ವರದಿ: ಸಿಸ್ಟರ್ ಸಿಲ್ವಿಯಾ
ಸಂತ ಜೋಸೆಫ್ ಪ್ರೌಢ ಶಾಲೆಯಲ್ಲಿ ಕಾರ್ಮೆಲ್ ಮಾತೆಯ ಹಬ್ಬದ ಆಚರಣೆ
ಕುಂದಾಪುರ, ಜು.15: ಸ್ಥಳಿಯ ಸಂತ ಜೋಸೆಫ್ ಪ್ರೌಢ ಶಾಲೆಯಲ್ಲಿ, ಸಂಸ್ಥೆಯ ಪಾಲಕಿ ಕಾರ್ಮೆಲ್ ಮಾತೆಯ ಹಬ್ಬವನ್ನು ಶಾಲಾ ಸಭಾ ಭವನದಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂದಾಪುರ ರೋಜರಿ ಮಾತಾ ಇಗರ್ಜಿಯ 18 ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ ಕಾರ್ಮೆಲ್ ಮಾತೆಯ ಹುತ್ತರಿ (ಬೆಂತಿಣ್) ಬಗ್ಗೆ ತಿಳಿಸಿ. ಕಾರ್ಮೆಲ್ ಮಾತೆ ಸಂತ ಸೈಮನ್ ಸ್ಟೋಕ್ ಇವರಿಗೆ ದರ್ಶನ ಕೊಟ್ಟು ಇದನ್ನು ದರಿಸಿಕೊಂಡವರಿಗೆ ನಾನು ರಕ್ಷಣೆ ಕೊಡುತ್ತೇನೆ ಎಂದು ವಾಗ್ದಾನ ಮಾಡಿದ್ದನ್ನು ವಿವರಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ವಾಯ್ಲೆಟ್ ತಾವ್ರೊ ಕಾರ್ಮೆಲ್ ಮಾತೆಯ ಸಂದೇಶವನ್ನು ತಿಳಿಸಿದರು. 9 ನೇ ತರಗತಿಯ ಮಕ್ಕಳು ಕಾರ್ಮೆಲ್ ಮಾತೆಯ ಬಗ್ಗೆ ಪ್ರದರ್ಶನ, ಗಾಯಾನಗಳ ಮೂಲಕ ಕಾರ್ಯಕ್ರಮವನ್ನು ನಡೆಸಿಸಿಕೊಟ್ಟರು. ಕಾರ್ಯಕ್ರಮವನ್ನು ಶಿಕ್ಷಕಿ ಸಿಸ್ಟರ್ ಸಿಲ್ವಿಯಾ ಆಯೋಜಿಸಿದ್ದರು.