ಗಂಗಾವಳಿ ಸಾಹಿತ್ಯ ಸಮ್ಮೇಳನಕ್ಕೆ ಸಮ್ಮೇಳನಾಧ್ಯಕ್ಷ ಕೋ. ಶಿ. ಕಾರಂತರಿಗೆ ಆಹ್ವಾನ


ತಾಲೂಕು ಸಾಹಿತ್ಯ ಪರಿಷತ್ತು ವತಿಯಿಂದ ಫೆ.19ರಂದು ಗಂಗೊಳ್ಳಿ ಸರಸ್ವತಿ ಪ.ಪೂ.ಕಾಲೇಜುವಠಾರದಲ್ಲಿ ನಡೆಯುವ ಗಂಗಾವಳಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಮ್ಮೇಳನಾಧ್ಯಕ್ಷ ಕೋ.ಶಿವಾನಂದ ಕಾರಂತರನ್ನು ಅವರ ಗುಜ್ಜಾಡಿ ನಿವಾಸ ಶಿವಲಾಲಿತ್ಯಕ್ಕೆ ತೆರಳಿ ಅಧಿಕ್ರೃತವಾಗಿ ಸ್ವಾಗತಿಸಲಾಯಿತು.
ಕುಂದಾಪುರ ತಾಲೂಕು ಕ.ಸಾ.ಪ.ಅಧ್ಯಕ್ಷ ಡಾ.ಉಮೇಶ್ ಪುತ್ರನ್, ಕಾರ್ಯದರ್ಶಿ ದಿನಕರ ಆರ್. ಶೆಟ್ಟಿ, ಕೋಶಾಧಿಕಾರಿ ಕೆ.ಎಸ್.ಮಂಜುನಾಥ, ಜಿಲ್ಲಾ ಕ.ಸಾ.ಪ.ಕೋಶಾಧ್ಯಕ್ಷ ಮನೋಹರ್ ಅಧಿಕ್ರೃತ ಪತ್ರ ನೀಡಿದರು. ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಎಚ್. ಗಣೇಶ್ ಕಾಮತ್, ಕಾರ್ಯದರ್ಶಿ ಯು.ಎಸ್ .ಶೆಣೈ, ಕ.ಸಾಪ.ಅಧ್ಯಕ್ಷ ಡಾ.ಉಮೇಶ್ ಪುತ್ರನ್ ಅವರು ಸಮ್ಮೇಳನದ ವಿವರ ನೀಡಿ, ಕೋ.ಶಿ. ಕಾರಂತ, ಕುಸುಮಾ ಕಾರಂತ ದಂಪತಿಯನ್ನು ಗೌರವಿಸಿದರು.

ಚಿಕ್ಕ ವಯಸ್ಸಿನಲ್ಲಿಯೇ ಪ್ರತಿಭೆಗಳನ್ನು ಗುರ್ತಿಸಿ ಪ್ರೋತ್ಸಾಹ ನೀಡಿದಲ್ಲಿ ಉತ್ತಮ ಸಮಾಜವನ್ನು ನಿರ್ಮಾಣ ಸಾಧ್ಯ : ಡಿವೈಎಸ್‍ಪಿ ರಮೇಶ್

ಇಂದಿನ ಮಕ್ಕಳೇ ಮುಂದಿನ ಭಾವೀ ಪ್ರಜೆಗಳಾಗಿರುವುದರಿಂದ ಚಿಕ್ಕ ವಯಸ್ಸಿನಲ್ಲಿಯೇ ಅವರಲ್ಲಿನ ಪ್ರತಿಭೆಗಳನ್ನು ಗುರ್ತಿಸಿ ಪ್ರೋತ್ಸಾಹ ನೀಡಿದಲ್ಲಿ ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಡಿವೈಎಸ್‍ಪಿ ರಮೇಶ್ ಹೇಳಿದರು.
ನಗರದ ಕಿಂಗ್ ಜಾರ್ಜ್ ಹಾಲ್‍ನಲ್ಲಿ ಗ್ರಾಂಡ್ ರ್ಯಾನ್ ರೈನಾಸ್ ಶಾಲೆಯ ಮೊದಲನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರ್ತಿಸಿ ಹೊರತೆಗೆಯುವ ಕಾರ್ಯವನ್ನು ಮನೆಗಳಲ್ಲಿ ಪೋಷಕರು ಮತ್ತು ಶಾಲೆಗಳಲ್ಲಿ ಶಿಕ್ಷಕರು ಮಾಡಬೇಕಾಗಿದೆ ಎಂದರು.
ಮಕ್ಕಳೆಂದರೆ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದು, ಅಂತಹ ಪುಟಾಣಿಗಳನ್ನು ನಿಮ್ಮ ಮೇಲೆ ಭರವಸೆ ಇಟ್ಟು ಶಾಲೆಗೆ ಕಳುಹಿಸುವುದರಿಂದ ಅವರನ್ನು ಅತ್ಯಂತ ಕಾಳಜಿ ಮತ್ತು ಮುತುವರ್ಜಿಯಿಂದ ನೋಡಿಕೊಳ್ಳಬೇಕಾದ ಜವಾಬ್ದಾರಿ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರ ಮೇಲಿರುತ್ತದೆ. ಮನೆಗಳಲ್ಲಿ ಅವರನ್ನು ನೋಡಿಕೊಳ್ಳುವುದಕ್ಕಿಂತ ಹೆಚ್ಚು ಜಾಗರೂಕತೆಯಿಂದ ನೋಡಿಕೊಳ್ಳಬೇಕೆಂದರು.
ಮಕ್ಕಳು ಮನೆಯಿಂದ ಹೊರಟು ಶಾಲೆ ಸೇರಿ ಮತ್ತೆ ಶಾಲೆಯಿಂದ ಮನೆಗೆ ತಲುಪುವರೆಗೆ ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕು. ಪ್ರತಿಯೊಂದು ಶಾಲೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು, ಇದರಿಂದ ಏನೇ ಅನಾಹುತಗಳಾದರೂ ಅದಕ್ಕೆ ನಿಖರ ಕಾರಣವನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ಮಾತನಾಡಿ, ಎಷ್ಟೇ ಒತ್ತಡಗಳಿದ್ದರೂ ಮಕ್ಕಳನ್ನು ನೋಡುವಷ್ಟರಲ್ಲಿ ಮಾಯವಾಗಿಬಿಡುತ್ತವೆ. ಶಾಲೆಯು ಪ್ರಾರಂಭವಾಗಿ ಕೇವಲ ಒಂದು ವರ್ಷವಾಗಿದ್ದರೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಕೆಜಿಎಫ್‍ನಲ್ಲಿ ಮನೆ ಮಾತಾಗಿರುವುದು ಸಂತಸದ ವಿಚಾರವಾಗಿದೆ.
ಇಂದಿನ ಪುಟಾಣಿ ಮಕ್ಕಳೇ ಮುಂದಿನ ಸಮಾಜದ ನಕ್ಷತ್ರಗಳಾಗಿದ್ದು, ಅವರನ್ನು ಸರಿದಾರಿಯಲ್ಲಿ ಸಾಗುವಂತೆ ತಿದ್ದಿ ತೀಡುವ ಜವಾಬ್ದಾರಿ ಶಿಕ್ಷಕರ ಕೈಯಲ್ಲಿದೆ. ಈ ಮೊದಲು ಮಾಂಟೆಸೋರಿ, ಎಲ್‍ಕೆಜಿ ಮತ್ತು ಯುಕೆಜಿ ತರಗತಿಗಳಿರಲಿಲ್ಲ. ಆದರೆ ನಿನ್ನೆ ತಾನೆ ಸರ್ಕಾರವೇ ಮಾಂಟೆಸೋರಿ ಶಿಕ್ಷಣ ಮಕ್ಕಳಿಗೆ ನೀಡಬೇಕೆಂದು ಆದೇಶ ಹೊರಡಿಸಿರುವುದು ಸಂತಸದ ವಿಚಾರವಾಗಿದೆ ಎಂದರು.
ಇಂದಿನ ಶಿಕ್ಷಣ ವ್ಯವಸ್ಥೆ ಬದಲಾಗುತ್ತಿದ್ದು, ಸಮಾಜಕ್ಕೆ ಅಗತ್ಯವಾದ ರೀತಿಯಲ್ಲಿ ಆಯಾ ಕಾಲಮಾನಕ್ಕೆ ತಕ್ಕಂತೆ ಹೊಸ ಹೊಸ ನೀತಿಗಳನ್ನು ಜಾರಿಗೊಳಿಸುತ್ತಿರುವುದು ಶ್ಲಾಘನೀಯವಾಗಿದ್ದು, ಬದಲಾವಣೆಗೆ ತಕ್ಕಂತೆ ಹೊಂದಿಕೊಂಡು ನಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಸಂಸ್ಥಾಪಕಿ ಪ್ರೀತಿ, ಅಧ್ಯಕ್ಷ ಅಮರ್‍ನಾಥ್, ಉಪಾಧ್ಯಕ್ಷ ತ್ಯಾಗರಾಜ್, ಕಾರ್ಯದರ್ಶಿ ಶೃತಿ, ಡಾ.ಪ್ರಕಾಶ್ ಮೊದಲಾದವರು ಇದ್ದರು.

ಬಿಸಿಯೂಟ ನೌಕರರ ಕನಿಷ್ಠ ವೇತನ ರೂ.10,500 ಹಾಗೂ ನಿವೃತ್ತ ನೌಕರರಿಗೆ ಎರಡು ಲಕ್ಷ ಇಡುಗಂಟು ನೀಡಲು ಒತ್ತಾಯಿಸಿ ಜಿಲ್ಲಾ ಪಂಚಾಯಿತಿ ಚಲೋ

ಕೋಲಾರ ಫೆಬ್ರವರಿ 6 : ರಾಜ್ಯದ ಅಕ್ಷರ ದಾಸೋಹ ನೌಕರರಿಗೆ ಅವರ ಸೇವೆಗೆ ತಕ್ಕಂತೆ ಮಾಹೆಯಾನ ಕನಿಷ್ಠ ವೇತನ ರೂ. 10,500 ನೀಡಲು ಮತ್ತು 60 ವರ್ಷ ಮೇಲ್ಪಟ್ಟ 6500 ಬಿಸಿಯೂಟ ನೌಕರರನ್ನು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ನೌಕಕರನ್ನು ಕೆಲಸದಿಂದ ತೆಗೆಯುತ್ತಿದ್ದು, ಅಂತವರಿಗೆ ಇಡುಗಂಟು ಕಾರ್ಯಕ್ರಮ ರೂಪಿಸಲು ಪ್ರತಿಯೊಬ್ಬರಿಗೆ 2 ಲಕ್ಷ ರೂ. ಗಳನ್ನು ನೀಡುವಂತೆ ಹಾಗೂ ಮಾಹೆಯಾನ ಸರಿಯಾದ ಸಮಯಕ್ಕೆ 10500 ವೇತನ ನೀಡುವಂತೆ ಒತ್ತಾಯಿಸಿ ಪ್ರಜಾಸೇವಾ ಸಮಿತಿ ಸಂಯೋಜಿತ ಅಕ್ಷರ ದಾಸೋಹ ಕ್ಷೇಮಾಭಿವೃದ್ಧಿ ಸಮಿತಿ ಹಾಗೂ ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಜಿಲ್ಲಾ ಪಂಚಾಯಿತಿ ಚಲೋ ಅನ್ನು ಕೋಲಾರ ನಗರದ ನಚಿಕೇತ ನಿಲಯದಿಂದ ಜಿಲ್ಲಾ ಪಂಚಾಯಿತಿವರೆಗೂ ಕಾಲ್ನಡಿಗೆಯಲ್ಲಿ ಹೊರಟು ಜಿಲ್ಲಾ ಪಂಚಾಯಿತಿ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಂಡು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮುಖಾಂತರ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿಯವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಸಂಸ್ಥಾಪಕ ಅಧ್ಯಕ್ಷ ಕಲ್ವಮಂಜಲಿ ಸಿ.ಶಿವಣ್ಣ ಮಾತನಾಡಿ 18 ವರ್ಷಗಳ ಹಿಂದೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಓದುತ್ತಿರುವ ಬಡ ಮಕ್ಕಳ ಅನುಕೂಲಕ್ಕೋಸ್ಕರ ಅಕ್ಷರ ದಾಸೋಹ ಎಂಬ ಯೋಜನೆಯನ್ನು ಜಾರಿಗೆ ತರಲಾಯಿತು. ಶಾಲೆಗಳಲ್ಲಿ ಬಿಸಿಯೂಟ ತಯಾರಿಸಲು ನೌಕರರನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಆಯಾಯ ಶಾಲೆಗಳ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನೌಕರರನ್ನು ನೇಮಕ ಮಾಡಿಕೊಂಡು ಅಲ್ಪ ಸಂಬಳವನ್ನು ನೀಡುತ್ತಾ ಅಕ್ಷರ ದಾಸೋಹ ನೌಕರರ ಕೈಯಲ್ಲಿ ಇಷ್ಟು ವರ್ಷಗಳ ಕಾಲ ಯಾವುದೇ ಸೇವಾ ಭದ್ರತೆಯಿಲ್ಲದೆ ದುಡಿಸಿಕೊಳ್ಳುತ್ತಿದ್ದಾರೆ.
ದಿನನಿತ್ಯದ ದಿನಸಿ ಪದಾರ್ಥಗಳು, ಗ್ಯಾಸ್ ಬೆಲೆ ಇತ್ಯಾದಿ ಬೆಲೆ ಏರಿಕೆಯ ಮಧ್ಯಯೂ ಅಡುಗೆ ನೌಕರರಿಗೆ ಯಾವುದೇ ರೀತಿಯ ಸಹಾಯಧನವನ್ನು ಹೆಚ್ಚು ಮಾಡದೆ ಇರುವುದು ಸಮಿತಿಯು ಬಲವಾಗಿ ಖಂಡಿಸುತ್ತಾ, ಸಂಬಳವನ್ನು ಹೆಚ್ಚು ಮಾಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ. ಅಕ್ಷರ ದಾಸೋಹ ನೌಕರರ ಸೇವೆಗೆ ತಕ್ಕಂತೆ ಸಂಬಳ ನೀಡದೆ ಅಂದಿನಿಂದ ಬಂದ ಎಲ್ಲಾ ಸರ್ಕಾರಗಳು ಅನ್ಯಾಯ ಮಾಡುತ್ತಾ ಬಂದಿವೆ. ಆದ್ದರಿಂದ ತಮ್ಮ ಸರ್ಕಾರ ಈಗಾಗಲೇ ರಾಜ್ಯದ ಅನೇಕ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಸಂಬಳ ಮತ್ತು ಗೌರವಧನ ಹೆಚ್ಚಿಸಿರುವುದು ಸಂತೋಷದ ವಿಷಯ. ಆದರೆ ರಾಜ್ಯದ ಅಕ್ಷರ ದಾಸೋಹ ನೌಕರಿಗೆ 1000 ಹೆಚ್ಚುವರಿ ಮಾಡಿದ್ದನ್ನು ಬಿಟ್ಟರೆ ಮತ್ತೆ ಯಾವುದೇ ಅನುಕೂಲ ಮಾಡಿಲ್ಲ. ಆದ್ದರಿಂದ ಅವರ ಸೇವೆಗೆ ತಕ್ಕ ಸಂಬಳ ಮತ್ತು ಇತರೆ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸಿದರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ ಮಾತನಾಡಿ 60 ವರ್ಷ ಮೇಲ್ಪಟ್ಟ 6500 ಜನ ಬಿಸಿಯೂಟ ನೌಕರರನ್ನು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ನೌಕರರನ್ನು ಹಾಗೂ ಇನ್ನಿತರ ಕಾರಣಗಳಿಂದ ಬಿಸಿಯೂಟ ನೌಕರರನ್ನು ಕೆಲಸದಿಂದ ತೆಗೆಯುತ್ತಿದ್ದು, ಅವರಿಗೆ ಯಾವುದೇ ರೀತಿಯ ಭದ್ರತೆಯನ್ನು ನೀಡದೆ ಬರಿ ಗೈಯಲ್ಲಿ ಸೇವೆಯಿಂದ ತೆಗೆಯುವುದು ನ್ಯಾಯವಲ್ಲ. ಇಷ್ಟು ದಿನ ಸರ್ಕಾರದ ಯೋಜನೆಯಾದ ಬಿಸಿಯೂಟ ಕ್ಷೀರ ಭಾಗ್ಯ ಯೋಜನೆಯನ್ನು ಸರ್ಕಾರ ರಾಜ್ಯಾದ್ಯಂತ ಜಾರಿಗೆ ತಂದಿದ್ದು, ಅದನ್ನು ಯಶಸ್ವಿಗೊಳಿಸಿದ್ದು ಈ ಬಿಸಿಯೂಟ ಮಹಿಳೆಯರು. ಹಾಗಾಗಿ ಅವರು ಮಾಸಿಕ ರೂ.200 ರಿಂದ ಇಲ್ಲಿಯವರಿಗೂ ದುಡಿದ ನೌಕರರನ್ನು ಕೆಸಲದಿಂದ ತೆಗೆಯುವಾಗ ಅವರ ಮುಂದಿನ ಜೀವನೋಪಾಯಕ್ಕಾಗಿ ಒಂದು ಇಡಿಗಂಟು ಕಾರ್ಯಕ್ರಮ ರೂಪಿಸಿ ಪ್ರತಿಯೊಬ್ಬರಿಗೂ 2 ಲಕ್ಷ ನೀಡಿದಲ್ಲಿ ಅವರ ಜೀವನಕ್ಕೆ ಅನುಕೂಲವಾಗುತ್ತದೆ.ಕರೋನಾ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಜನರಿಗೂ ಸರ್ಕಾರ ವಿವಿಧ ರೀತಿಯ ಯೋಜನೆಗಳನ್ನು ರೂಪಿಸಿದ್ದಾರೆ. ಆದರೆ ಅಡುಗೆ ನೌಕರರನ್ನು ಮಾತ್ರ ಕಡೆಗಣಿಸಿರುವುದು ತುಂಬಾ ನೋವಿನ ಸಂಗತಿಯಾಗಿದೆ ಎಂದರು.


ನೌಕರರ ಬೇಡಿಕೆಗಳಾದ ಬಿಸಿಯೂಟ ನೌಕರರಿಗೆ ಪ್ರತಿ ತಿಂಗಳು ಸಂಬಳವನ್ನು ಕಡ್ಡಾಯವಾಗಿ ನೀಡಬೇಕು. 60 ವರ್ಷ ಮೇಲ್ಪಟ್ಟ 6500 ಮಂದಿ ಬಿಸಿಯೂಟ ನೌಕರರನ್ನು ಹಾಗೂ ಅನಾರೋಗ್ಯ ಇನ್ನಿತರ ಕಾರಣಗಳಿಂದ ಸೇವೆಯಿಂದ ತೆಗೆಯುತ್ತಿರುವ ನೌಕರರಿಗೆ ಇಡಿಗಂಟು ಕಾರ್ಯಕ್ರಮ ಮೂಲಕ ಪ್ರತಿಯೊಬ್ಬರಿಗೂ 2 ಲಕ್ಷ ರೂಗಳನ್ನು ನೀಡಬೇಕು. ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿಯೂ ಏಕರೂಪ ಶಿಕ್ಷಣ ಕಾಯ್ದೆಯನ್ನು ಜಾರಿ ಮಾಡಬೇಕು. ಅಂದರೆ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ. ಮತ್ತು ಯೂ.ಕೆ.ಜಿ.ಯಿಂದ ಕನ್ನಡದ ಜೊತೆಗೆ ಇಂಗ್ಲೀಷ್ ಮಾದ್ಯಮವನ್ನು ಪ್ರಾರಂಭಿಸಬೇಕು. ರಾಜ್ಯದ ಅಕ್ಷರ ದಾಸೋಹ ನೌಕರರನ್ನು ಖಾಯಂಗೊಳಿಸಬೇಕು.
ರಾಜ್ಯದ ಎಲ್ಲಾ ಅಕ್ಷರ ದಾಸೋಹ (ಬಿಸಿಯೂಟ) ನೌಕರರಿಗೆ ತಾರತಮ್ಯವಿಲ್ಲದೆ ಮಾಹೆಯಾನ ಪ್ರತಿಯೊಬ್ಬರಿಗೂ ಕನಿಷ್ಠ ವೇತನ 10500 ರೂಗಳ ಸಂಬಳ ನೀಡಬೇಕು. ಅಡುಗೆ ನೌಕರರು ಅಡುಗೆ ತಯಾರಿಸುವಾಗ ಆಕಸ್ಮಿಕವಾಗಿ ಏನಾದರೂ ತೊಂದರೆಯಾದರೆ ಅದರ ಚಿಕಿತ್ಸಾ ವೆಚ್ವವನ್ನು ಸರ್ಕಾರವೇ ಭರಿಸಬೇಕು. ಹಲವು ಶಾಲೆಗಳಲ್ಲಿ ಎಸ್.ಡಿ.ಎಂ.ಸಿ. ಮತ್ತು ಶಾಲಾ ಶಿಕ್ಷಕ ವರ್ಗದವರಿಂದ ಕಿರುಕುಳ ನೀಡುತ್ತಾ ಕೆಲಸ ತೆಗೆಸಲು ಮುಂದಾಗಿದ್ದು ಅಂತಹವರ ಮೇಲೆ ಕ್ರಮ ಕೈಗೊಳ್ಳಬೇಕು ಎಲ್ಲಾ ಅಡುಗೆ ತಯಾರಿಸುವವರಿಗೆ ಒಂದೇ ಸಮವಸ್ತ್ರ ನೀಡಬೇಕು. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾದರೆ ಯಾವುದೇ ಕಾರಣಕ್ಕೂ ಯಾರೊಬ್ಬ ಅಡುಗೆ ಸಹಾಯಕರನ್ನು ಕೆಲಸದಿಂದ ತೆಗೆಯಬಾರದು.
ಸರ್ಕಾರಿ ಶಾಲೆಗಳಲ್ಲಿ ಸರ್ಕಾರಿ ಶಿಕ್ಷಕರು ಕಡ್ಡಾಯವಾಗಿ ಊಟ ಮಾಡಬೇಕು ಎಂಬ ಕಾನೂನು ಇದ್ದರೂ ಬಹಳಷ್ಟು ಮಂದಿ ಶಿಕ್ಷಕರು ಪಾಲಿಸುತ್ತಿಲ್ಲ. ಅಂತಹವರನ್ನು ಸೇವೆಯಿಂದ ವಜಾಗೊಳಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಓದಿರುವ ಅಭ್ಯರ್ಥಿಗಳಿಗೆ ಸರ್ಕಾರಿ ಹುದ್ದೆಯಲ್ಲಿ ಪ್ರಥಮ ಆದ್ಯತೆಯನ್ನು ನೀಡಬೇಕು. ಮಧ್ಯಾಹ್ನ ಬಿಸಿಯೂಟ ಯೋಜನೆ ಸಂಬಂಧಿಸಿದ ಸಭೆಗಳಿಗೆ ನಮ್ಮ ಸಂಘಟನೆಗೂ ಆಹ್ವಾನ ನೀಡಲು ಕೋರುತ್ತೇವೆ. ಸರ್ಕಾರಿ ನೌಕರರ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲೇ ವಿದ್ಯಾಭ್ಯಾಸ ಮಾಡಿಸುವ ಕಾನೂನನ್ನು ರೂಪಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್ ಮಾತನಾಡಿ ಅಕ್ಷರ ದಾಸೋಹ ನೌಕರರ ಸಮಸ್ಯೆಗಳ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಹಾಗೂ ಶಾಲೆಗಳಲ್ಲಿ ನೌಕರರಿಗೆ ಆಗುತ್ತಿರುವ ತೊಂದರೆಯನ್ನು ಶೀಘ್ರವಾಗಿ ಬಗೆಹರಿಸಲು ಸಂಬಂಧಪಟ್ಟ ತಾಲ್ಲೂಕು ಅಕ್ಷರ ದಾಸೋಹ ನಿರ್ದೇಶಕರುಗಳಿಗೆ ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಕ್ಷರ ದಾಸೋಹ ಮುಖಂಡರಾದ ಕೋಡಿಹಳ್ಳಿ ಜ್ಯೋತಿ, ವನಿತ, ಜಯಂತಿ, ಕೋಲಾರ ಮಮತ, ಮುಳಬಾಗಿಲು ಅಮ್ಮಯ್ಯಮ್ಮ, ಎಮ್ಮೆನತ್ತ ಶೋಭ, ಪ್ರಮೀಳಮ್ಮ, ವಕ್ಕಲೇರಿ ನಾಗವೇಣಮ್ಮ, ಆಶಾ, ಸುಗಟೂರು ಶೋಭಮ್ಮ, ರಾಧಮ್ಮ, ಮುನಿರತ್ನ, ಲಲಿತಮ್ಮ, ಮಂಜುಳ, ಲಕ್ಷ್ಮಮ್ಮ, ಕಾಂತಮ್ಮ, ರತ್ನಮ್ಮ, ಅಮರಾವತಿ, ಲಕ್ಷ್ಮಿ, ಕವಿತ, ರೈತ ಸಂಘದ ಮುಖಂಡರಾದ ಕಲ್ವಮಂಜಲಿ ರಾಮುಶಿವಣ್ಣ, ದೊಡ್ಡಕುರುಬರಹಳ್ಳಿ ಶಂಕರಪ್ಪ, ಕೊಲದೇವಿ ಗೋಪಾಲಕೃಷ್ಣಮೂರ್ತಿ, ಚಂದ್ರಪ್ಪ, ಎಲ್.ಎನ್.ಬಾಬು, ಜಗನ್ನಾಥರೆಡ್ಡಿ ಇನ್ನು ಮುಂತಾದವರು ಭಾಗವಹಿಸಿದ್ದರು.

Parish Day and PPP Golden Jubilee Celebrations at Alangar


Alangar: It was celebrated in a grand scale on 05.02.2023. Fr Rakesh Mathias CSSr Rector of Nityadar Nivas Alangar presided over the solemn Eucharistic Celebration at 8 am
Soon after the Mass around 200 people participated in preparing the meal for the evening
At 5.00pm stage Programe was organized, Vice presidents, Secretaries, ward Gurkars, heads of the religious houses and parish priests were felicitated.
Fr Maxim DSouza, Fr Joswin DSouza, Fr Milton Jacob all three from Seminary were the chief guests.
Soon after the felicitation Programe, 8 Bible tableaus were presented by 8 wards depicting the birth of Jesus, Last Supper, wedding at cana, death and resurrection of Jesus, life and death of John the Baptist, sermon on the mount, parable of the ten virgins and cleansing of the temple. Four wards were awarded first prize and 4 wards were awarded second prize. Fr Maxim DSouza, Fr Joswin DSouza, Fr Milton Jacob selected the places and gave a short evaluation on the same.
All appreciated the efforts of wards for presenting beautiful tableaus
After the tableau presentation bible housie was conducted by Fr Maxim DSouza. Around 700 people participated.
Programe was concluded by awarding prizes to the winners and delicious meal prepared by the parish community and friendly baila dance.
Whole Programe was organized by Small Christian Community Parish Community and Commission. Mr Asha DSouza convener of SCC welcomed, Mr Anil Dcunha read the Parish activity report, Vice President Mr Edward Serrao proposed vote of thanks, Mr Eric Lobo compered.

ಆಲ್ಫ್ರೆಡ್ ಬೆನೀಸ್ ಕ್ರಿಯೇಷನ್ಸ್ ಆಯೋಜಿಸಲಾದ 15 ನೇ ಸ್ಟ್ಯಾನಿ ನೈಟ್ ನಡೆಯಿತು

ಮಂಗಳೂರು: 15 ನೇ ಸ್ಟ್ಯಾನಿ ನೈಟ್ ಕುಲಶೇಖರ್‌ನಲ್ಲಿರುವ ಚರ್ಚ್ ಮೈದಾನದಲ್ಲಿ, ಫೆಬ್ರುವರಿ 5,2023 ರಂದು ಕೆಲರಾಯ್, ನೀರುಮಾರ್ಗದ ಸೇಂಟ್ ಆನ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚಕ್ಕೆ ಸಹಯಾರ್ಥ  ಸಂಜೆ 6 ಗಂಟೆಗೆ ಕಾರ್ಯಕ್ರಮ ಆರಂಭವಾಯಿತು. ಕಲಾವಿದರಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆದವು.

ಸ್ಟ್ಯಾನಿ ಮೆಂಡೋನ್ಜಾ, ಜೋಸೆಫ್ ಮಥಿಯಾಸ್, ಎಲ್ಟನ್ ಪಿಂಟೋ, ಅಡ್ಲಿನ್ ಪಿಂಟೋ, ವರ್ಣ ಡಿಸೋಜಾ, ಬಿಂದು ಕುಟಿನ್ಹಾ, ಸಾಶಾ ಡಿಸೋಜಾ, ಜೋಸ್ವಿನ್ ಗಾಯಕರ ಜೊತೆ ಪಾಪನ್ ಕ್ಯಾಲಿಕಟ್ ಅವರು ತಮ್ಮ ಮೋಡಿಮಾಡುವ ಸಂಗೀತ ಮತ್ತು ಕೊಂಕಣಿ ಮಾಧುರ್ಯದ ರಸ ಮಂಜರಿಯನ್ನು ರಂಜಿಸಿದರು.

 ಹಾಸ್ಯ ಕಲಾವಿದರು ತಮ್ಮ ಹಾಸ್ಯಮಯ ನಟನೆಯಿಂದ ನಗುವ ವಾತಾವರಣವನ್ನು ಸ್ರಷ್ಟಿಸಿದರು. ದೀಪಕ್ ಬೆಂದೂರ್‌ವೆಲ್ ನೇತೃತ್ವದ ಡ್ಯಾನ್ಸ್ ಕ್ರಿಯೇಟರ್ ಅವರ ಅದ್ಭುತ ನೃತ್ಯ ಪ್ರದರ್ಶನಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದರು.

ಕೊರ್ಡೆಲ್ ಚರ್ಚ್‌ನ ಧರ್ಮಗುರು ರೆ.ಫಾ.ಕ್ಲಿಫರ್ಡ್ ಫೆರ್ನಾಂಡಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ರಾಯ್ ಕ್ಯಾಸ್ಟೆಲಿನೊ ಮುಖ್ಯ ಅತಿಥಿಯಾಗಿದ್ದರು ಮತ್ತು ಶ್ರೀ ಆಸ್ಟಿನ್ ಪೆರಿಸ್ (ಡಾ.ರೊನಾಲ್ಡ್ ಕೊಲಾಕೊ ಪ್ರತಿನಿಧಿ) ಶ್ರೀ ಅನಿಲ್ ಲೋಬೊ (ಅಧ್ಯಕ್ಷರು, ಎಂಸಿಸಿ ಬ್ಯಾಂಕ್), ಲೂಯಿಸ್ ಜೆ ಪಿಂಟೊ (ಅಧ್ಯಕ್ಷರು, ಮಾಂಡ್ ಸೊಭಾಣ್) ಶ್ರೀ ಜೋಸೆಫ್ ಮಥಿಯಾಸ್ (ಉದ್ಯಮಿ) ಶ್ರೀ ಪ್ರವೀಣ್ ತಾವ್ರೊ ಪ್ರತಿನಿಧಿ, ಡೈಜಿ ವರ್ಲ್ಡ್) ಶ್ರೀ ಆಲ್ಫ್ರೆಡ್ ಬೆನಿಸ್ (ಸಂಘಟಕರು), ಸ್ಟ್ಯಾನಿ ಮೆಂಡೋನ್ಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೀ ಆಲ್ಫ್ರೆಡ್ ಬೆನಿಸ್ (ಸಂಘಟಕರು), ಮತ್ತು ಸ್ಟ್ಯಾನಿ ಮೆಂಡೋನ್ಸಾ ಕೆಲರಾಯ್  ಅವರು .ಸೈಂಟ್ ಆನ್ನೆ ಚರ್ಚಿನ ಧರ್ಮಗುರು ವಂ| ಜೋಸೆಫ್ ಮಸ್ಕರೇನ್ಹಾಸ್ ಅವರಿಗೆ 5ಲಕ್ಷಗಳ ಚೆಕ್ನ್ನು ಹಸ್ತಾಂತರಿಸಿದರು.

     ರಸಮಂಜರಿಯನ್ನು ವೀಕ್ಷಕರು ಮೆಚ್ಚಿದ ಈ ಕಾರ್ಯಕ್ರಮವನ್ನು ಶ್ರೀ ಲೆಸ್ಲಿ ರೆಗೊ ಮತ್ತು ಶೆಲ್ಡನ್ ಕ್ರಾಸ್ಟಾ ಸಂಯೋಜಿಸಿದರು. ಫೆಲಿಕ್ಸ್ ಮೊರಾಸ್ ವಂದಿಸಿದರು.

ರೋಟರಿ ಕ್ಲಬ್ ಕುಂದಾಪುರ ದಕ್ಷಿಣ -ಸವಿತಾ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಸೇವಾ ಸಂಗಮ ವಿದ್ಯಾ ಕೇಂದ್ರಕ್ಕೆಊಟದ ಬಾಬ್ತು ದೇಣಿಗೆ

ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ವತಿಯಿಂದ ಸವಿತಾ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ತೆಕ್ಕಟ್ಟೆಯ ಸೇವಾ ಸಂಗಮ ವಿದ್ಯಾ ಕೇಂದ್ರಕ್ಕೆ ಒಂದು ದಿನದ ಮಧ್ಯಾಹ್ನದ ಊಟದ ಬಾಬ್ತು ದೇಣಿಗೆಯನ್ನು ಹಸ್ತಾಂತರಿಸಲಾಯಿತು. ಅಧ್ಯಕ್ಷ ರೋ. ಸತ್ಯನಾರಾಯಣ ಪುರಾಣಿಕ, ಕಾರ್ಯದರ್ಶಿ ರೋ. ಸಚಿನ್ ನಕ್ಕತ್ತಾಯ, ಮಾಜಿ ಅಧ್ಯಕ್ಷ ರೋ. ಕೆ.ಪಿ. ಭಟ್, ರೋ. ಶೋಭಾ ಭಟ್, ರೋ. ಮನೋಹರ ಪಿ, ರೋ ಸುರೇಖ ಪುರಾಣಿಕ ಹಾಗೂ ಸೇವಾ ಸಂಗಮದ ಮುಖ್ಯೋಪಾಧ್ಯಾಯರು ವಿಷ್ಣುಮೂರ್ತಿ ಭಟ್ ಮತ್ತು ಸಂಚಾಲಕ ಶ್ರೀ. ಚಂದ್ರಶೇಖರ ಪಡಿಯಾರ ಉಪಸ್ಥಿತರಿದ್ದರು.

ಭಂಡಾರ್‍ಕಾರ್ಸ್ ಪದವಿ ಪೂರ್ವಕಾಲೇಜುಕುಂದಾಪುರ ಮಾನವ ಜನ್ಮ ಸಾರ್ಥಕತೆಯಲ್ಲಿ ಸಾಧಕ ಬದುಕಿನ ಅಗತ್ಯತೆ-ಡಿ.ಐ.ಜಿ. ರವಿ ಡಿ. ಚನ್ನಣ್ಣನವರ್

ದಿನಾಂಕ 02..02.2023ರಂದು ಭಂಡಾರ್‍ಕಾರ್ಸ್ ಕಲಾ ಮತ್ತು ವಿಜ್ಞಾನಕಾಲೇಜಿನಲ್ಲಿಆರ್‍ಎನ್ ಶೆಟ್ಟಿ ಸಭಾಂಗಣದಲ್ಲಿ ಸೃಷ್ಠಿ ಇನ್‍ಫೋಟೆಕ್‍ಕುಂದಾಪುರ ಹಾಗೂ ಭಂಡಾರ್‍ಕಾರ್ಸ್‍ಕಾಲೇಜುಕುಂದಾಪುರಇದರ ಸಂಯುಕ್ತಆಶ್ರಯದಲ್ಲಿಒಂದು ದಿನದತರಬೇತಿ ವಿವರಗಳ ಕಾರ್ಯಾಗಾರ ಹಾಗೂ ಉನ್ನತ ಮಟ್ಟಿದತರಬೇತಿ ಪ್ರಮಾಣ ಪತ್ರ ವಿತರಣೆಕಾರ್ಯಕ್ರಮಜರುಗಿತು.
ಸಭಾಧ್ಯಕ್ಷರಾಗಿಕಾಲೇಜಿನ ಹಿರಿಯ ವಿಶ್ವಸ್ಥರಾದ ಶ್ರೀ ಕೆ ಶಾಂತಾರಾಮ ಪ್ರಭು ಉಪಸ್ಥಿತರಿದ್ದು ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಉದ್ಘಾಟಕರಾಗಿಕಿಯೋನಿಕ್ಸ್‍ಚೇರ್‍ಮೆನ್‍ರಾದ ಶ್ರೀ ಹರಿಕೃಷ್ಣ ಬಂಟ್ವಾಳ್ ಉದ್ಘಾಟಕ ನುಡಿಗಳನ್ನಾಡಿದರು. ಸಮಾರಂಭದ ಮುಖ್ಯ ಅತಿಥಿಗಳಾಗಿರುವ ದಕ್ಷ ಪೋಲೀಸ್‍ಅಧಿಕಾರಿಯಾಗಿರುವ ಶ್ರೀ ರವಿ ಡಿ ಚೆನ್ನಣ್ಣನವರ್ ಸಮಾರಂಭವನ್ನುದ್ದೇಶಿಸಿ ಮಾತನ್ನಾಡುತ್ತಾ“ಮಾನವಜನ್ಮ ಸಾರ್ಥಕ ಗೊಳಿಸಬೇಕಾದರೆ ಸಾಧನೆಯ ಬದುಕಿನೆಡೆಗೆ ನಿಮ್ಮ ಪ್ರಯಾಣ ಸಾಗಲಿ ಎನ್ನುವರಾಷ್ಟ್ರೀಯ ಪ್ರಜ್ಞೆಯ ಮಾತುಗಳನ್ನಾಡಿದರು. ಡಾ. ಸರಿತ್‍ಕುಮಾರ ಐ ಐ ಎಂ ಮತ್ತುಐ ಐ ಟಿ ಮತ್ತುಕೋರ್ಸ್‍ಡೈರೆಕ್ಟರ್‍ಕಿಯೋನಿಕ್ಸ್‍ಇವರು ಸಭೆಯನ್ನುದ್ದೇಶಿಸಿ ಸಾಕಷ್ಟು ಮಾಹಿತಿಯನ್ನು ನೀಡಿದರು. ಅತಿಥಿ ಶ್ರೀ ಕುಮರ್ ಎ ಡೈರೆಕ್ಟರ್‍ಅಪರೇಶನ್‍ಕಿಯೋನಿಕ್ಸ್ ಸೃಷ್ಠಿ ಇನ್ಫೋಟಕ್‍ನ ಮುಖ್ಯಸ್ಥರಾದ ಹರ್ಷವರ್ಧನ್ ಶೆಟ್ಟಿ, ಕಿಯೋನಿಕ್ಸ್‍ಯು.ವ.ಕಾಂನ ಮುಖ್ಯಸ್ಥರಾದ ಶ್ರೀ ಧೀರಜ್ ಹೆಜಮಾಡಿ ಮತ್ತುಕಿಯೋನಿಕ್ಸ್ ಸಂಸ್ಥೆಯ ಸರ್ವ ಸಿಬ್ಬಂದಿವರ್ಗ ಹಾಗೂ ವಿವಧ ಕಾಲೇಜುಗಳ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಭಂಡಾರ್‍ಕಾರ್ಸ್ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದಡಾ. ಜಿ.ಎಂ.ಗೊಂಡರವರು ಸರ್ವರನ್ನು ಸ್ವಾಗತಿಸಿದರು. ಡಾ.ಬಿ.ಬಿ. ಹೆಗ್ಡೆ ಕಾಲೇಜಿನಕನ್ನಡಉಪನ್ಯಾಸಕಿರೇಷ್ಮಾ ಶೆಟ್ಟಿಕಾರ್ಯಕ್ರಮನಿರೂಪಿಸಿದರು. ವೆಂಕಟರಮಣ ಪದವಿ ಪೂರ್ವಕಾಲೇಜಿನಆಂಗ್ಲಭಾಷಾಉಪನ್ಯಾಸಕಿಕು.ಅಮೃತಾಅತಿಥಿ ಪರಿಚಯ ಮಾಡಿದರು. ಭಂಡಾರ್‍ಕಾರ್ಸ್‍ಕಾಲೇಜಿನಕನ್ನಡಉಪನ್ಯಾಸಕಿರೇಣುಕಾ ವಂದನಾರ್ಪಣೆ ಸಲ್ಲಿಸಿದರು.

ಕುಂದಾಪುರದಲ್ಲಿ ಜನವರಿ 5 ರಂದು ವೇಣುನಾದ ಲಹರಿ


ಭಾರತದ ಖ್ಯಾತ ಬಾನ್ಸುರಿ ವಾದನ ಕಲಾವಿದ ಪರಿಷತ್ ರಾಜೇಂದ್ರ ಪ್ರಸನ್ನ ನವದೆಹಲಿಯವರ “ವೇಣುನಾದ ಲಹರಿ” ಕುಂದಾಪುರದಲ್ಲಿ ಜ. 5 ರಂದು ರವಿವಾರ ನಡೆಯಲಿದೆ.
ಸಂಗೀತ ಭಾರತಿ ಟ್ರಸ್ಟ್ (ರಿ.) ಆಶ್ರಯದಲ್ಲಿ ಕುಂದಾಪುರ ಸರಕಾರಿ ಪ. ಪೂ. ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಸಂಜೆ 6 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ.
ತಬಲಾವಾದಕರಾಗಿ ಖ್ಯಾತ ಕಲಾವಿದ ಪಂಡಿತ್ ರವೀಂದ್ರ ಯಾವಗಲ್, ಬೆಂಗಳೂರು ಭಾಗವಹಿಸಲಿದ್ದಾರೆ.
ಸಂಗೀತಾಸಕ್ತರು ಈ ವಿಶೇಷ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಸಂಗೀತ ಭಾರತಿ ಟ್ರಸ್ಟ್ ಆಹ್ವಾನಿಸಿದೆ.

ಜೆಸಿಐ ಕುಂದಾಪುರ ಸಿಟಿ : ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ರೂಪಶ್ರೀ ಯವರಿಗೆ ತೆರೆ ಮರೆಯ ಸಾದಕಿ ಪ್ರಶಸ್ತಿ

ಜೆಸಿಐ ಕುಂದಾಪುರ ಸಿಟಿ ಯಾ ವತಿಯಿಂದ ಕುಂದಾಪುರ ಸಂಚಾರಿ ಪೊಲೀಸ್ ಠಾಣೆ ಯಾ ಕಾನ್ಸ್ಟೆಬಲ್ ರೂಪಶ್ರೀ ಯವರಿಗೆ ತೆರೆ ಮರೆಯಾ ಸಾದಕಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು

ಮುಖ್ಯ ಅತಿಥಿ ಯಾಗಿ ಆಗಮಿಸಿದ ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸುಧಾ ಪ್ರಭು ಮಾತನಾಡಿ ಸಾಮಾನ್ಯವಾಗಿ ಶ್ರೀಮಂತರು ಅಥವಾ ಉಳ್ಳವರು ಏನಾದ್ರು ಸಾಧನೆ ಮಾಡಿದರೆ ಅದು ಕೂಡಲೇ ಪ್ರಚಾರ ಕ್ಕೆ ಬರುತ್ತದೆ
ವಿಶೇಷ ವಾಗಿ ಗ್ರಾಮೀಣ ಭಾಗದಲ್ಲಿ ಸಾಧನೆ ಮಾಡಿದ ವರಿಗಿಂತ ನಗರ ಪ್ರದೇಶದಲ್ಲಿ ಸಾಧನೆ ಮಾಡಿದವರು ಕೂಡಲೇ ಗುರುತಿಸಲ್ಪಡುತ್ತಾರೆ
ಇಂಥ ಸಂದರ್ಭದಲ್ಲಿ ಇವತ್ತು ಸಂಚಾರಿ ಠಾಣೆಯ ಕಾನ್ ಸ್ಟೇಬಲ್ ಆಗಿ ತಮ್ಮ ಕ್ರತ್ಯವ್ಯ ದಲ್ಲಿ ಶ್ರದ್ದೆ ಯಿಂದ ಎಲ್ಲೂ ಚುತಿ ಬಾರದ ರೀತಿಯಲ್ಲಿ ಕೆಲಸ ಮಾಡಿದ ರೂಪಶ್ರೀ ಯವರಿಗೆ ಜೇಸಿ ಯವರು ಮಾಡಿದ ಸನ್ಮಾನ ಇದು ಅರ್ಥ ಪೂರ್ಣ ವಾಗಿದ್ದು ಅಂತ ನುಡಿದರು
ಜೇಸಿಐ ಕುಂದಾಪುರ ಸಿಟಿ ಯಾ ಅಧ್ಯಕ್ಷೆ ಡಾ ಸೋನಿ ಅತಿಥಿಗಳನ್ನು ಸ್ವಾಗತಿಸಿದರು
ಸಮಾರಂಭ ದಲ್ಲಿ ಏ ಎಸ್ ಐ ಚಂದ್ರ ಶೇಖರ್ ಜನಾರ್ದನ್ ಕಾನ್ಸ್ಟೆಬಲ್ ಸುಪ್ರಿತಾ ಶೆಟ್ಟಿ ಜೆಸಿಐ ಕುಂದಾಪುರ ಸಿಟಿ ಯಾ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಪೂರ್ವ ಅಧ್ಯಕ್ಷರಾದ ಗಿರೀಶ್ ಹೆಬ್ಬಾರ್ ಜಯಚಂದ್ರ ಶೆಟ್ಟಿ ಪ್ರಶಾಂತ್ ಹವಾಲ್ದಾರ್ ವಿಜಯ ಭಂಡಾರಿ ವಕೀಲರಾದ ದಿನಕರ್ ಲೇಡಿ ಜೇಸಿ ಸಂಯೋಜಕಿ ಪ್ರೇಮ, ಸದ್ಯಸ್ಯರಾದ ಗುರುರಾಜ್ ಕೊತ್ವಾಲ್, b ದಿನೇಶ್ ಪುತ್ರನ್, ವಿಠಲ್ ಹೆಬ್ಬಾರ್, ರೇಷ್ಮಾ ಕೋಟ್ಯಾನ್, ಐರಿನ್ ಬೆರೆಟ್ಟೋ ಸೌರಬಿ ಇನ್ನಿತರರು ಉಪಸ್ಥಿತರಿದ್ದರು