ವರದಿ: ವಾಲ್ಟರ್ ಮೊಂತೇರೊ
ಸಾಮಾಜಿಕ ಕಳಕಳಿಯ ಅಂಗವಾಗಿ : ಮಣಿಪಾಲ ಆರೋಗ್ಯ ಕಾರ್ಡಿನ ಮುಖ್ಯ ಉದ್ದೇಶ
ಮಣಿಪಾಲ, ಜೂನ್ 15: ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ ಮಣಿಪಾಲದ ಸಾಮಾಜಿಕ ಕಳಕಳಿಯ ಅಂಗವಾಗಿ 2000 ದಲ್ಲಿ ಶುರುವಾದ ಮಣಿಪಾಲ ಆರೋಗ್ಯ ಕಾರ್ಡಿನ ಮುಖ್ಯ ಉದ್ದೇಶ ಎಲ್ಲರಿಗೂ ಗುಣಮಟ್ಟದ ಚಿಕಿತ್ಸೆ ಕೈಗೆಟಕುವ ದರದಲ್ಲಿ ಸಿಗಬೇಕು. ಎಂಬುದಾಗಿದೆ. ಇದು ಎಲ್ಲಾ ಬಗೆಯ ಆರೋಗ್ಯ ಸೇವೆಗೆ ರಿಯಾಯಿತಿ ಸಿಗುತ್ತದೆ. ರಿಯಾಯಿತಿ ಸಿಗುವ ಸೌಲಭ್ಯಗಳಲ್ಲಿ ಕೆಲವೆಂದರೆ ವರ್ಷದಲ್ಲಿ ಎಷ್ಟೇ ಭಾರಿ ವೈಧ್ಯರ ಜೊತೆ ಸಮಾಲೋಚನೆ , ಪ್ರಯೋಗಾಲಯ ಪರೀಕ್ಷೆಗಳು, ಸಿಟಿ/ ಎಂ.ಆರ್.ಐ/ ಅಲ್ಟ್ರಾಸೌಂಡ್, ಹೊರರೋಗಿ ವಿಧಾನಗಳು, ದಾಖಲಾತಿ ಶುಲ್ಕ, ಹಾಸಿಗೆ ಮತ್ತು ನರ್ಸಿಂಗ ಸೇವೆ, ಸಾಮಾನ್ಯ ವಾರ್ಡಿನಲ್ಲಿ ವೈಧ್ಯಕೀಯ ಮತ್ತು ಶಸ್ತ್ರ ಚಿಕಿತ್ಸೆ , ಮಧುಮೇಹ ಪಾದ ತಪಾಸಣೆ, ಒಂದು ಸಣ್ಣ ಮೊತ್ತವನ್ನು ಪಾವತಿಸಿ ಸದಸ್ಯರಾಗಿ ಎಲ್ಲಾ ಬಗೆಯ ಸೌಲಭ್ಯವನ್ನು ಪಡೆಯಬಹುದು. ಆಸ್ಪತ್ರೆಯಲ್ಲಿ ಎಷ್ಟೇ ಮೊತ್ತ ಆದರು ರಿಯಾಯಿತಿ ಸೌಲಭ್ಯ ಸಿಗುತ್ತದೆ.
ಈ ಯೋಜನೆಯನ್ನು ಮೊದಲು ಕರಾವಳಿ ಕರ್ನಾಟಕದ ಮಣಿಪಾಲ ಸಮೂಹ ಆಸ್ಪತ್ರೆಗಳಾದ ಕೆ.ಎಂ.ಸಿ. ಮಣಿಪಾಲ, ಡಾ.ಟಿ.ಎಂ.ಎ.ಪೈ ಆಸ್ಪತ್ರೆ ಉಡುಪಿ , ಡಾ. ಟಿ. ಎಂ.ಎ.ಪೈ ಆಸ್ಪತ್ರೆ ಕಾರ್ಕಳ , ಕೆ.ಎಂ.ಸಿ ಆಸ್ಪತ್ರೆ ಅತ್ತಾವರ , ಮತ್ತು ಕೆ.ಎಂ.ಸಿ ಅಂಬೇಡ್ಕರ್ ಸರ್ಕಲ್ ಹಾಗೂ ಮಣಿಪಾಲ ಮತ್ತು ಮಂಗಳೂರಿನ 2 ದಂತ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಜಾರಿಗೊಳಿಸಲಾಯಿತು.
ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ್ ಶೆಟ್ಟಿ , “ ಮಣಿಪಾಲ ಆರೋಗ್ಯ ಕಾರ್ಡಿನ 19 ನೇ ವರ್ಷದಂದು2 ವರ್ಷದ ಕಾಲಾವಧಿ ಇರುವ ಸೌಲಭ್ಯದ ಜೊತೆಗೆ ಮಣಿಪಾಲ ಆಸ್ಪತ್ರೆ ಗೋವಾ ಕೂಡಾ ಆರೋಗ್ಯ ಕಾರ್ಡನ ವ್ಯಾಪ್ತಿಗೆ ಬಂದಿದೆ. ಕಾರ್ಡುದಾರರು ಈಗ ಮಣಿಪಾಲ , ಉಡುಪಿ, ಕಾರ್ಕಳ , ಮತ್ತು ಮಂಗಳೂರಿನ ಜೊತೆಗೆ ಗೋವಾದಲ್ಲಿಯೂ ಸೌಲಭ್ಯವನ್ನು ಪಡೆಯಬಹುದಾಗಿದೆ. ಕಾರ್ಡಿನ ಸದಸ್ಯತ್ವವು ಒಬ್ಬರಿಗೆ ರೂ. 250 , ಕುಟುಂಬಕ್ಕೆ ಅಂದರೆ ಕಾರ್ಡುದಾರರ ಹೆಂಡತಿ , 25 ಪ್ರಾಯದ ಒಳಗಿನ ಮಕ್ಕಳಿಗೆ ರೂ. 500 ಮತ್ತು ಕುಟುಂಬ + ಯೋಜನೆಗೆ ಅಂದರೆ ಕಾರ್ಡುದಾರ , ಹೆಂಡತಿ , 25 ಪ್ರಾಯದ ಒಳಗಿನ ಮಕ್ಕಳು ಮತ್ತು 4 ಪೋಷಕರು( ತಂದೆ , ತಾಯಿ , ಅತ್ತೆ , ಮಾವ) ರೂ 650 ನಲ್ಲಿ ಇದೊಂದು ಹೆಚ್ಚುವರಿ ಲಾಭವಾಗಿದೆ.
2 ವರ್ಷದ ಯೋಜನೆಯಲ್ಲಿ ಒಬ್ಬರಿಗೆ ರೂ. 400 , ಕುಟುಂಬಕ್ಕೆ ರೂ 700. , ಕುಟುಂಬ + ಯೋಜನೆಗೆ ರೂ 850 ಇರುತ್ತದೆ. ವೈಧ್ಯರ ಸಮಾಲೋಚನೆ 50% , ಪ್ರಯೋಗಾಲಯ ಪರೀಕ್ಷೆ 30 % , ಸಿಟಿ/ ಎಂ.ಆರ್.ಐ/ ಅಲ್ಟ್ರಾಸೌಂಡ್, ಹೊರರೋಗಿ ವಿಧಾನಗಳಲಿ ್ಲ25 % ,ಔಷಧಾಲಯಗಳಲ್ಲಿ 12 % ರವರೆಗೆ ರಿಯಾಯಿತಿ ಇರುತ್ತದೆ.
ಮಣಿಪಾಲ ಆರೋಗ್ಯ ಕಾರ್ಡನ್ನು ಒಂದು ಅಥವಾ ಎರಡು ವರ್ಷದ ಅವಧಿಗೆ ಎಷ್ಟು ಭಾರಿಯಾದರು ಉಪಯೋಗಿಸಬಹುದು.
ಪತ್ರಿಕಾಗೋಷ್ಟಿಯಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಸಹಾಯಕ ವ್ಯವಸ್ಥಾಪರಾದ ಶ್ರೀ ಕೃಷ್ಣಪ್ರಸಾದ ಬಿ.ಎಸ್. ಹಿರಿಯ ವ್ಯವಸ್ಥಾಪಕರಾದ ಶ್ರೀ. ಸಚಿನ್ ಕಾರಂತ್, ಮತ್ತು ಸಹಾಯಕರಾದ ಶ್ರೀ ಅನಿಲ್ ನಾಯ್ಕ್ ಉಪಸ್ಥಿತರಿದ್ದರು.
2019 ರ ನೋಂದಾವಣೆಗಾಗಿ ಅರ್ಜಿಗಳು ಕೆಳಕಂಡ ಅಧಿಕೃತ ಪ್ರತಿನಿಧಿಗಳ ಬಳಿ ಲಭ್ಯವಿದೆ.
ಕುಂದಾಪುರ : ನಾಗರಾಜ ಖಾರ್ವಿ : 991688616
ರಕ್ಷಿತ್ ಕುಮಾರ -9743366746 , ಸಚ್ಚಿದಾನಂದ – 9964028211 , ಸುರೇಶ ಪುತ್ರನ್- 9980546526, ರತ್ನಾಕರ- 9731893708, ಭದ್ರಯ್ಯ: 9448572666.