JANANUDI.COM NETWORK
ಗೋವಾ .ಮೇ.14; : ಗುರುವಾರ ಮುಂಜಾನೆ ಆಮ್ಲಜನಕದ ಮಟ್ಟ ಕುಸಿದ ಕಾರಣ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 26 ಮಂದಿ ಕೊರೊನಾ ರೋಗಿಗಳು ಸಾವನ್ನಪ್ಪಿದ ಎರಡು ದಿನಗಳ ನಂತರ ಮತ್ತೆ ಇಂತಹದೇ ಆಕ್ಸಿಜನ್ ದುಂತದ ಏರ್ಪಟ್ಟು 15 ರೋಗಿಗಳು ಮಂದಿ ಮೃತಪಟ್ಟಿದ್ದಾರೆ ಎಂದು ಹ್ರದಯ ವಿದ್ರಾವಕ ಘಟನೆ ನಡಿದಿದೆ.
ಬಾಂಬೆ ಹೈಕೋರ್ಟ್‌ನ ಗೋವಾ ನ್ಯಾಯಪೀಠ, ಆಮ್ಲಜನಕ ಸಿಲಿಂಡರ್ ಗಳಿಗೆ ಸಂಬಂಧಿಸಿದ ವ್ಯವಸ್ಥಾಪನಾ ಸಮಸ್ಯೆಗಳಿಂದ ಕೆಲವು ಸಾವುನೋವುಗಳು ಸಂಭವಿಸಿದೆ ಎಂದು ರಾಜ್ಯದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಿದೆ.
ಆಮ್ಲಜನಕ ಸಮಸ್ಯೆಗಳು ಕೋವಿಡ್ ಸಾವಿಗೆ ಕಾರಣವಾಗಿದೆ. ರೋಗಿಗಳಿಗೆ ಆಮ್ಲಜನಕವನ್ನು ಪೂರೈಸುವ ವಿಷಯದಲ್ಲಿ ಯಾವುದೇ ನ್ಯೂನತೆಗಳ ಕಾರಣದಿಂದಾಗಿ ಅಮೂಲ್ಯವಾದ ಜೀವನವನ್ನು ಕಳೆದುಕೊಳ್ಳದಂತೆ ರಾಜ್ಯ ಸರಕಾರ ಈ ವ್ಯವಸ್ಥಾಪನಾ ಸಮಸ್ಯೆಗಳನ್ನು ನಿವಾರಿಸಲು ಮಾರ್ಗಗಳು ಕಂಡುಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ನ್ಯಾಯಾಲಯ ಸೂಚನೆ ನೀಡಿದೆ.