ಶ್ರೀನಿವಾಸಪುರ: ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಪಟ್ಟಣದಲ್ಲಿ ಶಾಂತಿಯುತ ಬಂದ್‌ ಆಚರಿಸಲಾಯಿತು.

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

 ಪಟ್ಟಣದಲ್ಲಿ ಅಂಗಡಿ ಮುಂಗಟ್ಟು ಮುಚ್ಚಲ್ಪಟ್ಟಿತ್ತು. ಆಟೋ ಸೇರಿದಂತೆ ಯಾವುದೇ ವಾಹನ ಸಂಚಾರ ಇರಲಿಲ್ಲ. ಪೆಟ್ರೋಲ್‌ ಬಂಕ್‌ಗಳು ಕಾರ್ಯನಿರ್ವಹಿಸಲಿಲ್ಲ. ಸರ್ಕಾರಿ ಕಚೇರಿಗಳು ತೆರೆದಿದ್ದವಾದರೂ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಬೆಳಿಗ್ಗೆ ಗ್ರಾಮೀಣ ಪ್ರದೇಶದಿಂದ ಅಗತ್ಯ ವಸ್ತುಗಳ ಮಾರಾಟ ಹಾಗೂ ಖರೀದಿಗಾಗಿ ಬಂದಿದ್ದ ಜನರು ಸಮೀಪದ ಗ್ರಾಮಗಳಿಗೆ ನಡೆದು ಹೋಗುವ ದೃಶ್ಯ ಸಮಾನ್ಯವಾಗಿತ್ತು.    ತಾಲ್ಲೂಕಿನ ರಾಯಲ್ಪಾಡ್‌, ಗೌನಿಪಲ್ಲಿ, ಸೋಮಯಾಜಲಹಳ್ಳಿ, ಲಕ್ಷ್ಮೀಸಾಗರ, ರೋಜೇನಹಳ್ಳಿ ಕ್ರಾಸ್‌, ರೋಣೂರು, ಯಲ್ದೂರು ಗ್ರಾಮಗಳಲ್ಲಿ ಬಂದ್‌   ವಿವಿಧ ಸಂಘಟನೆಗಳ ಮುಖಂಡರಾದ ಪಿ.ಆರ್‌.ಸೂರ್ಯನಾರಾಯಣ, ಪಾತಕೋಟ ನವೀನ್ ಕುಮಾರ್‌, ಶ್ರೀರಾಮರೆಡ್ಡಿ, ಚಂದ್ರು, ಮೂರ್ತಿ, ಬೈರಾರೆಡ್ಡಿ, ಜನಾರ್ಧನಪ್ಪ, ಸುಬ್ರಮಣಿ, ಸಸ್ಲಾಂ, ಉಮಾದೇವಿ, ಜಿ.ಈಶ್ವರಮ್ಮ, ಮಂಜುಳ, ಮಮತ, ಈಶ್ವರಪ್ಪ, ಅಮರನಾರಾಯಣಪ್ಪ, ಸೈಯದ್‌ ಫಾರುಕ್‌, ನಂಜಪ್ಪ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.