ ಇಲ್ಲ ಎಂದು ಮನವರಿಕೆ ಮಾಡಿಕೊಟ್ಟರು.
ಹುದ್ದೆಗಳು ಖಾಲಿ ಇಲ್ಲವಾದ್ದರಿಂದ ನಮ್ಮನ್ನು ಇತರೆ ಜಿಲ್ಲೆಗಳಿಗೆ ಹಾಕುವ ಆತಂಕವಿದ್ದು, ಇದಕ್ಕೆ ಕಡಿವಾಣ ಹಾಕಲು ರಾಜ್ಯ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್.ಷಡಕ್ಷರಿ ಅವರ ಮೂಲಕ ಸರ್ಕಾರಕ್ಕೆ ಒತ್ತಡ ಹಾಕಲು ಕೋರಿದರು.
ಹೆಚ್ಚುವರಿಯಾಗಿರುವ 1-5 ಬೋಧಿಸುತ್ತಿರುವ ಎಲ್ಲಾ ಪಿಎಸ್‍ಟಿ ಇಂಗ್ಲೀಷ್ ಶಿಕ್ಷಕರನ್ನು ಸಾಮಾನ್ಯ ಶಿಕ್ಷಕರೆಮದು ಪರಿಗಣಿಸಿ ಕೌನ್ಸಿಲಿಂಗ್‍ನಲ್ಲಿ ಅವಕಾಶ ಕಲ್ಪಿಸಲು ಮನವಿ ಮಾಡಿದರು.
ಮನವಿ ನೀಡಿಕೆ ಸಂದರ್ಭದಲ್ಲಿ ಶಿಕ್ಷಕರಾದ ಕೆ.ಎಸ್.ಸೌಮ್ಯ, ಎಲ್. ಆನಂದ್,ಸಂಗೀತಾ, ಸರಿತಾ ಮತ್ತಿತರ ಶಿಕ್ಷಕರು ಹಾಜರಿದ್ದರು.
Third Day – Novena preceding the Feast of Relic St. Anthony was held at Milagres Church – Jeppu / ಜೆಪ್ಪು ಮಿಲಾಗ್ರೆಸ್ ಚರ್ಚ್‌ನಲ್ಲಿ ಸಂತ ಆಂತೊನಿಯವರ ಪುಣ್ಯ ಸ್ಮರಣಿಕೆ ಹಬ್ಬದ ಪ್ರಯುಕ್ತ ಇಂದು ಮೂರನೆಯ ದಿನದ ನೊವೆನಾ ಪ್ರಾರ್ಥನೆಯು ನೆರವೇರಿತು
ಮಂಗಳೂರು: ವಂದನೀಯ ಗುರುಗಳಾದ ಚೇತನ್ ಲೋಬೊ ಸೆವಾಕ್ ಪತ್ರಿಕೆಯ ಸಂಪಾದಕರು. ಹಾಗೂ , ಅಸಿಸಿ ಪ್ರೆಸ್ಸಿನ ಮ್ಯಾನೇಜರ್ ಪ್ರಧಾನ ಗುರುಗಳಾಗಿ ಪೂಜೆಯನ್ನು ನೆರವೇರಿಸಿದರು. ಅವರು ದಿನದ ವಿಷಯವಾದ , “ದೇವರ ವಾಕ್ಯ ನಿಮ್ಮ ಬಾಯಿ ಹಾಗೂ ಹೃದಯಗಳಲ್ಲಿ,ಯೇಸುಕ್ರಿಸ್ತರಿಗೆ ಸಾಕ್ಷಿ ಆಗೋಣ” ಎಂಬ ವಿಷಯದ ಮೇಲೆ ಪ್ರವಚನ ವಿತ್ತರು. ಸಂತ ಆಂತೊನಿ ಅಶ್ರಮದ ನಿರ್ದೆಶಕರಾದ ವಂದನೀಯ ಜೆ.ಬಿ. ಕ್ರಾಸ್ತಾ, ಸಹಾಯಕ ನಿರ್ದೆಶಕರಾದ ವಂದನೀಯ ರೂಪೇಶ್ ತಾವ್ರೊ, ವಂದನೀಯ ಲ್ಯಾರಿ ಪಿಂಟೊ ಹಾಗೂ ನೂರಾರು ಭಕ್ತಾದಿಗಳು ಪಾಲ್ಗೊಂಡರು. ಮೂರನೆಯ ದಿನದ ನೊವೆನಾ ಪ್ರಾರ್ಥನೆಯಲ್ಲಿ ವೈದ್ಯರು ವೈದ್ಯಕೀಯ ಸಿಬ್ಬಂದಿಗಳಿಗೋಸ್ಕರ ವ್ಯಕ್ತಿಗಳಿಗೋಸ್ಕರ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
Third Day – Novena preceding the Feast of Relic St. Anthony was held at Milagres Church – Jeppu
Theme for the Day “word of in our hearts on our Lips and to give witness to Christ through our tongue “The Novena Mass for the relic feast of St Anthony was held at Milagres Church at 6:00 p.m. Rev. Fr. Chethan Lobo OFM Cap, the editor of sevak monthly magazine Celebrated the mass and preached the homily. Through different biblical examples. He pointed how we should give witness to Christ through our tongue .Rev Fr. J B Crastacon-celebrated the mass.At the end of the mass Fr Larry Pinto Conducted the Novena in honour of St Anthony during which special prayers were offered for all the Nurses and Doctors.
Members of Urwa parish sang and Joined in Thanksgiving.
2023 ರ ರಾಜ್ಯ ಮಟ್ಟದ ‘ಸಂದೇಶ ಪ್ರಶಸ್ತಿ’ಯನ್ನು ಪ್ರದಾನ
ವರದಿ: ಫಾದರ್ ಅನಿಲ್ ಫೆರ್ನಾಂಡಿಸ್, ಚಿತ್ರಗಳು: ಸ್ಟ್ಯಾನ್ಲಿ ಬಂಟ್ವಾಳ್
2023: ಪ್ರಶಸ್ತಿ ಪುರಸ್ಕøತರಲ್ಲಿಆಂಡ್ರ್ಯೂಎಲ್‍ಡಿ’ಕುನ್ಹಾ, ಜಾಯ್ಸ್‍ಒಜಾರಿಯೊ, ಚಿನ್ನಪ್ಪಗೌಡ ಮತ್ತು ಹಲವಾರು; ಪ್ರೇರಣಾ ಸಂಪನ್ಮೂಲ ಕೇಂದ್ರಕ್ಕೆ ಸನ್ಮಾನ ಸಾಹಿತ್ಯ, ಪತ್ರಿಕೋದ್ಯಮ, ಕಲೆ, ಶಿಕ್ಷಣ, ಸಂಗೀತ, ಮಾಧ್ಯಮ ಮತ್ತು ಸಮಾಜ ಸೇವೆಯಂತಹ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಯಿತು.
ಮಂಗಳೂರು; ಫೆ.07: ಮಂಗಳೂರಿನ ಬಜ್ಜೋಡಿಯಲ್ಲಿರುವ ಸಂದೇಶ ಫೌಂಡೇಶನ್ ಫಾರ್‍ಕಲ್ಚರ್‍ಅಂಡ್‍ಎಜುಕೇಶನ್‍ಆವರಣದಲ್ಲಿ ನಡೆದಅದ್ಧೂರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 9 ಮಂದಿ ಸಾಧಕರು ಹಾಗೂ ಸಂಸ್ಥೆಗೆ 2023ನೇ ಸಾಲಿನ ಪ್ರತಿಷ್ಠಿತ ರಾಜ್ಯ ಮಟ್ಟದ ‘ಸಂದೇಶ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು. ಮಂಗಳವಾರ, ಫೆಬ್ರವರಿ 07, 2023 ರ ಸಂಜೆ.
ಈ ಪ್ರಶಸ್ತಿ ಪ್ರದಾನ ಸಮಾರಂಭದಅಧ್ಯಕ್ಷತೆಯನ್ನು ಸಂದೇಶ ಪ್ರತಿಷ್ಠಾನದಅಧ್ಯಕ್ಷರು ಹಾಗೂ ಬಳ್ಳಾರಿ ಧರ್ಮಪ್ರಾಂತ್ಯದಧರ್ಮಾಧ್ಯಕ್ಷರಾದ ಅ| ವಂ| ಹೆನ್ರಿ ಡಿ’ಸೋಜಇವರುಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದರು. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷಡಾ ಎಂ ಮೋಹನ್ ಆಳ್ವ ಮುಖ್ಯಅತಿಥಿಯಾಗಿದ್ದರು. ಪ್ರಶಸ್ತಿ ಪ್ರಧಾನಕಾರ್ಯಕ್ರಮದಲ್ಲಿಇತರ ಅತಿಥಿಗಳಾಗಿ ಮಂಗಳೂರು ಧರ್ಮಪ್ರಾಂತ್ಯದಧರ್ಮಾಧ್ಯಕ್ಷರಾದ ಅ| ವಂ| ಪೀಟರ್ ಪಾವ್ಲ್ ಸಲ್ಡಾನ್ಹ, ಉಡುಪಿ ಧರ್ಮಾಪ್ರಾಂತ್ಯದಧರ್ಮಾಧ್ಯಕ್ಷರಾದ ಅ| ವಂ| ಜೆರಾಲ್ಡ್‍ಐಸಾಕ್ ಲೋಬೊ, ಸಂದೇಶ ಪ್ರತಿಷ್ಠಾನದ ನಿರ್ದೇಶಕರಾದ ವಂ| ಫಾ| ಸುದೀಪ್ ಪೌಲ್, ಸಂದೇಶ ಪ್ರತಿಷ್ಠಾನದ ವಿಶ್ವಸ್ಥರಾದ ಶ್ರೀ ರೊಯ್‍ಕ್ಯಾಸ್ತಲಿನೊ ಹಾಗೂ ವಂ| ಫಾ| ಐವನ್ ಪಿಂಟೊ, ಸಂದೇಶ ಪ್ರಶಸ್ತಿ ಅಯ್ಕೆ ಸಮಿತಿಯಅಧ್ಯಕ್ಷರಾದಡಾ| ವಲೇರಿಯನ್‍ರೋಡ್ರಿಗಸ್‍ರವರು ಉಪಸ್ಥಿತರಿದ್ದರು.
ಸಂದೇಶ ಪ್ರಶಸ್ತಿಗಳು 2023ರ ಪುರಸ್ಕೃತರು
- ಸಂದೇಶ ಸಾಹಿತ್ಯ ಪ್ರಶಸ್ತಿ –ಕನ್ನಡ–ರಾಘವೇಂದ್ರ ಪಾಟಿಲ್
- ಸಂದೇಶ ಸಾಹಿತ್ಯ ಪ್ರಶಸ್ತಿ –ಕೊಂಕಣಿ–ಆಂಡ್ರ್ಯೂಎಲ್‍ಡಿಕುನ್ಹಾ
- ಸಂದೇಶ ಸಾಹಿತ್ಯ ಪ್ರಶಸ್ತಿ – ತುಳು –ಚಿನ್ನಪ್ಪಗೌಡ
- ಸಂದೇಶ ಮಾಧ್ಯಮ ಪಶಸ್ತಿ – ಪತ್ರಿಕೋದ್ಯಮ – ಶಿವಾಜಿ ಗಣೇಶನ್
- ಸಂದೇಶಕೊಂಕಣಿ ಸಂಗೀತ ಪ್ರಶಸ್ತಿ –ಜೋಯ್ಸ್‍ಒಝಾರಿಯೋ
- ಸಂದೇಶ ಕಲಾ ಪ್ರಶಸ್ತಿ –ಡಾ. ಎಮ್‍ಎಸ್ ಮೂರ್ತಿ
- ಸಂದೇಶ ಶಿಕ್ಷಣ ಪ್ರಶಸ್ತಿ –ಕೋಟಿ ಗಾನಹಳ್ಳಿ ರಾಮಯ್ಯ
- ಸಂದೇಶ ವಿಶೇಷ ಪ್ರಶಸ್ತಿ – ಪ್ರೇರಣಾರಿಸೋರ್ಸ್ ಸೆಂಟರ್
- ಸಂದೇಶಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ – ಸಬೀಹಾ ಭೂಮಿಗೌಡ
ಸಂದೇಶ ಶಿಕ್ಷಣ ಪ್ರಶಸ್ತಿ ಪುರಸ್ಕೃತ ಕೋಟಿಗಾನಹಳ್ಳಿ ರಾಮಯ್ಯಅವರು ಕವನ ಪ್ರಸ್ತುತ ಪಡಿಸಿದರು. ಪ್ರಶಸ್ತಿ ಪುರಸ್ಕøತರು, ಸಂದೇಶಕನ್ನಡ ಸಾಹಿತ್ಯ ಪ್ರಶಸ್ತಿ ಪುರಸ್ಕೃತಡಾ.ರಾಘವೇಂದ್ರ ಪಾಟೀಲ ಪ್ರತಿಕ್ರಿಯಿಸಿ, ‘ಸೂಕ್ಷ್ಮ ವಿಕಾಸವಾದಾಗ ಸಮಾಜದಗುಣಮಟ್ಟ ಉತ್ತಮಗೊಳ್ಳುತ್ತದೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಪರಿವರ್ತನೆ, ಬೆಳವಣಿಗೆ ಆದಾಗಸಮಾಜದಲ್ಲಿ ನಾವು ಸಾತ್ವಿಕತೆ ಹೆಚ್ಚುವುದನ್ನುಕಾಣಲು ಸಾಧ್ಯವಾಗುತ್ತದೆ. ಸಂದೇಶ ಸಂಸ್ಥೆಯು ಪ್ರಶಸ್ತಿಗಳ ಪ್ರಧಾನ್ ಮಾಡುವಮೂಲಕ ಸಮಾಜದಲ್ಲಿ ಸಕಾರಾತ್ಮಕತೆ ಮತ್ತು ಒಳಿತನ್ನು ತುಂಬುವಮಹತ್ತರಕಾರ್ಯವನ್ನು ಮಾಡುತ್ತಿದೆ” ಎಂದು ಹೇಳಿದರು.“ಈ ಗೌರವವು ನಾನು ಗುರುತಿಸಲ್ಪಟ್ಟಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡಲುಉತ್ಸಾಹವನ್ನು ಹೆಚ್ಚಿಸಿದೆ” ಎಂದುಅವರು ಹೇಳಿದರು.
ಮಂಗಳೂರಿನ ಬಿಷಪ್‍ಅತೀ ವಂದನೀಯಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಮಾತನಾಡಿ, ”ಮಾನವನುಸಮಾಜದ ಒಳಿತಿಗಾಗಿ ತನ್ನಆಂತರಿಕಮತ್ತುಆಧ್ಯಾತ್ಮಿಕ ಶಕ್ತಿಯನ್ನು ಅನ್ವೇಷಿಸಿನಿರಂತರವಾಗಿ ಶ್ರಮಿಸುತ್ತಾನೆ. ಸಂದೇಶಪ್ರತಿಷ್ಠಾನ, ಸಮಾಜದಲ್ಲಿ ನಿಸ್ವಾರ್ಥವಾಗಿತಮ್ಮ ಸಂಪನ್ಮೂಲಗಳನ್ನು ಮತ್ತುಆಂತರಿಕ ಶಕ್ತಿಯನ್ನುಕೊಡುಗೆಯಾಗಿ ನೀಡಿದವರನ್ನುಗುರುತಿಸಿ ಗೌರವಿಸಿವೆ” ಎಂದು ಹೇಳಿದರು.
ಮುಖ್ಯಅತಿಥಿ ಡಾ.ಎಂ.ಮೋಹನ್ ಆಳ್ವ ಮಾತನಾಡಿ, “ದೇವರು ನೀಡಿದಕೊಡುಗೆ ಮತ್ತು ಪ್ರತಿಭೆಯನ್ನು ಧಾರಾಳವಾಗಿ ಬಳಸಿಕೊಂಡ ಈ ಮಹಾಪುರುಷರನ್ನು ಮತ್ತು ಮಹಿಳೆಯರನ್ನು ಸನ್ಮಾನಿಸಲು ನಾನು ಮುಖ್ಯಅತಿಥಿಯಾಗಿ ಹರ್ಷಿಸುತ್ತೇನೆ. ಬೆಳೆಯುತ್ತಿರುವ ಲೌಕಿಕ ಜೀವನ ಮತ್ತುತಾಂತ್ರಿಕ ಪ್ರಗತಿಯ ನಡುವೆ ನಮ್ಮ ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಾಮಾಜಿಕಜೀವನ ಮತ್ತು ಮೌಲ್ಯಗಳು ರಾಜಿಯಾಗುತ್ತಿವೆ. ತಮ್ಮ ಕೊಡುಗೆಗಳ ಮೂಲಕ ಸಾಮಾಜಿಕ-ಸಾಂಸ್ಕೃತಿಕ ಮೌಲ್ಯಗಳನ್ನು ಪೆÇೀಷಿಸುವ ಅನೇಕ ವ್ಯಕ್ತಿಗಳನ್ನು ನಾವು ಕಳೆದುಕೊಳ್ಳುವುದು ದುರದೃಷ್ಟಕರ. ಸಮಾಜಕ್ಕಾಗಿ ಅವಿಶ್ರಾಂತವಾಗಿ ಮತ್ತು ನಿಸ್ವಾರ್ಥವಾಗಿದುಡಿದಾಗಲೇ ಸದ್ಗುಣದಜೀವನ ನಡೆಸುವಲ್ಲಿ ನಿಜವಾದಆನಂದ ಹುದುಗಿದೆ” ಎಂದು ಹೇಳಿದರು.
ಸಂದೇಶ ಪ್ರತಿμÁ್ಠನದಅಧ್ಯಕ್ಷರಾದ ಬಳ್ಳಾರಿ ಧರ್ಮಪ್ರಾಂತ್ಯದಧರ್ಮಾಧ್ಯಕ್ಷರಾದಅತಿ ವಂ. ಡಾ.ಹೆನ್ರಿಡಿಸೋಜಅವರುತಮ್ಮಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿ, “ಪರಿಸರ, ಸೌಹಾರ್ದತೆ, ಆರೋಗ್ಯ, ಏಕತೆ, ಸೂಕ್ಷ್ಮತೆ, ಬಾಂಧವ್ಯ ಮತ್ತು ಸಹಕಾರವುಅತ್ಯಂತ ಕಾಳಜಿಯ ವಿಷಯಗಳಾಗಿರುವ ಜಗತ್ತಿನಲ್ಲಿಇಂದು ನಾವು ಬದುಕುತ್ತಿದ್ದೇವೆ.ದ್ವೇಷ, ಒಡಕು, ಹಿಂಸಾಚಾರಇಲ್ಲದ ಸಮಾಜಕಟ್ಟಲು ಹಾತೊರೆಯೋಣ.”ಅವರು ವಿವಿಧ ಕ್ಷೇತ್ರಗಳಲ್ಲಿ ಪ್ರೀತಿಯಿಂದ ಕೆಲಸ ಮಾಡಿದಎಲ್ಲಾಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು.
ಸಂದೇಶ ಸಂಸ್ಥೆಯಲ್ಲಿ 15 ವರ್ಷಗಳ ಸುದೀರ್ಘ ಸೇವೆಗೈದಡೈಮಂಡ್‍ಜುಬಿಲೇರಿಯನ್‍ಶ್ರೀ ಸೈಮನ್ ಪೀಟರ್‍ಕುವೆಲ್ಲೊಅವರನ್ನುಅಧ್ಯಕ್ಷ ಬಿಷಪ್ ಹೆನ್ರಿಡಿಸೋಜಾಅವರು ಗೌರವಿಸಿದರು.
ಈ ಸಂದರ್ಭದಲ್ಲಿ ಪ್ರಶಸ್ತಿ ಆಯ್ಕೆ ಸಮಿತಿಸದಸ್ಯರಾದಡಾ.ವಲೇರಿಯನ್‍ರೋಡ್ರಿಗಸ್, ಡಾ.ನಾ.ಡಾ.ಶೆಟ್ಟಿ, ಕಾನ್ಸೆಪ್ಟಾ ಆಳ್ವ, ಚಂದ್ರಕಲಾ ನಂದಾವರ ಮತ್ತುರಫೀಕ್ ಮಾಸ್ಟರ್‍ಅವರನ್ನು ಸನ್ಮಾನಿಸಲಾಯಿತು. ಸಂದೇಶ ಸಂಸ್ಥೆಯ ಪೆÇೀಷಕರು, ಪ್ರಾಯೋಜಕರು ಹಾಗೂ ಹಿತೈಷಿಗಳನ್ನುಕೂಡ ಸನ್ಮಾನಿಸಲಾಯಿತು.
ಸಂದೇಶ ಸಂಸ್ಥೆಯ ಸಂಚಾಲಕ ರೆ.ಫಾ.ಸುದೀಪ್ ಪಾವ್ಲ್‍ಗಣ್ಯರನ್ನು ಸ್ವಾಗತಿಸಿದರು. ಸಂದೇಶ ಪ್ರಶಸ್ತಿಗಳ ವಿಸ್ವಾಸ್ಥರಾದ ಮತ್ತುಕಾರ್ಯಕ್ರಮದಸಂಚಾಲಕರಾದ ಶ್ರೀ ರಾಯ್‍ಕ್ಯಾಸ್ಟೆಲಿನೊ ನೆರೆದಿದ್ದಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ಶ್ರೀಮತಿ ಐರಿನ್‍ರೆಬೆಲ್ಲೊ, ಕುಲಶೇಕರ್‍ಕಾರ್ಯಕ್ರಮ ನಿರೂಪಿಸಿದರು.
ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಎಲಾರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಚೆನ್ನೈ ಕಾರಿಡಾರ್ ರಸ್ತೆ ಅಭಿವೃದ್ಧಿಗೆ ಮರಗಿಡ,ಕೊಳವೆಬಾವಿಗಳಿಗೆ ಪರಿಹಾರಕ್ಕೆ ಪಿ ನಂಬರ್ ದುರಸ್ಥಿ ಮಾಡಿ ರೈತಸಂಘ :ಸಂಸದ ಎಸ್.ಮುನಿಸ್ವಾಮಿಗೆ ಆಗ್ರಹ
ಕೋಲಾರ; ಫೆ.8: ಚೆನ್ನೈ ಕಾರಿಡಾರ್ ರಸ್ತೆ ಅಭಿವೃದ್ಧಿಗೆ ಭೂಮಿ ಕಳೆದುಕೊಂಡಿರುವ ರೈತರ ಪಿ ನಂಬರ್ ದುರಸ್ಥಿ ಮಾಡಲು ವಿಶೇಷ ತಂಡ ರಚನೆ ಮಾಡಿ ಮರಗಿಡಗಳಿಗೆ ಪರಿಹಾರ ಬಿಡುಗಡೆ ಮಾಡಬೇಕೆಂದು ರೈತಸಂಘದಿಂದ ಸಂಸದ ಎಸ್.ಮುನಿಸ್ವಾಮಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಒಂದು ವಾರದೊಳಗೆ ಗಡಿ ಭಾಗದ ಭೂಮಿ ಕಳೆದುಕೊಂಡಿರುವ ರೈತರ ಜಮೀನಿನ ಮರಗಿಡಗಳು ಹಾಗೂ ಕೊಳವೆಬಾವಿಗಳಿಗೆ ಪರಿಹಾರ ನೀಡದೇ ಇದ್ದರೆ ಕಾಮಗಾರಿಯನ್ನು ಸಂಪೂರ್ಣವಾಗಿ ಗಡಿಭಾಗದಲ್ಲಿ ಸ್ಥಗಿತಗೊಳಿಸುವ ಎಚ್ಚರಿಕೆಯನ್ನು ನೊಂದ ರೈತರಾದ ಚೆಂಗೇಗೌಡ ಹಾಗೂ ಜನಾರ್ಧನ್ ನೀಡಿದರು.
ನೂರಾರು ವರ್ಷಗಳಿಂದ ಕೃಷಿಯನ್ನೇ ನಂಬಿ ಜೀವನ ಮಾಡುತ್ತಿರುವ ರೈತರ ಕೃಷಿ ಭೂಮಿಯನ್ನು ಚೆನ್ನೈ ಕಾರಿಡಾರ್ ರಸ್ತೆ ಅಭಿವೃದ್ಧಿಗೆ ವಿಶೇಷ ಭೂಸ್ವಾಧೀನಾಧಿಕಾರಿಗಳು ಸರ್ಕಾರದ ಆದೇಶದಂತೆ ಭೂಮಿಯನ್ನು ವಶಪಡಿಸಿಕೊಂಡು ರೈತರಿಗೆ ಪರಿಹಾರವನ್ನು ನೀಡಿದ್ದಾರೆ.
ಆದರೆ, ನೂರಾರು ವರ್ಷಗಳಿಂದ ಅದೇ ಕೃಷಿ ಭೂಮಿಯಲ್ಲಿ ಬೆಳೆದಿದ್ದ ಮಾವು ಹುಣಸೆ, ಹಲಸು, ಸೀಬೆ, ತೆಂಗು, ಮರಗಳಿಗೆ ಪರಿಹಾರ ನೀಡುತ್ತೇವೆಂದು ಮಾತು ಕೊಟ್ಟಿದ್ದ ಅಧಿಕಾರಿಗಳು ಈಗ ಪಿ ನಂಬರ್ ದುರಸ್ಥಿಯಾಗುವವರೆಗೂ ಪರಿಹಾರ ವಿತರಣೆ ಮಾಡುವುದಿಲ್ಲ ಎಂದು ರೈತರಿಗೆ ಪರಿಹಾರ ನೀಡದೆ ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಭೂಮಿ ಸ್ವಾಧೀನ ಮಾಡಿಕೊಳ್ಳುವಾಗ ವಿಶೇಷ ಭೂಸ್ವಾಧೀನಾಧಿಕಾರಿಗಳು ಪಿ ನಂಬರ್‍ನಲ್ಲಿರುವ ಮರಗಿಡಗಳಿಗೂ ಪರಿಹಾರ ನೀಡುತ್ತೇವೆ. ತೋಟಗಾರಿಕೆ ಅಧಿಕಾರಿಗಳಿಂದ ವರದಿಯನ್ನು ತರಿಸಿಕೊಂಡಿದ್ದೇವೆ. ಸರ್ಕಾರ ಪರಿಹಾರ ನೀಡುವಂತೆ ಆದೇಶ ಮಾಡಿದೆ ಎಂದು ಅಧಿಕಾರಿಗಳೇ ರೈತರನ್ನು ನಂಬಿಸಿ ಈಗ ನಂಬಿಕೆ ದ್ರೋಹ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಪಿ ನಂಬರ್ ದುರಸ್ಥಿ ಮಾಡಬೇಕಾದರೆ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳನ್ನು ರೈತರು ಕಡತಗಳ ಸಮೇತ ಅರ್ಜಿ ಸಲ್ಲಿಸಿದರೆ ನೂರೊಂದು ನೆಪ ಹೇಳಿ ಅದನ್ನು ತಿರಸ್ಕರಿಸಿ ಅದೇ ಕಡತ ದಲ್ಲಾಳಿಗಳ ಮುಖಾಂತರ ಲಕ್ಷಲಕ್ಷ ಲಂಚ ನೀಡಿ ಅಧಿಕಾರಿಗಳನ್ನು ಸಂಪರ್ಕಿಸಿದರೆ ಯಾವುದೇ ಸಮಸ್ಯೆಯಿಲ್ಲದೆ ಪಿ ನಂಬರ್ ದುರಸ್ಥಿಯಾಗುತ್ತದೆ. ಇಂತಹ ಅವ್ಯವಸ್ಥೆಯಲ್ಲಿ ಭೂಮಿ ಕಳೆದುಕೊಂಡ ರೈತ ಲಕ್ಷಲಕ್ಷ ಲಂಚ ನೀಡಿ ಪಿ ನಂಬರ್ ದುರಸ್ಥಿ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಈಗಾಗಲೇ ಮಾಲೂರು, ಬಂಗಾರಪೇಟೆ, ಬೇತಮಂಗಲ ವ್ಯಾಪ್ತಿಯಲ್ಲಿ ಕಂದಾಯ ಅಧಿಕಾರಿಗಳು ಮೂಲ ಕಡತವಿರುವ ಪಿ ನಂಬರ್‍ಗಳನ್ನು ದುರಸ್ಥಿ ಮಾಡುವ ಮುಖಾಂತರ ಕೆಲವು ರೈತರಿಗೆ ಪರಿಹಾರ ವಿತರಣೆ ಮಾಡುತ್ತಿದ್ದಾರೆ. ಆದರೆ, ಮುಳಬಾಗಿಲು ಗಡಿ ಭಾಗದ ಚುಕ್ಕನಹಳ್ಳಿ ಏತರನಹಳ್ಳಿ ರೈತರ ಪಿ ನಂಬರ್ ಅನ್ನು ದುರಸ್ಥಿ ಮಾಡುವಂತೆ ಕಂದಾಯ, ಸರ್ವೇ ಅಧಿಕಾರಿಗಳ ಜೊತೆಗೆ ಸ್ಥಳೀಯ ಶಾಸಕರ ಗಮನಕ್ಕೆ ತಂದರೂ ನೊಂದ ರೈತರಿಗೆ ಮಾತ್ರ ನ್ಯಾಯ ಸಿಗುತ್ತಿಲ್ಲ ಎಂದು ಆರೋಪ ಮಾಡಿದರು.
ಮಾನ್ಯರು ಸಂಬಂಧಪಟ್ಟ ಕಂದಾಯ, ಸರ್ವೇ ಹಾಗೂ ವಿಶೇಷ ಭೂಸ್ವಾಧೀನಾಧಿಕಾರಿಗಳು, ಚೆನ್ನೈ ಕಾರಿಡಾರ್ ರಸ್ತೆಯ ಅಭಿವೃದ್ಧಿ ಅಧಿಕಾರಿಗಳನ್ನು ಸಭೆ ಕರೆದು ಪಿ ನಂಬರ್ ದುರಸ್ಥಿ ಮಾಡಲು ವಿಶೇಷ ತಂಡ ರಚನೆ ಮಾಡಿ ಮರಗಿಡಗಳನ್ನು ಕಳೆದುಕೊಂಡಿರುವ ರೈತರ ಪರಿಹಾರವನ್ನು ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಂಸದರು, ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ಸಭೆ ಕರೆದು ಸಮಸ್ಯೆಯನ್ನು ಬಗೆಹರಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಮುಳಬಾಗಿಲು ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ರಾಜಣ್ಣ, ವೆಂಕಟರಾಮಪ್ಪ, ವಿಶ್ವನಾಥ್, ಜಗದೀಶ್, ಕುಮಾರ್, ವೆಂಕಟೇಶ್, ನಟರಾಜ್, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ಮಾಸ್ತಿ ವೆಂಕಟೇಶ್, ಯಾರಂಘಟ್ಟ ಗಿರೀಶ್ ಮುಂತಾದವರಿದ್ದರು