ಶ್ರೀನಿವಾಸಪುರ: ಹಾಲು ಉತ್ಪಾದಕರ ಸಂಹಕಾರ ಸಂಘಗಳಿಗೂ ನೂತನ ಕಟ್ಟಡ ನಿರ್ಮಿಸಿಕೊಳ್ಳಲು ಅಗತ್ಯವಾದ ಆರ್ಥಿಕ ನೆರವು ನೀಡಲಾಗುವುದು: ಕೋಚಿಮುಲ್‌ ನಿರ್ದೇಶಕ ಎನ್‌.ಹನುಮೇಶ್‌

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ: ಹಾಲು ಉತ್ಪಾದಕರ ಸಂಹಕಾರ ಸಂಘಗಳಿಗೂ ನೂತನ ಕಟ್ಟಡ ನಿರ್ಮಿಸಿಕೊಳ್ಳಲು ಅಗತ್ಯವಾದ ಆರ್ಥಿಕ ನೆರವು ನೀಡಲಾಗುವುದು ಎಂದು ಕೋಚಿಮುಲ್‌ ನಿರ್ದೇಶಕ ಎನ್‌.ಹನುಮೇಶ್‌ ಹೇಳಿದರು.  ತಾಲ್ಲೂಕಿನ ಚಿಂತಮಾಕನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ತಾಲ್ಲೂಕಿನಲ್ಲಿ 109 ಹಾಲು ಉತ್ಪಾದಕರ ಸಹಕಕಾರ ಸಂಘಗಳು ಸ್ವಂತ ಕಟ್ಟಡ ಹೊಂದಿವೆ. ತಾಲ್ಲೂಕಿನ 163 ಹಾಲು ಉತ್ಪಾದಕರ ಸಹಕಾರ ಸಂಘಗಳು ಸ್ವಂತ ಕಟ್ಟಡ ಹೊಂದಲು ಅಗತ್ಯವಾದ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.  ಸಂಘದ ಕಟ್ಟಡ ನಿರ್ಮಾಣಕ್ಕೆ ಕೋಚಿಮುಲ್‌ ವತಿಯಿಂದ ರೂ.3 ಲಕ್ಷ ಹಾಗೂ ಕೆಎಂಎಫ್‌ ವತಿಯಿಂದ ರೂ.3 ಲಕ್ಷ ಅನುದಾನ ನೀಡಲಾಗುವುದು. ಶಿಥಿಲಗೊಂಡಿರುವ 6 ಕಟ್ಟಡಗಳ ದುರಸ್ತಿಗೆ ತಲಾ ರೂ.2 ರಿಂದ 3 ಲಕ್ಷ ಅನುದಾನ ನೀಡಲಾಗುವುದು. ಅರ್ಹ ಸಂಘಗಳು ಈ ಅನುದಾನವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.  ಉಪ ಕಚೇರಿಯ ಉಪ ವ್ಯವಸ್ಥಾಪಕ ಡಾ. ವಿ.ಎನ್‌.ಶ್ರೀಕಾಂತ್‌ ಮಾತನಾಡಿ, ಹಾಲು ಉತ್ಪಾದಕರು ಉತ್ತಮ ಗುಣಮಟ್ಟದ ಹಾಲು ಉತ್ಪಾದಿಸಿ, ಸಂಘಗಳಿಗೆ ನೀಡಬೇಕು. ಹಾಗೆ ಮಾಡುವುದರಿಂದ ಹಾಲು ಉತ್ಪಾದಕರು ಹಾಗೂ ಹಾಲು ಸಂಘಗಳಿಗೆ ಲಾಭವಾಗುತ್ತದೆ ಎಂದು ಹೇಳಿದರು.  ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸುಧಾಕರ್‌, ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ ಅಮೀರ್‌ ಖಾನ್‌, ವಿಸ್ತರಣಾಧಿಕಾರಿಗಳಾದ ಎನ್‌.ಗಣೇಶ್‌, ನಯೀಮ್‌ ಅಹ್ಮದ್‌ ಇದ್ದರು.