ಶ್ರೀ ಕ್ಷೇತ್ರ ಬೆಳ್ಮಣ್ಣು : ಮಾರ್ಚ್ 14 ರಿಂದ 18ರ ವರೆಗೆ ವರ್ಷಾವಧಿ ಜಾತ್ರಾ ಮಹೋತ್ಸವ
ಇತಿಹಾಸ ಪ್ರಸಿದ್ಧ ಕಾರಣೀಕದ ಕ್ಷೇತ್ರ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಮಾರ್ಚ್ 14 ರಿಂದ 18ರ ವರೆಗೆ ಜರಗಲಿದೆ.
ಮಾರ್ಚ್ 14 ಬುಧವಾರ ಬೆಳಿಗ್ಗೆ ಧ್ವಜಾರೋಹಣ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಊರ ಆಯನ, ಉತ್ಸವ ಬಲಿ
ಮಾರ್ಚ್ 15 ಗುರುವಾರ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ತಪ್ಪಂಗಾಯಿ ಬಲಿ
ಮಾರ್ಚ್ 16 ಶುಕ್ರವಾರ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಮೂಡುಸವಾರಿ ಉತ್ಸವ, ಅಬ್ಬನಡ್ಕದಲ್ಲಿ ಕಟ್ಟೆಪೂಜೆ
ಮಾರ್ಚ್ 17 ಶನಿವಾರ ಏಕಾದಶಿ, ರಾತ್ರಿ ಸಿರಿ ಭೂತ ಬಲಿ, ಕವಾಟ ಬಂಧನ, ಶಯನ ಪೂಜೆ
ಮಾರ್ಚ್ 18 ಆದಿತ್ಯವಾರ ಬೆಳಿಗ್ಗೆ ಕವಾಟೋದ್ಘಾಟನೆ, ತುಲಾಭಾರ ಸೇವೆ, ಆರಾಟ ಮಹೋತ್ಸವ ಮಧ್ಯಾಹ್ನ ಮಹಾಪೂಜೆ, ಮಹಾ ಅನ್ನಸಂತರ್ಪಣೆ, ಸಾಯಂಕಾಲ ಅವಭೃಥ , ಕಟ್ಟೆಪೂಜೆ ಆರಂಭ
ಮಾರ್ಚ್ 19 ಸೋಮವಾರ ಧ್ವಜಾವರೋಹಣ
ಮಾರ್ಚ್ 20 ಮಂಗಳವಾರ ಬೆಳಿಗ್ಗೆ ಶತರುದ್ರಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪಲ್ಲಪೂಜೆ, ಅನ್ನಸಂತರ್ಪಣೆ, ರಾತ್ರಿ ಮಹಾರಂಗ ಪೂಜೆ
ಮಾರ್ಚ್ 21 ಬುಧÀವಾರ ರಾತ್ರಿ ಪಂಚ ದೈವಗಳ ನೇಮೋತ್ಸವ ಜರಗಲಿದೆ ಎಂದು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ವೇ|ಮೂ|ಶ್ರೀ ಬಿ.ಎಂ.ಕೃಷ್ಣ ಭಟ್ ಮತ್ತು ವೇ|ಮೂ|ಶ್ರೀ ಬಿ.ಕೆ. ವಿಘ್ನೇಶ್ ಭಟ್‍ರವರು ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.