ಸ್ವಚ್ಛತೆಯನ್ನು ನಮ್ಮದಾಗಿಸಿಕೊಂಡು ಅದನ್ನು ಕಾಪಾಡಿಕೊಳ್ಳಲು ಸರಿಯಾದ ಕ್ರಮ ತೆಗೆದುಕೊಳ್ಳುವುದು ಅಗತ್ಯ :ಡಾ.ಅಶ್ವಿನಿ ಕುಮಾರ್

JANANUDI.COM NETWORK

 

 

 

ಸ್ವಚ್ಛತೆಯನ್ನು ನಮ್ಮದಾಗಿಸಿಕೊಂಡು ಅದನ್ನು ಕಾಪಾಡಿಕೊಳ್ಳಲು ಸರಿಯಾದ ಕ್ರಮ ತೆಗೆದುಕೊಳ್ಳುವುದು ಅಗತ್ಯ :ಡಾ.ಅಶ್ವಿನಿ ಕುಮಾರ್

 

ಕುಂದಾಪುರ: ಸ್ವಚ್ಛತೆಯನ್ನು ನಮ್ಮದಾಗಿಸಿಕೊಳ್ಳಬೇಕು. ಹಾಗೂ ಅದನ್ನು ಕಾಪಾಡಿಕೊಳ್ಳಲು ಸರಿಯಾದ ಕ್ರಮ ತೆಗೆದುಕೊಳ್ಳುವುದು ಅಗತ್ಯ. ಎಂದು ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಅಡಿಶ್‍ನಲ್ ಪ್ರಾಧ್ಯಾಪಕರಾದ ಡಾ.ಅಶ್ವಿನಿ ಕುಮಾರ್ ಹೇಳಿದರು.
ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ರಾಧಾಬಾಯಿ ಸಭಾಂಗಣದಲ್ಲಿ ಕಾಲೇಜಿನ ಯುತ್ ರೆಡ್‍ಕ್ರಾಸ್, ರಾಷ್ಟ್ರೀಯ ಸೇವಾ ಯೋಜನೆ ಮತ್ತು ರಸಾಯನಶಾಸ್ತ್ರ ವಿಭಾಗಗಳ ಸಹಯೋಗದಲ್ಲಿ ಕೋವಿಡ್-19 ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಮಾಂಸಹಾರ ತಿನ್ನುವುದರಿಂದ ಯಾವುದೇ ಕಾಯಿಲೆ ಅಥವಾ ಕೊರೊನಾ ವೈರಸ್ ಬರುವ ಸಾಧ್ಯತೆ ಇಲ್ಲ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದಲ್ಲದೇ ದೇಶದ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥರಾದ ನಿಶಾ, ಯುಥ್ ರೆಡ್‍ಕ್ರಾಸ್ ವಿಂಗ್ ಅಧಿಕಾರಿ ಪ್ರೊ.ಸತ್ಯನಾರಾಯಣ, ಮತ್ತು ಮತ್ತು ಎನ್.ಎಸ್.ಎಸ್ ಅಧಿಕಾರಿ ಅರುಣ ಎ.ಎಸ್.ಉಪಸ್ಥಿತರಿದ್ದರು.
ಯುಥ್ ರೆಡ್‍ಕ್ರಾಸ್ ವಿಂಗ್ ಅಧಿಕಾರಿಣಿ ವಿದ್ಯಾರಾಣಿ ಕಾರ್ಯಕ್ರಮ ನಿರ್ವಹಿಸಿದರು.