ಯೋಗ ಗುರು ಬಾಬಾ ರಾಮ್ ದೇವ್ ಮೇಲೆ 1000 ಕೋಟಿ ರೂ. ಮಾನನಷ್ಟ ನೋಟಿಸ್ ಜಾರಿ

JANANUDI.COM NETWORK

ನವದೆಹಲಿ:ಮೇ.26; ಅಲೋಪತಿ ಔಷಧ ಕುರಿತು ಯೋಗ ಗುರು ಬಾಬಾ ರಾಮ್ದೇವ್ ನೀಡಿದ ಹೇಳಿಕೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ)ದ ಉತ್ತರಾಖಂಡ್ ವಿಭಾಗ ಬರೋಬ್ಬರಿ 1 ಸಾವಿರ ಕೋಟಿ ರೂ. ಮಾನನಷ್ಟದ ನೋಟಿಸ್ ನೀಡಿದೆ.
ಬಾಬಾ ರಾಮ್ದೇಡವ್ ಅವರು ತಮ್ಮ ಹೇಳಿಕೆ ಕುರಿತು ವಿಡಿಯೋ ಪೋಸ್ಟ್ ಮಾಡಬೇಕು ಹಾಗೂ 15 ದಿನಗಳೊಳಗೆ ಲಿಖಿತ ರೂಪದಲ್ಲಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ 1000 ಕೋಟಿ ರೂ.ಗಳ ಬೇಡಿಕೆ ಇಡುತ್ತೇವೆ ಎಂದು ಐಎಂಎ ನೋಟಿಸ್ನಲಲ್ಲಿ ತಿಳಿಸಿದೆ. ಅಲ್ಲದೆ ಐಎಂಎ ಪರವಾಗಿ ರಾಮ್ದೇಾವ್ ಅವರಿಗೆ ಮಾನನಷ್ಟ ನೋಟಿಸ್ ಕಳುಹಿಸಲಾಗಿದೆ ಎಂದು ಉತ್ತರಾಖಂಡ್ (ಐಎಂಎ) ವಿಭಾಗದ ಅಧ್ಯಕ್ಷ ಡಾ.ಅಜಯ್ ಖನ್ನಾ ಹೇಳಿದ್ದಾರೆ.
ಆರೋಗ್ಯ ಸಚಿವ ಹರ್ಷ್ ವರ್ಧನ್ ಅವರ ಪತ್ರದ ಬಳಿಕ ಬಾಬಾ ರಾಮ್ದೇವ್ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ. ಸೋಮವಾರ ಐಎಂಎಗೆ 25 ಪ್ರಶ್ನೆಗಳನ್ನು ಕೇಳಿದ್ದ ಅವರು, ಅಧಿಕ ರಕ್ತದೊತ್ತಡ(ಬಿಪಿ) ಹಾಗೂ ಟೈಪ್-1, ಟೈಪ್-2 ಮಧುಮೇಹ ಸೇರಿದಂತೆ ಮುಂತಾದ ಕಾಯಿಲೆಗಳಿಗೆ ಅಲೋಪತಿ ಶಾಶ್ವತ ಪರಿಹಾರ ನೀಡುತ್ತದೆಯೇ ಎಂದು ಅವರು ಪ್ರಶ್ನಿಸಿದ್ದರು. ಅಲ್ಲದೆ ಥೈರಾಯ್ಡ್, ಸಂಧಿವಾತ, ಕೊಲೈಟಿಸ್ ಹಾಗೂ ಅಸ್ತಮಾಗೆ ಫಾರ್ಮಾ ಉದ್ಯಮದಲ್ಲಿ ಶಾಶ್ವತ ಚಿಕಿತ್ಸೆ ಇದೆಯೇ ಎಂದು ಅಲೋಪತಿ ಔಷಧ ಕುರಿತು ಟೀಕೆ ಮಾಡಿದ್ದರು.