ಶ್ರೀನಿವಾಸಪುರ: ಫೆಬ್ರವರಿ ಮಾಹೆಯಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಕಂಪ್ಯೂಟರ್ OFFICE AUTOMATION ಪರೀಕ್ಷೆಗಳಲ್ಲಿ ಪಟ್ಟಣದ ಕರ್ನಾಟಕ ವಾಣಿಜ್ಯ ಮತ್ತು ಕಂಪ್ಯೂಟರ್ ಶಿಕ್ಷಣ ಸಂಸ್ಥೆಗೆ (KIIT) 17 ಡಿಸ್ಟಿಂಗ್‍ಷನ್ಸ್ ನೊಂದಿಗೆ (DISTINCTIONS) ಶೇಕಡ100ರಷ್ಟು ಫಲಿತಾಂಶ ದೊರೆತಿದೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಎನ್. ಕೃಷ್ಣಮೂರ್ತಿ ತಿಳಿಸಿದ್ದಾರೆ.
ಪಟ್ಟಣದ ಎಂ.ಜಿ.ರಸ್ತೆಯಲ್ಲಿರುವ ಕರ್ನಾಟಕ ವಾಣಿಜ್ಯ ಮತ್ತು ಕಂಪ್ಯೂಟರ್ ಶಿಕ್ಷಣ ಸಂಸ್ಥೆಗೆ (KIIT) ಕಳೆದ ಆಗಸ್ಟ್ ಮಾಹೆಯಲ್ಲಿರಾಜ್ಯ ಮಟ್ಟದಲ್ಲಿ ಕರ್ನಾಟಕ ಪ್ರೌಡಶಿಕ್ಷಣ ಪರೀಕ್ಷ ಮಂಡಳಿಯು ನಡೆಸಿದ ಕಂಪ್ಯೂಟರ್ OFFICE AUTOMATION ಪರೀಕ್ಷೆಗೆ ಶಾಲೆಯಿಂದ ಒಟ್ಟು 55 ಅಭ್ಯರ್ಥಿಗಳು ಹಾಜರಾಗಿದ್ದು, ಇವರಲ್ಲಿ17 ಡಿಸ್ಟಿಂಗ್‍ಷನ್ಸ್, ಪ್ರಥಮ ದರ್ಜೆಯಲ್ಲಿ-26, ದ್ವಿತೀಯ ದರ್ಜೆಯಲ್ಲಿ 10, ತೃತೀಯ ದರ್ಜೆಯಲ್ಲಿ 02 ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದು, ಶಾಲೆಗೆ ಶೇಕಡ100ರಷ್ಟು ಫಲಿತಾಂಶದೊರೆತಿದೆ.
ಹಾಗೆಯೆ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪರೀಕ್ಷೆಯಲ್ಲಿಒಟ್ಟು 13 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ 05 ಡಿಸ್ಟಿಂಗ್‍ಷನ್ಸ್, ಪ್ರಥಮ ದರ್ಜೆಯಲ್ಲಿ-02, ದ್ವಿತೀಯ ದರ್ಜೆಯಲ್ಲಿ 03 ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದು, ಶಾಲೆಗೆ ಶೇಕಡ77ರಷ್ಟು ಫಲಿತಾಂಶ ದೊರೆತಿದೆ. ತೇರ್ಗಡೆ ಹೊಂದಿದ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಶಾಲೆಗೆ ದೊರೆತಿರುವ ಉತ್ತಮ ಫಲಿತಾಂಶಕ್ಕೆ ಕಾರಣರಾದ ಬೋಧಕರನ್ನು ಪ್ರಾಂಶುಪಾಲರಾದ ಎನ್. ಕೃಷ್ಣಮೂರ್ತಿ ಮತ್ತುಕೇಂದ್ರ ವ್ಯವಸ್ಥಾಪಕರಾದ ಆರ್. ರಾಧ ಇವರು ಅಭಿನಂದಿಸಿದ್ದಾರೆ.