ಅಬುಧಾಬಿಯಲ್ಲಿ ಅಪಘಾತ ಮಾಡಿ ಜೀವನಾವಧಿ ಶಿಕ್ಷೆಗೆ ಗುರಿಯಾಗಿದ್ದ ಯುವಕನಿಗಾಗಿ, 1 ಕೋಟಿ ಹಣ ಪರಿಹಾರ ನೀಡಿ ಬದುಕು ಕೊಟ್ಟ ಲೂಲು ಗ್ರೂಪಿನ ಯೂಸುಫ್ ಅಲಿ

JANANUDI.COM NETWORK

 

ಯೂಸುಫ್ ಅಲಿ ———————————————————ಕೃಷ್ಣನ್

ಅಬುಧಾಬಿ ಜೂ: 2013 ರಲ್ಲಿ ಕೇರಳದ ತ್ರಿಶೂರ್ ಜಿಲ್ಲೆಯ ಕೃಷ್ಣನ್ ಎಂಬಾತ ಯು.ಎ.ಇ.ಯ ಅಬುಧಾಬಿಯಲ್ಲಿ ಕಾರಿನಲ್ಲಿ ತೆರಳುತ್ತಿದ್ದಾಗ ಅಪಘಾತವಾಯಿತು. ಈ ಅಪಘಾತದಲ್ಲಿ ಸುಡಾನ್ ಮೂಲದ ಬಾಲಕನೋರ್ವ ಕೃಷ್ಣನ್ ಕಾರಿನಡಿ ಸಿಲುಕಿ ಮೃತಪಟ್ಟಿದ್ದ.  ಈ ಪ್ರಕರಣದಲ್ಲಿ ಕೃಷ್ಣನ್ ಅಪರಾಧಿ ಎಂದು ಅಬುಧಾಬಿ ನ್ಯಾಯಾಲಯ 2013ರಲ್ಲಿ ಕೃಷ್ಣನ್ ಗೆ ಕೃಷ್ಣನ್ಗೆ ಮರಣದಂಡನೆ/ ಜೀವಾನವಧಿ ಶಿಕ್ಷೆ ವಿಧಿಸಿತು.

     ಕ್ರಷ್ಣನನ್ನು ಬಿಡಿಸಲು ಆತನ  ಕುಟುಂಬಸ್ಥರು ಅವರನ್ನು ಬಿಡುಗಡೆಗೆ ಪ್ರಯತ್ನ ಮಾಡಿದರೂ ಸಾಧ್ಯವಾಗಿಲ್ಲ

ಈ ಬಳಿಕ ಲೂಲು ಗ್ರೂಪ್ ಮುಖ್ಯಸ್ಥ ಯೂಸುಫ್ ಅಲಿಗೆ ವಿಚಾರ ತಿಳಿದು ಅವರು ಮೃತ ಸುಡಾನ್ ಬಾಲಕನ ಕುಟುಂಬಸ್ಥರ ಜೊತೆ ಮಾತುಕತೆಯನ್ನು ನಡೆಸಿ (ಗಲ್ಫನಲ್ಲಿ ನ್ಯಾಯಲಯದಲ್ಲಿ ಶಿಕ್ಶೆಯಾದರೂ, ಪ್ರಕರಣಕ್ಕೆ ಸಂಬಂಧ ಪಟ್ಟವರು, ಸೇರಿ ರಾಜಿಯಾಗಿ, ಅಪಘಾತವಾಗಿ ಸತ್ತವರ ಕುಟುಂಬಕ್ಕೆ ಪರಿಹಾರವಾಗಿ (ರಕ್ತದ ಪರಿಹಾರ) ಹಣ ನೀಡಿದರೆ ಅಪರಾಧಿಗೆ ಬಿಡುಗಡೆಯಾಗುವ ಅವಕಾಶವಿದೆ, ಆ ಮೊತ್ತ ಅಲ್ಪ ಮೊತ್ತವಾಗದೆ, ಬ್ರಹತ್ ಮೊತ್ತ ಕೊಡ ಬೇಕಾಗಿ ಬರುವುದು, ಈ ಪ್ರಕರಣದಲ್ಲಿ  ಸುಡಾನ್ ಬಾಲಕನ ಕಡೆಯವರಿಗೆ, ಯೂಸುಫ್ ಅಲಿಗ ಅವರು 1 ಕೋಟಿ ಪರಿಹಾರವನ್ನು ನೀಡುವುದಾಗಿ ಒಪ್ಪಂದ ಮಾಡಿದ್ದಾರೆ.

     ಇದರಿಂದಾಗಿ ಕೃಷ್ಣನ್ ಬಿಡುಗಡೆಗೆ ಅಬುಧಾಬಿ ಪೊಲೀಸರು ಒಪ್ಪಿಕೊಂಡಿದ್ದು,. ಶೀಘದಲ್ಲೆ ಕಾನೂನು ಪ್ರಕ್ರಿಯೆಗಳು ಮುಗಿದು ಕೃಷ್ಣನ್ ಕೇರಳಕ್ಕೆ ವಾಪಾಸಾಗಲಿದ್ದಾರೆ ಎಂದು ತಿಳಿದು ಬಂದಿದೆ.