ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಶ್ರೀ ಮಹರ್ಶಿ ವಾಲ್ಮೀಕಿ ರವರು ಒಂದು ಸಮಾಜಕ್ಕೆ ಸೀಮಿತವಾಗಿಲ್ಲ, ಇವರು ರಚಿಸಿದ ಮಹಾಕಾವ್ಯ ಶ್ರೀ ರಾಮಾಯಣ ಗ್ರಂಥದ ಮಹತ್ವದ ಸಾರಾಂಶ ಕಲಿಯುಗದ ಪ್ರತಿಯೊಬ್ಬರಿಗೂ ಆದರ್ಶಪ್ರಾಯವಾಗಿದೆ ಎಂದು ತಹಸೀಲ್ದಾರ್ ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಕೋವಿಡ್ 19 ರ ಪ್ರಯುಕ್ತ ಸರಳವಾಗಿ ವಾಲ್ಮೀಕಿ ಜಯಂತಿಯನ್ನು ನೆರವೇರಿಸಲಾಗಿತ್ತು. ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಶ್ರೀನಿವಾಸ್, ವಾಲ್ಮೀಕಿ ಮಹರ್ಶಿಗಳು ತ್ರೇತಾಯುಗಲದಲ್ಲಿ ಶ್ರೀ ರಾಮಾಯಣ ಎಂಬ ಕಾವ್ಯವನ್ನು ರಚನೆ ಮಾಡಿ ಸೀತಾ ಮಾತೆಯವರಿಗೆ ಅರಣ್ಯ ವಾಸದಲ್ಲಿ ಆಶ್ರಯವನ್ನು ಕಲ್ಪಿಸಿಕೊಟ್ಟ ಮಹನೀಯರಾಗಿದ್ದು, ಈಗಿನ ಶತಮಾನದಲ್ಲಿ ನಾವು ನೀವೆಲ್ಲರೂ ಶ್ರೀರಾಮನನ್ನು ಆರಾಧಿಸುತ್ತೇವೆ. ಇಂತಹ ಮಹನೀಯರನ್ನು ಒಂದು ಸಮಾಜಕ್ಕೆ ಸೀಮಿತವಲ್ಲದೆ ಪ್ರತಿಯೊಬ್ಬರು ಮಹರ್ಶಿ ವಾಲ್ಮೀಕಿಯವರನ್ನು ಪೂಜಿಸಬೇಕು ಎಂದು ತಿಳಿಸಿದರು.
ಇದೆ ಕಾರ್ಯಕ್ರಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಗುರು ಪೀಠ ಟ್ರಸ್ಟ್ ವತಿಯಿಂದ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಪರಿ ಶಿಷ್ಟ ಪಂಗಡದವರಿಗೆ ಶೈಕ್ಷಣಿಕ ಹಾಗೂ ಔಧ್ಯೋಗಿಕ ಮೀಸಲಾತಿ ಪ್ರಮಾಣ ಶೇಕಡಾ 3 ರಿಂದ 7.5 ಕ್ಕೆ ಹೆಚ್ಚಳ ಮಾಡುವ ಬಗ್ಗೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರಧಿಯನ್ನು ಸಚಿವ ಸಂಪುಟದಲ್ಲಿ ಅನುಮೋದಿಸಿ ಆದೇಶ ಹೊರಡಿಸಬೇಕು, ಜೊತೆಗೆ ಪರಿಶಿಷ್ಟ ಜಾತಿ ಸಮಾಜಕ್ಕೆ ಮೀಸಲಾತಿ ಪ್ರಕಾರ ಶೇಕಡಾ 15 ರಿಂದ 17 ಕ್ಕೆ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿ ಮನವಿ ಪ್ರತ್ರವನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಇ.ಒ. ಆನಂದ್, ಎ. ಡಿ. ರಾಮಪ್ಪ, ವಾಲ್ಮೀಕಿ ಸಮಾಜದ ತಾಲ್ಲೂಕು ಅಧ್ಯಕ್ಷ ಹೊಗಳಗೆರೆ ಆಂಜನೇಯಪ್ಪ, ಜಿಲ್ಲಾ ವಾಲ್ಮೀಕಿ ನಾಯಕ ಸ್ವಾಭಿಮಾನಿ ಚಳುವಳಿ ಜಿಲ್ಲಾ ಅಧ್ಯಕ್ಷ ಹರೀಶ್ ನಾಯ್ಕ್, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಕೆ. ಮಂಜುನಾಥ್, ವಾಲ್ಮೀಕಿ ಸಮಾಜದ ನೌಕರ ಸಂಘದ ಪದಾಧಿಕಾರಿಗಳು , ಮಾಜಿ ಎ.ಪಿಎಂ.ಸಿ. ಮಾಜಿ ಉಪಾಧ್ಯಕ್ಷ ಕೃಷ್ಣಪ್ಪ, ನರಸಿಂಹಪ್ಪ, ವಾಲ್ಮೀಕಿ ಮುಖಂಡರಾದ ನರಸಿಂಹಪ್ಪ, ಕೊರ್ನಹಳ್ಳಿ ಅಂಜಿ. ಹೊಗಳಗೆರೆ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.