JANANUDI.COM NETWORK
ಕುಂದಾಪುರ,ಸೆ.26: ಸ್ಥಳೀಯ ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ 40 ವರ್ಷಗಳ ಕಾಲ ಸುದೀರ್ಘ ಸೇವೆ ನೀಡಿ ನಿವ್ರತ್ತರಾದ ಶಿಕ್ಷಕೇತರ ಸಿಬಂದಿ ಡೋರಾ ಡಿಸೋಜಾರವರಿಗೆ ಶಾಲಾ ಆಡಳಿತ, ಶಾಲಾ ಶಿಕ್ಷಕ, ಶಿಕ್ಷಕೇತರ ಸಿಬಂದಿ ಅವರಿಗೆ ಬಿಳ್ಕೊಡುಗೆ ಸಮಾರಂಭ ಏರ್ಪಡಿಸಿ ಸನ್ಮಾಸಿತು.
‘ಶಾಲಾ ಮಕ್ಕಳ ಏಳಿಗೆಗಾಗಿ ಶಿಕ್ಷಕರ ಜೊತೆ ಶಿಕ್ಷಕೇತರ ಸಿಬಂದಿ ಶ್ರಮವೂ ಬೇಕಾದಷ್ಟು ಇರುತ್ತದೆ, ಶಾಲಾ ಶಿಕ್ಷಕರು ಹೆಚ್ಚುವರಿ ಪಾಠ ಮಾಡುವಾಗ ಅವರ ಸಹಕಾರ ತುಂಬ, ಶಿಕ್ಷಕರಿಗಿಂತ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕೇತರರ ಹತ್ತಿರ ಸಲುಗೆ, ಆತ್ಮೀಯತೆ ಹೆಚ್ಚು ಇರುತ್ತದೆ, ಆದರಿಂದ ಮಕ್ಕಳ ನೋವು ನಲಿವು ಮೊದಲು ಅವರಿಗೆ ತಿಳಿಸುತ್ತಾರೆ, ಇಂತಹ ಭಾಗ್ಯ ಡೋರಾ ಡಿಸೋಜಾ ಪಡೆದಿದ್ದಾರೆ. ಅವರು ಸೇವೆಯಲ್ಲಿದ್ದಷ್ಟು ಸಮಯ ಪ್ರಮಾಣಿಕವಾಗಿ ಸೇವೆ ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ತಾಯಿಯ ಸಮಾನ ಪ್ರೀತಿ, ವಾತ್ಸಲ್ಯ, ಮಮತೆ ಕೊಟ್ಟಿದ್ದಾರೆ, ತಪ್ಪು ಮಾಡಿದವರನ್ನು ಬುದ್ದಿ ಹೇಳಿ ತಿದ್ದಿದ್ದಾರೆ. ಶಾಲೆಯ ನೆಲ, ಕ್ಲಾಸು ರೂಮುಗಳು, ಪೀಠೊಪಕರಣಗಳಿಗೆ ಜೀವ ತುಂಬಿರುವ ವ್ಯಕ್ತಿ ಅವರಾಗಿದ್ದಾರೆಂದು ಸಹ ಶಿಕ್ಷಕ ಅಶೋಕ ದೇವಾಡಿಗ ಅವರ ಬಗ್ಗೆ ಹೆಮ್ಮೆಯ ನುಡಿಗಳನ್ನಾಡಿದರು.
ಸಹ ಶಿಕ್ಷಕಿ ಶ್ರೀಮತಿ ಶ್ರೀಲತಾ ಸನ್ಮಾನ ಪತ್ರವನ್ನು ವಾಚಿಸಿದರು. ಸಂತ ಜೋಸೆಫ್ ಪ್ರೌಢಶಾಲೆಯ ಜಂಟಿ ಕಾರ್ಯದರ್ಶಿ ಸಿಸ್ಟರ್ ಕೀರ್ತನ, ಹಿಂದಿನ ಸಾಲಿನ ಮುಖ್ಯ ಶಿಕ್ಷಕರಾದ, ಸಿಸ್ಟರ್ ವೈಲೆಟ್ ತಾವ್ರೊ, ಸಿಸ್ಟರ್ ಆಶಾ ಮತ್ತು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಇವರುಗಳೆಲ್ಲಾ ಡೋರಾ ಡಿಸೋಜಾಳ, ಸೇವೆ, ಕರ್ತವ್ಯ ನಿಷ್ಠೆ, ಪ್ರಮಾಣಿಕತೆ, ವಿನಮ್ರತೆ, ಮಕ್ಕಳಲ್ಲಿನ ಕಾಳಜಿಯ ಸ್ಪಂದನೆಯ ಗುಣಗಳನ್ನು ವ್ಯಾಖ್ಯಾನಿಸಿ ಮೆಚ್ಚುಗೆಯ ನುಡಿಗಳನ್ನಾಡಿದರು.
ಡೋರಾ ಇವರ ಪತಿ ಗಿಲ್ಬರ್ಟ್ ಡಿಸೋಜಾ, ಸಹ ಶಿಕ್ಷಕಿಯರಾದ ಸಿಸ್ಟರ್ ಐವಿ, ಸರಸ್ವತಿ, ಸೆಲಿನ್ ಬಾರೆಟ್ಟೊ ಶಿಕ್ಷೇತರ ಸಿಬಂದಿ ವಿನಯಾ ಡಿಕೋಸ್ತಾ, ಜೊಸ್ಪಿನ್ ಪೇರೀಸ್, ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು, ಶಿಕ್ಷಕ ರಕ್ಷಕ ಸಂಘದ ಸದಸ್ಯರು, ಡೋರಾ ಡಿಸೋಜಾ ಮಕ್ಕಳು ಕುಟುಂಬದವರು, ಬಿಸಿಯೂಟ ಸಿಬಂದಿಗಳು, ಉಪಸ್ಥಿತರಿದ್ದರು.
ಪ್ರಭಾರ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಸಿಲ್ವಿಯಾ ಸ್ವಾಗತಿಸಿದರು. ದೈಹಿಕ ಶಿಕ್ಷಕ ಮೈಕಲ್ ಪುಟಾರ್ಡೊ ಕಾರ್ಯಕ್ರಮ ನಿರೂಪಿಸಿದರು. ಡೋರಾ ಡಿಸೋಜಾ ಕ್ರತಜ್ಞತೆ ಸಲ್ಲಿಸಿದರು.