JANANUDI.COM NETWORK
ಸಂ.ಜೋಸೆಫ್ ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ವೈಲೆಟ್‍ರವರ ನಿವ್ರತ್ತಿ ಶಾಲೆಯಿಂದ ಬೀಳ್ಕೊಡುಗೆ ಸಮಾರಂಭ
ನನ್ನ ಆತ್ಮವು ದೇವರನ್ನು ಹೊಗಳುತ್ತದೆ,ಅವರು ನನ್ನಲ್ಲಿ ಮಹತ್ಕಾರ್ಯಗಳನ್ನು ಮಾಡಿರುತ್ತಾರೆ – ಸಿಸ್ಟರ್ ವೈಲೆಟ್
ಕುಂದಾಪುರ,ಮಾ.11: ‘ನನ್ನ ಆತ್ಮವು ದೇವರನ್ನು ಹೊಗಳುತ್ತದೆ,ಅವರು ನನ್ನಲ್ಲಿ ಮಹತ್ಕಾರ್ಯಗಳನ್ನು ಮಾಡಿರುತ್ತಾರೆ’ ಸಂತ ಜೋಸೆಫ್ ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ವೈಲೆಟ್ ಇವರು ವಯೊ ನಿವ್ರತ್ತಿ ಹೊಂದಿದ ಕಾರಣ ಅವರನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಕ ರಕ್ಷಕ ಸಂಘ, ಬೋಧಕ ಬೋಧಕೇತರ ಸಿಬಂದಿ ಮತ್ತು ವಿದ್ಯಾರ್ಥಿ ಸಮೂಹ ಇವರು ಎರ್ಪಡಿಸಿದ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಉತ್ತರಿಸಿದ ಸಿಸ್ಟರ್ ವೈಲೆಟ್ ಮೇಲಿನ ನುಡಿಗಳನ್ನಾಡಿದರು.
‘ನನ್ನಿಂದ ಆದ ಸಾಧನೆ ನನ್ನಿಂದ ಒಬ್ಬ್ಬಳಿಂದಲೇ ಆದುದಲ್ಲಾ, ಇತರರ ಸಹಕಾರದಿಂದ ಆಗಿದ್ದಾಗಿದೆ, ನಾನು ಶಿಕ್ಷಕಿಯಾಗುತ್ತೇನೆಂದು ಎಣಿಸಿರಲಿಲ್ಲಾ, ಕೇವಲ ಯೇಸುವಿನ ಸೇವೆಗಾಗಿ ಧರ್ಮಭಗಿಯಾಗಲು ಸೇರಿದ್ದೆ, ಇದೆಲ್ಲಾ ದೇವರ ಇಚ್ಛೆ ದೇವರ ಕ್ರಪೆಯಂತೆ ಶಿಕ್ಷಕಿಯಾದೆ, ಶಿಕ್ಷಕಿಯಾಗಿ ವಿದ್ರ್ಯಾಗಳಿಗೆ ಉತ್ತಮ ಶಿಕ್ಷಣ ನೀಡಲು, ಉತ್ತಮ ಗುಣ ನಡತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ವಿದ್ಯಾರ್ಥಿಗಳಿಗಾಗಿ ಶ್ರಮಿಸಿದ್ದೇನೆ. ಕಾರ್ಮೆಲ್ ಸಂಸ್ಥೆಯ ಆಡಳಿತ ಮಂಡಳಿಯಲ್ಲಿಯೂ ಸೇವೆ ನೀಡುವಂತಹ ಅವಕಾಶವೂ ಸಿಕ್ಕಿತು, ಇದಕ್ಕೆ ಸಂಸ್ಥೆಗೆ ಅಭಾರಿಯಾಗಿದ್ದೆನೆ, ಶಿಕ್ಷರಿಂದ ಒಳ್ಳೆಯ ಸಹಕಾರ ಹಾಗೇ ಬೋಧಕೇತರ ಸಿಬಂದಿಯ ಸಹಕಾರ ಚೆನ್ನಾಗಿ ದೊರಕಿದ್ದರಿಂದ ಮುಖ್ಯೋಪಾಧ್ಯಾಯಿನಿ ಕರ್ತವ್ಯ ನಿರ್ವಹಿಸಲು ಮತ್ತು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಸುಲಭವಾಯಿತು’ ಎಂದು ಬೀಳ್ಕೊಡುಗೆಗೆ ಉತ್ತರಿಸಿ ಕೃತಜ್ಞತೆ ಸಲ್ಲಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂದಾಪುರ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಅತಿಥಿಗಳ ಜೊತೆ ಸಿಸ್ಟರ್ ವೈಲೆಟ್ ರವರಿಗೆ ಸನ್ಮಾನಿಸಿ ‘ಸಿಸ್ಟರ್ ವೈಲೆಟ್ ಸಾವಿರಾರು ಮಕ್ಕಳಿಗೆ ವಿದ್ಯೆ ನೀಡಿ ಸತ್ಪ್ರಜೆಗಳನ್ನಾಗಿಸಿದ್ದಾರೆ. ಸಿಸ್ಟರ್ ಅಂದಾಕ್ಷಣ ಶಿಸ್ತು, ವಿದ್ಯೆ, ಜೀವನದಲ್ಲಿ ಉಪಯೋಗಕ್ಕೆ ಬೀಳುವಂತಹ ಶಿಕ್ಷಣ ನೀಡುತ್ತಾರೆ, ಅವರ ಜೀವನವೇ ತ್ಯಾಗಮಯ, ಅವರಿಂದು ನಿವ್ರತ್ತಿ ಹೊಂದುತ್ತಾರೆ, ಇಷ್ಟ್ಟೆಲ್ಲಾ ಮಾಡಿದಕ್ಕೆ, ಪ್ರತಿಯಾಗಿ ಆಶಿಸುವುದು ನೈಜ್ಯವಾಗಿದೆ, ಆದರೆ ದೇವರು ಹೇಳುತ್ತಾನೆ, ನೀನು ಒಳ್ಳೆತನವನ್ನು ಮಾಡಿದಕ್ಕೆ ಪ್ರತಿ ಆಶಿಸ ಬೇಡ, ನಿಮ್ಮ ತ್ಯಾಗವೇ ನಿಮಗೆ ಗೌರವವಾಗಿದೆ’ ಎಂದು ಮುಂದಿನ ಜೀವನಕ್ಕೆ ಶುಭ ಕೋರಿದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕಿ ಸಿಸ್ಟರ್ ಕೀರ್ತನ. ಅತಿಥಿಯಾಗಿ ಆಗಮಿಸಿದ ಸಮೂಹ ಸಂಪನ್ಮೂಲ ಅಧಿಕಾರಿ ಸುನೀತಾ ಬಾಂಜ್, ವಿದ್ಯಾರ್ಥಿನಿ ರಂಜಿತಾ ಶೆಟ್ಟಿ, ಶಿಕ್ಷಕ ಅಶೋಕ ದೇವಾಡಿಗ, ಸ್ಟೆಲ್ಲ್ಲಾ ಮಾರಿಸ್ ಪ್ರೌಢ ಶಾಲೆಯ ಶಿಕ್ಷಕಿ ಫೆಲ್ಸಿಯಾನ್ ಡಿಸೋಜಾ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹರೀಶ್ ಭಂಡಾರಿ, ರೋಟರಿ ರಿವರ್ ಸೈಡ್ ಅಧ್ಯಕ್ಷ ರಾಜು ಪೂಜಾರಿ, ಮಾಜಿ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಆಶಾ ಇವರೆಲ್ಲಾ ಸಿಸ್ಟರ್ ವೈಲೆಟ್ ಇವರ ಗುಣಗಾನ ಮಾಡಿ ಶುಭ ಕೋರಿದರು. ವಿದ್ಯಾರ್ಥಿಗಳು ನ್ರತ್ಯ, ಕಿರು ನಾಟಕವನ್ನು ಪ್ರದರ್ಶಿಸಿದರು
ಪ್ರಭಾರ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಸಿಲ್ವಿಯಾ ಸ್ವಾಗತಿಸಿದರು, ಶಿಕ್ಷಕಿ ಶ್ರೀಲತಾ ಸನ್ಮಾನ ಪತ್ರವನ್ನು ವಾಚಿಸಿದರು, ದೈಹಿಕ ಶಿಕ್ಷಕ ಮೈಕಲ್ ಪುಟಾರ್ಡೊ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸರಸ್ವತಿ ವಂದಿಸಿದರು.
ಗಳನ್ನು ಮಾಡಿರುತ್ತಾರೆ – ಸಿಸ್ಟರ್ ವೈಲೆಟ್