ಕುಂದಾಪುರ,ದಿನಾಂಕ : 21/06/2024 ದಂದು ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 10ನೇ ವಿಶ್ವಯೋಗ ದಿನಾಚರಣೆಯನ್ನು ನಮ್ಮ ಶಾಲಾ ವಿದ್ಯಾರ್ಥಿನಿ ಯೋಗಕುಮಾರಿ ಎಂಬ ಬಿರುದಾಂಕಿತೆ ಕುಮಾರಿ ಲಾಸ್ಯ ಮಧ್ಯಸ್ಥ ಇವರ ಯೋಗಾಸನ ಪ್ರದರ್ಶನದೊಂದಿಗೆ ಉದ್ಘಾಟನೆಗೊಂಡಿತು.
ಕುಂದಾಪುರದ ಪ್ರಸಿದ್ಧ ಉದ್ಯಮಿಕೆ.ಆರ್. ನಾಯಕ್ ಹಾಗು ತಾಲೂಕುದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀ ರವೀಂದ್ರ ನಾಯಕ್ ಹಾಗು ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜ್ ಶಾಂತಿ ಎ.ಸಿ.ರವರು ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಶ್ರೀ ರವೀಂದ್ರ ನಾಯಕ್ರವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಯೋಗ ಶ್ಲೋಕವನ್ನು ಮಕ್ಕಳಿಗೆ ಭೋಧಿಸಿ ಯೋಗದ ಮಹತ್ವ ಮತ್ತುಯೋಗ ದಿನಾಚರಣೆ ಹುಟ್ಟಿಕೊಂಡ ಹಿನ್ನಲೆಯನ್ನು ಹಾಗು ಜೂನ್21 ನೇ ತಾರೀಕಿನಂದು ಅಂತರಾಷ್ಟ್ರೀಯಯೋಗ ದಿನಾಚರಣೆ ದಿನವಾಗಿ ಪರಿಗಣಿಸಲು ಕಾರಣವೆನೆಂದರೆ ಈ ಜೂನ್21 ಅತ್ಯಂತ ಸುದೀರ್ಘ ಹಗಲನ್ನು ಹೊಂದಿದ ದಿನವಾಗಿರುವುದರಿಂದ ಈ ದಿನವನ್ನು ವಿಶ್ವಯೋಗ ದಿನಾಚರಣಾ ದಿನವಾಗಿ ಆಯ್ಕೆ ಮಾಡಲಾಗಿದೆಎಂದು ತಿಳಿಸಿ ವಿದ್ಯಾರ್ಥಿಗಳಿಗೆ ಯೋಗ ದಿನಾಚರಣೆಯ ಶುಭ ಹಾರೈಸಿದರು.ಇನ್ನೋರ್ವ ಮುಖ್ಯ ಅತಿಥಿ ಶ್ರೀ ಕೆ.ಆರ್. ನಾಯಕ್ರವರು ವಿಶ್ವಯೋಗ ದಿನಾಚರಣೆಯು21/06/2015ನೇ ಇಸವಿಯಂದು ಮೊದಲುಆಚರಣೆಗೊಂಡಿತು. ಯೋಗದ ಮೂಲ ಭಾರತ ಇಂದು ಈ ಯೋಗ ವಿಶ್ವದೆಲ್ಲೆಡೆ ಪ್ರಸಿದ್ದಿಯನ್ನು ಹೊಂದಿದೆ. ಯೋಗಭ್ಯಾಸಕ್ಕೆ6000 ವರ್ಷಗಳ ಇತಿಹಾಸವಿದೆ, ಯೋಗಭ್ಯಾಸ ಮಾಡಿ ಆರೋಗ್ಯ ವೃದ್ಧಿಯ ಜೊತೆಗೆ ಒತ್ತಡ ರಹಿತ ಜೀವನ ನಮ್ಮದಾಗಿಸಿಕೊಳ್ಳೋಣ. ವಿದ್ಯಾರ್ಥಿಗಳು ದೇಶದ ಸತ್ಪ್ರಜೆಗಳಾಗಿ ಎಂದು ಹಾರೈಸಿ ನಮ್ಮ ಶಾಲೆಯ ಹೆಮ್ಮೆಯ ಯೋಗಪಟು ಯೋಗಕುಮಾರಿ ಬಿರುದಾಂಕಿತೆ ಕುಮಾರಿ ಲಾಸ್ಯಳಿಗೆ ಹೂಗುಚ್ಚ ನೀಡಿ ಅಭಿನಂದಿಸಿದರು.
ನಂತರ ವಿದ್ಯಾರ್ಥಿಗಳಿಂದ ವಿವಿಧ ಭಂಗಿಯ ಆಸನಗಳನ್ನು ಮಾಡಿಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ರತ್ನಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಪ್ರತಿಮಾ ಶೆಟ್ಟಿಯವರು ಸ್ವಾಗತಿಸಿ ಶಿಕ್ಷಕ ಲೂವಿಸ್ ಪ್ರಶಾಂತ್ರವರು ವಂದನಾರ್ಪಣೆಗೈದರು.