ಬೆಂಗಳೂರು: ಕನಕಪುರ ರಸ್ತೆಯ ಪಕ್ಕದ ನೈಸ್ ರಸ್ತೆಯ ಬಳಿಯ ಪೊದೆಯಲ್ಲಿ ಸೂಟ್ ಕೇಸ್ ಹಾಗೂ ಎರಡು ರಟ್ಟಿನ ಕಾರ್ಟುನ್ಗಳಲ್ಲಿ ಎರಡು ಸಾವಿರ ಮುಖಬೆಲೆಯ ಜೆರಾಕ್ಸ್ ನೋಟುಗಳು ಪತ್ತೆಯಾಗಿವೆ. ಬಾಕ್ಸ್ ಮತ್ತು ಸೂಟ್ ಕೇಸ್ ಬಿಚ್ಚಿ ನೋಡಿದಾಗ ₹2000 ಮುಖಬೆಲೆಯ ಜೆರಾಕ್ಸ್ ಮಾಡಿದ ನೋಟುಗಳು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ₹2000 ಮುಖಬೆಲೆಯ ಒಟ್ಟು ಮೊತ್ತ ₹10 ಕೋಟಿ ಯಾಗಿದ್ದು, ಅಸಲಿ ನೋಟುಗಳ ಜೊತೆ ಸೇರ್ಪಡೆ ಮಾಡಿ ಚಲಾವಣೆ ಮಾಡುವ ಜಾಲದ ಕೈವಾಡ ಇದಾಗಿದೆ ಎಂದು ಅನುಮಾನಿಸಲಾಗಿದೆ. ₹2000 ಮುಖಬೆಲೆಯ ನೋಟುಗಳನ್ನು ಚಲಾವಣೆಯನ್ನು ಆರ್ ಬಿಐ ರದ್ದು ಮಾಡಿದ್ದು, ಹಳೆಯ ನೋಟುಗಳನ್ನು ಬ್ಯಾಂಕ್ ಗೆ ಪಾವತಿಸಲು ಕ್ರಮ ತೆಗೆದುಕೊಂಡಿದ್ದರಿಂದ ರಸ್ತೆ ಬದಿಗೆ ಎಸೆದಿರಬೇಕು ಎಂದು ಅನುಮಾನ ಪಡಲಾಗಿದೆ. ಖೋಟಾ ನೋಟು ಜಾಲ ಸಕ್ರಿಯವಾಗಿದೆಯೆಂದು ಅನುಮಾನ ಕಾಡಿದ್ದು, ಈ ಪ್ರಕರಣದ ಹಿಂದೆ ಯಾರ ಕೈವಾಡ ಇದೆಯೆಂಬುದನ್ನು ಎಂಬುದನ್ನು ತನಿಖೆ ನಡೆಸಲಾಗುತ್ತಿದೆ.