ಸಂವಿಧಾನ ಓದುವ ಮೊದಲು ಅಂಬೇಡ್ಕರ್ ಜೀವನ ಚರಿತ್ರೆ ಓದಬೇಕು

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

 

ಸಂವಿಧಾನ ಓದುವ ಮೊದಲು ಅಂಬೇಡ್ಕರ್ ಜೀವನ ಚರಿತ್ರೆ ಓದಬೇಕು

 

ಕೋಲಾರ : ಸಂವಿಧಾನವನ್ನು ಓದುವವರಿಗೆ ಅದರಲ್ಲಿನ ವಿಧಿಗಳು, ಭಾಗಗಳು, ಅನುಚ್ಛೇದಗಳು ಮಾತ್ರ ಕಾಣುತ್ತದೆ. ಹಾಗಾಗಿ ಸಂವಿಧಾನ ಓದುವ ಮೊದಲು ಅಂಬೇಡ್ಕರ್ ರವರ ಜೀವನ ಚರಿತ್ರೆಯನ್ನು ಓದಿ ನಂತರ ಸಂವಿಧಾನವನ್ನು ಓದಿದಾಗ ಸಂವಿಧಾನ ಅರ್ಥವಾಗುತ್ತದೆ ಎಂದು ಯುವಸೇನೆ ಕರುನಾಡು ಸಂಘಟನೆಯ ರಾಜ್ಯಾಧ್ಯಕ್ಷರಾದ ಯುವಸೇನೆ ಕಲ್ಯಾಣ್‍ಕುಮಾರ್ ತಿಳಿಸಿದರು.
ಯುವಸೇನೆ ಕರುನಾಡು ಸಂಘಟನೆಯ ವತಿಯಿಂದ ಹಮ್ಮಿಕೊಂಡಿರುವ ಭಾರತ ರತ್ನ ಡಾ|| ಬಿ.ಆರ್.ಅಂಬೇಡ್ಕರ್ ರವರ ಡಿಸೆಂಬರ್ 6ರ ಪರಿನಿರ್ವಾಣದ ಪ್ರಯುಕ್ತ ಡಿಸೆಂಬರ್ 04 ರಂದು ಕೋಲಾರದಿಂದ ಬಾಂಬೆ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪುತ್ಥಳಿಯ ಶುದ್ಧೀಕರಣ ಹಾಗೂ ಪುತ್ತಳಿಗೆ ಮಾಲಾರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬಂಗಾರಪೇಟೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು
ಸಂವಿಧಾನದಲ್ಲಿ ದಲಿತ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಿಗೆ ನೀಡಿರುವ ಮೀಸಲಾತಿಯನ್ನು ಪ್ರಶ್ನಿಸುವ ಜನರು ಒಮ್ಮ ತಮ್ಮನ್ನು ಅವಲೋಕನ ಮಾಡಿಕೊಳ್ಳಬೇಕಾಗಿದೆ. ನಿಮ್ಮ ಪೂರ್ವಜರು ಸಾವಿರಾರು ವರ್ಷಗಳಿಂದ ತುಳಿತಕ್ಕೆ ಒಳಪಡಿಸಿದ ಜನಾಂಗಕ್ಕೆ ನೀವು ನೀಡುವ ಒಂದೆರಡು ತಲಮಾರು ಪಶ್ಚಾತಾಪವೆಂದು ಭಾವಿಸಬೇಕಾಗಿದೆ.
ಎಲ್ಲಾ ಪ್ರಜೆಗಳಿಗೆ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯವನ್ನು ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಗಳನ್ನು ದೊರಕಿಸಲು ನಮ್ಮ ಸಂವಿಧಾನದ ಮೂಲಕ ಅಂಬೇಡ್ಕರ್ ರವರು ಮಾಡಿದ ಕಾರ್ಯವು ಅಮೋಘವಾದದ್ದು, ಅಂತಹ ದೀಮಂತ ನಾಯಕನ ಪರಿನಿವಾರ್ಹಣಾ ದಿನದಂದು ಪುಣ್ಯಭೂಮಿಗೆ ತೆರಳಿ ನಾವೆಲ್ಲರೂ ಅವರಿಗೆ ನಮನ ಸಲ್ಲಿಸುವುದು ನಮ್ಮ ಕರ್ತವ್ಯವೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಮ್ಮ ಯುವ ಸೇನೆ ಕರುನಾಡು ಸಂಘಟನೆ ಸಂಸ್ಥಾಪಕರು ಆದ ಚಿನ್ನಾಪುರ ಅನಿಲ್ ಕುಮಾರ್. ರಾಜ್ಯ ಉಪಾಧ್ಯಕ್ಷರಾದ ಯತೀಶ್ ಸತ್ಯಪ್ಪನವರ್, ಪ್ರದೀಪ್ ಕೋಲಾರ ತಾಲ್ಲೂಕು ಅಧ್ಯಕ್ಷರು ಆದ ಈಕಂಬಳ್ಳಿ ಮಂಜುನಾಥ್ ವಿದ್ಯಾರ್ಥಿ ಘಟಕದ ಅಧ್ಯಕ್ಷ ಶಿವರಾಜ್, ವೇಮಗಲ್ ಹೋಬಳಿ ಅಧ್ಯಕ್ಷ ಅನಂತು, ಟೇಕಲ್ ಹೋಬಳಿಯ ಶ್ರೀಕಾಂತ್, ಬೀರಮಾನಹಳ್ಳಿ ಶಿವು, ಬಂಗಾರಪೇಟೆ ಶ್ರೀಧರ್ ದೇಶಿಹಳ್ಳಿ ಆಕಾಶ್, ಹುಣಸನಹಳ್ಳಿ ರಮೇಶ್, ಶ್ರೀಮಾನ್, ವಿನೋದ್, ಗಾಯಕರಾದ ಉಪೇಂದ್ರ ಭಾಗವಹಿಸಿದ್ದರು