ಶ್ರೀನಿವಾಸಪುರ: ರೈತರು ಮಾವಿಗೆ ಪರ್ಯಾಯವಾಗಿ ಗೋಡಂಬಿ ಬೇಸಾಯ ಕೈಗೊಳ್ಳಬೇಕು:ಡಾ. ಆರ್‌.ಕೆ.ರಾಮಚಂದ್ರ 

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರ: ರೈತರು ಮಾವಿಗೆ ಪರ್ಯಾಯವಾಗಿ ಗೋಡಂಬಿ ಬೇಸಾಯ ಕೈಗೊಳ್ಳಬೇಕು:ಡಾ. ಆರ್‌.ಕೆ.ರಾಮಚಂದ್ರ 
ಶ್ರೀನಿವಾಸಪುರ: ರೈತರು ಮಾವಿಗೆ ಪರ್ಯಾಯವಾಗಿ ಗೋಡಂಬಿ ಬೇಸಾಯ ಕೈಗೊಳ್ಳಬೇಕು ಎಂದು ಹೊಗಳಗೆರೆ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ. ಆರ್‌.ಕೆ.ರಾಮಚಂದ್ರ ಹೇಳಿದರು.
  ತಾಲ್ಲೂಕಿನ ಬಿಸನಹಳ್ಳಿ ಗ್ರಾಮದಲ್ಲಿ ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ, ಹೊಗಳಗೆರೆ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಹಾಗೂ ಅಖಿಲ ಭಾರತ ಸಮನ್ವಯ ಗೋಡಂಬಿ ಸಂಶೋಧನಾ ಯೋಜನೆ ವತಿಯಿಂದ ಏರ್ಪಡಿಸಿದ್ದ  ಗೋಡಂಬಿ ಬೆಳೆಯ ಪರಿಚಯ ಹಾಗೂ ವೈಜ್ಞಾನಿಕ ಉತ್ಪಾದನಾ ತಾಂತ್ರಿಕತೆ ವಿಚಾರ ಸಂಕಿರಣದಲ್ಲಿ ಮಾತನಾಡಿ, ಗೋಡಂಬಿ ಹೆಚ್ಚು ಬೇಡಿಕೆಯ ಉತ್ಪನ್ನವಾಗಿದ್ದು, ವೈಜ್ಞಾನಿಕ ವಿಧಾನದಲ್ಲಿ ಬೆಳೆಯಬೇಕು ಎಂದು ಸಲಹೆ ಮಾಡಿದರು.
     ತೋಟಗಾರಿಕಾ ವಿಜ್ಞಾನಿ ಡಾ.ರಾಜೇಂದ್ರ ಮಾತನಾಡಿ, ಗೋಡಂಬಿ ಅಧಿಕ ಬೇಡಿಕೆಯುಳ್ಳ ಉತ್ಪನ್ನವಾಗಿದೆ. ಈ ಭಾಗದಲ್ಲಿ ಬೆಳೆಯಲು ಉಳ್ಳಾಳ–1 ಗೋಡಂಬಿ ತಳಿಯನ್ನು ಶಿಫಾರಸ್ಸು ಮಾಡಲಾಗಿದೆ. ದೇಶದಲ್ಲಿ ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ ಸಾಧ್ಯವಾಗುತ್ತಿಲ್ಲ.. ಅಗತ್ಯವಿರುವ ಗೊಡಂಬಿಯನ್ನು ಆಫ್ರಿಕಾದದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆದ್ದರಿಂದ ಗೋಡಂಬಿ ಭವಿಷ್ಯದ ಬೆಳೆಯಾಗಿದೆ ಎಂದು ಹೇಳಿದರು.
  ಇನ್ನೊಬ್ಬ ತೊಟಗಾರಿಕಾ ವಿಜ್ಞಾನಿ ಪೊಟ್ಟಪ್ಪ ಮಾತನಾಡಿ, ಗೋಡಂಬಿಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಿದೆ. ಗೋಡಂಬಿ ತಿನಿಸು ಪ್ರತಿಷ್ಠೆಯ ಸಂಕೇತವಾಗಿದೆ. ಮದುವೆ ಮತ್ತಿತರ ಸಮಾರಂಭಗಳಲ್ಲಿ ಗೋಡಂಬಿ ವಿತರಣೆ ಸಾಮಾನ್ಯವಾಗಿದೆ. ಶಂಶೋಧನಾ ಸಂಸ್ಥೆಗಳಿಂದ ತಾಂತ್ರಿಕ ತಿಳುವಳಿಕೆ ನೀಡಲಾಗುವುದು. ಉತ್ತಮ ಗುಣಮಟ್ಟದ ಸಸಿಗಳನ್ನು ಉತ್ಪಾದಿಸಿ ಕೊಡಲಾಗುವುದು. ರೈತರು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
  ಈ ಸಂದರ್ಭದಲ್ಲಿ ಫಲಾನುಭವಿಗಳಿಗೆ ಗೋಡಂಬಿ ಸಸಿಹಳನ್ನು ವಿತರಿಸಲಾಯಿತು. ವಿವಿಧ ತಳಿ ಗೋಡಂಬಿ ಹಾಗೂ ಗೋಡಂಬಿ ಬೀಜದ ಪ್ರದರ್ಶನ ಏರ್ಪಡಿಸಲಾಗಿತ್ತು. ಸ್ಥಳೀಯ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
   ರೈತ ಮುಖಂಡ ರಾಜಣ್ಣ, ಕೃಷಿಕ ಚಿಕ್ಕತಿರುಮಲಪ್ಪ, ರೈತ ಮಹಿಳೆ ವೆಂಕಟೇಶಮ್ಮ, ಬಿ.ಎಂ.ಲಕ್ಷ್ಮೀನಾರಾಯಣ ಇದ್ದರು.