ಕೋಲಾರ:- ಎಸ್ಸೆಸ್ಸೆಲ್ಸಿ ಪರೀಕ್ಷೆ-3ಜಿಲ್ಲೆಯ 10 ಕೇಂದ್ರಗಳಲ್ಲಿ ಸುಸೂತ್ರವಾಗಿ ನಡೆದಿದೆ. ಇಂದಿನ ವಿಜ್ಞಾನ ವಿಷಯಕ್ಕೆ ಒಟ್ಟು 508 ಮಂದಿ ಗೈರಾಗಿದ್ದು, ಜಿಲ್ಲಾಧಿಕಾರಿ ಅಕ್ರಂ ಪಾಷಾ ಹಾಗೂ ಡಿಡಿಪಿಐ ಕೃಷ್ಣಮೂರ್ತಿ ನಗರದ ಸರ್ಕಾರಿ ಬಾಲಕರ ಹಾಗೂ ಬಾಲಕಿಯರ ಪಿಯು ಕಾಲೇಜು ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರೀಕ್ಷೆ ಸುಗಮವಾಗಿ ನಡೆದಿರುವ ಕುರಿತು ಮಾಹಿತಿ ನೀಡಿರುವ ಡಿಡಿಪಿಐ ಕೃಷ್ಣಮೂರ್ತಿ, ಜಿಲ್ಲೆಯಲ್ಲಿ 2322 ಮಂದಿ ಪರೀಕ್ಷೆಗೆ ನೋಂದಾಯಿಸಿದ್ದು, ಅವರಲ್ಲಿ 1814 ಮಂದಿ ಹಾಜರಾಗಿದ್ದಾರೆ ಮತ್ತು 508 ಮಂದಿ ಗೈರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಕೋಲಾರದ 2 ಕೇಂದ್ರಗಳಲ್ಲಿ ಒಟ್ಟು 453 ಮಂದಿ ಹೆಸರು ನೋಂದಾಯಿಸಿದ್ದು ಅವರಲ್ಲಿ359 ಮಂದಿ ಹಾಜರಾಗಿದ್ದಾರೆ ಹಾಗೂ 94 ಮಂದಿ ಗೈರಾಗಿದ್ದಾರೆ. ಬಂಗಾರಪೇಟೆಯಲ್ಲೂ 2 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಅಲ್ಲಿ 473 ಮಂದಿ ನೋಂದಾಯಿಸಿದ್ದು, ಅವರಲ್ಲಿ 343 ಮಂದಿ ಹಾಜರಾಗಿದ್ದು, 130 ಮಂದಿ ಗೈರಾಗಿದ್ದಾರೆ. ಕೆಜಿಎಫ್ ತಾಲ್ಲೂಕಿನ 2 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು,562 ಮಂದಿ ನೋಂದಾಯಿಸಿದ್ದು,489 ಮಂದಿ ಹಾಜರಾಗಿದ್ದಾರೆ ಹಾಗೂ 73 ಮಂದಿ ಗೈರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಮಾಲೂರು ತಾಲ್ಲೂಕಿನ ಒಂದು ಕೇಂದ್ರದಲ್ಲಿ 356 ಮಂದಿ ಪರೀಕ್ಷೆಗೆ ನೋಂದಾಯಿಸಿದ್ದು, ಅವರಲ್ಲಿ265 ಮಂದಿ ಹಾಜರಾಗಿ 91 ಮಂದಿ ಗೈರಾಗಿದ್ದಾರೆ. ಮುಳಬಾಗಿಲು ತಾಲ್ಲೂಕಿನಲ್ಲೂ 2 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಅಲ್ಲಿ 389 ಮಂದಿ ನೋಂದಾಯಿಸಿದ್ದು,296 ಮಂದಿ ಹಾಜರಾಗಿದ್ದಾರೆ ಹಾಗೂ 93 ಮಂದಿ ಗೈರಾಗಿದ್ದಾರೆ. ಶ್ರೀನಿವಾಸಪುರ ತಾಲ್ಲೂಕಿನ ಒಂದು ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದು 89 ಮಂದಿ ನೋಂದಾಯಿಸಿದ್ದು, 62 ಮಂದಿ ಹಾಜರಾಗಿದ್ದಾರೆ ಹಾಗೂ 27 ಮಂದಿ ಗೈರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಪರೀಕ್ಷಾಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ
ನಗರದ ಬಾಲಕಿಯರ ಹಾಗೂ ಬಾಲಕರ ಪಿಯು ಕಾಲೇಜು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ್ದ ಡಿಸಿ ಅಕ್ರಂಪಾಷಾ, ಗೊಂದಲಕ್ಕೆ ಅವಕಾಶ ನೀಡದಿರಿ, ಸುಗಮ ಪರೀಕ್ಷೆ ನಡೆಸಿ, ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ಬೆಳಕು ಮತ್ತಿತರ ಸೌಲಭ್ಯ ಸಮರ್ಪಕವಾಗಿರುವಂತೆ ನೋಡಿಕೊಳ್ಳಿ ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರಾದ ಶಶಿವಧನ, ರಾಧಮ್ಮ, ಕಸ್ಟೋಡಿಯನ್ ಸಿದ್ದೇಶ್, ಸ್ಥಾನಿಕ ಜಾಗೃತದಳದ ತಾಹೇರಾ ನುಸ್ರುತ್ ಮತ್ತಿತರರಿದ್ದರು.