ಶ್ರೀನಿವಾಸಪುರ: ಸದಸ್ಯರು ಸ್ವಯಂ ಪ್ರೇರಿತರಾಗಿ ಸದಸ್ಯತ್ವ ಪಡೆದುಕೊಂಡು ಯಾವುದೇ ಅಪೇಕ್ಷೆಯಿಲ್ಲದೆ ಸೇವಾ ಮನೋಬಾವದಿಂದ ಎಲ್ಲಾ ಸದಸ್ಯರ ಪರಸ್ಪರ ಸಹಕಾರದಿಂದ ಸಮಾಜದ ಒಳಿತಿಗಾಗಿ ಅನೇಕ ಜನಪರ ಸೇವಾ ಕಾರ್ಯಗಳಾದ ಶಿಕ್ಷಣ, ಆರೋಗ್ಯ, ಬಡ ಜನತೆಗೆ ಉಪಯೋಗವಾಕತಕ್ಕಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು 2022-23ನೇ ಸಾಲಿನ ಅದ್ಯಕ್ಷರಾದ ಸಿ.ಆರ್. ಶಿವರಾಜ್ ತಿಳಿಸಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ರೋಟರಿ ಶ್ರೀನಿವಾಸಪುರ ಸೆಂಟ್ರಲ್ ನ 2022-23ನೇ ಸಾಲಿನ ಪದಾದಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿ ಮಾತನಾಡಿದ ಶಿವರಾಜ್, ರೋಟರಿ ಸಂಸ್ಥೆಯಲ್ಲಿ ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಸದಸ್ಯತ್ವ ಪಡೆದುಕೊಂಡು ಸೇವಾ ಮನೋಬಾವದಿಂದ ಎಲ್ಲಾ ಸದಸ್ಯರÀ ಸಹಕಾರ ಹಾಗೂ ಮಾರ್ಗದರ್ಶನವನ್ನು ಪಡೆದು ಕಳೆದ 7 ವರ್ಷಗಳಿಂದ ಈ ತಾಲ್ಲೂಕಿನಲ್ಲಿ ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಮುಖಾಂತರ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳನ್ನು ಮುಂದುವರೆಸಿ ಅದೇ ರೀತಿ ಸಮಾಜದ ಒಳಿತಿಗಾಗಿ ಅನೇಕ ಜನಪರ ಸೇವಾ ಕಾರ್ಯಗಳಾದ ಶಿಕ್ಷಣ, ಆರೋಗ್ಯ, ಬಡ ಜನತೆಗೆ ಉಪಯೋಗವಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಮುಳಬಾಗಿಲಿನ ಡಿ.ವೈ.ಎಸ್.ಪಿ. ಜಯಂಶಕರ್ ಮಾತನಾಡಿ, ನಾನು ಈಗಾಗಲೇ ಅನೇಕ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿದ್ದು ಅನೇಕ ರೋಟರಿ ಕಾರ್ಯಕ್ರಮಗಳಲ್ಲೂ ಸಹ ಭಾಗವಹಿಸಿದ್ದೇನೆ, ಕೋಲಾರ ಜಿಲ್ಲೆಯಲ್ಲಿ ರೋಟರಿ ಸಂಸ್ಥೆಯ ಮುಖಾಂತರ ಅನೇಕ ಬಡಜನತೆಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ನನಗೆ ಸಂತಸ ತಂದಿದ್ದು, 2022-23ನೆ ಸಾಲಿಗೆ ಅಧಿಕಾರ ಸ್ವೀಕರಿಸಿರುವ ಶಿವರಾಜ್ ಈ ತಾಲ್ಲೂಕಿಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಒಳ್ಳೆಯ ಹೆಸರನ್ನು ಪಡೆಯಬೇಕೆಂದು ಆಶಿಸಿ, ನಮ್ಮ ಇಲಾಖೆಯು ಸಹ ನಿಮ್ಮ ಸೇವಾ ಕಾರ್ಯಗಳಿಗೆ ಬೆನ್ನೆಲುಬಾಗಿ ಇರುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಹಿಂದಿನ ಸಾಲಿನ ಸದಸ್ಯರು ಮತ್ತು ನೂತನ ಸದಸ್ಯರಿಗೆ ರೋಟರ್ ಪಿನ್ ಮಾಡುವ ಮುಖಾಂತರ ಪದಗ್ರಹಣವನ್ನು ಬಿ.ಆರ್. ದೆಪ್ಯೂಟಿ ಡಿ.ಆರ್.ಎಫ್.ಸಿ. ಆರ್.ಐ. 3190 ರೋ. ಶ್ರೀಧರ್ ನೆರವೇರಿಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಡಿ.ಆರ್.ಎಫ್.ಸಿ. ಆರ್.ಐ. 3190 ರೋ. ಶ್ರೀಧರ್, ಜೋನಲ್ ಗೌರ್ನರ್ ಆಮು. ಲಕ್ಷ್ಮೀನಾರಾಯಣ ಮಾತನಾಡಿ ಶುಭ ಕೋರಿದರು.
ಈ ಕಾರ್ಯಕ್ರಮವನ್ನು ಜೋನಲ್ ಕಾನ್‍ಫ್ರೆಂಸ್ ಎಸ್. ಶಿವಮೂರ್ತಿ ಕಾರ್ಯಕ್ರಮದ ನಿರೂಪಣೆಯನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಅಸಿಸ್ಟೆಂಟ್ ಗೌರ್ನರ್ ಎಸ್.ಎನ್. ಮಂಜುನಾಥರೆಡ್ಡಿ, ಸರಿತಾ ಬಾಲಾಜಿ, ನಾಗಶೇಕರ್, ಕೋಲಾರ ರೋಟರಿ ಸಂಸ್ಥೆಯ ಎಸ್.ವಿ. ಸುಧಾಕರ್, ರವೀಂದ್ರನಾಥ್, ಮುಳಬಾಗಿಲಿನ ರೋಟರಿ ಸಂಸ್ಥೆಯ ಅಧ್ಯಕ್ಷರಾದ ಅರುಣ್, ಮಾಜಿ ಅಧ್ಯಕ್ಷರಾದ ಎನ್.ಆರ್. ಸತ್ಯಣ್ಣ, ಹಾಗೂ ಸದಸ್ಯರು, ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಚಾರ್ಟರ್ಡ್ ಅಧ್ಯಕ್ಷರಾದ ಎಲ್.ಗೋಪಾಲಕೃಷ್ಣ ಹಾಗೂ ಹಿಂದಿನ ಸಾಲಿನ ಅಧ್ಯಕ್ಷರುಗಳು, ಕಾರ್ಯದರ್ಶಿಗಳು ಹಾಗೂ 22-23ನೇ ಸಾಲಿನ ಕಾರ್ಯದರ್ಶಿ ಶ್ರೀನಿವಾಸರರೆಡ್ಡಿ ಹಾಗೂ ಅನೇಕ ಸದಸ್ಯರು ಹಾಜರಿದ್ದರು.