ಸಂವಿಧಾನದ ಶಿಲ್ಪಿಡಾ. ಬಾಬಾ ಸಾಹೇಬ್ ಅಂಬೇಡ್ಕರ್  ಮಾನವತಾವಾದಿ ಸ್ವಾಭಿಮಾನದ ಸಂಕೇತ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

 

ಸಂವಿಧಾನದ ಶಿಲ್ಪಿಡಾ. ಬಾಬಾ ಸಾಹೇಬ್ ಅಂಬೇಡ್ಕರ್  ಮಾನವತಾವಾದಿ ಸ್ವಾಭಿಮಾನದ ಸಂಕೇತ

 

 

ಕೋಲಾರ : ಭಾರತ ಸಂಸ್ಕøತಿ ಪರಂಪರೆಯಲ್ಲಿ ಇತಿಹಾಸದ ಉದ್ದಕ್ಕೂ ಬ್ರಾಹ್ಮಣ ಮತ್ತು ಮೂಲನಿವಾಸಿಗಳ ವಿರುದ್ಧ ಕ್ರಾಂತಿ ಮತ್ತು ಪ್ರತಿಕ್ರಾಂತಿಯೆಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ತಿಳಿಸಿದ್ದಾರೆ. ಈ ದೇಶದಲ್ಲಿ ದಲಿತ ಮತ್ತು ಶೂದ್ರರು ಈ ಧೇಶದ ವಾರಸುದಾರರು. ದಲಿತರನ್ನು ಸಾವಿರಾರು ವರ್ಷಗಳಿಂದ ಕೀಳಾಗಿ ಕಂಡು ದೇಶದಲ್ಲಿ ಅಸ್ಪøಶ್ಯರನ್ನಾಗಿ ಮಾಡಿದರು. ಈ ದೇಶದ ಶಿಕ್ಷಣ, ಅಧಿಕಾರಿ ಆಸ್ತಿಯನ್ನು ಕಬಳಿಸಿ ದರಿದ್ರರನ್ನಾಗಿಸದರು. ಅನೇಕ ನಾಯಕರು ದಲಿತ ಜನಾಂಗವನ್ನು ಮೇಲೆತ್ತುವ ಕೆಲಸವನ್ನು ಮಾಡಿದ್ದರು. ಈ ದೇಶದಲ್ಲಿ ಕಾಲಕ್ರಮೇಣ ಬ್ರಿಟಿಷರ ಆಳ್ವಿಕೆಯಿಂದಾಗಿ ದಲಿತರನ್ನು ನಮ್ಮ ಸೈನ್ಯದಲ್ಲಿ ಪ್ರಾತಿನಿದ್ಯ ನೀಡುವುದರ ಮೂಲಕ ದಲಿತರಿಗೆ ಅವಕಾಶ ನೀಡಿದರು. ದಲಿತರು ನಾಗ ಜನಾಂಗದ ಮೂಲರಾಗಿದ್ದರು.


ಈ ಸಮುದಾಯದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಜನಿಸಿ ದೀನ ದಲಿತರ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಅಂತಹ ದಲಿತ ಜ್ಯೋತಿ ಡಿಸೆಂಬರ್ 06, 1956ರಂದು ಕೋಟ್ಯಾಂತರ ದಲಿತರನ್ನು ಅಗಲಿ ನಂತರ ದಲಿತರ ಮನದಲ್ಲಿ ಕರಾಳದಿನವಾಗಿ ಉಳಿದುಕೊಂಡಿದೆ.
ಭಾರತ ರತ್ನ ಡಾ|| ಬಿ.ಆರ್.ಅಂಬೇಡ್ಕರ್ ರವರ ಡಿಸೆಂಬರ್ 06 ರ ಪರಿನಿರ್ವಾಣದ ಪ್ರಯುಕ್ತ ಬಾಂಬೆ ಚಲೋ ಕಾರ್ಯಕ್ರಮದಲ್ಲಿ ಯುವ ಸೇನೆ ಕರುನಾಡು ವತಿಯಿಂದ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಎಲ್ಲಾ ತಾಲೂಕಿನ ಮುಖ್ಯ ಸ್ಥಳದಲ್ಲಿ ಇರುವ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪುತ್ಥಳಿಯ ಶುದ್ಧೀಕರಣ ಹಾಗೂ ಹಾಲಿನ ಅಭಿμÉೀಕ ಮಾಡುತ್ತಿದ್ದು, “ಮಾಲೂರು ತಾಲ್ಲೂಕಿನ ಸರ್ಕಲ್ ಇನ್ಸ್‍ಪೆಕ್ಟರ್ ನಾಗರಾಜು ಸರ್ ರವರಿಂದ ಕಾರ್ಯಕ್ರಮವನ್ನು ಪ್ರಾರಂಬಿಸಲಾಯಿತು.
ನಾಗರಾಜು ಸರ್ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶಗಳನ್ನು ಅವರು ನಮಗೇ ನೀಡಿರುವ ಸಂವಿಧಾನದ ಕುರಿತು ಯುವಕರನ್ನು ಉದ್ದೇಶಿಸಿ ಕೆಲವು ಹಿತ ವಚನಗಳನ್ನು ತಿಳಿಸಿದರು ಕಾರ್ಯಕ್ರಮದಲ್ಲಿ ನಮ್ಮ ಯುವ ಸೇನೆ ಕರುನಾಡು ಸಂಘಟನೆ ಸಂಸ್ಥಾಪಕರು ಆದ ಚಿನ್ನಾಪುರ ಅನಿಲ್ ಕುಮಾರ್. ರಾಜ್ಯಾಧ್ಯಕ್ಷರು ಕಲ್ಯಾಣ್ ಕುಮಾರ್, ಕೋಲಾರ ತಾಲ್ಲೂಕು ಅಧ್ಯಕ್ಷರು ಆದ ಈಕಂಬಳ್ಳಿ ಮಂಜುನಾಥ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಶಿವರಾಜ್, ವೇಮಗಲ್ ಹೋಬಳಿ ಅಧ್ಯಕ್ಷ ಅನಂತು ಟೇಕಲ್ ಹೋಬಳಿ ಅಧ್ಯಕ್ಷ ರವಿ ಭಾಗವಹಿಸಿದ್ದರು.
ಇದೆ ಸಂದರ್ಭದಲ್ಲಿ ಮಾಲೂರು ತಾಲೂಕು ಅಧ್ಯಕ್ಷರನ್ನಾಗಿ ಹೆಡಿಗಿನಬೆಲೆ ಅನಿಲ್ ಕುಮಾರ್ ರವರನ್ನು ನೇಮಕ ಮಾಡಲಾಯಿತು ಹಾಗೂ ನಾಗರಾಜು. ಪ್ರಸಾದ್. ಹೇಮಂತ್. ಅನಿಲ್. ವಿನೋದ್ ಮುಂತಾದವರು ನಮ್ಮ ಯುವ ಸೇನೆ ಕರುನಾಡು ಸಂಘಟನೆಗೆ ಸೇರ್ಪಡೆ ಮಾಡಿಕೊಳ್ಳಲಾಯಿತು.