ಸಂವಿಧಾನಕ್ಕೆ ಬದ್ಧವಾಗಿರುವುದೇ ಅಂಬೇಡ್ಕರ್‍ಗೆ ನಾವು ಸಲ್ಲಿಸುವ ಗೌರವ-ಕೆ.ಎಸ್.ನಾಗರಾಜಗೌಡ

ವರದಿ: ಶಬ್ಬೀರ್ ಅಹ್ಮದ್

ಸಂವಿಧಾನಕ್ಕೆ ಬದ್ಧವಾಗಿರುವುದೇ ಅಂಬೇಡ್ಕರ್‍ಗೆ ನಾವು ಸಲ್ಲಿಸುವ ಗೌರವ-ಕೆ.ಎಸ್.ನಾಗರಾಜಗೌಡ

ಕೋಲಾರ:- ಸಂವಿಧಾನಕ್ಕೆ ಬದ್ಧವಾಗಿರುವುದೇ ಅಂಬೇಡ್ಕರ್‍ರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಹೇಳಿದರು.
ನಗರದ ಭಾರತ ಸೇವಾದಳ ಜಿಲ್ಲಾ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್‍ರ 128 ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಭಾರತ ಸಂವಿಧಾನ ರಚನೆಗೊಂಡಿದ್ದು, ವಿಶ್ವದ ಅತ್ಯುತ್ತಮ ಸಂವಿಧಾನವೆಂದು ಕರೆಯಲ್ಪಟ್ಟಿದೆ. ಈ ಸಂವಿಧಾನದಿಂದಲೇ ವೈವಿಧ್ಯತೆಯಲ್ಲಿ ಏಕತೆ ತತ್ವದಡಿ ಭಾರತವನ್ನು ಒಗ್ಗೂಡಿಸಲಾಗಿದೆಯೆಂದು ಅವರು ಹೇಳಿದರು.
ಇಂತ ಮಹತ್ವಪೂರ್ಣವಾದ ಸಂವಿಧಾನವನ್ನು ಗೌರವಿಸಿ, ಸಂವಿಧಾನಕ್ಕೆ ಬದ್ಧವಾಗಿರುವುದೇ ನಾವು ಅಂಬೇಡ್ಕರ್‍ಗೆ ಸಲ್ಲಿಸುವ ನಿಜವಾದ ಗೌರವ ಎಂದರು.
ಶಿಕ್ಷಣ ಸಂಯೋಜಕ ಆರ್.ಶ್ರೀನಿವಾಸನ್ ಮಾತನಾಡಿ, ಅಂಬೇಡ್ಕರ್ ದೇಶದ ಸಮಸ್ತ ಶೋಷಿತರ ಉದ್ಧಾರಕರಾಗಿದ್ದು, ಅವರನ್ನು ಕೇವಲ ದಲಿತ ಮುಖಂಡರೆಂಬಂತೆ ಬಿಂಬಿಸುವುದು ಸರಿಯಲ್ಲ, ಅಂಬೇಡ್ಕರ್ ಜನ್ಮದಿನವನ್ನು ವಿಶ್ವದಾದ್ಯಂತ ವಿಶ್ವ e್ಞÁನದ ದಿನವನ್ನಾಗಿ ಆಚರಿಸುತ್ತಿರುವುದು ನಿಜವಾಗಿಯೂ ಅವರಿಗೆ ಸಂದ ಗೌರವವಾಗಿದೆಯೆಂದರು.
ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್‍ಮಾತನಾಡಿ, ಭಾರತ ಸೇವಾದಳವು ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮಹನೀಯರೆಲ್ಲರನ್ನು ಸ್ಮರಿಸುವ ಕೆಲಸ ಮಾಡುತ್ತಾ, ಅವರ ಬದುಕು ಸಾಧನೆಯನ್ನು ವಿದ್ಯಾರ್ಥಿ ಸಮೂಹಕ್ಕೆ ಪರಿಚಯಿಸುತ್ತಿದೆಯೆಂದು ಹೇಳಿದರು.
ಅಂಬೇಡ್ಕರ್‍ರ 128 ನೇ ಜನ್ಮ ದಿನವನ್ನು ಚುನಾವಣಾ ನೀತಿ ಸಂಂಹಿತೆ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗುತ್ತಿದೆಯೆಂದು ವಿವರಿಸಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಗಳನ್ನು ಹಾಕಿ ನಮಿಸಲಾಯಿತು.
ಈ ಸಂದರ್ಭದಲ್ಲಿ ಭಾರತ ಸೇವಾದಳ ಪದಾ„ಕಾರಿಗಳಾದ ಸಂಪತ್‍ಕುಮಾರ್, ಶ್ರೀರಾಮ್, ಅಪ್ಪಿ ನಾರಾಯಣಸ್ವಾಮಿ, ಕ್ಷೇತ್ರ ಶಿಕ್ಷಣಾ„ಕಾರಿಗಳ ಕಚೇರಿಯ ಸಿಬ್ಬಂದಿ, ಭಾರತ ಸೇವಾದಳ ಜಿಲ್ಲಾ ಸಂಘಟಕ ದಾನೇಶ್ ಇತರರು ಉಪಸ್ಥಿತರಿದ್ದರು.

ಕರ್ನಾಟಕ ಸಮತಾ ಸೈನಿಕ ದಳದಿಂದ ಅಂಬೇಡ್ಕರ್ ಜಯಂತಿ
ಸಂವಿಧಾನ ರಕ್ಷಣೆ ಮಾಡುವರಿಗೆ ಮತ ನೀಡಿ – ಬಿ.ಚನ್ನಕೃಷ್ಣಪ್ಪ

ಕೋಲಾರ:- ಸಂವಿಧಾನವನ್ನು ಸಂರಕ್ಷಣೆ ಮಾಡುವ ರಾಜಕೀಯ ಪಕ್ಷವನ್ನು ಲೋಕಸಭಾ ಚುನಾವಣೆಯಲ್ಲಿ ಆಯ್ಕೆ ಮಾಡಿಕೊಳ್ಳಬೇಕೆಂದು ಕರ್ನಾಟಕ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಬಿ.ಚನ್ನಕೃಷ್ಣಪ್ಪ ಕರೆ ನೀಡಿದರು.
ನಗರದ ಸರ್ವಜ್ಞ ಉದ್ಯಾನ ಸಮೀಪದ ನೀರಾವರಿ ವೇದಿಕೆಯಲ್ಲಿ ಸೈನಿಕ ದಳದಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್ 128 ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಅಂಬೇಡ್ಕರ್ ಸಂವಿಧಾನವನ್ನು ಕೆಲವರು ಬದಲಾಯಿಸುವ ಮಾತುಗಳನ್ನಾಡುತ್ತಿದ್ದಾರೆ, ಈಗಾಗಲೇ ಸಂವಿಧಾನ ಬದ್ಧವಾಗಿ ನೀಡಲಾಗಿದ್ದ ಅಟ್ರಾಸಿಟಿ ಕಾಯ್ದೆಯನ್ನು ಬಲಹೀನಗೊಳಿಸಲಾಗಿದೆ, ಬಡ್ತಿ ಮೀಸಲಾತಿಯನ್ನು ಕಡಿತಗೊಳಿಸಲಾಗಿದೆ, ಅಂತದ್ದೆ ಸರಕಾರಕ್ಕೆ ಮತ್ತೇ ಅ„ಕಾರ ನೀಡಿದರೆ ಸಂವಿಧಾನವನ್ನು ಪೂರ್ಣ ಬದಲಾಯಿಸಿ ದಲಿತ, ಅಲ್ಪಸಂಖ್ಯಾತ ಹಾಗೂ ಹಿಂದುಳಿದವರ ಬದುಕುಗಳನ್ನು ಮತ್ತೇ ಶೋಷಣೆ ಮಾಡಲಾಗುತ್ತದೆಯೆಂದು ಎಚ್ಚರಿಸಿದರು.
ವ್ಯಯಕ್ತಿಕ ಹಿತಾಸಕ್ತಿಗಳಿಂದ ಚುನಾವಣೆಯನ್ನು ನೋಡದೆ, ಅಭ್ಯರ್ಥಿಯನ್ನು ಗಮನಿಸದೆ ರಾಜಕೀಯ ಪಕ್ಷಗಳ ಹಿನ್ನೆಲೆ ಮತ್ತು ತತ್ವ ಸಿದ್ದಾಂತಗಳನ್ನು ನೋಡಿ ಪ್ರತಿಯೊಬ್ಬರು ಮತ ಚಲಾಯಿಸಬೇಕು, ದಲಿತ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಎಚ್ಚೆತ್ತು ಒಗ್ಗೂಡದಿದ್ದರೆ ಮುಂದಿನ ದಿನಗಳು ಭೀಕರವಾಗಿರಲಿವೆಯೆಂದರು.
ಅಂಬೇಡ್ಕರ್ ರಾಜಕೀಯ ಅ„ಕಾರದಿಂದ ಮಾತ್ರವೇ ಶೋಷಿತರ ಉದ್ಧಾರ ಎಂದು ಭಾವಿಸಿದ್ದರು ಆದರೆ, ಈಗ ಅಂಬೇಡ್ಕರ್ ಆರಂಭಿಸಿದ್ದ ಹೋರಾಟದ ರಥವನ್ನು ಕೆಲವರು ಶೇ.60 ರಷ್ಟು ಹಿಂದಕ್ಕೆ ಎಳೆದಿದ್ದಾರೆಂದು ಟೀಕಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಪೆಕ್ಸ್ ನಾರಾಯಣಸ್ವಾಮಿ ಮಾತನಾಡಿ, ಅಂಬೇಡ್ಕರ್‍ರ ಆದರ್ಶಗಳನ್ನು ಮರೆತರೆ ದಲಿತ ಶೋಷಿತರಿಗೆ ಉಳಿಗಾಲವಿಲ್ಲ, ಆದ್ದರಿಂದ ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಅಂಬೇಡ್ಕರ್ ಹಾದಿಯನ್ನು ತೊರೆಯಬಾರದು ಎಂದರು.
ಕರ್ನಾಟಕ ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಎನ್.ನಾರಾಯಣಪ್ಪ ಬೌದ್ ಪ್ರಾಸ್ತಾವಿಕವಾಗಿ ಮಾತನಾಡಿ, ಬೌದ್ಧ ಪ್ರಾರ್ಥನೆ ನೆರವೇರಿಸಿದರು. ವೇದಿಕೆಯಲ್ಲಿ ಜಿಲ್ಲಾ ಯಾದವ ಸಂಘದ ಉಪಾಧ್ಯಕ್ಷ ಆರ್.ಗೋಪಾಲ್ ಇತರ ಮುಖಂಡರು ಹಾಜರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ನಚಿಕೇತ ನಿಲಯದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆಯನ್ನು ಮಾಡಲಾಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ನೂರಕ್ಕೂ ಹೆಚ್ಚು ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಹಾಗೂ ಸಾರ್ವಜನಿಕರಿಗೆ ಪಾನಕ, ಹೆಸರುಬೇಳೆ ಮತ್ತು ಮಜ್ಜಿಗೆ ಪೆÇಟ್ಟಣಗಳನ್ನು ವಿತರಿಸಲಾಯಿತು.