ಸಂತ ಮೇರಿಸ್ ಪಿ.ಯು.ಕಾಲೇಜಿನಲ್ಲಿ ದಳಗಳ ಉದ್ಘಾಟನೆ:ವಿವಿಧ ಸ್ಪರ್ಧೆಗಳು ಮತ್ತು ವಸ್ತು ಪ್ರದರ್ಶನ

JANANUDI.COM NETWORK

ಸಂತ ಮೇರಿಸ್ ಪಿ.ಯು.ಕಾಲೇಜಿನಲ್ಲಿ ದಳಗಳ ಉದ್ಘಾಟನೆ:ವಿವಿಧ ಸ್ಪರ್ಧೆಗಳು ಮತ್ತು ವಸ್ತು ಪ್ರದರ್ಶನ


ಕುಂದಾಪುರ, ಒ.9: ಕುಂದಾಪುರ ಸಂತ ನೇರಿಸ್ ಪದವಿ ಪೂರ್ವ ಕಾಲೇಜಿನಲ್ಲಿ ಒಕ್ಟೋಬರ್ 5 ರಂದು ವಿದ್ಯಾರ್ಥಿ ದಳಗಳಾದ ಹಾನೆಸ್ಟಿ, ವಿಕ್ಟರಿ, ಬ್ರೆವರಿ ಮತ್ತು ವಿಶ್ಡಮ್ ಇವುಗಳ ಉದ್ಘಾಟನ ಸಮಾರಂಭ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಧರ್ಮಗುರು ವಂ|ಪ್ರವೀಣ್ ಅಮ್ರತ್ ಮಾರ್ಟಿಸ್ ವಹಿಸಿ, ಶುಭ ಕೋರಿದರು.
ಬಳಿಕ ಹಣ್ಣು, ತರಕಾರಿಗಳಿಂದ ಕಲಾಕ್ರತಿ, ಹೂವುಗಳಿಂದ ಗುಚ್ಚ ರಚನೆ, ಬೆಂಕಿ ರಹಿತ ಅಡುಗೆ, ರಂಗೋಲಿ. ಹಳೆಯ ಪಾರಂಪರಿಕ ನಿತ್ಯ ಬಳಕೆಯ ವಸ್ತುಗಳು, ನಾಣ್ಯ ಪ್ರದರ್ಶನ ಮುಂತಾದ ಸ್ಪರ್ಧೆಗಳು ನಡೆದವು. ದಳಗಳಾದ ಹಾನೆಸ್ಟಿ, ಪ್ರಥಮ, ವಿಕ್ಟರಿ ದ್ವೀತಿಯ, ಬ್ರೇವರಿ ತ್ರತೀಯ ಮತ್ತು ವಿಶ್ಡಮ್ ನಾಲ್ಕನೆ ಸ್ಥಾನ ಪಡೆದವು.
ಮುಖ್ಯ ಅಥಿತಿ ಕಿಯೊನಿಕ್ಸ್ ಯುವ ಕಾಮ್, ಸ್ಪೊಕನ್ ಇಂಗ್ಲಿಷ್ ಇದರ ಪಾಶುಪಾಲರಾದ ಅಂಬಿಕಾ ಧೀರಜ್ ವಿದ್ಯಾರ್ಥಿಗಳ ಪ್ರತಿಭೆಯ ಬಗ್ಗೆ ಶ್ಲಾಘನ ವ್ಯಕ್ತ ಪಡಿಸಿದರು. ಇನೊರ್ವ ಅತಿಥಿ ಪವಿತ್ರ ರೋಸರಿ ಮಾತಾ ಇಗರ್ಜಿಯ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ, ‘ಒಗ್ಗಟ್ಟು ಇದ್ದರೆ ಏನನ್ನಾದರೂ ಸಾಧಿಸಬಹುದು’ ಎಂದು ತಿಳಿಸಿದರು. ವೇದಿಕೆಯಲ್ಲಿ ರೋಸರಿ ಕಿನ್ನರ್‍ಗಾರ್ಟನ್ ಶಾಲೆಯ ಮುಖ್ಯೋಪಾಧ್ಯಾಯಿನಿ ಶೈಲಾ ಡಿ’ಆಲ್ಮೇಡಾ, ಸಂತ ಮೇರಿಸ್ ಪಿ.ಯು. ಕಾಲೇಜಿನ ಉಪಪ್ರಾಂಶುಪಾಲೆ ಮಂಜುಳಾ ನಾಯರ್, ದಳಗಳ ಮೇಲ್ವಿಚಾರಕಿ ಬಿನೂ ಜಯಚಂದ್ರನ್ ಉಪಸ್ಥಿತರಿದ್ದರು. ಜೊಸ್ಲಿನ್ ಆಲ್ಪೊನ್ಸೊ ಸ್ವಾಗತಿಸಿದರು. ಎಲ್ವಿಶಾ ಡಿಸಿಲ್ವಾ ಕಾರ್ಯಕ್ರಮ ನಿರೂಪಿಸಿದರು. ಆಲಿಶಾ ಡಿಸೋಜಾ ವಂದಿಸಿದರು.