ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ ಸ್ಕೌಟ್ ಗೈಡ್ಸ್ ಸ್ಥಾಪಕರ ಮತ್ತು ಚಿಂತ್ತನ ದಿನಾಚರಣೆ

ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ ಸ್ಕೌಟ್ ಗೈಡ್ಸ್ ಸ್ಥಾಪಕರ ಮತ್ತು ಚಿಂತ್ತನ ದಿನಾಚರಣೆ

ಕುಂದಾಪುರ, ಫೆ: 23: ಸಂತ ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ ಸ್ಕೌಟ್ ಗೈಡ್ಸ್ ಸ್ಥಾಪಕ ರೊರ್ಬಟ್ ಬೇಡನ್ ಪಾವೆಲ ಇವರ ದಿನಚರಣೆ ಮತ್ತು ಚಿಂತ್ತನ ದಿನಚರಣೆಯನ್ನು ಶಾಲಾ  ಸ್ಕೌಟ್ ಗೈಡ್ಸ್ ತಂಡದವರು ಶಾಲಾ ಸಭಾ ಭವನದಲ್ಲಿ ಆಚರಿಸಿದರು.

    ಈಸಂದರ್ಭದಲ್ಲಿ ಸ್ಕೌಟ್ ಗೈಡ್ಸ್ ಸ್ಥಾಪಕ ರೊರ್ಬಟ್ ಬೇಡನ್ ಪಾವೆಲ ಇವರ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಯಿತು.  ನಂತರ ಚಿಂತನ ದೀನವನ್ನು ಆಚರಿಸಿ ಸ್ಕೌಟ್ ಗೈಡ್ಸ್ ಬಗ್ಗೆ ಚಿಂತನೆಯ ಕಾರ್ಯಕ್ರಮವನ್ನು ಜರುಗಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ವಾಯ್ಲೆಟ್ ತಾವ್ರೊ ಮಕ್ಕಳಿಗೆ ಅರಿವನ್ನು ಮೂಡಿಸಿದರು.

    ವಿದ್ಯಾರ್ಥಿಗಳಿಂದ ಪ್ರಾರ್ಥನೆ, ಸಮೂಹ ಗಾಯನಾ, ಸಮೂಹ ನ್ರತ್ಯ, ಪ್ರತಿಜ್ನಾ ಸ್ವೀಕಾರ ಮುಂತಾದ ಕಾರ್ಯಕ್ರಮಗಳು ನೆಡೆದವು. ಈ ಕಾರ್ಯಕ್ರಮಕ್ಕೆ ಸ್ಕೌಟ್ ಗೈಡ್ಸ್ ಶಿಕ್ಷಕಿ ಸೆಲಿನ್ ಡಿಸೋಜಾ ಮಾರ್ಗದರ್ಶನ ನೀಡಿದರು. ಈ ಕಾರ್ಯಕ್ರಮದಲ್ಲಿ ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯ ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. ಈ ಕಾರ್ಯಕ್ರಮದ ಯಶಸ್ಸಿಗೆ ಶಿಕ್ಷಕ – ಶಿಕ್ಷಕೇತರರ ಸಹಕಾರದಿಂದ ಈ ಕಾರ್ಯಕ್ರಮವನ್ನು ಆಚರಿಸಲಾಯಿತು.