ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಸಾಲಕ್ಕೆ ಜಮಾ ಮಾಡಿಕೊಳ್ಳಬಾರದು ಹಾಗೂ ಬ್ಯಾಂಕ್‍ಗಳಿಂದ ರೈತರಿಗೆ ನೋಟಿಸ್ ನೀಡಬಾರದೆಂದು ರೈತ ಸಂಘದಿಂದ ಒತ್ತಾಯ
ಕೋಲಾರ, ಡಿ.02: ಸರ್ಕಾರದಿಂದ ರೈತರಿಗೆ ಬರುವ ಸಬ್ಸಿಡಿ, ಪಿಂಚಣಿ ಹಾಗೂ ಹಾಲಿನ ಬಿಲ್ ಹಣವನ್ನು ಕಾರಣಕ್ಕೂ ಸಾಲಕ್ಕೆ ಜಮಾ ಮಾಡಿಕೊಳ್ಳಬಾರದು ಹಾಗೂ ಬ್ಯಾಂಕ್‍ಗಳಿಂದ ರೈತರಿಗೆ ನೋಟಿಸ್ ನೀಡಬಾರದೆಂದು ರೈತ ಸಂಘದಿಂದ ಲೀಡ್ ಬ್ಯಾಂಕ್ ಮ್ಯಾನೇಜರ್‍ಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಮನವಿ ನೀಡಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಸಾವಿರಾರು ಕೋಟಿ ಬ್ಯಾಂಕ್‍ಗಳಲ್ಲಿ ಸಾಲ ಮಾಡಿ ದೇಶ ಬಿಟ್ಟು ಹೋಗುವ ದೊಡ್ಡ ದೊಡ್ಡ ಕಾರ್ಪೋರೇಟ್ ಕಂಪನಿ ಮಾಲೀಕರ ಮೇಲೆ ತಮ್ಮ ಪ್ರತಾಪ ತೋರಿಸದ ಬ್ಯಾಂಕ್ ಅಧಿಕಾರಿಗಳು ಗುಬ್ಬಚ್ಚಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಕೂಲಿ ಕಾರ್ಮಿಕರ ರೈತರ ವಿದವೆಯರಿಗೆ ಸರ್ಕಾರದಿಂದ ಬರುವ ಅಲ್ಪ ಸ್ವಲ್ಪ ಸಬ್ಸಿಡಿ ಹಾಗೂ ಮತ್ತಿತರ ಹಣವನ್ನು ಬ್ಯಾಂಕ್ ಅಧಿಕಾರಿಗಳು ಸಾಲಕ್ಕೆ ಜಮಾ ಮಾಡಿಕೊಳ್ಳುವ ಜೊತೆಗೆ ಇರುವ ಅಲ್ಪ ಸ್ವಲ್ಪ ಸಾಲಕ್ಕೆ ನೂರೊಂದು ಬಾರಿ ನೋಟಿಸ್ ಜಾರಿ ಸ್ವಾಭಿಮಾನಿ ರೈತರ ಜೀವನದ ಜೊತೆ ಚೆಲ್ಲಾಟವಾಡುವ ಜೊತೆಗೆ ಒಡವೆ, ಮತ್ತಿತರ ಸಾಲಗಳನ್ನು ಪಡೆಯಲು ವರ್ಷಾನುಗಟ್ಟಲೆ ಬ್ಯಾಂಕಿಗೆ ರೈತರು ಅಲೆದಾಡಿಸುವುದು ಒಂದುಕಡೆಯಾದರೆ ಮತೊಂದು ಕಡೆ ಸರ್ಕಾರ ಯಾವುದೇ ಕಾರಣಕ್ಕೂ ರೈತರಿಗೆ ನೋಟಿಸ್ ನೀಡಬಾರದು ವಿವಿಧ ಸರ್ಕಾರದಿಂದ ಬರುವ ರೈತರ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳಬಾರದೆಂದು ಆದೇಶವಿದ್ದರೂ ನೋಟಿಸ್ ಜಾರಿ ಮಾಡಿ ಬರುವ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಂಡು ರೈತ ವಿರೋದಿ ದೋರಣೆ ಅನುಸರಿಸುತ್ತಿರುವ ಬ್ಯಾಂಕ್ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಂಡು ರೈತರಿಗೆ ನ್ಯಾಯ ಕೊಡಿಸಬೇಕೆಂದು ಅಗ್ರಹಿಸಿದರು
ಮನವಿ ಸ್ವೀಕರಿಸಿ ಮಾತನಾಡಿದ ವ್ಯವಸ್ಥಾಪರು ಸರ್ಕಾರದಿಂದ ರೈತರು ಕೂಲಿ ಕಾರ್ಮಿಕರು, ವಿಧವೆಯರಿಗೆ ಬರುವ ಹಣ ಹಾಗೂ ಹಾಲಿನ್ ಬಿಲ್ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳಬಾರದೆಂಬ ಸರ್ಕಾರದ ಆದೇಶದ ಬಗ್ಗೆ ಎಲ್ಲಾ ಬ್ಯಾಂಕ್‍ಗಳಿಗೆ ನೋಟಿಸ್ ಜಾರಿ ಮಾಡಿದ್ದೇವೆ. ಆದರೂ ನೋಟಿಸ್ ಹಾಗೂ ಸಾಲಕ್ಕೆ ಸಬ್ಸಿಡಿ ಹಣವನ್ನು ಜಮಾ ಮಾಡಿಕೊಳ್ಳುವ ಬ್ಯಾಂಕ್ ವ್ಯವಸ್ಥಾಪಕರ ವಿರುದ್ದ ಕ್ರಮ ಕೈಗೊಳ್ಳುವ ಭರವಸೆ ನೀಡಿದರು
ಮನವಿ ನೀಡುವಾಗ ಜಿಲ್ಲಾದ್ಯಕ್ಷೆ ಎ.ನಳಿನಿ, ವಕ್ಕಲೇರಿ ಹನುಮಯ್ಯ, ಈಕಂಬಳ್ಳಿ ಮಂಜುನಾಥ್, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವೆಂಕಟೇಶಪ್ಪ, ಮುಂತಾದವರಿದ್ದರು.