ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ:- ಭಾವೈಕ್ಯತೆ ಭಾರತ ನಿರ್ಮಾಣಕ್ಕೆ ಅಡಿಪಾಯ ಹಾಕಿದ ಮಹನೀಯರಲ್ಲಿ ನಾ.ಸು.ಹರ್ಡೀಕರ್ ಪ್ರಮುಖರೆಂದು ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಅಭಿಪ್ರಾಯಪಟ್ಟರು.ನಗರದ ಭಾರತ ಸೇವಾದಳ ಜಿಲ್ಲಾ ಕಚೇರಿಯಲ್ಲಿ ಬುಧವಾರ ಸೇವಾದಳ ಸಂಸ್ಥಾಪಕ ಹರ್ಡೀಕರ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಯುವಕರನ್ನು ಶಿಸ್ತುಬದ್ಧ ಸಂಘಟನೆ ಮೂಲಕ ಸಜ್ಜುಗೊಳಿಸಲು ನಾ.ಸು.ಹರ್ಡೀಕರ್ ಹಿಂದೂಸ್ತಾನ್ ಸೇವಾದಳವನ್ನು ಮಹಾತ್ಮ ಗಾಂ„ೀಜಿ ತತ್ವಗಳಡಿ ಸ್ಥಾಪಿಸಿದ್ದರು. ಆನಂತರ ಬೇಲೂರು ಮಹಾಸಮಾವೇಶದಲ್ಲಿ ಹರ್ಡೀಕರ್ ಹಿಂದೂಸ್ತಾನ್ ಸೇವಾದಳವನ್ನು ಭಾರತ ಸೇವಾದಳವನ್ನಾಗಿ ರಾಜಕೀಯ ಪಕ್ಷಾತೀತವಾಗಿ ರೂಪಿಸಿ ಮಕ್ಕಳಲ್ಲಿ ಶಿಸ್ತು, ಸಂಯಮ, ದೇಶಭಕ್ತಿ, ಸೇವಾಮನೋಭಾವನೆ ಮೂಡಿಸಲು ರೂಪಿಸಿದರೆಂದು ವಿವರಿಸಿದರು.
ಹರ್ಡೀಕರ್ ಹಾಕಿಕೊಟ್ಟ ಹಾದಿಯಲ್ಲಿ ಸಾಗಿದಾಗ ಮಾತ್ರವೇ ದೇಶದ ಐಕ್ಯತೆ ಕಾಪಾಡಲು ಸಾಧ್ಯ ಆದ್ದರಿಂದ ಪ್ರತಿಯೊಂದು ಶಾಲೆಯಲ್ಲಿಯೂ ಸೇವಾದಳ ಘಟಕವನ್ನು ಸ್ಥಾಪಿಸಿ ಮಕ್ಕಳಲ್ಲಿ ದೇಶಪ್ರೇಮ ತುಂಬಿಸಬೇಕೆಂದರು.
ಸೇವಾದಳ ಉಪಾಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ, ಹರ್ಡೀಕರ್ ಸ್ವಾತಂತ್ಯ್ರ ಪೂರ್ವ ಹಾಗೂ ನಂತರದಲ್ಲಿಯೂ ಶಿಸ್ತಿನ ಜೀವನ ನಡೆಸುವ ಮೂಲಕ ತಮ್ಮ ಜೀವನವನ್ನೇ ದೇಶ ಸೇವೆಗಾಗಿ ಮುಡಿಪಾಗಿಟ್ಟವರಾಗಿದ್ದರೆಂದರು.
ಸೇವಾದಳ ಮಾಲೂರು ತಾಲೂಕು ಅಧ್ಯಕ್ಷ ಬಹಾದ್ದೂರ್ ಸಾಬ್ ಮಾತನಾಡಿ, ಸರ್ವಧರ್ಮ ಪ್ರಾರ್ಥನೆ ಹಾಗೂ ಗೀತೆಗಳ ಮೂಲಕ ಹರ್ಡೀಕರ್ ಭಾವೈಕ್ಯತೆಯನ್ನು ಮೂಡಿಸಿ ದೇಶದ ಒಗ್ಗಟ್ಟನ್ನು ಕಾಪಾಡಲು ಸಹಕರಿಸಿದರೆಂದರು.
ಇದೇ ಸಂದರ್ಭದಲ್ಲಿ ಸೇವಾದಳದ ಕಾರ್ಯದರ್ಶಿಯಾಗಿ ರೋಟರಿ ಸೆಂಟ್ರಲ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸುಧಾಕರ್ರನ್ನು ಸೇವಾದಳ ಸಮಿತಿಯಿಂದ ಹಾಗೂ ಶ್ರೀಗೋಕುಲ ಮಿತ್ರಬಳಗದಿಂದ ಸನ್ಮಾನಿಸಲಾಯಿತು.
ಜಿಲ್ಲಾ ಸಮಿತಿ ಸಭೆಯಲ್ಲಿ ಮುಂದಿನ ದಿನಗಳಲ್ಲಿ ಸೆ.8 ರಂದು ವಿಶ್ವ ಸಾಕ್ಷರತಾ ದಿನಾಚರಣೆ ಹಾಗೂ ಅ.2 ರಂದು ಗಾಂ„ ಜಯಂತಿಯನ್ನು ಸೇವಾದಳದಿಂದ ನಡೆಸುವ ಕುರಿತು ಚರ್ಚಿಸಲಾಯಿತು.
ಅಕ್ಟೋಬರ್ನಲ್ಲಿ ಶಾಲೆಗಳ ಆರಂಭದ ನಂತರ ಶಾಲಾ ಕಾಲೇಜುಗಳಲ್ಲಿ ಸೇವಾದಳ ಚಟುವಟಿಕೆಗಳನ್ನು ಪುನರಾರಂಭಿಸಿ, ಭಾವೈಕ್ಯತಾ ಮೇಳ, ಶಿಕ್ಷಕರ ಮಿಲಾಪ್ ಶಿಬಿರ, ಬ್ಯಾಂಡ್ಸೆಟ್ ತರಬೇತಿ ಶಿಬಿರ ಇತ್ಯಾದಿಗಳನ್ನು ನಡೆಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಸೇವಾದಳ ಪದಾ„ಕಾರಿಗಳಾದ ಎಸ್.ಸುಧಾಕರ್, ವಿ.ಪಿ.ಸೋಮಶೇಖರ್, ಆರ್.ಶ್ರೀನಿವಾಸ್, ರವಿಕುಮಾರ್, ರೆಡ್ಡಪ್ಪ, ನಾರಾಯಣಸ್ವಾಮಿ, ವೈ.ಶಿವಕುಮಾರ್, ಸಂಪತ್ಕುಮಾರ್, ಬೈರೇಗೌಡ, ಕೆ.ಜಯದೇವ್, ಆರ್.ಗೋಪಾಲ್, ಮುನಿವೆಂಕಟ್, ಪಾಲ್ಗುಣ ಜಿಲ್ಲಾ ಸಂಘಟಕ ದಾನೇಶ್ ಇತರರು ಹಾಜರಿದ್ದರು.
ಸರ್ವಧರ್ಮ ಪ್ರಾರ್ಥನೆಯಿಂದ ಆರಂಭವಾದ ಸಭೆಯು ರಾಷ್ಟ್ರಗೀತೆಗಾಯನದೊಂದಿಗೆ ಮುಕ್ತಾಯವಾಯಿತು.