ವರದಿ: ವಾಲ್ಟರ್ ಮೊಂತೇರ
ಸಿಐ ಬೆಳ್ಮಣ್ಣು : ಯುವ ಸಂಗಮ
ಬೆಳ್ಮಣ್ಣು ಜೇಸಿಐನ ನೇತೃತ್ವದಲ್ಲಿ ಬೆಳ್ಮಣ್ಣು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಯವ ಸಂಗಮ ಕಾರ್ಯಕ್ರಮ ಜರಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ಮಣ್ಣು ಜೇಸಿಐನ ಅಧ್ಯಕ್ಷೆ ಶ್ವೇತಾ ಸುಭಾಸ್ ವಹಿಸಿದ್ದರು. ನಂದಳಿಕೆ ಚಾವಡಿ ಅರಮನೆಯ ಸುಹಾಸ್ ಹೆಗ್ಡೆಯವರು ಸಮಾರಂಭವನ್ನು ಉದ್ಘಾಟಿಸಿದರು. ಉಡುಪಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ರೋಶನ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪೂರ್ವ ವಲಯಾಧ್ಯಕ್ಷ ರಾಜೇಂದ್ರ ಭಟ್, ವಲಯಾಧಿಕಾರಿ ಸುಭಾಸ್ ಕುಮಾರ್, ನಿಕಟ ಪೂರ್ವಾಧ್ಯಕ್ಷ ಪ್ರದೀಪ್ ಆಚಾರ್ಯ, ಕಾರ್ಯಕ್ರಮದ ನಿರ್ದೇಶಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಕಾರ್ಯದರ್ಶಿ ಸರಿತಾ ದಿನೇಶ್ ಸುವರ್ಣ, ಜೇಸಿ ಸಪ್ತಾಹದ ನಿರ್ದೇಶಕ ಸುಧೀರ್ ಕಾಮತ್, ಸಹ ನಿರ್ದೇಶಕ ಅವಿನಾಶ್ ಸಾಂತೂರು, ಜೂನಿಯರ್ ಜೇಸಿ ಅಧ್ಯಕ್ಷ ದೀಕ್ಷಿತ್ ಕುಮಾರ್ ಮೊದಲಾದವರಿದ್ದರು.
ಸಮಾರಂಭದಲ್ಲಿ ಸ್ಥಳೀಯ 25 ಸಂಘ-ಸಂಸ್ಥೆಗಳ ಅಧ್ಯಕ್ಷರು ಮತ್ತು ಸದಸ್ಯರು ಭಾಗವಹಿಸಿದ್ದರು. ಸಂಘ-ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಜೇಸಿ ಪೂರ್ವ ವಲಯಾಧ್ಯಕ್ಷ ರಾಜೇಂದ್ರ ಭಟ್ ಸಂವಾz