ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಸಂಚಾರ ಆರಂಭಗೊಂಡಿತು. ಆದರೆ ಬೆರಳೆಣಿಕೆಯಷ್ಟು ಪ್ರಯಾಣಿಕರು ಮಾತ್ರ ನಿಲ್ದಾಣದಲ್ಲಿದ್ದರು.
ಬೆಳಿಗ್ಗೆಯಿಂದ ಪಟ್ಟಣದಿಂದ ಹೊರಗೆ ಹೋಗುವ ಪ್ರಯಾಣಿಕರು, ಖಾಸಗಿ ಬಸ್, ಆಟೋ ಹಾಗೂ ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣ ಬೆಳೆಸಿದ್ದರು. ಸಂಜೆಯ ಹೊತ್ತಿಗೆ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆ ಇತ್ತು. ಬಸ್ ಪ್ರಯಾಣ ಆರಂಭಗೊಳ್ಳುವುದು ಅನಿಶ್ಚಿತವಾಗಿದ್ದ ಕಾರಣ ನಿಲ್ದಾಣ ಬರಿದಾಗಿತ್ತು.
ಮೊದಲ ಬಸ್ ಡಿಪೋದಿಂದ ಪೊಲೀಸ್ ಬೆಂಗಾವಲಿನಲ್ಲಿ ನಿಲ್ದಾಣ ಪ್ರವೇಶಿಸಿತು. ಆದರೆ ಬಸ್ ನಿಲ್ದಾಣ ನಿರ್ಜನವಾಗಿತ್ತು. ಬಹಳ ಹೊತ್ತು ಕಾದ ಬಳಿಕ ಒಂದಿಬ್ಬರು ಪ್ರಯಾಣಿಕರು ಬಸ್ ಹತ್ತಿದರು. ರಸ್ತೆ ಸಾರಿಗೆ ಬಸ್ ಸಂಚಾರ ಪುನರಾರಂಭಗೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.
