ಶ್ರೀನಿವಾಸಪುರ:  ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಹಾಗೂ  ಖಾಸಗಿ ಬಸ್‌ ನಡುವೆ ಮುಖಾಮುಖಿ ಡಿಕ್ಕಿ 24ಕ್ಕೂ ಹೆಚ್ಚು ಮಂದಿ ಗಾಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ವರದಿ ಶಬ್ಬೀರ್ ಅಹಮದ್ ಶ್ರೀನಿವಾಸಪುರ

 

 

 

 

ಶ್ರೀನಿವಾಸಪುರ:  ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಹಾಗೂ  ಖಾಸಗಿ ಬಸ್‌ ನಡುವೆ ಮುಖಾಮುಖಿ ಡಿಕ್ಕಿ 24ಕ್ಕೂ ಹೆಚ್ಚು ಮಂದಿ ಗಾಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

 

 

ಶ್ರೀನಿವಾಸಪುರ: ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದ ಸಮೀಪ ಬುಧವಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಹಾಗೂ  ಖಾಸಗಿ ಬಸ್‌ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆದರೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.  

ಖಾಸಗಿ ಬಸ್‌ ಯಲ್ದೂರಿನಿಂದ ಶ್ರೀನಿವಾಸಪುರಕ್ಕೆ ಬರುತ್ತಿತ್ತು. ರಾಜ್ಯ ರಸ್ತೆ ಸಾರಿಗೆ ಬಸ್‌ ಶ್ರೀನಿವಾಸಪುರದಿಂದ ಯಲ್ದೂರಿಗೆ ಹೋಗುತ್ತಿತ್ತು. ಶೆಟ್ಟಿಹಳ್ಳಿ ಗ್ರಾಮದ ಗೆೇಟ್‌ ಸಮೀಪ ವೇಗವಾಗಿ ಸಾಗಿದ್ದ ಎರಡೂ ಬಸ್‌ಗಳು ಮುಖಾ ಮುಖಿ ಡಿಕ್ಕಿಯಾದವು. ಇದರಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, 20 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಡಿಕ್ಕಿಯಿಂದಾಗಿ ಎರಡೂ ಬಸ್‌ಗಳ ಮುಂಭಾಗ ಜಖಂಗೊಂಡಿದೆ.

  ಎರಡೂ ಬಸ್‌ ಚಾಲಕರು ಅತಿ ವೇಗವಾಗಿ ಬಸ್‌ಗಳನ್ನು ಓಡಿಸುತ್ತಿದ್ದುದು ದುರ್ಘಟನೆಗೆ ಕಾರಣವೆಂದು ಹೇಳಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ 4ಪ್ರಯಾಣಿಕರನ್ನು ಕೋಲಾರದ ಆರ್‌ಎಲ್‌ ಜಾಲಪ್ಪ ಆಸ್ಪತ್ರೆಗೆ ಸೇರಿಸಲಾಗಿದೆ. ಉಳಿದ ಗಾಯಾಳುಗಳನ್ನು ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಗಾಯಾಳುಗಳಲ್ಲಿ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಸೇರಿದ್ದಾರೆ. 

  ಡಿವೈಎಸ್‌  ಉಮೇಶ್‌, ಪೊಲೀಸ್‌ ಸರ್ಕಲ್‌್ ಇನ್ಸ್‌ಪೆಕ್ಟರ್‌ ಎನ್‌.ಕೆ.ರಾಘವೇಂದ್ರ ಪ್ರಕಾಶ್‌, ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ರಾಮಚಂದ್ರಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ನೆರವಾದರು.