ಎಪ್ರಿಲ್ 27 ರಿಂದ ಕರ್ನಾಟಕದಲ್ಲಿ 14 ದಿನ ಲಾಕ್ ಡೌನ್

JANANUDI.COM NETWORK

ಎಪ್ರಿಲ್ 26; ಕರ್ನಾಟಕದಲ್ಲಿ ಕರೋನಾ ಸೋಂಕು ಹದ್ದು ಮೀರಿ ನಿಯಂತ್ರಣದಿಂದ ಹೊರಗೆ ಜಾದಿದ್ದರಿಂದ , ಈ ಬಗ್ಗೆ ಮಂತ್ರಿಗಳ, ತಜ್ಞರ ಜೊತೆ ಚರ್ಚಿಸಿ ಕೆಲವು ನಿರ್ಧಾರಕ್ಕೆ ಬಂದಿದ್ದೇವೆ. 14 ದಿನಗಳ ಬಿಗಿ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದ್ರು.
ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯ ವರೆಗೆ ನಿತ್ಯ ವಸ್ತುಗಳ ಖರೀದಿಗೆ ಅವಕಾಶವಿದ್ದು. ಕಟ್ಟಡ ಮತ್ತು ಗಾರ್ಮೆಂಟ್ಸ್ ಕಾರ್ಮಿಕರಿಗೆ ಮತ್ತು ಕ್ರಷಿಗೆ ಮಾತ್ರ ಅವಕಾಶ ನೀಡಲಾಗಿದೆ. ಉಳಿದೆಲ್ಲ ವ್ಯಹಹಾರ ಬಂದರಿರುತ್ತೆ. ರಾತ್ರಿ ಕಫ್ರ್ಯೂ ಎಂದಿನಂತೆ ಮುಂದುವರೆಯಲಿದೆ ಎಂದಿದ್ದಾರೆ. ತಾಲೂಕು ತಹಶೀಲ್ದಾರ್ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಕಟ್ಟಡ ನಿರ್ಮಾಣ, ಕೃಷಿ, ವೈದ್ಯಕೀಯ ಸೇವೆ ಇರಲಿದೆ. ಗಾರ್ಮೆಂಟ್ಸ್ ಬಂದ್ ಇರಲಿದೆ. ಸಾರಿಗೆ ವ್ಯವಸ್ಥೆಯೂ ಇಲ್ಲ. ಸರಕು ಸಾಗಣಿಕೆಗೆ ಅವಕಾಶವಿದೆ ಎಂದಿದ್ದಾರೆ.