16ನೆಯ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಸಿದ್ಧತಾ ಸಭೆ

ವರದಿ: ವಾಲ್ಟರ್ ಮೊಂತೇರೊ

 

16ನೆಯ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಸಿದ್ಧತಾ ಸಭೆ 

 

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾರ್ಕಳ ತಾಲೂಕು ಘಟಕ ಮತ್ತು ನಂದಳಿಕೆ-ಅಬ್ಬನಡ್ಕ ಶ್ರಿ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ನೇತೃತ್ವದಲ್ಲಿ ಡಿಸೆಂಬರ್ 29ರಂದು ಕೆದಿಂಜೆ ಶ್ರೀ ವಿದ್ಯಾ ಬೋಧಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲ್ಲಿ ಜರಗಲಿರುವ 16ನೇ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಸಿದ್ಧತಾ ಸಭೆಯು ಶನಿವಾರ ಕೆದಿಂಜೆ ಶಾಲೆಯಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ವಹಿಸಿದ್ದರು. ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಯು.ಶೇಷಗಿರಿ ಕಾಮತ್, ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಕೆ., ಕೆದಿಂಜೆ ಶಾಲಾ ಮುಖ್ಯ ಶಿಕ್ಷಕ ಪ್ರಥ್ವೀರಾಜ್ ಬಲ್ಲಾಳ್, ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ಅಬ್ಬನಡ್ಕ ಸತೀಶ್ ಪೂಜಾರಿ, ಬೆಳ್ಮಣ್ಣು ಜೇಸಿಐನ ಅಧ್ಯಕ್ಷ ಸತ್ಯನಾರಾಯಣ ಭಟ್, ಕೆದಿಂಜೆ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಬಿರೋಟ್ಟು ದಿನೇಶ್ ಪೂಜಾರಿ, ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಗೌರವ ಕೋಶಾಧ್ಯಕ್ಷ ಅರುಣ್ ರಾವ್ ಮುಂಡ್ಕೂರು, ಗೌರವ ಕಾರ್ಯದರ್ಶಿ ಪಿಲಾರು ಸುಧಾಕರ್ ಶೆಣೈ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ಮಣ್ಣು ಹೋಬಳಿ ಘಟಕದ ಸದಸ್ಯರು ಮತ್ತು ಕನ್ನಡಾಭಿಮಾನಿಗಳು ಉಪಸ್ಥಿತಿತರಿದ್ದರು.