ಬೇಸಿಗೆಯಲ್ಲಿ ರೈತರ ಬೆಳೆ ರಕ್ಷಣೆಗೆ 10 ತಾಸು ಗುಣಮಟ್ಟದ ವಿದ್ಯುತ್ ನೀಡಬೇಕು- ಇಲಾಖೆಯಲ್ಲಿ ನಡೆಯುತ್ತಿರುವ ಭ್ರಹ್ಮಾಂಡ ಭ್ರಷ್ಟಾಚಾರ ತನಿಖೆ ಮಾಡಿ-ರೈತ ಸಂಘ

ಮುಳಬಾಗಿಲು-ಏ-20, ಬೇಸಿಗೆಯಲ್ಲಿ ರೈತರ ಬೆಳೆ ರಕ್ಷಣೆಗೆ 10 ತಾಸು ಗುಣಮಟ್ಟದ ವಿದ್ಯುತ್ ನೀಡುವ ಜೊತೆಗೆ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಹ್ಮಾಂಡ ಭ್ರಷ್ಟಾಚಾರ ತನಿಖೆ ಮಾಡಲು ವಿಶೇಷ ತಂಡ ರಚನೆ ಮಾಡಬೇಕೆಂದು ರೈತ ಸಂಘದಿಂದ ನಷ್ಠ ಬೆಳೆ ಸಮೇತ ಬೈರಕೂರು ವಿದ್ಯುತ್ ಉಪ ಕೇಂದ್ರದ ಮುಂದೆ ಹೋರಾಟ ಮಾಡಿ ಬೆಸ್ಕಂ ಅಧಿಕಾರಿ ಸಂತೋಷ್ ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ದೇವರು ವರ ಕೊಟ್ಟರು ಪೂಜಾರಿ ನೀಡಲಿಲ್ಲ ಎಂಬ ಗಾದೆಯಂತೆ ಸರ್ಕಾರ ಬೇಸಿಗೆಯಲ್ಲಿ ರೈತರು ಬೆಳೆದ ಬೆಳೆಗಳ ರಕ್ಷಣೆಗೆ ನೀರು ಹಾಯಿಸಲು ಗುಣಮಟ್ಟದ 10 ತಾಸು ವಿದ್ಯುತ್ ನೀಡುತ್ತೇವೆಂದು ಭರವಸೆ ನೀಡಿದ್ದ ಇಂದನ ಸಚಿವರ ಆದೇಶ ವಿಧಾನ ಸೌಧದ ಕೊಠಡಿಗಳಲ್ಲೇ ಸುತ್ತಿತಿದೆ ಹೊರೆತು ಆಯಾ ವ್ಯಾಪ್ತಿಯ ಬೆಸ್ಕಂ ಅಧಿಕಾರಿಗಳ ಕಛೇರಿಗೆ ತಲುಪಿಲ್ಲ. ರೈತರ ಗೊಳು ತಪ್ಪುತ್ತಿಲ್ಲವೆಂದು ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಬೆಸ್ಕಂ ಅಧಿಕಾರಿಗಳ ವಿರುದ್ದ ಆಕ್ರೊಷ ವ್ಯಕ್ತಪಡಿಸಿದರು.
ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದಂತಹ ಬೆಳೆ ಮಳೆಗಾಲದಲ್ಲಿ ಪ್ರಕೃತಿ ವಿಕೋಪಕ್ಕೆ ನಾಶವಾದರೆ ಬೇಸಿಗೆಯಲ್ಲಿ ಸಮೃದ್ದವಾದ ಬೆಳೆ ಕೈಗೆ ಬಂದು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವ ನಿರೀಕ್ಷೆಯಲ್ಲಿರುವ ರೈತನಿಗೆ ಬೆಳೆ ರಕ್ಷಣೆ ಮಾಡುವುದು ಅರ ಸಾಹಸವಾಗಿದೆ. ಬೆಸ್ಕಂ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ರೈತ ವಿರೋಧಿ ದೋರಣೆಯಿಂದ ಗುಣಮಟ್ಟದ ವಿದ್ಯುತ್ ನೀಡದೆ ಬೆಳೆಗಳಿಗೆ ನೀರು ಆಯಿಸಲಾಗದೆ ಕಣ್ಣು ಮುಂದೆಯೇ ಬೆಳೆ ಒಣಗಿ ಪಸಲು ನೆಲಕ್ಕೆ ಉದುರುವ ಮೂಲಕ ಹಾಕಿದ ಬಂಡವಾಳ ಕೈಗೆ ಸಿಗದೆ ಖಾಸಗಿ ಸಾಲಕ್ಕೆ ರೈತ ಸಿಲುಕಿ ಆತ್ಮಹತ್ಯ ಹತ್ತ ಮುಖ ಮಾಡುವ ಮಟ್ಟಕ್ಕೆ ಬೆಸ್ಕಂ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆಂದು ಆರೋಪ ಮಾಡಿದರು.
ರೈತ ಮೂರು ತಿಂಗಳು ಬೆವರು ಸುರಿಸಿ ಭೂಮಿಗೆ ಹಾಕಿದ ಬೀಜ ದ ಪಸಲು ರೈತನೇ ತಿನ್ನುವುದಿಲ್ಲ. ಎಲ್ಲಾ ಅಧಿಕಾರಿಗಳು ತಿನ್ನುವ ಮೊದಲು ತಾನು ರೈತರಿಗೆ ತೊಂದರೆ ಮಾಡಬಾರದೆಂಬ ಮನಸಾಕ್ಷಿ ಇರಬೇಕು. ಆದರೆ ಅಧಿಕಾರಿಗಳಿಗೆ ಮಾನವೀಯತೆ ಇಲ್ಲವೇ ಇಲ್ಲ. ಕಷ್ಟಾಪಡದ ಶ್ರೀಮಂತರ ಹಾಗೂ ರಾಜಕಾರಣಿಗಳ ಸಭೆ ಸಮಾರಂಭಗಳಿಗೆ ದಿನದ 24 ಗಂಟೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಸಭೆ ಮುಗಿಯವರೆಗೂ ಅಲ್ಲಿಯೇ ಇದ್ದು, ಯಾವುದೇ ತೊಂದರೆಯಾಗದ ರೀತಿ ಜಾಗೃತಿ ವಹಿಸುವ ಬೆಸ್ಕಂ ಅಧಿಕಾರಿಗಳೇ ರೈತರು ನಿಮಗೆ ಏನು ದ್ರೋಹ ಮಾಡಿದ್ದಾರೆ. ಕೊಡುವ ವಿದ್ಯುತ್‍ನ್ನು ಗಂಟೆಗೆ 800 ಬಾರಿ ತೆಗೆದು ರೈತರ ಬಾಳನ್ನು ಹಾಳು ಮಾಡುತ್ತಿದ್ದಾರೆಂದು ಅಸಮದಾನ ವ್ಯಕ್ತಪಡಿಸಿದರು.
ಬೆಸ್ಕಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ನೊಂದಿರುವ ರೈತ ನಂಗಲಿ ನಾಗೇಶ್ ಧರ್ಮ ಮಾತನಾಡಿ ಒಂದು ಎಕರೆ ತೋಟಕ್ಕೆ ನೀರು ಆಯಿಸಬೇಕಾದರೆ ರೈತ ಮನೆ ಹೆಂಡತಿ ಮಕ್ಕಳನ್ನು ಬಿಟ್ಟು ದಿನದ 24 ಗಂಟೆ ಕೊಳವೆಬಾವಿಯ ಹತ್ತಿರ ಸಂಸಾರ ಮಾಡಬೇಕಾದ ಪರಿಸ್ತಿತಿ ಇದೆ. ಅದರ ಜೊತೆಗೆ ಹೋಗಿ ಬರುವ ವಿದ್ಯುತ್‍ನಿಂದ ಕೊಳವೆಬಾವಿ ಮೋಟರ್‍ಗಳು ಸುಟ್ಟು ಅದನ್ನು ರಿಪೇರಿ ಮಾಡಿಲು 20 ಸಾವಿರ ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ. ಜೊತೆಗೆ ಟಿ.ಸಿ. ಏನಾದರೂ ಸುಟ್ಟರೆ ಅದನ್ನು ಸರಿಪಡಿಸಲು ರೈತರೇ ಹಣವನ್ನು ಹಾಕಿ ಲೈನ್‍ನಮ್ಯಾನ್‍ಗಳಿಗೆ ಕೊಡಬೇಕು. ಇಲ್ಲವಾಧರೆ ನೂರೊಂದು ನೆಪ ಹೇಳಿ ವಾರವಾದರು ಟಿ.ಸಿ. ಕೊಡುವುದಿಲ್ಲ. ಅಷ್ಟರ ಮಟ್ಟಿಗೆ ಇಲಾಖೆ ಹದಗೆಟ್ಟಿದೆ ಆಕ್ರೋಷ ವ್ಯಕ್ತಪಡಿಸಿದರು.
ಬೆಸ್ಕಂ ಇಲಾಖೆ ಎಂಬುದು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಚಿನ್ನದ ಮೊಟ್ಟೆ ಇಡುವ ಇಲಾಖೆಯಾಗಿ ಮಾರ್ಪಟ್ಟಿದೆ. ಅವಶ್ಯಕತೆ ಇಲ್ಲದ ಟೆಂಡರ್‍ಗಳನ್ನು ಕರೆದು ಗುತ್ತಿಗೆದಾರರ ಜೊತೆ ಶಾಮೀಲಾಗಿ ಲಕ್ಷ ರೂಪಾಯಿ ಕಾಮಗಾರಿಗೆ 10 ಲಕ್ಷ ಅನುದಾನ ನೀಡಿ ಕೋಟಿ ಕೋಟಿ ಹಣವನ್ನು ಲೂಟಿ ಮಾಡುವ ಮೂಲಕ ಬೆಸ್ಕಂ ಇಲಾಖೆಯನ್ನು ಭ್ರಷ್ಟರ ಕೂಪವನ್ನಾಗಿ ಮಾಡಿದ್ದಾರೆಂದು ಆರೋಪ ಮಾಡಿದರು.
24 ಗಂಟೆಯಲ್ಲಿ ರೈತರಿಗೆ ಗುಣಮಟ್ಟದ 10 ತಾಸು ವಿದ್ಯುತ್‍ನ್ನು ಬೇಸಿಗೆ ಮುಗಿಯುವರೆಗೂ ನೀಡಬೇಕು. ಹಾಗೂ ಇಲಾಖೆಯಲ್ಲಿನ ಭ್ರಷ್ಟಾಚಾರತೆಗೆ ಕಡಿವಾಣ ಹಾಕಲು ವಿಶೇಷ ತಂಡ ರಚನೆ ಮಾಡಬೇಕು. ಇಲ್ಲವಾದರೆ ನಷ್ಟ ಬೆಳೆ ಸಮೇತ ರಾಷ್ಟ್ರೀಯ ಹೆದ್ದರಿ ಬಂದ್ ಮಾಡುವ ಎಚ್ಚರಿಕೆಯೊಂದಿ ಮನವಿ ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಬೆಸ್ಕಂ ಇಂಜನಿಯರ್ ಸಂತೋಷ್ ರವರು ಸ್ವಲ್ಪ ವಿದ್ಯುತ್ ಲೈನ್ ರಿಪೇರಿಯಿಂದ ಅಡೆತಡೆಯಾಗಿದೆ. ಯಾವುದೇ ಕಾರಣಕ್ಕೂ ರೈತರಿಗೆ ವಿದ್ಯುತ್ ನೀಡದೆ ಬೆಳೆ ನಷ್ಟವಾಗಲು ಬಿಡುವುದಿಲ್ಲ. ರೈತರ ಜೊತೆ ಬೆಸ್ಕಂ ಅಧಿಕಾರಿಗಳು ಇರುತ್ತೇವೆಂದು ಭರವಸೆ ನೀಡಿದರು.
ಮನವಿ ನೀಡುವಾಗ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಾರುಕ್‍ಪಾಷ, ಬಂಗಾರಿ ಮಂಜು, ಭಾಸ್ಕರ್, ರಾಜೇಶ್, ಸುನಿಲ್‍ಕುಮಾರ್, ಗುರುಮೂರ್ತಿ, ವಿಜಯ್‍ಪಾಲ್, ವಿಶ್ವ, ದೇವರಾಜ್, ಗಿರೀಶ್, ಮುಂತಾದವರು ಇದ್ದರು.