2020-21ನೆಯ ಸಾಲಿನಲ್ಲಿ ಕಟ್ಟಡ ತೆರಿಗೆ ಏಕಾಏಕಿ 15% ಏರಿಕೆ; ಕಾಂಗ್ರೆಸ್ ಸದಸ್ಯರ ಖಂಡನೆ 

ವರದಿ : ಚಂದ್ರಶೇಖರ ಶೆಟ್ಟಿ, ಕುಂದಾಪುರ
2020-21ನೆಯ ಸಾಲಿನಲ್ಲಿ ಕಟ್ಟಡ ತೆರಿಗೆ ಏಕಾಏಕಿ 15% ಏರಿಕೆ; ಕಾಂಗ್ರೆಸ್ ಸದಸ್ಯರ ಖಂಡನೆ 
ಕೊರೊನಾ ಬೀತಿಯ ಹಿನ್ನಲೆಯಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್ ನಿಂದಾಗಿ ಜನತೆ ಕೆಲಸವಿಲ್ಲದೆ, ವ್ಯವಹಾರವಿಲ್ಲದೆ, ಆದಾಯವಿಲ್ಲದೆ, ಖರ್ಚಿಗೆ ಪರದಾಡುತ್ತಿರುವ ಈ ಹೊತ್ತಿನಲ್ಲಿ ರಾಜ್ಯದ ಯಡಿಯೂರಪ್ಪ ಸರ್ಕಾರ ಪುರಸಬೆ/ ನಗರಸಭೆಗಳ ವ್ಯಾಪ್ತಿಯ ಕಟ್ಟಡಗಳ 2020-21ನೆಯ ಸಾಲಿನ ತೆರಿಗೆಯನ್ನು ಏಕಾಏಕಿ 15% ಏರಿಕೆ ಮಾಡಿರುವುದರ ವಿರುದ್ಧ ಕುಂದಾಪುರ ಪುರಸಭೆಯ ಕಾಂಗ್ರೆಸ್ ಸದಸ್ಯರು ಖಂಡನೆ ವ್ಯಕ್ತಪಡಿಸಿರುತ್ತಾರೆ. 
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳು ಇರುವುದು ಜನರ ಬದುಕು ರೂಪಿಸುವ ನಿಟ್ಟಿನಲ್ಲಿ ಜನಪರವಾಗಿ ಕಾರ್ಯಾಚರಿಸಲೇ ಹೊರತೂ ವ್ಯವಹಾರ ಮಾಡಿ ಲಾಭ ಮಾಡಿಕೊಳ್ಳಲಲ್ಲ. ಆದಕಾರಣ ಜನತೆ ಒಂದೊತ್ತಿನ ಗಂಜಿಗೆ ಪರದಾಡುತ್ತಿರುವ ಈ ಹೊತ್ತಿನಲ್ಲಿ ಅವರಿಗೆದುರಾದ ಆಪತ್ತಿಗೆ ಸ್ಪಂದಿಸಿ ತೆರಿಗೆಯನ್ನು ಮನ್ನಾ ಮಾಡಬೇಕಾಗಿದ್ದ ರಾಜ್ಯ ಸರ್ಕಾರವು ತೆರಿಗೆಯನ್ನು ವಿಪರೀತವಾಗಿ ಏರಿಸಿರುವುದನ್ನು ನಾವು ಖಂಡಿಸುತ್ತೇವೆ ಎಂದು ಪುರಸಭಾ ಮಾಜಿ ಸದಸ್ಯ, ನಗರ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಶೇರೆಗಾರ., ಪುರಸಭಾ ಸದಸ್ಯರಾದ ದೇವಕಿ ಸಣ್ಣಯ್ಯ., ಪ್ರಭಾವತಿ ಜೆ. ಶೆಟ್ಟಿ., ಕೆ.ಜಿ ನಿತ್ಯಾನಂದ., ಚಂದ್ರಶೇಖರ ಖಾರ್ವಿ., ಶ್ರೀಧರ್ ಸೇರೆಗಾರ., ಅಬು ಮಹಮ್ಮದ್., ಲಕ್ಷ್ಮಿ ಬಾಯಿ., ಮಹಮ್ಮದ್ ಅಶ್ಫಾಕ್ ಮುಂತಾದವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.