ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯಕ್ಕೆ 2.5 ಕೋಟಿ ರೂ. ಮೌಲ್ಯದ ಭೂಮಿ ದಾನ ನೀಡಿದ ಮುಸ್ಲಿಮ್ ಕುಟುಂಬ

JANANUDI.COM NETWORK


ಪಾಟ್ನ: ಬಿಹಾರದ ಮುಸ್ಲಿಮ್ ಕುಟುಂಬವೊಂದು ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯ ನಿರ್ಮಾಣಕ್ಕಾಗಿ 2.5 ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ನೀಡಿದೆ. ಇದರಿಂದ ದೇಶದಲ್ಲಿ ಕೋಮುಸೌಹಾರ್ದತೆಗೆ ಉದಾಹರಣೆಯಾಗಬಲ್ಲ ಈ ಘಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.. ಬಿಹಾರ ರಾಜ್ಯದ ಪೂರ್ವ ಚಂಪಾರಣ್ ಜಿಲ್ಲೆಯ ಕೈಥ್ವಾಲಿಯಾ ಪ್ರದೇಶದಲ್ಲಿ ವಿರಾಟ್ ರಾಮಾಯಣ ಮಂದಿರ ನಿರ್ಮಾಣವಾಗುತ್ತಿದ್ದು, ಈ ಬಗ್ಗೆ ವಿವರಣೆ ನೀಡಿರುವ ಯೋಜನೆಯನ್ನು ಕೈಗೆತ್ತಿಕೊಂಡಿರುವ ಮಹಾವೀರ್ ಮಂದಿರ್ ಟ್ರಸ್ಟ್ ನ ಆಚಾರ್ಯ ಕಿಶೋರ್ ಕುನಾಲ್, ಗುವಾಹಟಿಯಲ್ಲಿರುವ ಪೂರ್ವ ಚಂಪಾರಣ್ ಮೂಲದ ಉದ್ಯಮಿ ಇಷ್ತಿಯಾಕ್ ಅಹ್ಮದ್ ಖಾನ್ ಭೂಮಿಯನ್ನು ದೇವಾಲಯಕ್ಕಾಗಿ ದಾನ ನೀಡಿದ್ದಾರೆ ಎಂದು ಹೇಳಿದ್ದಾರೆ.
ಭೂಮಿಯನ್ನು ಕೊಡುಗೆ ನೀಡುವ ಎಲ್ಲಾ ಪ್ರಕ್ರಿಯೆಗಳನ್ನೂ ಇತ್ತೀಚೆಗೆ ಇಷ್ತಿಯಾಕ್ ಅಹ್ಮದ್ ಖಾನ್ ಪೂರ್ಣಗೊಳಿಸಿದ್ದಾರೆ ಎಂದು ಕುನಾಲ್ ತಿಳಿಸಿದ್ದಾರೆ. ಖಾನ್ ಹಾಗೂ ಕುಟುಂಬ ಸದಸ್ಯರು ಭೂಮಿ ನೀಡುತ್ತಿರುವ ನಡೆ ಎರಡು ಸಮುದಾಯಗಳ ನಡುವಿನ ಸೌಹಾರ್ದತೆ ಹಾಗೂ ಭ್ರಾತೃತ್ವದ ಸಂಕೇತವಾಗಿದೆ ಎಂದು ಆಚಾರ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಮುಸ್ಲಿಮ್ ಕುಟುಂಬದ ಸಹಕಾರ ಇಲ್ಲದಿದ್ದರೆ ಈ ಕನಸಿನ ಯೋಜನೆ ನನಸಾಗುತ್ತಿರಲಿಲ್ಲ. ಅತಿ ದೊಡ್ಡ ಮಂದಿರಕ್ಕಾಗಿ ಮಹಾವೀರ್ ಮಂದಿರ್ ಟ್ರಸ್ಟ್ ಈವರೆಗೂ 125 ಎಕರೆ ಪ್ರದೇಶವನ್ನು ಪಡೆದುಕೊಂಡಿದ್ದು ಶೀಘ್ರವೇ ಇನ್ನೂ 25 ಎಕರೆ ಭೂಮಿಯನ್ನು ಟ್ರಸ್ಟ್ ಪಡೆಯಲಿದೆ ಎಂದು ಹೇಳಿದ್ದಾರೆ.

ವಿಶ್ವದ ಅತಿ ದೊಡ್ಡ ಈ ಹಿಂದೂ ದೇವಾಲಯ ನಿರ್ಮಾಣ ಹಂತದಲ್ಲಿ ಇದ್ದು, ಒಟು 150 ಎಕರೆ ಪ್ರದೇಶದಲ್ಲಿ ಕಟ್ಟಲಾಗುವುದು