ಶ್ರೀನಿವಾಸಪುರ ಹೆಚ್. ನಲ್ಲಪಲ್ಲಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ: ಸರ್ಕಾರದ ಪರಿಹಾರಕ್ಕಾಗಿ ಮನವಿ

ವರದಿ: ಶಬ್ಬೀರ್ ಅಹ್ಮದ್

ಶ್ರೀನಿವಾಸಪುರ ಹೆಚ್. ನಲ್ಲಪಲ್ಲಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ: ಸರ್ಕಾರದ ಪರಿಹಾರಕ್ಕಾಗಿ ಮನವಿ


ಶ್ರೀನಿವಾಸಪುರ: ಹೆಚ್. ನಲ್ಲಪಲ್ಲಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಉಂಟಾಗಿ ಮನೆಯ ಛಾವಣಿ, ಗೃಹ ಉಪಯೋಗ ವಸ್ತುಗಳು, ಒಂದು ಮಾವಿನ ಮರ, 2 ತೆಂಗಿನ ಮರ ಸೇರಿ ಸುಮಾರು 2 ಲಕ್ಷ ಬೆಲೆ ಬಾಳುವ ವಸ್ತುಗಳು ಸುಟ್ಟು ಹೋಗಿವೆ ಎಂದು ರೈತ ಮುನಿನಾರಾಯಣಪ್ಪ ಸರ್ಕಾರದ ಪರಿಹಾರಕ್ಕಾಗಿ ಮನವಿ ಮಾಡಿದ್ದಾರೆ.
ಪಟ್ಟಣದ ಹೊರಭಾÀಗದಲ್ಲಿರುವ ನಲ್ಲಪಲ್ಲಿ 21/1 ಸರ್ವೆ ನಂಬರಿನಲ್ಲಿ ಮುನಿನಾರಾಯಣಪ್ಪ, ಸುಮಾರು 40ವರ್ಷಗಳಿಂದ ಬೋರ್ ವೆಲ್ ಹಾಕಿಕೊಂಡು ಅಲ್ಲಿಯೆ ಮನೆಯನ್ನು ನಿರ್ಮಿಸಿಕೊಂಡು ಕೃಷಿ ಕೆಲಸಗಳನ್ನು ಮಾಡಿಕೊಂಡು ಅಲ್ಲಿ ತಂಗಲಾಗಿದ್ದು, ಮನೆಯ ಮುಂಬಾಗ 30 ವರ್ಷಗಳ ಬಾದಾಮಿ ಮಾವಿನ ಮರ, ಮನೆಯ ಹಿಂದಗಡೆ 2 ತೆಂಗಿನಮರಗಳು ಇದ್ದು, ಗುರುವಾರ ಸುಮಾರು 3.30 ಗಂಟೆಯಲ್ಲಿ ಆಕಸ್ಮಿಕ ಬೆಂಕಿ ಉಂಟಾಗಿ ಮನೆಯ ಮುಂಬಾಗದ ಮೇಲ್ಛಾವಣೆ ಸುಟ್ಟು ಬೃಹದಾಕಾರದ ಸುಮಾರು 1500 ಕೆ.ಜಿ. ಮಾವಿನ ಕಾಯಿ ಇರುವ ಮರ, ತೆಂಗಿನ ಮರ, ಹುಡ್ ವರ್ಕ್ ಕೆಲಸಕ್ಕೆ ಬೇಕಾಗಿರುವ ಮರದ ದಿಮ್ಮಿಗಳು ಸುಡುತ್ತಿದ್ದ ವೇಳೆ, ನೆರೆಹೊರೆಯವರ ಮಾಹಿತಿಯಿಂದ ರೈತರು ಕಂಗಾಲಾಗಿ ಕೂಡಲೆ ಅಗ್ನಿ ಶಾಮಕ ದಳಕ್ಕೆ ಮನವಿ ಮಾಡಿದಾಗ, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ವಾಹನ ಉರಿಯುತ್ತಿರುವ ಬೆಂಕಿಯನ್ನು ಆರಿಸಿ ಹೆಚ್ಚು ಆಗುತ್ತಿರುವ ಅನಾಹುತವನ್ನು ತಪ್ಪಿಸಿದ್ದಾರೆ. ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ಸ್ಥಳಪರಿಶೀಲಿಸಿ ವರಧಿಯನ್ನು ಸಂಗ್ರಹಿಸಿದ್ದು ಸರ್ಕಾರದಿಂದ ಬರುವ ಪರಿಹಾರವನ್ನು ದೊರಕಿಸಿಕೊಡಬೇಕಾಗಿ ನೊಂದ ರೈತ ಮುನಿನಾರಾಯಣಪ್ಪ ಮತ್ತು ಮಗ ಸೊಣ್ಣೆಗೌಡ ಮನವಿ ಮಾಡಿದ್ದಾರೆ.