ಸಂತ ಮೇರಿಸ್ ಹಿ. ಪ್ರಾ. ಶಾಲಾ ಬಾಲಕಿಯರು ತ್ರೋ ಬಾಲ್‍ನಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ – ಫಾ|ತಾವ್ರೊ ಅಭಿನಂದನೆ

JANANUDI NETWORK 

ಸಂತ ಮೇರಿಸ್ ಹಿ. ಪ್ರಾ. ಶಾಲಾ ಬಾಲಕಿಯರು ತ್ರೋ ಬಾಲ್‍ನಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ – ಫಾ|ತಾವ್ರೊ ಅಭಿನಂದನೆ

ಕುಂದಾಪುರ, ಆ. 30: ಕುಂದಾಪುರ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ತ್ರೋಬಾಲ್ ಪಂದ್ಯಾವಳಿಯು ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಛೇರಿ ಇವರ ನಿರ್ದೇಶನದಲ್ಲಿ ಬೆಳ್ವೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ಆಗೋಸ್ತ್ 24 ರಂದು ಶಾಲಾ ಮೈದಾನದಲ್ಲಿ ನಡೆದ ಬಾಲಕಿಯರ ತ್ರೋ ಬಾಲ್ ಪಂದ್ಯಾಟದಲ್ಲಿ ಕುಂದಾಪುರದ ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯು ಪ್ರಥಮ ಸ್ಥಾನ ಪಡೆದು ಉಡುಪಿ ಜಿಲ್ಲಾ ಮಟ್ಟಕೆ ಆಯ್ಕೆಯಾಯಿತು.
ವಿಜೇತ ತಂಡಕ್ಕೆ ದೈಹಿಕ ಶಿಕ್ಷಕಿ ಶಾಂತಿ ರಾಣಿ ಬರೆಟ್ಟೊ ತರಬೇತಿ ನೀಡಿದ್ದರು. ಶಾಲಾ ಜಂಟಿ ಕಾರ್ಯದರ್ಶಿ ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಶಾಲಾ ಮುಖ್ಯ ಶಿಕ್ಷಕಿ ಡೋರಾ ಸುವಾರಿಸ್ ಮತ್ತು ಸಹ ಶಿಕ್ಷಕ, ಶಿಕ್ಷಕೇತರ ವ್ರಂದ ವಿಜೇತರಿಗೆ ಅಭಿನಂದಿಸಿದ್ದಾರೆ.