ಹಳ್ಳಿ ಬೇರು ಕುಗ್ರಾಮದ ಸ.ಹಿ.ಪ್ರಾ.ಶಾಲೆಗೆ ರೋಟರಿ ಕ್ಲಬ್ ದಕ್ಷಿಣ ಕುಂದಾಪುರ ಇವರ ಭರ್ಪೂರ ಸಹಾಯ ಹಸ್ತ

JANANUDI.COM NETWORK

ಹಳ್ಳಿ ಬೇರು ಕುಗ್ರಾಮದ ಸ.ಹಿ.ಪ್ರಾ.ಶಾಲೆಗೆ ರೋಟರಿ ಕ್ಲಬ್ ದಕ್ಷಿಣ ಕುಂದಾಪುರ ಇವರ ಭರ್ಪೂರ ಸಹಾಯ ಹಸ್ತ

ಕುಂದಾಪುರ, ಸೆ.13: ಕೊಲ್ಲೂರಿನಿಂದ ಸುಮಾರು 7 ಕಿ.ಮಿ ದೂರ ಇರುವ ಹಳ್ಳಿ ಬೇರು ಎಂಬ ಕುಪ್ರದೇಶದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಕ್ಲಬ್ ದಕ್ಷಿಣ ಕುಂದಾಪುರ ಇವರು ಭರ್ಪೂರ ಸಹಾಯ ಹಸ್ತ ನೀಡಿ ಸುಮಾರು 75 ಸಾವಿರ ರೂಪಾಯಿ ಮೌಲ್ಯದ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳುವ ಬೆಂಚು ಮತ್ತು ಬರೆಯಲು ಪುಸ್ತಕ ಇಡಲು ಬೆಂಚುಗಳನ್ನು ಹಾಗೇ ಕೈತೊಳೆಯುವ ಉದ್ದನೆಯ ಸ್ಟೀಲ್ ವಾಶ್ ಬೇಶಿನ್ ಹಾಗೇ ನೂರಾರು ಪುಸ್ತಕಗಳನ್ನು ಮತ್ತು ಅವಗಳನ್ನಿಡುವ ಸ್ಟ್ಯಾಂಡನ್ನು ಸೆಪ್ಟಂಬರ್ 13 ರಂದು ಕೊಡುಗೆಯನ್ನು ನೀಡಿದರು .

     ಆಶ್ಚರ್ಯದ ಸಂಗತಿಯೆಂದರೆ  ಬೆಂಚು ಡೆಸ್ಕಗಳ ಈ ಕೊಡುಗೆಯನ್ನು ಅಮೇರಿಕದಲ್ಲಿರುವ ಕಿರಿಯ ವಿದ್ಯಾರ್ಥಿಗಳು ಕುಂದಾಪುರ ಮೂಲದ ಮಕ್ಕಳಾದ ಸುಧನ್ವಾ ಮೂರ್ತಿ, ಸುದಿಪ್ತ ಮೂರ್ತಿ ಮತ್ತು ಉತ್ತರ ಭಾರತದ ಐಶ್ವರ್ಯಾ ಮರ್ಚಂಟ್, ವಿನಸ್ ಮರ್ಚಂಟ್ ತಮ್ಮ ಪಾಕೇಟ್ ಮನಿ ಉಳಿಸಿ ಹಾಗೂ ಅವರ ಜೊತೆ ನ್ಯೂ ಜೆರ್ಸಿಯ ಗಣಿತ ಅದ್ಯಾಪಕಿ ಕ್ರಿಶ್ಟಿನಾ ಶೂ ಇವರ ಸಹಾಯ ಹಸ್ತದಿಂದ ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಈ ಕೊಡುಗೆ ನೀಡಿದ್ದಾಗಿದೆ.

     ಕೊಡುಗೆಯನ್ನು ಹಸ್ತಾತಂರಿಸಿದ ರೋಟರಿ ಅಧ್ಯಕ್ಷ ದೇವರಾಜ್ ಕೆ. ’ಇಂತಹ ಒಂದು ಉರು ಇದೆ ಎಂದು ನನಗೆ ತಿಳಿದಿರಲಿಲ್ಲಾ, ಇಲ್ಲಿ ಯಾವ ಸವಲತ್ತುಗಳು ಇಲ್ಲಾ, ಸರಿಯಾದ ರಸ್ತೆ ಇಲ್ಲದ ಕುಗ್ರಾಮ. ನಮ್ಮ ರೋಟರಿಯವರು 2015 ರಲ್ಲಿ ಈ ಶಾಲೆಗೆ ಕೊಡುಗೆ ನೀಡಲು ಆರಂಭಿಸಿದ್ದು ತಿಳಿದು, ಕುಪ್ರದೇಶದಲ್ಲಿರುವ ಈ ಶಾಲೆಯಲ್ಲಿ ಮಕ್ಕಳಿಗೆ ಕುಳಿತುಕೊಂಡು ಪಾಠ ಕೇಳುವ ಕೊರತೆ ಅರಿತು ಬೆಂಚು ಡೆಸ್ಕಗಳನ್ನು ನೀಡುವ ಯೋಜನೆ ಹಮ್ಮಿ ಕೊಳ್ಳಲಾಯಿತು. ರೋಟರಿ ಎಲ್ಲಿ ಅವಶ್ಯಕತೆ ಇದೆಯೊ ಅಲ್ಲಿ ಪ್ರಾಮುಖ್ಯತೆ ನೀಡುತ್ತದೆ’ ಎಂದರು.

     ರೋಟರಿ ಝೋನ್ ೧ ರ ಅಸಿಸ್ಟೆಂಟ್ ಗವರ್ನರ್ ರವಿರಾಜ್ ಶೆಟ್ಟಿ ’ವಿದ್ಯಾರ್ಥಿಗಳಿಗಾಗಿ ಸಿದ್ದ ಪಡಿಸಿದ ಕೈ ತೊಳೆಯುವ ವಾಶ್ ಬೆಶೀನನ್ನು ಉದ್ಘಾಟಿಸಿ ’ಈ ಶಾಲೆಗೆ ಸಹಾಯ ಹಸ್ತ ನೀಡಲು ಅತೀವ ಸಂತೋಷವಾಗುತ್ತದೆ, ತುಂಬ ಕ್ಲಿಷ್ಟಕರವಾದ ಈ ಪ್ರದೇಶದ  ಶಾಲೆಗೆ ಕೊಡುಗೆ ನೀಡುವುದು ಬಹಳ ಅವಶ್ಯವಾಗಿದೆ, ಇಲ್ಲಿ ಕಲಿಸುವ ಶಿಕ್ಷರು ನಿಜವಾದ ಶಿಕ್ಷಕರು, ಇಂತಹ ದುರ್ಗಮ, ಭಯದ ವಾತವರಣ ಇರುವ ಹಾದಿಯಲ್ಲಿ ನಡೆದುಕೊಂಡು ಬಂದು ವಿಧ್ಯಾ ದಾನ ಮಾಡುವುದು ಶ್ಲಾಘನೀಯ ನುಡಿದರು.  ಲೈಬ್ರೆರಿಗೆ ದಾನ ನೀಡಿದ ನಿವ್ರತ್ತ ಶಿಕ್ಷಕಿ ನಂದಾ ನಾಯಕ್ ಲೈಬ್ರೆರಿಯನ್ನು ಉದ್ಘಾಟಿಸಿ ಶುಭ ಕೊರೀದರು.

    ಮಾಜಿ ರೋ. ಅಧ್ಯಕ್ಷ ವಾಸುದೇವ ಕಾರಂತ ’ನನ್ನ ಅಧ್ಯಕ್ಷತೆಯ ಸಮಯದಲ್ಲಿ ಸ್ಮಾರ್ಟ್ ಕ್ಲಾಸ್ ಕೊಡುಗೆಯನ್ನು ನೀಡಿದ್ದು ಅದನ್ನು ಸಮರ್ಪಕವಾಗಿ ಉಪಯೋಗಿಸಿದ್ದಿರಿ ಎಂದು ಶ್ಲಾಘಿಸಿದರು. ರೋ| ರೋ| ಮನೋಹರ್ ಭಟ್ ಬೆಂಚು ಡೆಸ್ಕಗಳ ಕೊಡುಗೆಯನ್ನು ಅಮೇರಿಕದ ವಿದ್ಯಾರ್ತ್ಗಿಗಳು ತಮ್ಮ ಪಾಕೆಟ್ ಮನಿ ಉಳಿಸಿ ನಿಮಗೆ ಕೊಡುಗೆ ನೀಡಿದ್ದು, ಹಾಗೇಯೆ ಮುಂದೊಂದು  ದಿನ ನೀವುಗಳು ಹಾಗೇ ದಾನಿಗಳಾಗ ಬೇಕು ಎಂದರು. ಸುಧನ್ವಾ ಮೂರ್ತಿ, ಸುದಿಪ್ತ ಮೂರ್ತಿ ಮಾವನಾದ ರೋ| ರಮಾನಂದ ಕಾರಂತರ ಮೂಲಕ ಈ ಸಹಾಯ ಹಸ್ತ ಲಭಿಸಿದ್ದು ಅವರು ಶುಭ ನುಡಿಗಳನ್ನಾಡಿದರು.  ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಅಶೋಕ ಶಾಲೆ ರಸ್ತೆಯ ದಾರಿ ದೀಪದ ಬಗ್ಗೆ ಮತ್ತು ಶಾಲೆಗೆ ಕೊರತೆ ಇರುವ ವಿಜ್ನಾಪನ ಪತ್ರವನ್ನು ರೋಟರಿ ಅಧ್ಯಕ್ಷ ದೇವರಾಜ್ ಕೆ ಇವರಿಗೆ ನೀಡಿದರು.  ರೋಟರಿ ಕ್ಲಬ್ ಕಾರ್ಯದರ್ಶಿ ಶೋಭಾ ಭಟ್  ಉಪಸ್ಥಿತರಿದ್ದರು ವಿದ್ಯಾರ್ಥಿಗಳು ಪೋಷಕರಿದ್ದ ಕಾರ್ಯಕ್ರಮವನ್ನು ಶಿಕ್ಷಕ ಹರೀಶ್ ಕುಮಾರ್ ನಡೆಸಿಕೊಟ್ಟರು, ಮುಖ್ಯೋಪಾಧ್ಯ ಕೇಶವ ಮೂರ್ತಿ ರೋಟರಿ ಕ್ಲಬ್ ಕೊಡುಗೆಯನ್ನು ಉತ್ತಮವಾಗಿ ಬಳಸಿಕೊಂಡಿದ್ದೆವೆ ಎನ್ನುತ್ತಾ ರೋಟರಿ ಕ್ಲಬಿನ ಕೊಡುಗೆಗಳಿಗೆ ಶ್ಲಾಘಿಸಿ ವಂದಿಸಿದರು.