JANANUDI.COM NETWORK
ಸಂತ ಜೋಸೆಫ್ ಶಾಲೆಯಲ್ಲಿ ಕುಂದಾಪುರ ವಲಯ ಮಟ್ಟದ ಪೌಢ ಶಾಲಾ ಖೋ ಖೋ ಪಂದ್ಯಾವಳಿ
ಕುಂದಾಪುರ, ಆ.20: ಕುಂದಾಪುರ ವಲಯ ಮಟ್ಟದ ಪೌಢ ಶಾಲಾ ಖೋ ಖೋ ಪಂದ್ಯಾವಳಿಯು ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಛೇರಿ ಮತ್ತು ರೋಟರಿ ಕ್ಲಬ್ ಕುಂದಾಪುರ ರಿವರ್ಸ್ ಸೈಡ್ ಇವರ ಸಹಯೋಗದಲ್ಲಿ ಆಗೋಸ್ತ್ 20 ರಂದು ಸಂತ ಜೋಸೆಫ್ ಪ್ರೌಢ ಶಾಲೆಯ ಆಶ್ರಯದಲ್ಲಿ ಶಾಲಾ ಮೈದಾನದಲ್ಲಿ ನಡೆಯಿತು.
ಇದರ ಉದ್ಘಾಟನೆಯನ್ನು ಕುಂದಾಪುರ ರೋಜರಿ ಮಾತಾ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ದೀಪ ಬೆಳಗಿಸಿ ಉದ್ಘಾಟಿಸಿ ‘ಕ್ರೀಡೆ ಮನುಷ್ಯನನ್ನು ಆರೋಗ್ಯವಂತನಾಗಿ ಸಕ್ರಿಯವಾಗಲು ನೆರವಾಗುತ್ತದೆ, ಖೋ ಖೋ ಆಟ ಕಡಿಮೆ ಖರ್ಚಿನ ಮನುಷ್ಯನ ಎಲ್ಲಾ ಅಂಗಾಂಗಳಿಗೂ ವ್ಯಾಯಮ ಸಿಗುವಂತಹ ಆಟ. ಎಲ್ಲರೂ ಪೈಪೆÇೀಟಿಯ ಆಟ ಆಡಿ ಗೆಲ್ಲಲು ಪ್ರಯತ್ನಿಸಿ’ ಎಂದು ಶುಭ ಕೋರಿದರು.
ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ದತ್ತಾತ್ರೆಯ ನಾಯ್ಕ್ ಪ್ರಸ್ತಾವಿಕ ಮಾತುಗಳನ್ನಾಡಿ ಸ್ಪರ್ಧೆಯ ಬಗ್ಗೆ ತಿಳಿ ಹೇಳಿದರು. ಮುಖ್ಯ ಅತಿಥಿ ರೋಟರಿ ಕ್ಲಬ್ ಕುಂದಾಪುರ ರಿವರ್ಸ್ ಸೈಡ್ ಇದರ ಅಧ್ಯಕ್ಷ ರಾಜು ಪೂಜಾರಿ, ಸಂತ ಜೋಸೆಫ್ ಪೌಢ ಶಾಲೆಯ ಜಂಟಿ ಕಾರ್ಯದರ್ಶಿ ಸಿಸ್ಟರ್ ಕೀರ್ತನ ಶುಭ ನುಡಿಗಳನ್ನಾಡಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ವೈಲೆಟ್ ತಾವ್ರೊ, ರಕ್ಷಕ ಶಿಕ್ಷಕ ಸಂಘದ ಹರೀಶ್ ಭಂಡಾರಿ, ಹಿರಿಯ ದೈಹಿಕ ಶಿಕ್ಷಕ ಬಾಲಕ್ರಷ್ಣ ಶೆಟ್ಟಿ, ರೋಟೆರಿಯನಗಳಾದ ರೊನಾಲ್ಡ್ ಡಿಮೆಲ್ಲೊ, ಎಸ್.ಜಿ. ಹೆಗ್ಡೆ ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀಲತಾ ಸ್ವಾಗತಿಸಿದರು. ಶಿಕ್ಷಕ ಅಶೋಕ್ ದೆವಾಡಿಗ ವಂದಿಸಿದರು. ದೈಹಿಕ ಶಿಕ್ಷಕ ಮೈಕಲ್ ಪುರ್ಟಾರ್ಡೊ ನಿರೂಪಿಸಿದರು.
ಬಾಲಕಿಯರ 5 ತಂಡಗಳು ಬಾಲಕರ 10 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು ಬಾಲಕರ ವಿಭಾಗದಲ್ಲಿ ಸರಕಾರಿ ಪ್ರೌಢ ಶಾಲೆ ಅಮಾಸೆ ಬೈಲ್ ಪ್ರಥಮ, ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ದ್ವಿತೀಯ. ಬಾಲಕಿಯರ ವಿಭಾಗದಲ್ಲಿ ರಾಮಸನ್ ಕಂಡ್ಲೂರು ಪ್ರಥಮ, ಸರಕಾರಿ ಪ್ರೌಢ ಶಾಲೆ ಅಮಾಸೆ ಬೈಲ್ ದ್ವಿತೀಯ ಸ್ಥಾನ ಪಡೆದವು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾದ ರೋಜರಿ ಚರ್ಚಿನ ಸಹಾಯಕ ಧರ್ಮಗುರು ಇತರ ಗಣ್ಯರೊಂದಿಗೆ ವಿಜೇತ ತಂಡಗಳಿಗೆ ಟ್ರೋಪಿ ಮತ್ತು ಪ್ರಶಸ್ತಿ ಪತ್ರವನ್ನು ವಿತರಿಸಿದರು. ಪಂದ್ಯಾವಳಿಯ ವೇಳೆ ಸಹಕರಿಸಿದ ಎಲ್ಲರಿಗೂ ಸಂತ ಜೋಸೆಫ್ ಪೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಕ್ರತಜ್ಞತೆ ಸಲ್ಲಿಸಿದರು.