ಶ್ರೀನಿವಾಸಪುರ: ಸಂಘ ಜೀವಿಯಾದ ಮನುಷ್ಯ ಸ್ವಾಭಿಮಾನದಿಂದ ಬದುಕಲು ಮೂಲಭೂತ ಹಕ್ಕುಗಳು ಅವಕಾಶ ಕಲ್ಪಿಸುತ್ತವೆ. ಮಾನವ ಹಕ್ಕು ನಿರಾಕರಣೆ ಕಾನೂನು ಬಾಹಿರ ಹಾಗೂ ಶಿಕ್ಷಾರ್ಹ ಅಪರಾಧ ಎಂದು ತಹಶೀಲ್ದಾರ್ ಜಿ.ಎನ್.ಸುಧೀಂದ್ರ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಹಾಗೂ ವಕೀಲರ ಸಂಘದಿಂದ ಶನಿವಾರ ಏರ್ಪಡಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು. ಬದಲಾದ ಪರಿಸ್ಥಿತಿಯಲ್ಲಿ ಹಕ್ಕುಗಳ ರಕ್ಷಣೆ ದೊಡ್ಡ ಸವಾಲಾಗಿದೆ ಎಂದು ಹೇಳಿದರು.
ಮಾನವ ಹಕ್ಕು ಸಾಮಾಜಿಕ ಹಕ್ಕಾಗಿದ್ದು, ಸಾಂಘಿಕ ಪ್ರಯತ್ನದ ಮೂಲಕ ಸಂರಕ್ಷಣೆ ಮಾಡಬೇಕು. ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಶೋಷಣೆಗೆ ಅವಕಾಶ ನೀಡಬಾರದು ಎಂದು ಹೇಳಿದರು.
ಸ್ಥಳೀಯ ಜೆಎಂಎಫ್ ನ್ಯಾಯಾಲಯದ ವಕೀಲರ ಸಂಘದ ಅಧ್ಯಕ್ಷ ಎನ್.ವಿ.ಜಯರಾಮೇಗೌಡ ಮಾತನಾಡಿ, ಮಾನವನ ಘನತೆ ರಕ್ಷಣೆ ಉದ್ದೇಶದಿಂದ ವಿಶ್ವದ ಎಲ್ಲ ದೇಶಗಳೂ ಮಾನವ ಹಕ್ಕುಗಳನ್ನು ಒಪ್ಪಿಕೊಂಡಿವೆ. ಎರಡನೇ ಜಾಗತಿಕ ಯುದ್ಧದಲ್ಲಿ ಸಂಭವಿಸಿದ ಅಮಾನವೀಯ ಘಟನೆಗಳು ಮಾನವ ಹಕ್ಕುಗಳ ಜಾರಿಗೆ ಕಾರಣವಾದವು ಎಂದು ಹೇಳಿದರು.
ಮಾನವ ಹಕ್ಕು ಆಯೋಗ, ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡುತ್ತದೆ. ಮಾನವ ಹಕ್ಕು ನಿರಾಕರಣೆ ಆದಲ್ಲಿ, ನೊಂದವರು ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿ, ಪರಿಹಾರ ಪಡೆದುಕೊಳ್ಳಬಹುದಾಗಿದೆ. ಅದಕ್ಕೆ ಪ್ರತಿಯೊಬ್ಬರೂ ಸಂವಿಧಾನ ನೀಡಿರುವ ಹಕ್ಕುಗಳ ಬಗ್ಗೆ ಅರಿತಿರಬೇಕು. ಅರ್ಹ ಫಲಾನುಭವಿಗಳು ಉಚಿತ ಕಾನೂನು ನೆರವು ಪಡೆಯುವ ಅವಕಾಶವೂ ಇದೆ. ಕಾನೂನು ಗೊತ್ತಿಲ್ಲದಿರುವುದು ಕ್ಷಮೆಗೆ ಅರ್ಹವಾಗುವುದಿಲ್ಲ ಎಂದು ಹೇಳಿದರು.
ಮಾನವ ಹಕ್ಕುಗಳು ಹಾಗೂ ಭಷ್ಟಾಚಾರ ವಿರೋಧಿ ಸಂಸ್ಥೆ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಎನ್.ಕುಬೇರಗೌಡ, ಪ್ರಾಂಶುಪಾಲೆ ಆರ್.ಮಾಧವಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಂಜುಂಡಪ್ಪ ಮಾತನಾಡಿದರು.
ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಪದಾಧಿಕಾರಿಗಳಾದ ಅಬ್ದುಲ್ ವಾಜೀದ್ ಸಾಬ್, ನಾಗೇಂದ್ರ, ರವಿ, ಉಪ ಪ್ರಾಂಶುಪಾಲೆ ರಾಧಾಮಣಿ, ಉಪನ್ಯಾಸಕ ಶೇಷಗಿರಿ, ರಾಮ್ಚರಣ್, ಶ್ರೀತೇಜ ಇದ್ದರು.
Year: 2023
ಶ್ರೀನಿವಾಸಪುರ: ಶ್ರದ್ಧೆಯಿಂದ ಓದಿದರೆ ಯಶಸ್ಸು ಖಂಡಿತ ಕಟ್ಟಿಕಟ್ಟ ಬುತ್ತಿ – ಪ್ರಾಂಶುಪಾಲ ಸೀನಪ್ಪ
ಶ್ರೀನಿವಾಸಪುರ 4 : ಶ್ರದ್ಧೆಯಿಂದ ಓದಿದರೆ ಯಶಸ್ಸು ಖಂಡಿತ ಕಟ್ಟಿಕಟ್ಟ ಬುತ್ತಿ ಎಂದು ಪ್ರಾಂಶುಪಾಲ ಸೀನಪ್ಪ ಕರೆನೀಡಿದರು.
ತಾಲೂಕಿನ ಮುತ್ತಕಪಲ್ಲಿಯ ಸರ್ಕಾರಿ ಪದವಿ ಪೂರ್ವ ಕಾಲೇಜುನಲ್ಲಿ ಶುಕ್ರವಾರ ಪಾಮುಚ ಸಾಹಿತ್ಯ ಹಾಗು ಸಾಂಸ್ಕøತಿಕ ಸಂಸ್ಥೆ ಯಿಂದ ನಡೆದ ಪ್ರತಿಭಾಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದೃಡಸಂಕಲ್ಪ , ಆತ್ಮವಿಶ್ವಾಸ, ನಿಷ್ಟೆ ಇವರಲ್ಲವೂ ಇದ್ದಾಗ ನಾವೆಲ್ಲರೂ ಸಾಧಕರ ಹಾದಿಯಲ್ಲಿ ಸಾಗಬಹುದಾಗಿದೆ , ಆದ್ದರಿಂದ ವಿದ್ಯಾರ್ಥಿಗಳು ದೊಡ್ಡಗುರಿಯನ್ನು ಹೊಂದಿ ಮುನ್ನೆಡಯಬೇಕು ಎಂದರು.
ನಿವೃತ್ತ ಪ್ರಾಂಶುಪಾಲ ಎಂ.ವಿ.ಬಷೀರ್ ಮಾತನಾಡಿ ವಿದ್ಯಾರ್ಥಿಗಳು ಒಂದು ಗುರಿಯನ್ನು ಇಟ್ಟುಕೊಂಡು ಆ ಗುರಿಯನ್ನ ಸಾಧನೆ ಮಾಡಲು ಬೇಕಾದ ಶ್ರಮವನ್ನು ಪಡೆಬೇಕು ಎಂದರು.
ಸಾಹಿತಿ ಪಾತಮುತ್ತಕಪಲ್ಲಿ ಮು.ಚಲಪತಿಗೌಡರು ನಮ್ಮ ಜಿಲ್ಲೆಯ ಅನೇಕರು ಸಾಹಿತ್ಯ ವಲಯ ಹಾಗು ನಮ್ಮ ಜಿಲ್ಲೆಯ ಅನೇಕರು ಅಧಿಕಾರ ವರ್ಗದಲ್ಲಿ ,ರಾಜಕೀಯ ಹಾಗು ವಿವಿಧ ಕ್ಷೇತ್ರಗಳಲ್ಲಿ ಹೆಚ್ಚು ಹೆಚ್ಚು ಸಾಧಕರಿರುವದು ಶ್ಲಾಘನೀಯ ಎಂದರು. ಈ ನೆಲದ ಜನರಿಗೆ ಸಾಧಿಸುವ ಛಲ , ಗುಣ ಇದೆ ಪ್ರತಿಯೊಬ್ಬರಲ್ಲಿ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ. ಅದನ್ನು ಬಳಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಬಹುದಾಗಿದೆ . ಆದ್ದರಿಂದ ಎಲ್ಲರೂ ಸಿಗುವ ಅವಕಾಶಗಳನ್ನು ಬಳಿಸಿಕೊಂಡು ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸಾಹಿತಿಗಳಾದ ಶಂಕರೇಗೌಡ , ರಾಮಾಂಜಿ, ನಿವೃತ್ತ ಶಿಕ್ಷಕ ಚಿನ್ನಪ್ಪ ಮಾತನಾಡಿದರು. ಪ್ರೌಡಶಾಲೆ 3 ವಿದ್ಯಾರ್ಥಿಗಳು , ಪದವಿ ಪೂರ್ವ ಕಾಲೇಜಿನ 4 ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರ ಪಡೆದರು. ಇದೇ ಸಂದರ್ಭದಲ್ಲಿ ಚೆನ್ನಪ್ಪ, ಎಂ.ವಿ.ಬಷೀರ್, ಸತೀಶ್ ರವರನ್ನ ಸನ್ಮಾನಿಸಲಾಯಿತು.
ಗ್ರಾಮದ ಮುಖಂಡರಾದ ಸಾಬುಲಾಲ್, ಹುಸೇನ್, ಪ್ರೌಡಶಾಲೆ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ, ಉಪನ್ಯಾಸಕರಾದ ನವೀನ್ಕುಮಾರ್, ಲೋಕೇಶ್, ಶಿಲ್ಪ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರವಿಕುಮಾರ್ ಇದ್ದರು.
ಮೊದಲ ಮದುವೆ ಬಚ್ಚಿಟ್ಟು ಸಾಂಪ್ರದಾಯಿಕವಾಗಿ ನನ್ನನ್ನು ಮದುವೆಯಾಗಿ ಮೂರನೇ ಮದುವೆಗೆ ಸಿದ್ದನಾದ ಗಂಡನ ವಿರುದ್ದ ಕೆ.ಎಲ್. ಭಾವನ ದೂರು
ಶ್ರೀನಿವಾಸಪುರ 1 : ಇತ್ತೀಚೆಗೆ ನನ್ನನ್ನು ಎರಡನೇ ಮದುವೆ ಆಗಿ ನಂಬಿಸಿ ಮದುವೆ ಸಮಯದಲ್ಲಿ ವರೋಪಚಾರವನ್ನು ಪಡೆದುಕೊಂಡು, ನನ್ನ ಪತಿಯಲ್ಲೇ ಲೋಪವಿದ್ದರೂ ಇದನ್ನು ಬಚ್ಚಿಟ್ಟು, ಮೂರನೆ ಮದುವೆಗೆ ಪ್ರಯತ್ನ ಮಾಡುತ್ತಿರುವುದು ನನಗೆ ಮಾಹಿತಿ ಬಂದಿದ್ದು ನನಗಾಗಿರುವ ಅನ್ಯಾಯ ಮತ್ತೊಬ್ಬ ಹೆಣ್ಣುಮಗಳಿಗೆ ಆಗಬಾರದೆಂದು ನನ್ನ ಆಶಯ ಎಂದು ತನಗಾಗಿರುವ ನೋವನ್ನು ಬೆಂಗಳೂರಿನ ವಿಜಯನಗರದ ವಾಸಿಯಾದ ಕೆ.ಎಲ್. ಭಾವನ ವ್ಯಕ್ತಪಡಿಸಿದ್ದಾರೆ.
ಕೆ.ಎಲ್. ಭಾವನತನಗಾಗಿರುವ ನೋವನ್ನು ಶುಕ್ರವಾರ ಮಾಧ್ಯಗಳ ಮುಖೇನ ವ್ಯಕ್ತಪಡಿಸಿ ಕಳೆದ 40 ದಿನಗಳ ಹಿಂದೆ ಪಟ್ಟಣದಎಂ.ಜಿ.ರಸ್ತೆಯಲ್ಲಿರುವ ನಿವೃತ್ತಇಂಜಿನಿಯರ್ಎಂ.ಆರ್. ರಮೇಶ್ಅವರ ಮಗನಾದ ಸಾಯಿ ಚೇತನ್ ನನ್ನನ್ನು ಸಾಂಪ್ರದಾಯಿಕವಾಗಿ ಇಚ್ಚೆಪಟ್ಟು ನಮ್ಮಿಬ್ಬರ ಎರಡನೇ ವಿವಾಹವಾಗಿದ್ದು, ನಂತರ ದಿನಾಂಕ: 28.08.2023ರಂದು ಉಪ ನೊಂದಣಾಧಿಕಾರಿಗಳ ಕಚೇರಿ, ಶ್ರೀನಿವಾಸಪುರದಲ್ಲಿ ವಿವಾಹ ನೊಂದಾವಣಿಯಾಗಿರುತ್ತದೆ. ಕಳೆದ ಕೆಲವು ದಿನಗಳ ಬಳಿಕ ಸಾಂಸಾರಿಕವಾಗಿ ಸಾಯಿ ಚೇತನ್ನಲ್ಲಿ ಶಾರೀರಿಕ ಲೋಪವಿದ್ದು ಸಂಬಂಧಿಸಿದಂತೆ ವೈಧ್ಯರೂ ಸಹ ವರಧಿ ನೀಡಿರುತ್ತಾರೆ, ಈ ವಿಚಾರವಾಗಿ ವೈಧ್ಯರ ಸಲಹೆಯನ್ನು ಸಾಯಿ ಚೇತನ್ ತಿರಸ್ಕರಿಸಿರುತ್ತಾನೆ.
ಆದರೆ ಉದ್ದೇಶ ಪೂರ್ವಕವಾಗಿ ನನ್ನ ಮಾವ ಎಂ.ಆರ್. ರಮೇಶ್ ಮತ್ತು ನನ್ನ ಪತಿಯ ತಂಗಿಯ ಗಂಡ ರೇಣುಜ್ ಇಲ್ಲ ಸಲ್ಲದ ಕಿರುಕುಳ ನೀಡಿ ದೈಹಿಕ ಹಿಂಸೆ ನೀಡಿ ಬೆದರಿಕೆ ಹಾಕಿರುತ್ತಾರೆ. ಇದರ ಬಗ್ಗೆ ನಾನು ಬೆಂಗಳೂರಿನ ವಿಜಯನಗರ ಮತ್ತು ಬಸವನಗುಡಿಯಲ್ಲಿ ಪ್ರಕರಣದಾಖಲು ಮಾಡಿರುತ್ತೇನೆ. ಶ್ರೀನಿವಾಸಪುರಠಾಣೆಗೂ ಅಂಚೆ ಮೂಲಕ ದೂರನ್ನು ಸಲ್ಲಿಸಿರುತ್ತೇನೆ. ಶ್ರೀನಿವಾಸಪುರಠಾಣೆಯಲ್ಲಿರಾಜಿ ಸಂದಾನವೂ ಸಹ ನಡೆಯಲಾಗಿದ್ದು, ಅರ್ದದಷ್ಟು ಚಿನ್ನ ನನಗೆ ಒಪ್ಪಿಸಿರುತ್ತಾರೆ. ಇದರ ಬೆಳವಣಿಗೆಯಲ್ಲೇ ಸಾಯಿ ಚೇತನ್ ವಿಚ್ಚೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿರುತ್ತಾನೆ.
ಅಲ್ಲದೆ ಮೂರನೇ ವಿವಾಹವಾಗಲು ಪ್ರಯತ್ನದಲ್ಲಿ ಇದ್ದಾನೆ ಎಂಬ ಮಾಹಿತಿ ನನಗೆ ನೆರೆಹೊರೆಯವರ ಜನತೆಯಿಂದ ಮಾಹಿತಿ ಬಂದಿರುವುದರಿಂದ ನನಗಾಗಿರುವ ಈ ಅನ್ಯಾಯ ಮತ್ತೊಬ್ಬ ಹೆಣ್ಣುಮಗಳಿಗೆ ಆಗಬಾರದು, ಈಗಾಗಲೇ ನನಗಿಂತ ಮೊದಲು ಸಾಯಿ ಚೇತನ್ಆಂದ್ರದ ಮದನಪಲ್ಲಿ ಮೂಲದಒಬ್ಬರನ್ನುಮೊದಲನೇ ಮದುವೆಯಾಗಿ ನಂತರ ಬಿರುಕು ಬಂದುರಾಜಿ ಸಂದಾನಆಗಿರುತ್ತದೆ. ನನ್ನನ್ನು ನಂಬಿಸಿ ಒಡವೆ, ವರದಕ್ಷಿಣೆಎಲ್ಲವನ್ನು ಪಡೆದು ಈ ರೀತಿ ಯಾಮಾರಿಸುವ ಇವರ ಕುಟುಂಬಕ್ಕೆತಕ್ಕ ಪಾಠ ಕಾನೂನು ಮೂಲಕ ನೀಡಬೇಕಾಗಿದೆ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.
ಶ್ರೀನಿವಾಸಪುರ: ಸಾಮಾಜಿಕ ಸಮಾನತೆ ಹಾಗೂ ವ್ಯಕ್ತಿಗೌರವ ಕುವೆಂಪು ಸಾಹಿತ್ಯದ ಪ್ರಮುಖ ಅಂಶವಾಗಿದೆ:ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ
ಶ್ರೀನಿವಾಸಪುರ: ಸಾಮಾಜಿಕ ಸಮಾನತೆ ಹಾಗೂ ವ್ಯಕ್ತಿಗೌರವ ಕುವೆಂಪು ಸಾಹಿತ್ಯದ ಪ್ರಮುಖ ಅಂಶವಾಗಿದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದ ಸಭಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮತಿ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಕುವೆಂಪು ಜನ್ಮದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಕುವೆಂಪು ಶ್ರೇಷ್ಠ ಕವಿ ಮಾತ್ರವಲ್ಲದೆ, ಪ್ರಖರ ಮಾನವತಾವಾದಿಯಾಗಿದ್ದರು ಎಂದು ಹೇಳಿದರು.
ತಾಲ್ಲೂಕಿನಲ್ಲಿ ರೂ.350 ಕೋಟಿ ವೆಚ್ಚದಲ್ಲಿ ಜಲ ಜೀವನ ಮಿಷನ್ ಯೋಜನೆ ಮೂಲಕ ಪ್ರತಿ ಮನೆಗೂ ಕುಡಿಯುವ ನೀರು ಪೂರೈಸಲಾಗುವುದು. ಯುವ ಸಮುದಾಯಕ್ಕೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಪಟ್ಟಣದ ಹೊರವಲಯದಲ್ಲಿ ಕೈಗಾರಿಕಾ ಕ್ಷೇತ್ರ ಸ್ಥಾಪಿಸಲಾಗುವುದು. ತಾಲ್ಲೂಕಿನಿಂದ ಆಂಧ್ರಪ್ರದೇಶಕ್ಕೆ ಹರಿದುಹೋಗುವ ಮಳೆ ನೀರನ್ನು ತಾಲ್ಲೂಕಿನ ಕೆರೆಗಳಿಗೆ ಹರಿಸಲು ಅಗತ್ಯವಾದ ಯೋಜನೆ ರೂಪಿಸಿ ಜಾರಿಗೆ ತರಲಾಗುವುದು. ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗೆ ಸಮಾನ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ತಹಶೀಲ್ದಾರ್ ಜಿ.ಎನ್.ಸುಧೀಂದ್ರ ಮಾತನಾಡಿ, ಕುವೆಂಪು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕನ್ನಡ ಭಾಷೆಗೆ ಗೌರವ ತಂದುಕೊಟ್ಟಿದ್ದಾರೆ. ಸಾಹಿತಿಗಳಿಗೆ ಮಾದರಿಯಾಗಿ ಬದುಕಿದ್ದಾರೆ. ವಿದ್ಯಾರ್ಥಿಗಳು ಅವರ ಸಾಹಿತ್ಯ ಕೃತಿಗಳನ್ನು ಓದಬೇಕು. ಅವರ ಆದರ್ಶದ ಬೆಳಕಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಭೈರವೇಶ್ವರ ವಿದ್ಯಾನಿಕೇತನದ ನಿರ್ದೇಶಕ ಎ.ವೆಂಕಟರೆಡ್ಡಿ ಕುವೆಂಪು ಅವರ ಜೀವನ ಹಾಗೂ ಸಾಧನೆ ಕುರಿತು ಮಾತನಾಡಿ, ಕುವೆಂಪು ಪ್ರಕೃತಿಯ ಆರಾಧಕರಾಗಿದ್ದರು. ಅವರ ಸಾಹಿತ್ಯ ಕೃತಿಗಳಲ್ಲಿ ನಿಸರ್ಗ ಸೌಂದರ್ಯ ಅಡಕವಾಗಿದೆ. ಅವರ ಕೃತಿಗಳಲ್ಲಿ ವ್ಯಕ್ತಿ, ವ್ಯಕ್ತಿತ್ವ ಹಾಗೂ ಸಾಮಾಜಿಕ ಒಡನಾಟ ಓದುಗರನ್ನು ಬೆರಗುಗೊಳಿಸುತ್ತದೆ ಎಂದು ಹೇಳಿದರು.
ಉಪ ತಹಶೀಲ್ದಾರ್ ಕೆ.ವಿ.ಜಯರಾಂ, ಶಿರಸ್ತೇದಾರ್ ಬಲರಾಮಚಂದ್ರೇಗೌಡ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಶಿವಕುಮಾರಿ, ಸಹಾಯಕ ಕೃಷಿ ನಿರ್ದೇಶಕ ಕೆ.ಸಿ.ಮಂಜುನಾಥ್, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಎಂ.ಶ್ರೀನಿವಾಸನ್, ಸಹಾಯಕ ರೇಷ್ಮೆ ನಿರ್ದೇಶಕ ಕೃಷ್ಣಪ್ಪ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ.ಮುನಿಲಕ್ಷ್ಮಯ್ಯ, ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಮತೀರ್ಥ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿ.ನಾರಾಯಣಸ್ವಾಮಿ, ಅಧಿಕಾರಿಗಳಾದ ನವೀನ್, ರಾಜೇಶ್, ರಾಮಕೃಷ್ಣಪ್ಪ, ಮಂಜುನಾಥ್, ಜನಾರ್ಧನ್, ಹರಿ, ತಿಪ್ಪಣ್ಣ ಇದ್ದರು.
ಶ್ರೀನಿವಾಸಪುರ: ರಾಜ್ಯದಲ್ಲಿ ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಂಜಾಗ್ರಾತ ಕ್ರಮಗಳ ಬಗ್ಗೆ ಆಸ್ಪತ್ರೆಯ ಆಡಳಿತಾಧಿಕಾರಿ ಗಳೊಂದಿಗೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾಹಿತಿ ವಿನಿಮಯ
ಶ್ರೀನಿವಾಸಪುರ: ರಾಜ್ಯದಲ್ಲಿ ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಂಜಾಗ್ರಾತ ಕ್ರಮಗಳ ಬಗ್ಗೆ ಡಿಎಚ್ಒ, ಟಿಎಚ್ಒ, ಆಸ್ಪತ್ರೆಯ ಆಡಳಿತಾಧಿಕಾರಿಗಳೊಂದಿಗೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾಹಿತಿ ಪಡೆದು ಮಾತನಾಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಶುಕ್ರವಾರ ಬೇಟಿ ನೀಡಿ ಕುಂದುಕೊರತೆ ಹಾಗು ಮುನ್ನೆಚ್ಚರಿಕೆ ಕ್ರಮಗಳನ್ನು ಪರಿಶೀಲಿಸಿ ಮಾತನಾಡಿದರು.
ಆಸ್ಪತ್ರೆಗೆ ಸಮರ್ಪಕವಿದ್ಯುತ್ ಒದಗಿಸಲು 250 ಕೆವಿ ವಿದ್ಯುತ್ ಟ್ರಾನ್ಸ್ಫಾರಂ ಅಳವಡಿಕೆ ಮಾಡಲು ಹಾಗು ಆಸ್ಪತ್ರೆಗೆ 24 ಗಂಟೆ ವಿದ್ಯುತ್ ಸೌಲಭ್ಯ ಒದಗಿಸಲು ಪ್ರತ್ಯೇಕ ಎಕ್ಸ್ ಪ್ರೆಸ್ಸ ಲೈನ್ ಆಳವಡಿಸಲು ಬೆಸ್ಕಾಂ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ಮಾಡಿದರು.
ಆಸ್ಪತ್ರೆಗೆ ಲಾಂಡ್ರಿ ಮಿಷನ್ಗೆ ಅನುದಾನ ಬಿಡುಗಡೆ ಸೂಚನೆ ನೀಡಿದರು. ಶ್ರೀನಿವಾಸಪುರ 100 ಆಕ್ಸಿಜನ್ ಬೆಡ್ಗಳ ವ್ಯವಸ್ಥೆಗೆ ಹಾಗೂ ಗೌನಿಪಲ್ಲಿ ಆಸ್ಪತ್ರೆಯಲ್ಲಿ 30 ಆಕ್ಸಿಜನ್ ಬೆಡ್ಗಳ ವ್ಯವಸ್ಥೆಗೆ ತೀರ್ಮಾನಿಸಲಾಯಿತು.
ಡಿಎಚ್ಒ ವಿಜಯಕುಮಾರ್, ತಹಶೀಲ್ದಾರ್ ಜಿ.ಎನ್.ಸುದೀಂದ್ರ, ಟಿಎಚ್ಒ ಶರೀಫ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ಅಧಿಕಾರಿ ಶ್ರೀನಿವಾಸ್, ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ , ಜಗಜೀವನಪಾಳ್ಯ ರವಿ ಇತರರು ಇದ್ದರು
ಬ್ಯಾಂಕ್ ಆಫ್ ಬರೋಡಾದಿಂದರಿಟೈಲ್ ಅವಧಿಯ ಠೇವಣಿಗಳ ಮೇಲಿನ ಬಡ್ಡಿದರಗಳಹೆಚ್ಚಳ/ Bank of Baroda Boosts Interest Rates on Retail Term Deposits,Prioritizes Shorter Tenors
ಗ್ರಾಹಕರ ಮೌಲ್ಯವನ್ನು ಹೆಚ್ಚಿಸಲು ಮತ್ತು ಅದರ ಠೇವಣಿ ಬಂಡವಾಳವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಕಾರ್ಯತಂತ್ರದ ಕ್ರಮದಲ್ಲಿ, ಬ್ಯಾಂಕ್ ಆಫ್ ಬರೋಡಾವು ಓಖಔ ಟರ್ಮ್ ಠೇವಣಿಗಳನ್ನು ಒಳಗೊಂಡಂತೆ ದೇಶೀಯ ಚಿಲ್ಲರೆ ಅವಧಿಯ ಠೇವಣಿಗಳ ಮೇಲಿನ ಬಡ್ಡಿದರಗಳಲ್ಲಿ ಗಣನೀಯ ಮೇಲ್ಮುಖ ಪರಿಷ್ಕರಣೆಯನ್ನು ಘೋಷಿಸಿದೆ. 2 ಕೋಟಿಗಿಂತ ಕಡಿಮೆ ಠೇವಣಿಗಳ ಮೇಲೆ ಅನ್ವಯವಾಗುವ ಪರಿಷ್ಕೃತ ದರಗಳು ಡಿಸೆಂಬರ್ 29, 2023 ರಿಂದ ಜಾರಿಗೆ ಬರಲಿವೆ.
ಬ್ಯಾಂಕಿನ ನಿರ್ಧಾರವು ನಿರ್ದಿಷ್ಟವಾಗಿ 1 ವರ್ಷಕ್ಕಿಂತ ಕಡಿಮೆ ಅವಧಿಯ ಮೆಚುರಿಟಿನಿರಖುಠೇವಣಿಗಳ ಮೇಲೆ ಕೇಂದ್ರೀಕರಿಸುವ ಉದ್ದೇಶಿತ ವಿಧಾನವನ್ನು ಪ್ರತಿಬಿಂಬಿಸುತ್ತದೆ. ಠೇವಣಿ ದರಗಳನ್ನು ವಿವಿಧ ಮೆಚ್ಯೂರಿಟಿ ಅವಧಿಗಳಲ್ಲಿ 125 ಬೇಸಿಸ್ ಪಾಯಿಂಟ್ಗಳವರೆಗೆ 10 ಬೇಸಿಸ್ ಪಾಯಿಂಟ್ಗಳಿಂದ ಹೆಚ್ಚಿಸಲಾಗಿದೆಮತ್ತು ಅದರ ನಿವ್ವಳ ಬಡ್ಡಿಯ ಮಾರ್ಜಿನ್ (ಓIಒ) ಅನ್ನು ಸಂರಕ್ಷಿಸುವಾಗ ಠೇವಣಿಗಳ ಒಟ್ಟಾರೆ ವೆಚ್ಚವನ್ನು ಸಮತೋಲನಗೊಳಿಸುವ ಮತ್ತು ಉತ್ತಮಗೊಳಿಸುವ ಬ್ಯಾಂಕಿನ ಉದ್ದೇಶಕ್ಕೆ ಅನುಗುಣವಾಗಿಠೇವಣಿದಾರರಿಗೆ ಪ್ರಯೋಜನವನ್ನು ನೀಡುತ್ತದೆ.
ಬ್ಯಾಂಕ್ ಆಫ್ ಬರೋಡಾದಲ್ಲಿ ರಿಟೈಲ್ ಹೊಣೆಗಾರಿಕೆಗಳು ಮತ್ತು ಎನ್ಆರ್ಐ ವ್ಯವಹಾರದ ಮುಖ್ಯ ಜನರಲ್ ಮ್ಯಾನೇಜರ್ ಶ್ರೀ ರವೀಂದ್ರ ಸಿಂಗ್ ನೇಗಿ, “ಚಿಲ್ಲರೆ ಅವಧಿಯ ಠೇವಣಿ ದರಗಳನ್ನು ಹೆಚ್ಚಿಸುವ ನಿರ್ಧಾರವು ನಮ್ಮ ಗ್ರಾಹಕರಿಗೆ ಹೆಚ್ಚಿನ ಮೌಲ್ಯವನ್ನು ನೀಡಲು ಬ್ಯಾಂಕ್ ಆಫ್ ಬರೋಡಾದ ಬದ್ಧತೆಯನ್ನು ಒತ್ತಿಹೇಳುತ್ತದೆ ಮತ್ತು ನಮ್ಮ ಠೇವಣಿ ಪೋರ್ಟ್ಫೋಲಿಯೊವನ್ನು ಕಾರ್ಯತಂತ್ರವಾಗಿ ನಿರ್ವಹಿಸುತ್ತದೆ. ಈ ಹಂತವು ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುತ್ತದೆ ಎಂದು ನಾವು ನಂಬುತ್ತೇವೆ ಏಕೆಂದರೆ ಅವರು ತಮ್ಮ ಉಳಿತಾಯದ ಮೇಲೆ ಹೆಚ್ಚು ಗಳಿಸುತ್ತಾರೆ ಆದರೆ ಬ್ಯಾಂಕ್ ತನ್ನ ಠೇವಣಿಗಳ ವೆಚ್ಚವನ್ನು ಅತ್ಯುತ್ತಮವಾಗಿಸಲು ಸಹಾಯ ಮಾಡುತ್ತದೆ, ಆ ಮೂಲಕ ನಮ್ಮ ಓIಒ ಅನ್ನು ರಕ್ಷಿಸುತ್ತದೆ” ಎಂದುಹೇಳಿದ್ದಾರೆ.
ಡಿಸೆಂಬರ್ 29, 2023 ರಿಂದ ಜಾರಿಗೆ ಬರುವಂತೆ, ಬ್ಯಾಂಕ್ ಆಫ್ ಬರೋಡಾ ಹೊಸ ಮತ್ತು ನವೀಕರಿಸಿದ ಠೇವಣಿಗಳಿಗೆ 2 ಕೋಟಿ ರೂ.ಗಿಂತ ಕಡಿಮೆಯಿರುವ ಓಖಔ ಸೇರಿದಂತೆ ದೇಶೀಯ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಪರಿಷ್ಕರಿಸಿದೆ. 7 ರಿಂದ 14 ದಿನಗಳವರೆಗೆ ಸಾಮಾನ್ಯ ಸಾರ್ವಜನಿಕರಿಗೆ 3.00% ರಿಂದ 4.25% ವರೆಗೆ ಮತ್ತು ಹಿರಿಯ ನಾಗರಿಕರಿಗೆ 3.50% ರಿಂದ 4.75% ವರೆಗೆ ದರಗಳೊಂದಿಗೆ ಕಡಿಮೆ ಅವಧಿಗಳಲ್ಲಿ ಗಮನಾರ್ಹ ಹೆಚ್ಚಳ ಕಂಡುಬರುತ್ತದೆ. ಅದೇ ರೀತಿ, 15 ರಿಂದ 45 ದಿನಗಳು 3.50% ರಿಂದ 4.50% (ಸಾಮಾನ್ಯ) ಮತ್ತು 4.00% ರಿಂದ 5.00% (ಹಿರಿಯ ನಾಗರಿಕರು) ವರೆಗೆ ಏರಿಕೆಯಾಗಿದೆ. ಬ್ಯಾಂಕ್ ಠೇವಣಿದಾರರನ್ನು ಕಡಿಮೆ-ಅವಧಿಯ ಮೆಚುರಿಟಿಗಳಿಗೆ ಆಕರ್ಷಿಸಲು ವ್ಯೂಹಾತ್ಮಕವಾಗಿ ಗುರಿಯನ್ನು ಹೊಂದಿದೆ, ಬಡ್ಡಿದರಗಳಲ್ಲಿ 125 ಬೇಸಿಸ್ ಪಾಯಿಂಟ್ಗಳ ಹೆಚ್ಚಳವನ್ನು ನೀಡುತ್ತದೆ. ವಿವರವಾದ ಮಾಹಿತಿಗಾಗಿ, ಗ್ರಾಹಕರು ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು.
Bank of Baroda Boosts Interest Rates on Retail Term Deposits, Prioritizes Shorter Tenors
In a strategic move to enhance customer value and manage its deposit portfolio effectively, Bank of Baroda has announced a substantial upward revision in interest rates on Domestic Retail Term Deposits, including NRO Term Deposits. The revised rates, applicable on deposits below Rs 2 crore, will come into effect from December 29, 2023.
The bank’s decision reflects a targeted approach, with a focus on shorter-term maturity buckets, particularly those below 1 year. Deposit rates have been increased by 10 basis points to up to 125 basis points across various maturity periods, benefitting depositors and aligning with the bank’s objective of balancing and optimizing the overall cost of deposits while safeguarding its Net Interest Margin (NIM).
ShriRavindra Singh Negi, Chief General Manager – Retail Liabilities & NRI Business at Bank of Baroda, emphasized, “The decision to increase retail term deposit rates underscores Bank of Baroda’s commitment to offering higher value to our customers, while strategically managing our deposit portfolio. We believe this step will not only attract more customers as they earn more on their savings but will also help the Bank optimize its cost of deposits, thereby safeguarding our NIM.”
Effective December 29, 2023, Bank of Baroda has revised interest rates on Domestic Term Deposits, including NRO, below Rs 2 crore, for both new and renewed deposits. Notable increases are seen in shorter tenors, with rates for 7 to 14 days jumping from 3.00% to 4.25% for the general public and 3.50% to 4.75% for senior citizens. Similarly, 15 to 45 days sees a rise from 3.50% to 4.50% (general) and 4.00% to 5.00% (senior citizens). The bank strategically aims to attract depositors to shorter-term maturities, offering up to 125 basis points hike in interest rates. For detailed information, customers can visit the Bank of Baroda’s official website.
ಉಡುಪಿ : ಜಯಲಕ್ಷ್ಮೀ ಸಿಲ್ಕ್ನಲ್ಲಿ ಪಿಸ್ತೂಲ್ ನಿಂದ ಮಿಸ್ ಫೈರಿಂಗ್ : ಸಿಬ್ಬಂದಿಯೋರ್ವ ಗಾಯಾಳು
ಉಡುಪಿ: ನಗರದ ಬನ್ನಂಜೆಯಲ್ಲಿರುವ ಜಯಲಕ್ಷ್ಮೀ ಸಿಲ್ಕ್ನಲ್ಲಿ ಇಂದು ಮಧ್ಯಾಹ್ನ ಪಿಸ್ತೂಲ್ ನಿಂದ ಮಿಸ್ ಫೈರಿಂಗ್ ಆದ ಘಟನೆಯಿಂದ ಸಿಬ್ಬಂದಿಯೋರ್ವರು ಗಾಯಗೊಂಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ
ಪಿಸ್ತೂಲ್ ನ್ನು ಮಳಿಗೆಯಲ್ಲಿ ಯಾರೋ ಬಿಟ್ಟು ಹೋಗಿದ್ದು ಎನ್ನಲಾಗಿದೆ. ಪತ್ತೆಯಾಗಿತ್ತು ಪಿಸ್ತೂಲ್ ಎತ್ತಿಕೊಂಡ ಸಿಬ್ಬಂದಿ ಆಪರೇಟ್ ಮಾಡಿ ಪರೀಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ಪಿಸ್ತೂಲಿನಿಂದ ಗುಂಡು ಹಾರಿದೆ. ಪರಿಣಾಮ ಅಲ್ಲೇ ಇದ್ದ ಇನ್ನೋರ್ವ ಸಿಬ್ಬಂದಿಗೆ ಆ ಗುಂಡು ತಗುಲಿದೆ. ಅವರನ್ನು ಕೂಡಲೇ ಉಡುಪಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಯಲಾಗಿದೆ. ಗಾಯಗೊಂಡವರು ದುರ್ಗಪ್ಪ ಎಂದು ತಿಳಿಯಲಾಗಿದೆ.
ಪಿಸ್ತೂಲ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಅಲ್ಲಿದ್ದ ಪಿಸ್ತೂಲ್ ಯಾರದ್ದು..? ಅಲ್ಲಿ ಹೇಗೆ ಬಂತು ? ಆ ಬಟ್ಟೆ ಮಳಿಗೆಯಲ್ಲಿ ತಂದಿಟ್ಟಿದ್ದು ಯಾರು..? ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬರಬೇಕಿದೆ.ಉಡುಪಿ ನಗರ ಪೊಲೀಸರು ಈ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ.
ದಿ.ಇಗ್ನೇಶಿಯಸ್ ಡಿಸೋಜ ರವರಿಗೆ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ)ವತಿಯಿಂದ “ಶ್ರದ್ಧಾಂಜಲಿ ಅರ್ಪಣಾ ಸಭೆ” ಗೆ ಕರೆಯೋಲೆ
ಆತ್ಮೀಯರೇ…,
ಇತ್ತೀಚೆಗೆ ನಿಧನರಾದ ಮಾಜಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷರು, ಮಾಜಿ ಭೂ- ನ್ಯಾಯ ಮಂಡಳಿ ಸದಸ್ಯರಾಗಿ ತನ್ನ ನೇರ ನಡೆ-ನುಡಿಯಿಂದ ಅಪಾರ ಜನಮನ್ನಣೆಗಳಿಸಿದ್ದ ಹಿರಿಯ ಕಾಂಗ್ರೆಸ್ ಮುಖಂಡರಾದ ದಿ. ಇಗ್ನೇಶಿಯಸ್ ಡಿಸೋಜ ರವರಿಗೆ (ಧರ್ಮಗುರು ವಂ|ಸ್ಟೀಪನ್ ದಿಸೋಜಾ ಇವರ ಪಿತರು) ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ, ಮಾಜಿ ಸಚಿವರಾದ ಸನ್ಮಾನ್ಯ ವಿನಯ್ ಕುಮಾರ್ ಸೊರಕೆ ಯವರ ಉಪಸ್ಥಿತಿಯಲ್ಲಿ “ಶ್ರದ್ಧಾಂಜಲಿ ಅರ್ಪಣಾ ಸಭೆ” ಯನ್ನು, ದಿನಾಂಕ: 02/ 01/2024, ಮಂಗಳವಾರ ದಂದು ಬೆಳಿಗ್ಗೆ ಗಂಟೆ 10.30ಕ್ಕೆ ‘ಕಾಪು – ರಾಜೀವ್ ಭವನ’ ದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ, ಪಕ್ಷದ ಎಲ್ಲ ಮುಖಂಡರು, ಬ್ಲಾಕ್ ಸಮಿತಿ ಹಾಗೂ ಇತರ ಎಲ್ಲ ಘಟಕ / ಸಮಿತಿಗಳ ಅಧ್ಯಕ್ಷ ರು / ಪದಾಧಿಕಾರಿಗಳು, ವಿವಿಧ ಸ್ತರದ ಸ್ಥಳೀಯಾಡಳಿತ ಸಂಸ್ಥೆಗಳ ಹಾಲಿ ಹಾಗೂ ಮಾಜಿ ಸದಸ್ಯರು, ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಮತ್ತು ಕಾರ್ಯಕರ್ತರು ಕ್ಲಪ್ತ ಸಮಯದಲ್ಲಿ ಉಪಸ್ಥಿತರಿದ್ದು ಶ್ರದ್ಧಾಂಜಲಿ ಅರ್ಪಿಸಬೇಕಾಗಿ ಕೇಳಿಕೊಳ್ಳುತ್ತೇವೆ.
ನವೀನ್ ಚಂದ್ರ ಸುವರ್ಣ
ಅಧ್ಯಕ್ಷರು – ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದ.)
ಕೋಲಾರ :ಫಲಾನುಭವಿಗಳ ಆಯ್ಕೆ ಸಮಿತಿ ಸಭೆ
ಕೋಲಾರ : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ನಿಯಮಿತದ ಸ್ವಾವಲಂಬಿ ಸಾರಥಿ ಯೋಜನೆಯಡಿಯಲ್ಲಿ ಫಲಾನಭವಿಗಳ ಆಯ್ಕೆ ದಿನಾಂಕ: 29.12.2023 ರಂದು ಮಾನ್ಯ ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷರವರ ಅಧ್ಯಕ್ಷತೆಯಲ್ಲಿ ಜರುಗಿದ ಆಯ್ಕೆ ಸಮಿತಿಯಲ್ಲಿ ವಿವರವಾಗಿ ಚರ್ಚಿಸಿ ಫಲಾನುಭವಿಗಳನ್ನು ಲಾಟರಿ ಎತ್ತುವ ಮುಖಾಂತರ ನಿಗದಿತ ಗುರಿಯಂತೆ ಆಯ್ಕೆ ಮಾಡಲಾಯಿತು.
2023-2024 ನೇ ಸಾಲಿನ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಸ್ವಾವಲಂಬಿ ಸಾರಥಿ ಯೋಜನೆಯಲ್ಲಿ ಸೌಲಭ್ಯವನ್ನು ಪಡೆಯಲು 653 ಅರ್ಜಿಗಳು ಸ್ವೀಕೃತಗೊಂಡಿದ್ದು ಸರ್ಕಾರ ನಿಗಧಿಪಡಿಸಿದ ಅರ್ಥಿಕ ಗುರಿ ರೂ.18 ಲಕ್ಷಗಳನ್ನು ನಿಗಧಿಪಡಿಸಿದ್ದು, ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರಗಳನ್ನು ಒಳಗೊಂಡಂತೆ ಒಟ್ಟು 15 ಫಲಾನುಭವಿಗಳನ್ನು ಲಾಟರಿ ಎತ್ತುವ ಮುಖಾಂತರ ಆಯ್ಕೆ ಮಾಡಿ ಒಟ್ಟು ರೂ.18 ಲಕ್ಷಗಳ ಅರ್ಥಿಕ ಸೌಲಭ್ಯವನ್ನು ಮಂಜೂರು ಮಾಡಲು ಸಭೆಯಲ್ಲಿ ಅನುಮೋದಿಸಲಾಯಿತು.
ಸಭೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ, ಜಿಲ್ಲಾ ಪಂಚಾಯಿತಿಯ ಮಾನ್ಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಪದ್ಮ ಬಸವಂತಪ್ಪ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಯಾದ ಮುರಳಿ, ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಶೀರಿನ್ ತಾಜ್ ಮತ್ತು ಇತರೆ ಆಯ್ಕೆ ಸಮಿತಿಯ ಸದಸ್ಯರು ಹಾಜರಿದ್ದರು.