ಸಂತ ಮೇರಿಸ್ ಪದವಿ ಪೂರ್ವ ಕಾಲೇಜು ಇಕೋ ಕ್ಲಬ್‍ನಿಂದ ಮಳೆ ಕೊಯ್ಲು, ಮಾದಕ ದ್ರವ್ಯ ಮಾಸಾಚರಣೆ ಮತ್ತು ರಸ್ತೆ ಸುರಕ್ಷತೆ ಅರಿವು ಕಾರ್ಯಕ್ರಮ

JANANUDI.COM NETWORK

ಸಂತ ಮೇರಿಸ್ ಪದವಿ ಪೂರ್ವ ಕಾಲೇಜು ಇಕೋ ಕ್ಲಬ್‍ನಿಂದ ಮಳೆ ಕೊಯ್ಲು, ಮಾದಕ ದ್ರವ್ಯ ಮಾಸಾಚರಣೆ ಮತ್ತು ರಸ್ತೆ ಸುರಕ್ಷತೆ ಅರಿವು ಕಾರ್ಯಕ್ರಮ

“ಪೋಲಿಸರಿಗೊಸ್ಕರ ಹೆಲ್ಮೇಟ್ ಧರಿಸ ಬೇಡಿ, ನಿಮ್ಮ ಜೀವಕ್ಕಾಗಿ ಹೆಲ್ಮೇಟ್ ಧರಿಸಿ’ ಎಂದು ತಿಳಿಸಿದರು – ಸಭ್ ಇನ್ಸ್‍ಪೆಕ್ಟರ್ ಸುಧಾಕರ”

ಕುಂದಾಪುರ, ಆ.7: ಕುಂದಾಪುರ ಸಂತ ಮೇರಿಸ್ ಪದವಿ ಪೂರ್ವ ಕಾಲೇಜಿನ ಇಕೋ ಕ್ಲಬ್ ವತಿಯಿಂದ ಮಳೆ ಕೊಯ್ಲು, ಮಾದಕ ದ್ರವ್ಯ ಮಾಸಾಚರಣೆ ಮತ್ತು ರಸ್ತೆ ಸುರಕ್ಷತೆ ಅರಿವು ಕಾರ್ಯಕ್ರಮ ನಡೆಯಿತು.
ಪವಿತ್ರ ರೋಜರಿ ಮಾತಾ ಚರ್ಚಿನ ಸಹಾಯಕ ಧರ್ಮಗುರು ವಂ| ವಿಜಯ್ ಡಿಸೋಜಾ ಕಾರ್ಯಕ್ರಮವನ್ನು ಗೀಡಕ್ಕೆ ನೀರು ಬಿಡುವ ಮೂಲಕ ಉದ್ಘಾಟಿಸಿ ‘ಭೂಮಿ ಮತ್ತು ಸ್ವರ್ಗವನ್ನು ರಚಿಸಿದ ಒ ದೇವರೆ ನನಗೆ ನಿನ್ನ ಚಿತ್ತದಿಂದ ರಚಿಸಿದ್ದಿಯಾ, ಈ ಜೀವನ ನನಗೆ ಕಾಣಿಕೆಯಾಗಿ ಕೊಟ್ಟಿದಕ್ಕೆ ನಾವು ಕ್ರತಜ್ಞತೆಯನ್ನು ಸಲ್ಲಿಸುತ್ತೇವೆ. ನಿನ್ನ ಚಿತ್ತಕ್ಕೆ ಅಡ್ಡಿ ಪಡಿಸಲಾರೆವು, ಪ್ರತಿ ಜೀವಕ್ಕೆ ಗೌರವವನ್ನು ಕೊಡುವೇವು, ದೇವರೆ ಇವತ್ತು ನಾವು ನಿನಗೆ ಪ್ರಮಾಣ ವಚನ ನೀಡುತ್ತೇವೆ, ಇವತ್ತಿನಿಂದ ನಾವು ಯಾವುದೇ ದುಶ್ಚಟಗಳಿಗೆ ಬಲಿಯಾಲಾರೆವು, ವಿಶೇಷವಾಗಿ ಮಾದಕ ದ್ರವ್ಯಕ್ಕೆ ಬಲಿಯಾಗಲಾರೆವು. ಎಂದು ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಕುಂದಾಪುರ ಅಸಿಸ್ಟಂಟ್ ಸಭ್ ಇನ್ಸ್‍ಪೆಕ್ಟರ್ ಸುಧಾಕರ ಇವರು ‘ಸಣ್ಣ ವಯಸಿನಲ್ಲಿ ಮಾದಕ ದ್ರವ್ಯಗಳ ಚಟಕ್ಕೆ ಒಳಗಾದರೆ, ನಿಮ್ಮ ಜೀವನವೇ ನಾಶವಾಗುತ್ತದೆ, ಮಾದಕ ದ್ರವ್ಯ ಸೇವನೆಯಿಂದ ನಿಮ್ಮ ದೇಹದ ಪ್ರತಿ ಅಂಗ ವೈಫಲ್ಯವಾಗಿ ಸಾವಿನ ದವಡೆಗೆ ಸಿಲುಕುವಿರಿ ನಿಮ್ಮ ಜೀವನ ಅಲ್ಲದೆ ನಿಮ್ಮ ಇಡೀ ಕುಟುಂಬದ ನಾಶಕ್ಕೆ ಕಾರಣಾವಾಗುತ್ತದೆ, ಹಾಗಾಗಿ ಮಾದಕ ದ್ರವ್ಯಕ್ಕೆ ಬಲಿಯಾಗ ಬೇಡಿ ಹಾಗೇ ರಸ್ತೆ ನಿಯಮಗಳನ್ನು ಪಾಲಿಸಿ, ಪರವಾನಿಗೆ ಇಲ್ಲದೆ ವಾಹನ ಚಲಾಯಿಸ ಬೇಡಿ, ಪೋಲಿಸರಿಗೊಸ್ಕರ ಹೆಲ್ಮೇಟ್ ಧರಿಸ ಬೇಡಿ, ನಿಮ್ಮ ಜೀವಕ್ಕಾಗಿ ಹೆಲ್ಮೇಟ್ ಧರಿಸಿ’ ಎಂದು ತಿಳಿಸಿದರು.
ಪಂಚಾಯತ್ ಅಭಿವ್ರದ್ದಿ ಅಧಿಕಾರಿ ಸತೀಶ್ ವಡ್ದರ್ಸೆ ಮಳೆಕೊಯ್ಲು ಹೇಗೆ ಮಾಡಬಹುದು, ನೀರಿನ ಪ್ರಾಮುಖ್ಯತೆ, ಹಾಗೆ ಪ್ಲಾಸ್ಟಿಕೆ ದುರ್ಬಳಕೆಯಿಂದ ಆಗುವ ಅನಾಹುತಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ವೇದಿಕೆಯ ಮೇಲೆ ಹೇಡ್ ಕಾನ್ಸ್‍ಟೇಬಲ್ ಮಂಜುನಾಥ್, ಕಾನ್ಸ್‍ಟೇಬಲ್ ಮಂಜುನಾಥ್, ಸಹ ಪ್ರಾಂಶುಪಾಲೆ ಮಂಜುಳಾ ನಾಯರ್, ಕಾರ್ಯಕ್ರಮದ ಸಂಚಾಲಕಿ ಪ್ರಾದ್ಯಾಪಕಿ ದಿಕ್ಷಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾದ್ಯಾಪಕಿ ನಿಶಾ ಸುವಾರಿಸ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಜೆನಿಶಾ ನಜ್ರೆತ್ ನಿರೂಪಿಸಿದರು. ಸಿಯಾರ ಡಿಸಿಲ್ವಾ ವಂದಿಸಿದರು.