ಫೆಬ್ರವರಿ -2023 ರ ಮಾಹೆಗೆ ಜಿಲ್ಲೆಯ ಪಡಿತರ ಚೀಟಿದಾರರಿಗೆ ಪಡಿತರ ಆಹಾರಧಾನ್ಯಗಳ ಹಂಚಿಕೆ ವಿವರ

ಕೋಲಾರ : ಜಿಲ್ಲೆಯ ಆದ್ಯತಾ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೆ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಆದ್ಯತಾ ಪಡಿತರ ಚೀಟಿಯ ಪ್ರತಿ ಸದ್ಯಸರಿಗೆ 5 ಕೆ.ಜಿ ಪಡಿತರ ಧಾನ್ಯಗಳ ಹಂಚಿಕೆಯ ಜೊತೆಗೆ ಜನವರಿ -2023 ರ ಮಾಹೆಯಿಂದ ಅನ್ವಯವಾಗುವಂತೆ ಹೆಚ್ಚುವರಿಯಾಗಿ 1 ಕೆ.ಜಿ ಅಕ್ಕಿ ಹಂಚಿಕೆ ನೀಡುವಂತೆ ಆದೇಶವಾಗಿರುತ್ತದೆ .

ಆದರೆ ನಿಗಧಿತ ಅವಧಿಯಲ್ಲಿ ಸಗಟು ಮಳಿಗೆಗೆ ಎತ್ತುವಳಿಯಾಗದ ಕಾರಣ ಫೆಬ್ರವರಿ -2023 ರ ಮಾಹೆಯಲ್ಲಿ ಜನವರಿ -2023 ರ ಮಾಹೆಯ 1 ಕೆ.ಜಿ ಅಕ್ಕಿ ಹಾಗೂ ಫೆಬ್ರವರಿ -2023 ರ ಮಾಹೆಯ 1 ಕೆ.ಜಿ ಅಕ್ಕಿ ಸೇರಿ ಒಟ್ಟು 2 ಕೆ.ಜಿ ಅಕ್ಕಿಯೊಂದಿಗೆ ಎನ್‌ಎಫ್‌ಎಸ್ 5 ಕೆ.ಜಿ ಅಕ್ಕಿಯನ್ನು ಸೇರಿಸಿ ಒಟ್ಟು 7 ಕೆ.ಜಿ ಅಕ್ಕಿಯನ್ನು ಫೆಬ್ರವರಿ 2023 ರ ಮಾಹೆಯಲ್ಲಿ ಆದ್ಯತಾ ( ಬಿಪಿಎಲ್ ) ಪಡಿತರ ಚೀಟಿದಾರರಿಗೆ ಹಂಚಿಕೆ ನೀಡಲಾಗಿದೆ.

ಅಂತ್ಯೋದಯ ಪಡಿತರ ಚೀಟಿದಾರರಿಗೆ 35 ಕೆ.ಜಿ ಅಕ್ಕಿ ಇದ್ದು , ಹಂಚಿಕೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ . ಆದ್ಯತೇತರ ( ಎಪಿಎಲ್ ) ಪಡಿತರ ಚೀಟಿದಾರರಿಗೆ ಒಂದು ಸದಸ್ಯ ಇರುವ ಪಡಿತರ ಚೀಟಿಗೆ 5 ಕೆ.ಜಿ ಅಕ್ಕಿ , ಪಡಿತರ ಚೀಟಿಯಲ್ಲಿ ಒಂದಕ್ಕಿಂತ ಹೆಚ್ಚು ಸದಸ್ಯರಿರುವ ಪಡಿತರ ಚೀಟಿಗೆ 10 ಕೆ.ಜಿ ಅಕ್ಕಿ , ಪ್ರತಿ ಕೆ.ಜಿ 15 / ರೂ.ನಂತೆ ಹಂಚಿಕೆ ನೀಡಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಕುಂದಾಪುರ ಭಾ. ರೆ. ಕ್ರಾಸ್ ಸಂಸ್ಥೆಯಿಂದ ಚೈತನ್ಯ ವಿಶೇಷ ಶಾಲೆಗೆ ಭೇಟಿಯಾಗಿ, ಬೋಜನದ ಉಪಚಾರ ಮಾಡಿ ರೂಪಾಯಿ ಹತ್ತು ಸಾವಿರ ದೇಣಿಗೆ ನೀಡಿತು

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಈ ದಿನ ಚೈತನ್ಯ ವಿಶೇಷ ಶಾಲೆಗೆ ಬೇಟಿ ನೀಡಿ, ಮಕ್ಕಳಿಗೆ ಬೋಜನದ ವ್ಯವಸ್ಥೆ ಮಾಡಿ ರೂಪಾಯಿ ಹತ್ತು ಸಾವಿರ ದೇಣಿಗೆ ನೀಡಿದರು. ಸಭಾಪತಿ ಎಸ್ ಜಯಕರ ಶೆಟ್ಟಿ ಇವರು ಪ್ರಾಸ್ತಾವಿಕ ಮಾತನಾಡಿ, ಟ್ರಸ್ಟಿಗಳಾದ ಸುಜಾತ ನಕ್ಕತ್ತಾಯ ಇವರಿಗೆ ದೇಣಿಗೆ ಹಸ್ತಾಂತರಿಸಿದರು. ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಗಣೇಶ್ ಆಚಾರ್ಯ, ಎ. ಮುತ್ತಯ್ಯ ಶೆಟ್ಟಿ, ಡಾ. ಸೋನಿ, ಎನ್ ಸದಾನಂದ ಶೆಟ್ಟಿ, ಮತ್ತು ಶಿಕ್ಷಕರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಲೀಲಾ ಕರ್ಕಾಡ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರೆಡ್ ಕ್ರಾಸ್ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ ವಂದಿಸಿದರು

KNS 80th Celebration, variety competition and award to Eric Ozario for a true ambassador of Konkani language and culture

A dance contest and Indian traditional attire competition for couples including baby show and cake baking competition is also part of the event. The competitions will start at 2 pm at the premises of Don Bosco Hall. The entry for competitions will be free and the last date for registration is February 11, Saturday. The participants may call on 9844794033 (Liston) or 9900406006 (Cletus).

Senior artiste and a true ambassador of Konkani language and culture, Eric Ozario will be bestowed with a lifetime achievement award by Konkani Natak Sabha (R) Mangaluru. The award conferring ceremony will be held at Don Bosco Hall on Sunday February 19, on the occasion of Sambhram-2023, a curtain raiser of 80th jubilee celebration of KNS.

Eric Ozario’s immense and unmatchable contribution towards enriching Konkani language and culture was considered while selecting him for the award.

Eric Alexander Ozario, singer, composer, full-time cultural activist, was born on May 18, 1949, in Jeppu, Mangaluru. His parents are the late Prospero Ozario and the late Bernadette Ozario from Jeppu. Eric Ozario is the 7th among 10 siblings. He is commerce graduate from St Aloysius College, Mangaluru. He is married to Joyce Fontes from Mangaluru. They have a daughter Dr Rashmi Kiran and a son Rithesh Kiran, both are blessed with profound singing talent.

His dream project ‘Mandd Sobhan’ that he co-founded with two other greats Chafraa and Melvyn Rodrigues, revolutionized the presentation of Konkani culture and folk songs. As a music director he has composed and presented over 500 shows of National and International prominence.

Eric is not only an eminent artiste, but also is an artistic inventor, an exceptional planner, an outstanding educationalist, a revered mentor and a distinguished, determined Konkani activist who through his organization Mandd Sobhann, has revitalized Konkani language and culture. Kalangann has been a centre of hectic Konkani cultural activities for the last several years ever-since it was inaugurated on December 2, 2001 under the leadership of legendary Eric Ozario. Konkani Nirantari, a group singing under his leadership to enter the Guinness Book of World Records with its 40-hour-long non-stop multi-singer music programme. Soad is another milestone in the history of ‘Mandd Sobhan’ which already completed its successful five seasons. Now to record the essence of Konkani people and their lifestyle Eric is in the mission of making a movie project in Konkani which has already begun its production works.

The Konkani Natak Sabha (KNS) is a Konkani drama society formed on September 19, 1943 by Fr George Albuquerque Pai SJ (of St Aloysius College, Mangaluru), by bringing together active youngsters of local theatre groups from all over Mangaluru. KNS is a cultural organization founded primarily for the Apostolate of the Stage with an objective of promotion of the mother tongue-Konkani, and the advancement of cultural, social and moral upliftment of the society in general. ‘Natak Dwarin Dharmik Sadhan’ meaning service through stage is the cherished motto of the Sabha.

ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೈ ಬಲಪಡಿಸಬೇಕು : ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಮನವಿ

ಶ್ರೀನಿವಾಸಪುರ: ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೈ ಬಲಪಡಿಸಬೇಕು ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮನವಿ ಮಾಡಿದರು.
ತಾಲ್ಲೂಕಿನ ಕರಿಪಲ್ಲಿ ಕರಿಪಲ್ಲಿ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ಜೆಡಿಎಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಂಚರತ್ನ ಯೋಜನೆ ಸಮಾಜದ ಎಲ್ಲ ಸಮುದಾಯದ ಜನರ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ. ಕಾಂಗ್ರೆಸ್ ರೈತ ಮುಖಿಯಾಗಿ ಉಳಿದಿಲ್ಲ. ಎಚ್.ಡಿ.ಕುಮಾರಸ್ವಾಮಿ 14 ತಿಂಗಳು ರಾಜ್ಯದ ಮುಖ್ಯ ಮಂತ್ರಿಯಾಗಿದ್ದಾಗ ರೈತರ ರೂ.25 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಮತ್ತೆ ಅಧಿಕಾರಕ್ಕೆ ಬಂದರೆ ನಾಗರಿಕರಿಗೆ ನೀಡಲಾಗುತ್ತಿರುವ ಎಲ್ಲ ಪಿಂಣಿಗಳ ಮೊತ್ತ ಹೆಚ್ಚಿಸಲಾಗುವುದು ಎಂದು ಹೇಳಿದರು.
‘ತಾಲ್ಲೂಕಿನಲ್ಲಿ ನಾನು ನಾಲ್ಕು ಬಾರಿ ಶಾಸಕನಾಗಿದ್ದೆ. ಏನಾದರೂ ಅಭಿವೃದ್ಧಿಯಾಗಿದ್ದರೆ, ಅದು ನನ್ನ ಕಾಲದಲ್ಲಿ ಮಾತ್ರ. ಶಾಸಕ ಕೆ.ಆರ್.ರಮೇಶ್ ಕುಮಾರ್ ತಾಲ್ಲೂಕನ್ನು ಗುಡಿಸಲು ಮುಕ್ತಗೊಳಿಸಿರುವದಾಗಿ ಹೇಳುತ್ತಿದ್ದಾರೆ. ಅವರ ಹುಟ್ಟೂರಾದ ಅಡ್ಡಗಲ್‍ನಲ್ಲಿ ಇನ್ನೂ ಗುಡಿಸಲುಗಳು ಜೀವಂತವಾಗಿವೆ. ತಾಲ್ಲೂಕಿನಲ್ಲಿ ಮನೆಗಳ ವಿತರಣೆಯಲ್ಲಿ ಪಕ್ಷಪಾತ ಮಾಡಲಾಗಿದೆ. ಎಸ್ಸಿ ಎಸ್‍ಟಿ ಜನಾಂಗಕ್ಕೆ ಕೃಷಿ ಕೊಳವೆ ಬಾವಿ ಮಂಜೂರು ಮಾಡಿಸಿಲ್ಲ. ಕೇಂದ್ರ ಸಾರ್ಕಾರ ನಬಾರ್ಡ್ ಮೂಲಕ ಡಿಸಿಸಿ ಬ್ಯಾಂಕ್‍ಗೆ ನೀಡುವ ಹಣವನ್ನು ತಮ್ಮ ಕಿಸೆಯಿಂದ ನೀಡಿದಂತೆ ಬಿಂಬಿಸಿ, ಸ್ತ್ರೀ ಶಕ್ತಿ ಸಂಘಗಳಿಗೆ ಸಾರ್ವಜನಿಕವಾಗಿ ವಿತರಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ ಮಾತನಾಡಿ, ಜೆಡಿಎಸ್ ಕಾರ್ಯಕರ್ತರು ಪಕ್ಷದ ಸಂಘಟನೆಗೆ ಸಾಂಘಿಕ ಪ್ರಯತ್ನ ಮಾಡಬೇಕು. ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಮಾಡಬೇಕು. ಪಂಚರತ್ನ ಯೋಜನೆ ಕುರಿತು ಮತದಾರರಿಗೆ ತಿಳಿಸಬೇಕು. ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಂಡಪಲ್ಲಿ ಕೃಷ್ಣಾರೆಡ್ಡಿ, ಶ್ರೀನಿವಾಸ್, ಮುಖಂಡರಾದ ಕೆ.ವಿ.ಶಿವಾರೆಡ್ಡಿ, ಸದಾಶಿವ, ಅಮರನಾಥ್, ರಮೇಶ್, ನಾರಾಯಣಸ್ವಾಮಿ, ಗಣೇಶ್, ಆನಂದ್, ರೆಡ್ಡಪ್ಪ ಇದ್ದರು.

“ವರ್ಲ್ಡ್ ಬುಕ್ ರೆಕಾರ್ಡ್ಸ್” ಖ್ಯಾತಿಯ ಡಾ|ರೊನಾಲ್ಡ್ ಕುಲಾಸೊರವರಿಗೆ ಮಂಗಳೂರು ನಾಗರಿಕ ಸನ್ಮಾನ ಕಾರ್ಯಕ್ರಮಕ್ಕೆ ಕುಂದಾಪುರದಲ್ಲಿ ಪೂರ್ವಭಾವಿ ಸಭೆ


ಕುಂದಾಪುರ, ಫೆ.17: ಭಾರತದ ಕರ್ನಾಟಕದಲ್ಲಿ ಜನಿಸಿ ಅನಿವಾಸಿ ಯಶಸ್ವಿ ಉದ್ಯಮಿಯಾಗಿ, ತಾನು ಗಳಿಸಿದ ಗಳಿಕೆಯಲ್ಲಿ ಜೀವನ ಪರ್ಯಾಂತ ಇಂತಿಸ್ಟು ಭಾಗ ಸಮಾಜಕ್ಕೆ, ದೀನ ದಲಿತರಿಗೆ, ಸಂಘ ಸಂಸ್ಥೆಗಳಿಗೆ ದಾನ ಧರ್ಮ ಮಾಡುವೆನು ಎಂದು ನಿರ್ಧರಿಸಿ, ಹಾಗೇ ದಾನ ಧರ್ಮ ಮಾದಿ ಸಮಾಜದಲ್ಲಿ ಆದರ್ಶ ಪುರುಷನಾಗಿ ಹೊರಹೊಮ್ಮಿದ ಡಾ|ರೊನಾಲ್ಡ್ ಕುಲಾಸೊ ಇವರನ್ನು ಇತ್ತೀಚೆಗೆ ಲಂಡನ್‍ನಿನ “ವರ್ಲ್ಡ್ ಬುಕ್ ರೆಕಾರ್ಡ್ಸ್” ಸಂಸ್ಥೆ ಇವರ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಗೌರವಿಸಿ ಕುಲಾಸೊ ಅವರ ವ್ಯಕ್ತಿತ್ವವನ್ನು ಕೊಂಡಾಡಿ, ಇವರನ್ನು ಪ್ರಪಂಚಕ್ಕೆ ಪರಿಚಯಿಸಿತು.
ಇಂತಹ ಅಪರೂಪದ ಕೀರ್ತಿಗೆ ಭಾಜನರಾದ ಡಾ|ಕುಲಾಸೊ ಅವರನ್ನು ಬೆಂಗಳೂರು ನಾಗರಿಕರ ಪರವಾಗಿ ವೈಭವದಿಂದ ಸಮ್ಮಾನಿಸಿತು. ಇದೀಗ ಇದೇ ಫೆ.24 ರಂದು ಮಂಗಳೂರು ನಾಗರಿಕರ ಪರವಾಗಿ ಅದ್ದೂರಿಯಾಗಿ ಸಮ್ಮಾನಿಸಲು ನಿರ್ಧರಿಸಿದೆ. ಈ ಕಾರ್ಯಕ್ರಮದ ಸಲುವಾಗಿ ಕುಂದಾಪುರ ರೋಜರಿ ಸೊಸೈಟಿ ಲಿ. ನ ಸಭಾಭವನದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಈ ಸಭೆಯ ಅಧ್ಯಕ್ಷತೆಯನ್ನು ರೊನಾಲ್ಡ್ ಕುಲಾಸೊ ಮಂಗಳೂರು ನಾಗರಿಕ ಸನ್ಮಾನ ಸಮಿತಿಯ ಅಧ್ಯಕ್ಷರಾದ ಮಾಜಿ ಶಾಸಕ ಜೆ.ಆರ್.ಲೋಬೊ ವಹಿಸಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ “ವರ್ಲ್ಡ್ ಬುಕ್ ರೆಕಾರ್ಡ್ಸ್” ಇವರಿಂದ ಗುರುತಿಸಲ್ಪಟ್ಟ ರೊನಾಲ್ಡ್ ಕುಲಾಸೊ, ಸಮಾಜಕ್ಕೆ ಆದರ್ಶ ವ್ಯಕ್ತಿ, ಅವರು ಜಾತಿ ಧರ್ಮ ಭೇದಬಾವವಿಲ್ಲದೆ ತಾನು ಗಳಿಸಿದ ಗಳಿಕೆಯನ್ನು ಸಮಾಜಕ್ಕೆ ವಿನಿಯೋಗಿಸಿದ, ಬಹು ವಿರಳ ವ್ಯಕ್ತಿ, ಅವರನ್ನು ಸಮಾನ್ನಿಸುವುದು ನಮ್ಮ ಕರ್ತವ್ಯವಾಗಿದೆ, ನಾವು ಅವರಿಗೆ ಸಮ್ಮಾನಿಸುವುದುರಿಂದ ಅಗು ಹೋಗುವುದು ಏನೂ ಇಲ್ಲ, ರೊನಾಲ್ಡ್ ಕುಲಾಸೊ, ರೊನಾಲ್ಡ್ ಕುಲಾಸೊ ಆಗಿಯೆ ಇರುತ್ತಾರೆ, ಆದರೆ ನಾವು ಅವರನ್ನು ಸನ್ಮಾನಿಸುವುದು ಕರ್ತವ್ಯವಾಗಿದೆ, ಇವರನ್ನು ಸನ್ಮಾನಿಸಲು ಬೆಂಗಳೂರಿನ ಆರ್ಚ್ ಬಿಷಪ್, ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಶ್ರೀ ವಿರೇಂದ್ರ ಹೆಗ್ಗಡೆ, ಬಿಷಗಳಾದ ಅ|ವಂ|ಡಾ|ಪೀಟರ್ ಪಾವ್ಲ್, ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ, ಸಿ.ಎಸ್.ಐ. ಬಿಷಪ್ ಅ|ವಂ|ಹೇಮಾಚಂದ್ರ, ಅ|ವಂ|ಡಾ|ಲಾರೆನ್ಸ್ ಮುಕ್ಕೊಯಿ, ಅ|ವಂ|ಡಾ|ಫ್ರಾನ್ಸಿಸ್ ಸೆರಾವೊ, ಅ|ವಂ|ಡಾ|ಹೆನ್ರಿ ಡಿಸೋಜಾ, ಮಾಜಿ ಮಂತ್ರಿ ಯು.ಟಿ.ಖಾದರ್, ಡಾ| ಮೋಹನ್ ಆಳ್ವಾ ಮತ್ತು ಇನ್ನಿತರ ಎಲ್ಲಾ ಸಮಾಜದ ಗಣ್ಯಾತಿ ಗಣ್ಯರು ಆಗಮಿಸಲಿದ್ದಾರೆ, ಇಂತಹ ಕಾರ್ಯಕ್ರಮದಲ್ಲಿ ಕುಂದಾಪುರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿಕೊಂಡರು.
ಈ ಸಂದರ್ಭದಲ್ಲಿ ಕುಂದಾಪುರ ವಲಯ ಕಥೊಲಿಕ್ ಸಭಾ ಅಧ್ಯಕ್ಷೆ ಶಾಂತಿ ಪಿರೇರಾ, ಕಿರಣ್ ಲೋಬೊ, ಮತ್ತು ಇತರ ಹಲವಾರು ಮುಖಂಡರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಚಾಲಕರಾದ ಡೇನಿಸ್ ಡಿಸಿಲ್ವಾ ಕಾರ್ಯಕ್ರಮ ರೂಪು ರೇಖೆಗಳನ್ನು ವಿವರಿಸಿದರು. ಕಾರ್ಯಕ್ರಮ ಸಮಿತಿಯ ಸದಸ್ಯರಾದ ಜಾನ್ಸನ್ ಡಿಆಲ್ಮೇಡಾ ಸ್ವಾಗತಿಸಿದರು. ಇನ್ನೊರ್ವ ಸದಸ್ಯರಾದ ಅಲ್ವಿನ್ ಕ್ವಾಡರ್ಸ್ ಧನ್ಯವಾದಗಳನ್ನು ಸಮರ್ಪಿಸಿದರು

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ಗೆ ಉಡುಪಿ ವೈಕುಂಠ ಬಾಳಿಗ ಕಾನೂನು ಕಾಲೇಜಿನ ವಿದ್ಯಾರ್ಥಿಗಳ ತಂಡ ಭೇಟಿ


ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ಗೆ ಉಡುಪಿ ವೈಕುಂಠ ಬಾಳಿಗ ಕಾನೂನು ಕಾಲೇಜಿನ 100 ವಿದ್ಯಾರ್ಥಿಗಳ ತಂಡ ಭೇಟಿ ನೀಡಿ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ನಿಕಟ ಪೂರ್ವಾಧ್ಯಕ್ಷರಾದ ಬೋಳ ಉದಯ ಅಂಚನ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಉಡುಪಿ ವೈಕುಂಠ ಬಾಳಿಗ ಕಾನೂನು ಕಾಲೇಜಿನ ಪ್ಯಾಕಲ್ಟಿ ಈರಪ್ಪ ಮೆದರ್, ಪಿಡಬ್ಲ್ಯುಡಿ ಕಂಟ್ರಾಕ್ಟರ್ ಅರುಣ್ ಕುಮಾರ್ ನಿಟ್ಟೆ, ಸಮಾಜ ಸೇವಕಿ ಹಾಗೂ ಅಂತರಾಷ್ಟ್ರೀಯ ಕ್ರೀಡಾಪಟು ವಿಜೇತ ಪೈ, ಕಾರ್ಕಳ ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಗಿರೀಶ್ ರಾವ್, ಬೆಳ್ಮಣ್ಣು ಜೇಸಿಐ ಅಧ್ಯಕ್ಷ ಅಬ್ಬನಡ್ಕ ಸತೀಶ್ ಪೂಜಾರಿ, ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದಿನೇಶ್ ಪೂಜಾರಿ ಬೀರೊಟ್ಟು, ಪೂರ್ವಾಧ್ಯಕ್ಷರಾದ ಕಾಸ್ರಬೈಲು ಸುರೇಶ್, ಉಡುಪಿ ವೈಕುಂಠ ಬಾಳಿಗ ಕಾನೂನು ಕಾಲೇಜಿನ ವಿದ್ಯಾರ್ಥಿ ನಾಯಕರು ಹಾಗೂ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಸದಸ್ಯರುಗಳು ಉಪಸ್ಥಿತಿತರಿದ್ದರು.

ರಾಜ್ಯ ಬಜೆಟ್‍ನಲ್ಲಿ ಮಾವು ಬೆಳೆಗಾರರಿಗೆ ಹೆಚ್ಚಿನ ಆದ್ಯತೆ ಜೊತೆಗೆ ಮಾರುಕಟ್ಟೆ ಔಷಧಿ,ಮಾವು ಸಂಸ್ಕರಣಾ ಘಟಕ ಸ್ಥಾಪನೆಗೆ 300 ಕೋಟಿ ಅನುದಾನ ಮೀಸಲಿಡಬೇಕು – ರೈತ ಸಂಘ

ಶ್ರೀನಿವಾಸಪುರ; ಫೆ.16: ರಾಜ್ಯ ಬಜೆಟ್‍ನಲ್ಲಿ ಮಾವು ಬೆಳೆಗಾರರಿಗೆ ಹೆಚ್ಚಿನ ಆದ್ಯತೆ ಜೊತೆಗೆ ಮಾರುಕಟ್ಟೆ ಔಷಧಿ ಹಾಗೂ ಮಾವು ಸಂಸ್ಕರಣಾ ಘಟಕ ಸ್ಥಾಪನೆಗೆ 300 ಕೋಟಿ ಅನುದಾನ ಮೀಸಲಿಡಬೇಕೆಂದು ರೈತಸಂಘದಿಂದ ಉಪ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಮನವಿ ನೀಡಿ ಮಾತನಾಡಿದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ವಿಶ್ವ ವಿಖ್ಯಾತಿ ಮಾವಿನ ನಗರಿ ಶ್ರೀನಿವಾಸಪುರ ವ್ಯಾಪ್ತಿಯಲ್ಲಿ ಅತಿ ಹೆಚ್ಚಾಗಿ ಮಾವು ಬೆಳೆದು ದೇಶ ವಿದೇಶಗಳಿಗೆ ರಫ್ತು ಮಾಡುವ ಮಾವು ಬೆಳೆಗಾರರ ಸ್ಪಂದನೆಗೆ ಯಾವುದೇ ಬಜೆಟ್‍ನಲ್ಲಿ ಅನುದಾನ ನೀಡದೇ ಇರುವುದು ವಿಷಾಧಕರ ಸಂಗತಿ ಎಂದು ಅಸಮಧಾನ ವ್ಯಕ್ತಪಡಿಸಿದರು.
ಅದರಂತೆ ಇತ್ತೀಚೆಗೆ ಹವಾಮಾನ ವೈಫರೀತ್ಯ ಮುಂಗಾರುಮಳೆ ಆರ್ಭಟಕ್ಕೆ ಮಾವಿನ ಫಸಲು ಸಹ ಬರುತ್ತಿಲ್ಲ. ಹೆಚ್ಚುತ್ತಿರುವ ರೋಗಗಳ ನಿಯಂತ್ರಣಕ್ಕೆ ಔಷಧಿ ಖರೀದಿ ಮಾಡಲು ರೈತರು ಪರದಾಡುವ ಜೊತೆಗೆ ಪ್ರಧಾನಮಂತ್ರಿ ಫಸಲ್ ಭಿಮಾ ವಿಮಾ ಕಂಪನಿ ಸಹ ರೈತರಿಗೆ ಅಷ್ಟಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪ ಮಾಡಿದರು.
ತಾಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ, ಮಾವು ಮಾರುಕಟ್ಟೆಯ ಜಾಗದ ಸಮಸ್ಯೆಯಿಂದ ಅಭಿವೃದ್ಧಿಯಾಗದೆ ಪ್ರತಿವರ್ಷ ಕುಡಿಯುವ ನೀರಿನಿಂದ ಊಟದವರೆಗೂ ಪರದಾಡುವ ಜೊತೆಗೆ ಬದುಕು ಕಟ್ಟಿಕೊಳ್ಳಲು ಕೂಲಿಗಾಗಿ ಬರುವ ಕಾರ್ಮಿಕರಿಗೆ ಮಾರುಕಟ್ಟೆಯಲ್ಲಿ ಉಚಿತವಾದ ಅನಾರೋಗ್ಯ ನೀಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾವು ಬೆಲೆ ಕುಸಿತವಾದಾಗ ಫಸಲನ್ನು ಸಂರಕ್ಷಣೆ ಮಾಡಲು ಮಾವು ಸಂಸ್ಕರಣಾ ಘಟಕವಿಲ್ಲ ಹಾಗೂ ಮಾವು ಆಧಾರಿತ ಕೈಗಾರಿಕೆಗಳಿಲ್ಲದೆ ಬೆಲೆ ಇಲ್ಲದಾಗ ಮಾವನ್ನು ರಸ್ತೆಗಳಲ್ಲಿ ಸುರಿಯಬೇಕಾದ ಪರಿಸ್ಥಿತಿಯಿದೆ. ಈ ಬಜೆಟ್‍ನಲ್ಲಾದರೂ ಮಾವು ಬೆಳೆಗಾರರಿಗೆ ರಕ್ಷಣೆಗೆ 300 ಕೋಟಿ ಅನುದಾನವನ್ನು ಮೀಸಲಿಟ್ಟು ಸಂಕಷ್ಟದಲ್ಲಿರುವ ಮಾವು ಬೆಳೆಗಾರರ ರಕ್ಷಣೆಗೆ ಸರ್ಕಾರ ನಿಲ್ಲಬೇಕೆಂದು ಒತ್ತಾಯ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪ ತಹಸೀಲ್ದಾರ್, ನಿಮ್ಮ ಮನವಿಯನ್ನು ಸರ್ಕಾರಕ್ಕೆ ಕಳುಹಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಷೇಕ್ ಶಫೀಉಲ್ಲಾ, ಆಲವಾಟ ಶಿವ, ಸಂತೋಷ್, ಹರೀಶ್, ವೆಂಕಟೇಶ್, ಗಂಗಾಧರ್, ಯಲ್ದೂರು ಮೋಹನ್ ಗೌಡ, ಸಹದೇವಣ್ಣ, ವೆಂಕಟ್ ಮುಂತಾದವರಿದ್ದರು.

ಶ್ರೀನಿವಾಸಪುರ: ಪಟ್ಟಣಾಭಿವೃದ್ಧಿಗೆ ಸರ್ಕಾರ ನೀಡಿರುವ ರೂ.15 ಕೋಟಿ ಖರ್ಚು ಮಾಡುವ ಬಗ್ಗೆ ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ವಿಶೇಷ ಸಭೆ

ತಾಲ್ಲೂಕಿನ ಶಾಸಕ ಕೆ.ಆರ್.ರಮೇಶ್ ಕುಮಾರ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಸದಸ್ಯರು ಪಟ್ಟಣದ ಅಭಿವೃದ್ಧಿಗೆ ಪಕ್ಷಾತೀತವಾಗಿ ಸಹಕರಿಸಬೇಕು ಎಂದು ಸಲಹೆ ಮಾಡಿದರು.
ಪಟ್ಟಣದ ಕ್ರೀಡಾಂಗಣದಲ್ಲಿ ರೂ.3 ಕೋಟಿ ವೆಚ್ಚದಲ್ಲಿ ಈಜುಕೊಳ ನಿರ್ಮಿಸುವಂತೆ ಶಾಸಕರು ಹೇಳಿದಾಗ, ಪುರಸಭೆ ಉಪಾಧ್ಯಕ್ಷೆ ಆಯಿಷಾ ನಯಾಜ್ ವಿರೋಧ ವ್ಯಕ್ತಪಡಿಸಿದರು. ಸಧ್ಯದ ಪರಿಸ್ಥಿತಿಯಲ್ಲಿ ಅಷ್ಟು ಹಣ ಖರ್ಚು ಮಾಡಿ ಈಜುಕೊಳ ನಿರ್ಮಿಸುವುದು ಬೇಡ. ಅದಕ್ಕೆ ಬದಲಾಗಿ ಪಟ್ಟಣದಲ್ಲಿ ಬೀದಿ ದೀಪ ಅಳವಡಿಸಲು, ಸ್ವಚ್ಛತೆ ಕಾಪಾಡಲು, ಶುದ್ಧ ಕುಡಿಯುವ ನೀರು ಘಟಕ ಸ್ಥಾಪಿಸಲು, ರಸ್ತೆ, ಚರಂಡಿ ದುರಸ್ತಿ ಮಾಡಲು ಬಳಸಿಕೊಳ್ಳೋಣ ಎಂದು ಸಲಹೆ ಮಾಡಿದರು.
ಅದಕ್ಕೆ ಶಾಸಕ ರಮೇಶ್ ಕುಮಾರ್, ಜಿಲ್ಲೆಯ ಯಾವುದೇ ತಾಲ್ಲೂಕಿನಲ್ಲಿ ಪುರಸಭೆ ಅಥವಾ ನಗರ ಸಭೆಗೆ ಸೇರಿದ ಈಚುಕೊಳ ನಿರ್ಮಿಸಿಲ್ಲ. ಬದಲಾದ ಪರಿಸ್ಥಿತಿಯಲ್ಲಿ ಅದರ ಅಗತ್ಯವಿದೆ. ಸಮಗ್ರ ಅಭಿವೃದ್ಧಿ ಯೋಜನೆಯಲ್ಲಿ ಈಜುಕೊಳವೂ ಸೇರುತ್ತದೆ. ವಿರೋಧ ವ್ಯಕ್ತಪಡಿಸುವುದು ಬೇಡ. ಪ್ರಸ್ತಾವನೆ ಜಿಲ್ಲಾಧಿಕಾರಿಗೆ ಕಳುಗಿಸಿ, ಅವರು ಪ್ರಸ್ತಾವನೆ ಪರಿಶೀಲಿಸಿ ಒಪ್ಪಿಗೆ ಸೂಚಿಸಿದಲ್ಲಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವಿರೋಧಗಳ ನಡುವೆ ಅಭಿವೃಧ್ದಿ ಕುಂಠಿತಗೊಳ್ಳುತ್ತಿದೆ. ಹಳೆ ಬಸ್ ನಿಲ್ದಾಣದಲ್ಲಿ ರವೀಂದ್ರ ಕಲಾಕ್ಷೇತ್ರ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಕೆಲವರು ಅದಕ್ಕೂ ವಿರೋಧ ವ್ಯಕ್ತಪಡಿಸುತ್ತಾರೆ. ಪಟ್ಟಣದ ಸರ್ಕಾರಿ ಕರ್ನಾಟಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 400 ವಿದ್ಯಾರ್ಥಿಗಳು ದಾಖಲಾಗಿದ್ದು, ಕಟ್ಟಡ ಹಾಗೂ ಮೂಲ ಸೌಕರ್ಯದ ಕೊರತೆ ಇದೆ. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂಥ ಮಾದರಿ ಶಾಲಾಭಿವೃದ್ಧಿಗೆ ಎಲ್ಲರು ಸಹಕರಿಸಬೇಕು ಎಂದು ಹೇಳಿದರು.
ಪುರಸಭಾಧ್ಯಕ್ಷರು ಪಕ್ಷಾತೀತವಾಗಿ ಎಲ್ಲ ಸದಸ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಅಭಿವೃದ್ಧಿ ಮಾಡಬೇಕು. ಯಾವುದೇ ಕಾರಣಕ್ಕೂ ಸದಸ್ಯರ ಅವಗಣನೆ ಮಾಡಬಾರದು ಎಂದು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ 13 ಸದಸ್ಯರು ಕೈ ಎತ್ತುವುದರ ಮೂಲಕ ಪುರಸಭೆ ಕೈಗೊಂಡ ನಿರ್ಣಯಕ್ಕೆ ಬೆಂಬಲ ಸೂಚಿಸಿದರು.
ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್, ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ಎಂಜಿನಿಯರ್ ನಾಗರಾಜ್, ಕಂದಾಯ ಅಧಿಕಾರಿ ವಿ.ನಾಗರಾಜ್ ಮತ್ತು ಸದಸ್ಯರು ಇದ್ದರು.

ಕೋಲಾರ:ಪತ್ರಕರ್ತರಿಗೆ ಸ್ವಾಭಿಮಾನವೇ ಸರ್ವಶ್ರೇಷ್ಟವಾಗಬೇಕು-ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಕರೆ

ಕೋಲಾರ : ಪತ್ರಕರ್ತರಿಗೆ ಸ್ವಾಭಿಮಾನವೇ ಸರ್ವಶ್ರೇಷ್ಟವಾಗಿದೆ. ಅದನ್ನು ಪ್ರತಿಯೊಬ್ಬರೂ ತಮ್ಮ ವೃತ್ತಿಯಲ್ಲಿ ಮಾತ್ರವಲ್ಲ ಜೀವನದಲ್ಲೂ ಅಳವಡಿಸಿಕೊಂಡು ಬೆಳೆಸುವಂತಾಗಬೇಕೆಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಕರೆ ನೀಡಿದರು.

ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರಥಮವಾಗಿ ಆಯೋಜಿಸಿದ್ದ ಡಿ.ವಿ.ಗುಂಡಪ್ಪನವರು ಮುಂಚೂಣಿಯಲ್ಲಿ ಪ್ರಪ್ರಥಮವಾಗಿ ರಾಜ್ಯದಲ್ಲಿ ಪತ್ರಕರ್ತರ ಸಂಘವನ್ನು ಸಂಘಟಿಸಿ ಸ್ಥಾಪಿಸಿದ 91ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪತ್ರಕರ್ತರು ತಮ್ಮ ವೃತ್ತಿಯಲ್ಲಿ ಭೌತಿಕ ಗುಣಮಟ್ಟವನ್ನು ಕಾಯ್ದಕೊಂಡಾಗ ಮಾತ್ರ ಪತ್ರಿಕೆಗಳಿಗೊಂದಿಗೆ ತಮಗೂ ಸಮಾಜದಲ್ಲಿ ಗೌರವ ಲಭಿಸುವುದು, ಪತ್ರಿಕಾ ವೃತ್ತಿಯಲ್ಲಿ ವೈವಿಧ್ಯತೆಗಳನ್ನು ಕಾಪಾಡಿಕೊಳ್ಳುವ ಮೂಲಕ ಸಾರ್ಥಕಗೊಳಿಸಬೇಕು. ಪತ್ರಕರ್ತರಿಗೆ ಆತ್ಮ ಸಾಕ್ಷಿಗಿಂತ ಮತ್ತೊಂದು ಪ್ರಶಸ್ತಿಯ ಅಗತ್ಯವಿಲ್ಲ ಎಂದು ಕಿವಿ ಮಾತು ಹೇಳಿದರು.

ಇಂದು ಪತ್ರಿಕಾ ಕ್ಷೇತ್ರದಲ್ಲಿ ಗುಣ ಮಟ್ಟವನ್ನು ಕಾಯ್ದುಕೊಳ್ಳದೆ ಶೂನ್ಯವಾಗಿದ್ದು, ಪತ್ರಿಕಾ ಕ್ಷೇತ್ರವು ಒಂದು ಫ್ಯಾಷನ್ ಅಗಿ ಪರಿವರ್ತನೆಯಾಗುತ್ತಿದೆ. ಸಂಘದಲ್ಲಿನ ಸ್ಥಾನಮಾನಗಳನ್ನು ಅಧಿಕಾರವೆಂದು ಬಾವಿಸದೆ ಜವಾಬ್ದಾರಿ ಎಂದು ಭಾವಿಸಬೇಕು. ಸಂಘ, ಸಂಸ್ಥೆಗಳಲ್ಲಿ ಭಿನ್ನಮತಗಳು ಸಹಜವಾದರೂ ಸಂಘಟನೆಗೆ ಚ್ಯುತಿ ಬಾರದಂತೆ ಜಾಗೃತರಾಗಿ ಕೆಲಸ ನಿರ್ವಹಿಸ ಬೇಕೆಂದು ತಿಳಿಸಿದರು.

ಪತ್ರಿಕೆಗಳು ಸಮಾಜದ ಕಾವಲು ನಾಯಿಗಳಂತೆ ಕಾರ್ಯನಿರ್ವಹಿಸಬೇಕೆಂದು ಪತ್ರಕರ್ತರ ಸಂಘದ ಸಂಸ್ಥಾಪಕ ಡಿ.ವಿ.ಗುಂಡಪ್ಪನವರ ನಾಣ್ಮುಡಿಯನ್ನು ಪ್ರತಿಯೊಬ್ಬ ಪತ್ರಕರ್ತರು ತಮ್ಮ ವೃತ್ತಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ಕಾರ್ಯನಿರ್ವಹಿಸುವಂತಾಗಬೇಕಾಗಿದೆ ಎಂದು ಕರೆ ನೀಡಿದರು. ಅದರೆ ಇಂದು ಪತ್ರಕರ್ತರ ವೃತಿಯಲ್ಲಿ ಯಾರ ಕಾವಲು ನಾಯಿಗಳಾಗಿ ಕೆಲಸ ನಿರ್ವಹಿಸಲಾಗುತ್ತಿದೆಯೇ? ಎಂದು ಆತ್ಮವಿಮರ್ಷೆ ಮಾಡಿಕೊಳ್ಳಬೇಕೆಂದು ತಿಳಿಸಿದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಪತ್ರಕರ್ತರ ಸಹಕಾರ ಸಂಘದ ಅಧ್ಯಕ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕೆ.ಎಸ್.ಗಣೇಶ್ ಮಾತನಾಡಿ ಕಳೆದ 1938ರಲ್ಲಿ ಏಕಿಕರಣದ ಮೊದಲು ಮೈಸೂರು ಪತ್ರಕರ್ತರ ಸಂಘವನ್ನು ಅಂದಿನ ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ ಸಲಹೆ ಮೇರೆಗೆ ಪತ್ರಕರ್ತರ ಸಂಘವನ್ನು ಸ್ಥಾಪಿಸಿದರು, ಆಗ ನಮ್ಮ ಜಿಲ್ಲೆಯಲ್ಲಿ 2-3 ಮಂದಿ ಮಾತ್ರ ಇದ್ದರೂ ರಾಜ್ಯಾದಾದ್ಯಂತ ಇಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಬೀದರ್‌ನಿಂದ ಕೋಲಾರದ ಉದ್ದಗಲಕ್ಕೂ ಹೆಮ್ಮರವಾಗಿ ಬೆಳೆದು ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ಅಧಿಕೃತ ಪತ್ರಕರ್ತರು ಸಂಘದ ಸದಸ್ಯರಾಗಿದ್ದಾರೆ ಎಂದರು.

ಸ್ವಾತಂತ್ರ್ಯದ ನಂತರ ರಾಜ್ಯದ ಏಕೀಕರಣ ಸಂದರ್ಭದಲ್ಲಿ ಕರ್ನಾಟಕ ಪತ್ರಕರ್ತರ ಸಂಘ ಎಂದು ಸಂಘದ ಹೆಸರು ಬದಲಾಯಿಸಿತು, ಪತ್ರಕರ್ತರ ಸಂಘದ ಹಿತರಕ್ಷಣೆ ಜೂತೆಗೆ ಪತ್ರಕರ್ತ ಕಲ್ಯಾಣದ ಕಾರ್ಯಕ್ರಮಗಳಿಗೆ ಗಮನ ಹರಿಸಿ ಕಾರ್ಮಿಕ ಕಾಯ್ದೆಗಳನ್ನು ಸಂಘದ ವ್ಯಾಪ್ತಿಗೆ ಒಳಪಡೆಸಲಾಯಿತು ಎಂದ ಅವರು ಕಳೆದ 1982ರಲ್ಲಿ ಜಿ.ಕೆ. ಸತ್ಯ ನೇತೃತ್ವದಲ್ಲಿ ನಡೆದ ಹೋರಾಟದಿಂದಾಗಿ 62 ದಿನಗಳ ಪತ್ರಿಕಾ ಕಛೇರಿಯನ್ನು ಮುಚ್ಚಿಸುವ ಮೂಲಕ ಪಾಠ ಕಲಿಸಿದ ಸಂದರ್ಭವನ್ನು ನೆನಪಿಸಿಕೊಂಡ ಅವರು ಇಂದು ಪತ್ರಕರ್ತರಿಗೆ ದೊಡ್ಡ ಪತ್ರಿಕೆಗಳಲ್ಲಿ, ದೊಡ್ಡ ದೊಡ್ಡ ಹುದ್ದೆಗಳಲ್ಲಿ ಇರುವವರಿಗೆ ಸೇವಾ ಭದ್ರತೆ ಇಲ್ಲದೆ ಇರುವುದು ಸೇರಿದಂತೆ ಇಂದು ಬಿ.ಬಿ.ಸಿ. ಮೇಲೆಯೇ ಐ.ಟಿ. ದಾಳಿ ಮಾಡಿಸಿ ಬೆದರಿಸುವಂತ ಮಟ್ಟಕ್ಕೆ ಇಳಿದಿರುವುದು ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟು ಮಾಡುತ್ತಿರುವುದು ವಿಷಾಧನೀಯ ಸಂಗತಿಯಾಗಿದೆ ಎಂದರು.

ಕನ್ನಡ ಏಕೀಕರಣ ಸಂದರ್ಭದಲ್ಲಿ ಅಂದಿನ ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್  ಅವರ ಸಲಹೆ ಮೇರೆಗೆ ಡಿ.ವಿ.ಜಿ. ಅವರು ಕೋಲಾರದಲ್ಲಿ ಪ್ರಪ್ರಥಮವಾಗಿ ಸ್ಥಾಪಿಸಿದ ಪತ್ರಕರ್ತರ ಸಂಘದಿಂದಾಗಿ ರಾಜ್ಯದಲ್ಲಿ ಇಂದು ಕೆ.ಡಬ್ಲೂಜೆ.ಸಿ.ಸ್ಥಾಪಸಿಲು ಕಾರಣವಾಯಿತು. ಕೋಲಾರಕ್ಕೆ ಪ್ರಪ್ರಥಮ ಮುಖ್ಯಮಂತ್ರಿ ನೀಡಿದ್ದು ಹಾಗೂ ಪ್ರಥಮವಾಗಿ ಪತ್ರಕರ್ತರ ಸಂಘ ಸ್ಥಾಪಿಸಿದ್ದು ಕೋಲಾರ ಜಿಲ್ಲೆಯಾಗಿದೆ ಎಂದು ಹೆಮ್ಮೆಯಿಂದ ನುಡಿದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ  ವಿ.ಮುನಿರಾಜು ಮಾತನಾಡಿ, ಡಿ.ವಿ.ಜಿ.ಅವರು ಕೋಲಾರದ ಮುಳಬಾಗಿಲು ತಾಲ್ಲೂಕಿನವರು ಆಗಿದ್ದು ಪತ್ರಕರ್ತರ ಸಂಘವನ್ನು ಪ್ರಪ್ರಥಮವಾಗಿ ಸ್ಥಾಪಿಸುವ ಮೂಲಕ ಪತ್ರಿಕಾ ರಂಗಕ್ಕೆ ಶಕ್ತಿ ತುಂಬಿದರು, ಅವರು ಸಂಘ ಸ್ಥಾಪಿಸಿದ ದಿನವನ್ನು ಸಂಸ್ಥಾಪಕರ ದಿನವನ್ನಾಗಿ ನಮ್ಮ ಸಂಘದ ಮೂಲಕ ಪ್ರಥಮವಾಗಿ ಆಚರಿಸುತ್ತಿರುವುದು ತಡವಾದರೂ ಶ್ಲಾಘನೀಯ ಕಾರ್ಯಕ್ರಮವಾಗಿದೆ ಎಂದು ಅಭಿಪ್ರಾಯಪಟ್ಟರು.

ಹಿರಿಯ ಪತ್ರಕರ್ತ ಎಸ್.ಸಚ್ಚಿದಾನಂದ ಮಾತನಾಡಿ, ಡಿ.ವಿ.ಜಿ. ಅವರು ಪತ್ರಕರ್ತರ ಸಂಘವನ್ನು ಸ್ಥಾಪಿಸಿದ ದಿನವನ್ನು ಪತ್ರಿಕಾ ದಿನಾಚರಣೆಯನ್ನು  ಆಚರಿಸಿದಂತೆ ಸಂಸ್ಥಾಪನಾ ದಿನವನ್ನು ಆಚರಿಸುವಂತಾದರೆ ಅರ್ಥಪೂರ್ಣವಾಗುವುದು ಎಂದು ಅಭಿಪ್ರಾಯಪಟ್ಟರು. 

ಹಿರಿಯ ಪತ್ರಕರ್ತ ಸಾಕ್ಷಿ ಮಂಜುನಾಥ್ ಮಾತನಾಡಿ, ಪತ್ರಕರ್ತರ ಸಂಘವು ಇಂದು ಬೃಹದಾಕಾರವಾಗಿ ಬೆಳೆದಿರುವುದಕ್ಕೆ ಭಗವದ್ಗೀತೆಯಲ್ಲಿ ವಾಮನಮೂರ್ತಿಯ ಮೂರನೇ ಹೆಜ್ಜೆ ಇಡಲು ಬೃಹದಕಾರವಾಗಿ ಬೆಳೆದಂತೆ ಪತ್ರಿಕಾ ಕ್ಷೇತ್ರವಾಗಿ ಬೆಳೆದು ಸಮಾಜದಲ್ಲಿ ಲೋಪ ದೋಷಗಳನ್ನು ಮೆಟ್ಟಿ ನಿಲ್ಲುವಂತಾಗಬೇಕೆಂದು ಆಶಿಸಿದರು. 

ಕೆ. ಪ್ರಕಾಶ್(ಮಾಮಿ) ಸ್ವಾಗತಿಸಿ, ಕೆ.ಆಸೀಫ್‌ಪಾಷ ವಂದಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಕೆ.ಬಿ.ಜಗದೀಶ್, ಅಬ್ಬಣಿ ಶಂಕರ್, ಬಿ.ಎಸ್.ಸ್ಕಂದಕುಮಾರ್, ಓಂಕಾರಮೂರ್ತಿ, ಸಿ.ವಿ.ನಾಗರಾಜ್, ಬಂಗಾರಪೇಟೆ ಎಂ.ಸಿ.ಮಂಜುನಾಥ್, ಕೆ.ರಮೇಶ್, ವೆಂಕಟೇಶಪ್ಪ, ಮುಕ್ತಿಯಾರ್ ಅಹಮದ್, ಸೈಯುದ್ ಪರ್ವೀಜ್, ಎ.ಬಾಲನ್, ಎನ್.ಗಂಗಾಧರ್ ಉಪಸ್ಥಿತರಿದ್ದರು.