ಶ್ರೀನಿವಾಸಪುರ : ಕಂದಾಯ ಅಧಿಕಾರಿ ಎನ್.ಶಂಕರ್ ಮಾತನಾಡಿ ಪಟ್ಟಣ ಹಳೆ ಸಾರ್ವಜನಿಕ ಆಸ್ಪತ್ರೆಯ ಆವಣರದಲ್ಲಿನ 93 ವಾಣಿಜ್ಯ ಪುರಸಭೆ ಮಳಿಗೆಗಗಳು ಇದ್ದು, ಆ ಮಳಿಗೆಗೆಗಳನ್ನು ಕೆಯುಐಡಿಎಫ್ಸಿ ಬ್ಯಾಂಕ್ ನಿಂದ ಸಾಲ ಮಾಡಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ.
ಹರಾಜು ಮೂಲಕ ಅಂಗಡಿಗಳನ್ನು ಹರಾಜು ದಾರರಿಗೆ ನೀಡಲಾಗಿದೆ. ಯಾವ ಅಂಗಡಿಯೂ ಖಾಲಿ ಇಲ್ಲ. ಆ ಮಳಿಗೆಗಳಲ್ಲಿನ ಕೆಲ ಅಂಗಡಿಗಳು ಲಕ್ಷಾಂತಾರ ರೂಗಳು ಬಾಡಿಗೆ ಬಾಕಿ ಇದ್ದು, ಗುರುವಾರ ದಾಳಿ ನಡೆಸಿ 10 ಮಳಿಗೆಗೆಗಳಿಗೆ ಬೀಗಮುದ್ರೆ ಹಾಕಲಾಯಿತು ಎಂದರು.
ಪುರಸಭೆ ಅಧ್ಯಕ್ಷ ಬಿ.ಆರ್.ಭಾಸ್ಕರ್ ಹಾಗು ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್ ಆದೇಶದ ಮೇರೆಗೆ ಬಾಡಿಗೆ ಬಾಕಿ ಇರುವ ಅಂಗಡಿಗಳಿಗೆ ಬೀಗ ಮುದ್ರೆ ಹಾಕಲಾಗುತ್ತಿದೆ. ಕೆಲ ಅಂಗಡಿಗಳು ಲಕ್ಷಾಂತರ ರೂಗಳು ಬಾಡಿಗೆ ಬಾಕಿ ಇದ್ದು, ಆ ಅಂಗಡಿಗಳಿಗೆ ಬೀಗ ಮುದ್ರೆ ಹಾಕಲಾಗಿದೆ ಎಂದರು. ಈ ಸಮಯದಲ್ಲಿ ಕರ ವಸೂಲಿಗಾರ ರಾದ ಮಂಜುನಾಥ್, ಪ್ರತಾಪ್, ವೆಂಕಟೇಶ್ ಅಯ್ಯ ಇದ್ದರು