

ಕೋಲಾರ: ಕಳೆದ ಜುಲೈ, 2024 ಮಾಹೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ, ಬೆಂಗಳೂರು ರವರು ನಡೆಸಿದಂತಹ ಕಂಪ್ಯೂಟರ್ ಪರೀಕ್ಷೆಯಲ್ಲಿ ಕೋಲಾರ ನಗರದ ಗಲ್ಪೇಟೆಯಲ್ಲಿರುವ ಪೊಲೀಸ್ ವಾಣಿಜ್ಯ ಮತ್ತು ಕಂಪ್ಯೂಟರ್ ತರಭೇತಿ ಶಾಲೆಯು ಕÀಂಪ್ಯೂಟರ್ ಪರೀಕ್ಷೆಯಲ್ಲಿ ಶೇ. 100 ರಷ್ಟು ಟೈಪಿಂಗ್ ಪರೀಕ್ಷೆಯಲ್ಲಿ ಶೇ. 90 ರಷ್ಟು ಫಲಿತಾಂಶ ಪಡೆದಿದ್ದು, ಎನ್.ಶ್ರೀನಿಧಿ, ಆರ್, ವಿನೋದ್, ಲಾವಣ್ಯ, ಕುಸುಮ, ವಿನೋದ್, ಹರ್ಷಿತ, ವಿಜೇಂದ್ರರಾವ್ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯ ಫಲಿತಾಂಶ ಪಡೆದಿದ್ದಾರೆ.
ಶೇ.100ರಷ್ಟು ಫಲಿತಾಂಶಕ್ಕಾಗಿ ಶ್ರಮಿಸಿದ ಪ್ರಾಂಶುಪಾಲರಾದ ಡಿ.ಎಂ.ನಾಗರಾಜ ಹಾಗೂ ಪೊಲೀಸ್ ಅಧೀಕ್ಷಕರ ಆಪ್ತ ಸಹಾಯಕರು, ಎಹೆಚ್ಸಿ ಬೋಧಕರಾದ ಎನ್.ಮಂಜುನಾಥ ಮತ್ತು ವಿದ್ಯಾರ್ಥಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಬಿ.ನಿಖಿಲ್, ಅಪರ ಪೊಲೀಸ್ ಅಧೀಕ್ಷಕರಾದ ಸಿ.ಆರ್.ರವಿಶಂಕರ್, ಹೆಚ್.ಸಿ ಜಗದೀಶ್, ಹಾಗೂ ಡಿ.ಎಆರ್ ಪ್ರಭಾರ ಡಿವೈಎಸ್ಪಿ ಮಹಾಲಿಂಗಪ್ಪ ಜುಮನಾಳ ರವರು ಅಭಿನಂದಿಸಿದ್ದಾರೆ.
