ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ.ನ.3: ದಿನಾಂಕ : 6-11-2020 ರಿಂದ 8-11-2020 ರ ವರೆಗೂ 14 ವರ್ಷ 16,18,20 ವರ್ಷ ವಯೋ ಮಿತಿಯ ಕರ್ನಾಟಕ ರಾಜ್ಯದಿಂದ ಸೌತ್ ಜೋನ್ ಅಥ್ಲೆಟಿಕ್ ಕ್ರೀಡಾಕೂಟವನ್ನು ಆಯೋಜಿಸಲು ಕರ್ನಾಟಕ ಅಥ್ಲೆಟಿಕ್ ಅಸೋಷಿಯೇಷನ್ ರವರು ನಮ್ಮ ಜಿಲ್ಲೆಯಲ್ಲಿ ಆಯೋಜಿಸಲು ಅನುಮತಿಯನ್ನು ನೀಡಿದ್ದು, ಅದರಂತೆ ಮೇಲ್ಕಂಡ ದಿನಾಂಕದಲ್ಲಿ ಕ್ರೀಡಾಕೂಟವನ್ನು ನಡೆಸಬೇಕಾಗಿತ್ತು.
ಆದರೆ ಕೋವಿಡ್ 19 ಪುದುಚೆರಿಯಲ್ಲಿ ಹೆಚ್ಚಾಗಿ ಇರುವ ಕಾರಣ ನ್ಯಾಷನಲ್ ಸೌತ್ ಜೋನ್ ಕ್ರೀಡಾಕೂಟವನ್ನು ಪುಧುಚೇರಿ ರಾಜ್ಯದ ಅಥ್ಲೆಟಿಕ್ ಅಸೋಷಿಯೇಷನ್ ರವರು ಈ ವರ್ಷ ಕ್ರೀಡಾಕೂಟವನ್ನು ನಡೆಸಲು ಆಗುವುದಿಲ್ಲ ಎಂದು ತಿಳಿಸಿದ ಕಾರಣ ಎ.ಎಫ್.ಐ ನವದೆಹಲಿ ರವರು ಮುಂದಿನ ದಿನಾಂಕದ ವರೆಗೂ ತಾತ್ಕಲಿಕವಾಗಿ ಮುಂದೂಡಿರುವ ಕಾರಣ ರಾಜ್ಯ ಮಟ್ಟದ ಕ್ರೀಡಾಕೂಟವನ್ನು ಮುಂದೂಡಲಾಗಿದೆ. ನಮ್ಮ ಜಿಲ್ಲೆಯ ಎಲ್ಲಾ ಕ್ರೀಡಾಪಟುಗಳು ಆತಂಕಕ್ಕೆ ಒಳಗಾಗದೇ ತರಬೇತಿಯನ್ನು ಮುಂದುವರಿಸಿ ಕೊಂಡುಹೋಗಲು ಸಂಸ್ಥೆಯ ಕೋಲಾರ ಜಿಲ್ಲಾ ಕಾರ್ಯದರ್ಶಿ ಹಾಗೂ ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್ನಿನ ಪೈನಾನ್ಸ್ ಚೇರ್ಮನ್ ಕೆ.ಜಯದೇವ್ ರವರು ತಿಳಿಸಿದ್ದಾರೆ.