ಸಂತ ಜೋಸೆಫರ ಪ್ರೌಢ ಶಾಲೆ, ಕುಂದಾಪುರ. ಉಚಿತ ಸೈಕಲ್ ವಿತರಣೆ

JANANUDI.COM NETWORK

ಸಂತ ಜೋಸೆಫರ ಪ್ರೌಢ ಶಾಲೆ, ಕುಂದಾಪುರ. ಉಚಿತ ಸೈಕಲ್ ವಿತರಣೆ

ಕುಂದಾಪುರ, ಸೆ.18: ಸಂತ ಜೋಸೆಫರ ಪ್ರೌಢ ಶಾಲೆ ಕುಂದಾಪುರದಲ್ಲಿ ಕರ್ನಾಟಕ ಸರ್ಕಾರ ಉಚಿತವಾಗಿ ಕೊಡಮಾಡಿದ ಸೈಕಲ್ ವಿತರಣಾ ಕಾರ್ಯಕ್ರಮವು ಸೆಪ್ಟಂಬರ್ 17 ರಂದು ನೆರವೇರಿತು. ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ವೈಲೆಟ್ ತಾವ್ರೊರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕುಂದಾಪುರ ಪುರಸಭೆಯ 6ನೇ ಚಿಕ್ಕನ್‍ಸಾಲ್ ವಾರ್ಡ್‍ನ ಸದಸ್ಯರಾದ ಸಂತೋಷ್ ಶೆಟ್ಟಿ ಇವರು ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಸರಕಾರ ಉಚಿತ ನೀಡಿದ ಸೈಕಲನ್ನು ಸದ್ವಿನಿಯೋಗ ಪಡಿಸಿಕೊಂಡು ಕಲಿಕೆಯಲ್ಲಿ ಹೆಚ್ಚಿನ ಸಾಧನೆ ಮಾಡಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ ಇಲ್ಲಿನ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಸುನೀತಾ ಬಾಂಜ್‍ರವರು ಮಾತನಾಡುತ್ತಾ ವಿದ್ಯಾರ್ಥಿಗಳು ಸೈಕಲನ್ನು ಜೋಪಾನವಾಗಿ ಇಟ್ಟುಕೊಳ್ಳುವುದರೊಂದಿಗೆ ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು. ಶಾಲಾ ಜಂಟಿ ಕಾರ್ಯದರ್ಶಿಗಳಾದ ಸಿಸ್ಟರ್ ಕೀರ್ತನ್‍ರವರು ಶುಭ ಹಾರೈಸಿದರು. ಪ್ರೌಢ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಸಿಲ್ವಿಯಾ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿರುವ ಶ್ರೀ ಹರೀಶ್ ಭಂಡಾರಿ ಉಪಸ್ಥಿತರಿದ್ದರು. ಶಿಕ್ಷಕ ಅಶೋಕ ದೇವಾಡಿಗ ಸ್ವಾಗತಿಸಿದರು. ದೈಹಿಕ ಶಿಕ್ಷಕ ಮೈಕಲ್ ಫುರ್ಟಾಡೊ ನಿರೂಪಿಸಿದರು.