


ಅಭಯಹಸ್ತ 201 ರಕ್ತದಾನ ಶಿಬಿರ ಡಿ ಡಿ ಗ್ರೂಪ್ ನಿಟ್ಟೂರು, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ರಕ್ತ ಕೇಂದ್ರ ಕೆಎಂಸಿ ಮಣಿಪಾಲ ಇವರ ಸಹಕಾರದಲ್ಲಿ ದಿನಾಂಕ 06/04/2024 ಶನಿವಾರ ವಿಷ್ಣುಮೂರ್ತಿ ದೇವಸ್ಥಾನ ಸಭಾಂಗಣ ನಿಟ್ಟೂರುನಲ್ಲಿ ನಡೆದ ರಕ್ತದಾನ ಶಿಬಿರವನ್ನು ಸಂತೋಷ್ ಕುಮಾರ್ ನಗರಸಭಾ ಸದಸ್ಯರು ನಿಟ್ಟೂರು ಇವರು ಉದ್ಘಾಟಿಸಿದರು. ನಂತರದಲ್ಲಿ ಮಾತನಾಡಿದ ಅವರು ಕಳೆದ ಹಲವು ದಿನಗಳಿಂದ ಕೆಎಂಸಿ ಮಣಿಪಾಲ ಆಸ್ಪತ್ರೆಯಲ್ಲಿ ತೀವ್ರ ರಕ್ತದ ಕೊರತೆ ಇದ್ದು, ಈ ಕೊರತೆಯನ್ನು ನೀಗಿಸಲು ತುರ್ತಾಗಿ ಕೇವಲ ಒಂದು ವಾರದ ಅವಧಿಯಲ್ಲಿ ಡಿ ಡಿ ಗ್ರೂಪ್ ನಿಟ್ಟೂರು ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಿ ಕೃತಕ ರಕ್ತದ ಕೊರತೆ ನೀಗಿಸಲು ಪ್ರಮಾಣಿಕ ಪ್ರಯತ್ನ ಮಾಡಿದೆ ಎಂದರು.
ಈ ಸಂದರ್ಭದಲ್ಲಿ ರಕ್ತದ ಆಪತ್ಬಾಂದವ ಸತೀಶ್ ಸಾಲ್ಯಾನ್ ಮಣಿಪಾಲ್, ಅಧ್ಯಕ್ಷರು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ, ಸುನೀಲ್ ಕುಮಾರ್ , ಅಧ್ಯಕ್ಷರು ಧೂಮವತಿ ಯುವಕ ಮಂಡಲ ನಿಟ್ಟೂರು, ರೂಪೇಶ್ ,ಅಧ್ಯಕ್ಷರು ಡಿ ಡಿ ಗ್ರೂಪ್ ನಿಟ್ಟೂರು, ಡಾ. ಲಿಂಗೇಶ್ , ವೈದ್ಯರು, ರಕ್ತ ಕೇಂದ್ರ ಕೆಎಂಸಿ ಮಣಿಪಾಲ, ಶಕುಂತಳಾ, ಮಾರ್ಗದರ್ಶಕರು, ಡಿ ಡಿ ಗ್ರೂಪ್ ನಿಟ್ಟೂರು, ರಕ್ತದಾನ ಶಿಬಿರದ ರೂವಾರಿಗಳಾದ ರಾಕೇಶ್ ಕೊಳಗಿರಿ ಹಾಗೂ ಕಿರಣ್ ಕುಮಾರ್ ಅವರು ಉಪಸ್ಥಿತರಿದ್ದರು.
ಈ ಯಶಸ್ವಿ ರಕ್ತದಾನ ಶಿಬಿರದಲ್ಲಿ 114 ರಕ್ತದಾನಿಗಳು ಪಾಲ್ಗೊಂಡು 82 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.


