ವರದಿ ಶಬ್ಬೀರ್ ಅಹಮದ್ ಶ್ರೀನಿವಾಸಪುರ
ಸಾರ್ವಜನಿಕರು ಸರ್ಕಾರಿ ನೌಕರ ನಿವೃತ್ತಿಯಾದ ಬಳಿಕವೂ ಗೌರವದಿಂದ ಕಾಣುವುದಾದರೆ, ಅವರ ಸೇವೆ ಸಾರ್ಥಕ:ಎಸ್.ಆನಂದ್
ಶ್ರೀನಿವಾಸಪುರ: ಸಾರ್ವಜನಿಕರು ಸರ್ಕಾರಿ ನೌಕರ ನಿವೃತ್ತಿಯಾದ ಬಳಿಕವೂ ಗೌರವದಿಂದ ಕಾಣುವುದಾದರೆ, ಅವರ ಸೇವೆ ಸಾರ್ಥಕವಾಗಿರುತ್ತದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ನಿವೃತ್ತರಾದ ಪಿಡಿಒ ಜಿ.ವಿ.ರಾಮಚಂದ್ರಪ್ಪ ಹಾಗೂ ಡಿ ಗ್ರೂಪ್ ನೌಕರ ಎಂ.ವಿ.ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಿ ಮಾತನಾಡಿ, ವಯೋನಿವೃತ್ತಿ ಹೊಂದಿರುವ ಇಬ್ಬರೂ ಸಹ ಶಿಸ್ತಿನಿಂದ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸಿದ್ದಾರೆ. ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.
ನಿವೃತ್ತರಾದ ಪಿಡಿಒ ಜಿ.ವಿ.ರಾಮಚಂದ್ರಪ್ಪ ಮಾತನಾಡಿ, ತಮ್ಮ ಸೇವಾವಧಿಯಲ್ಲಿ ಸಹಕರಿಸಿದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಅಭಿನಂದನೆ ಸಲ್ಲಿಸಿದರು.
ಕಚೇರಿ ವ್ಯವಸ್ಥಾಪಕ ಸುರೇಶ್, ವಿಜಯಮ್ಮ, ಪಿಡಿಒಗಳಾದ ನಾರಾಯಣಪ್ಪ, ಸಂಪತ್, ಚಿಕ್ಕಪ್ಪ, ರಾಮಪ್ಪ, ಜಗದೀಶ್, ಸುಬ್ರಮಣಿ, ಏಜಾಜ್ಪಾಷ, ಬೈರೆಡ್ಡಿ, ರಮೇಶ್, ಗೌಸ್ ಸಾಬ್, ಮಹರ್ ತಾಜ್ ಇದ್ದರು.