ಶ್ರೀನಿವಾಸಪುರ: ಬೈರಗಾನಪಲ್ಲಿಗ್ರಾಮ ಪಂಚಾಯಿತಿಯಲ್ಲಿ ಕೆ.ಡಿ.ಪಿ. ಸಭೆಗೆ ತಾಲ್ಲೂಕು ಮಟ್ಟದವಿವಿಧ ಇಲಾಖಾ ಅಧಿಕಾರಿಗಳು ಗೈರು ಹಾಜರಾಗಿದ್ದರಿಂದ ಆಡಳಿತ ಮಂಡಲಿ ಸದಸ್ಯರು ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ಸಲ್ಲಿಸಲು ತೀರ್ಮಾನಿಸಿದರು.       

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ಶ್ರೀನಿವಾಸಪುರ: ಬೈರಗಾನಪಲ್ಲಿಗ್ರಾಮ ಪಂಚಾಯಿತಿಯಲ್ಲಿ ಕೆ.ಡಿ.ಪಿ. ಸಭೆಗೆ ತಾಲ್ಲೂಕು ಮಟ್ಟದವಿವಿಧ ಇಲಾಖಾ ಅಧಿಕಾರಿಗಳು ಗೈರು ಹಾಜರಾಗಿದ್ದರಿಂದ ಆಡಳಿತ ಮಂಡಲಿ ಸದಸ್ಯರು ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ಸಲ್ಲಿಸಲು ತೀರ್ಮಾನಿಸಿದರು.       

   

 ತಾಲ್ಲೂಕಿನ ಆಂದ್ರಗಡಿಭಾಗದ          ಬೈರಗಾನಪಲ್ಲಿಗ್ರಾಮಪಂಚಾಯಿತಿಯಲ್ಲಿಅಧ್ಯಕ್ಷರಾದಅನಿತಾರಾಜೇಂದ್ರರವರಅಧ್ಯಕ್ಷತೆಯಲ್ಲಿಗ್ರಾಮ ಪಂಚಾಯಿತಿ ಮಟ್ಟದಎಲ್ಲಾಅಭಿವೃದ್ದಿ ಇಲಾಖೆಗಳು 2019-20ನೇ ಸಾಲಿನ ಸೆಪ್ಟೆಂಬರ್‍ಅಂತ್ಯದವರೆಗೆ ಸಾಧಿಸಿರುವ ಆರ್ಥಿಕ ಮತ್ತು ಭೌತಿಕ ಪ್ರಗತಿಪರಿಶೀಲನಾ ಸಭೆಯನ್ನುಕರೆಯಲಾಗಿದ್ದು ಸಭೆಗೆತಾಲ್ಲೂಕು ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಬಾರದೆ ಕಡೆಗಣಿಸಿದ್ದಾರೆ ಎಂದು ಮಾಜಿಗ್ರಾ.ಪಂ. ಉಪಾಧ್ಯಕ್ಷ ಸದಸ್ಯ ಸಂಜಯ್‍ರೆಡ್ಡಿಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ಸಲ್ಲಿಸಿ ಎಂದು ಪಿ.ಡಿ.ಒ.ಗಳಿಗೆ ತಿಳಿಸಿದರು.
ಸಭೆಯಲ್ಲಿ ಸಂಜಯರೆಡ್ಡಿ ಮಾತನಾಡಿ ಈ ಗ್ರಾಮಪಂಚಾಯಿತಿಯಲ್ಲಿ 11 ಹಳ್ಳಿಗಳು ಸೇರಿದ್ದು, ಸರ್ಕಾರಿ ಕೊಳವೆ ಬಾವಿಗಳುಕುಡಿಯುವ ನೀರಿಗಾಗಿ 28 ಕೊರೆಯಲಾಗಿದ್ದು, ಇವುಗಳಲ್ಲಿ 11 ಕೊಳವೆ ಬಾವಿಗಳು ಕೆಲಸ ಮಾಡುತ್ತಿವೆ, ಆದರೆ ಇವುಗಳ ಮಾಸಿಕ ವಿಧ್ಯುತ್ ಬಿಲ್ಲುಸುಮಾರು 2 ಕೋಟಿ ರೂಗಳು ಬಾಕಿ ಇದೆಎಂದು ಬೆಸ್ಕಾಂ ಇಲಾಖೆಯವರು ಬಿಲ್ಲುಗಳನ್ನು ಕಳುಹಿಸಿದ್ದಾರೆ,ಕೊಳವೆ ಬಾವಿಗಳಿಗೆ ಮೀಟರುಗಳನ್ನು ಯಾವೊಂದಕ್ಕೂ ಅಳವಡಿಸಿರುವುದಿಲ್ಲ, ಇದರಲ್ಲಿ 1.68ಕೋಟಿ ರೂಗಳನ್ನು ನಾವುಗಳು ಪಾವತಿ ಮಾಡಬೇಕಾಗಿದೆ. 31 ಲಕ್ಷಬಡ್ಡಿವಿಧಿಸಿದ್ದಾರೆ ಎಂದು ಬೆಸ್ಕಾಂ ಇಲಾಖೆ ಮೇಲೆ ಆರೋಪ ಮಾಡಿದ್ದಾರೆ. 17 ಕೊಳವೆ ಬಾವಿಗಳು ಕೆಲಸ ಮಾಡದೆಇದ್ದರೂ ಇವುಗಳಿಗೂ ಸಹ ಬೆಸ್ಕಾಂ ಇಲಾಖೆಯವರು ಬಿಲ್ಲುಗಳನ್ನು ಕಳುಹಿಸುತ್ತಲೆ ಇದ್ದಾರೆ,ಇದಕ್ಕೆ ಬೆಸ್ಕಾಂ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಎಂದುಆರೋಪ ಮಾಡಿದರು.
ಪಿ.ಡಿ.ಒ.ರಾಮಚಂದ್ರಪ್ಪ ಮಾತನಾಡಿಗ್ರಾ.ಪಂ. ವಾಪ್ತಿಯಲ್ಲಿ 524 ಮನೆಗಳು ವಿವಿಧ ವಸತಿಯೋಜನೆಯಡಿ ಮಂಜೂರಾಗಿದ್ದು, 412 ಮನೆಗಳು ಪೂರ್ಣವಾಗಿದ್ದು, 26 ಮನೆಗಳು ಬ್ಲಾಕ್‍ಆಗಿದ್ದು, ಇನ್ನು ಉಳಿದ 10 ಮನೆಗಳನ್ನು ಪ್ರಾರಂಭ ಮಾಡಿರುವುದಿಲ್ಲ. ಅಂಬೇಡ್ಕರ್ ಮತ್ತು ಬಸವ ವಸತಿಯೋಜನೆಯಡಿ 1 ವರ್ಷದಿಂದ ಹಣ ಬಿಡುಗಡೆ ಮಾಡಿಲ್ಲ, ಹೊಸ ಉಡ್ಯ ಮತ್ತುಗಂಟನ್ನಗಾರಿಪಲ್ಲಿಯಲ್ಲಿ 2 ಮನೆಗಳು ಪೂರ್ಣವಾಗಿದ್ದುಇವರಿಗೆ 1 ಬಿಲ್ಲು ಸಹ ಬಂದಿರುವುದಿಲ್ಲ. ನರೇಗಯೋಜನೆಯಡಿಚೆಕ್‍ಡ್ಯಾಂ ಪೂರ್ಣವಾಗಿದ್ದು, ಇನ್ನೊಂದು ಪ್ರಗತಿಯಲ್ಲಿರುತ್ತದೆ, ಸಮುದಾಯ ಭವನಗಳಿಗೆ ಸಮಯಕ್ಕೆ ಸರಿಯಾಗಿಅನುದಾನ ಬಿಡುಗಡೆಯಾಗುತ್ತಿಲ್ಲಎಂದು ತಿಳಿಸಿದರು.
ಅಂಗನವಾಡಿಕಾರ್ಯಕರ್ತರು ಮನವಿ ಮಾಡಿ ಈ ಪಂಚಾಯಿತಿಯಲ್ಲಿ 9 ಕೇಂದ್ರಗಳು ನಡೆಯುತ್ತಿದ್ದು, ಎಲ್ಲಾ ಕೇಂದ್ರಗಳು ಶಿಥಿಲವಾಗಿದ್ದು, ಮಳೆ ಬಂದರೆ ಸೋರುವುದರಜೊತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಮನವಿ ಮಾಡಿಕೊಂಡರು.
ಇದೆ ಸಮಯದಲ್ಲಿ ಪಂಚಾಯಿತಿಯಜಲಗಾರರಿಗೆ ಆಡಳಿತ ಅಧ್ಯಕ್ಷರು, ಉಪಾಧ್ಯಕ್ಷರು ಪಿ.ಡಿ.ಒ. ವತಿಯಿಂದಜಲಗಾರರಿಗೆ ಸಮ ವಸ್ತ್ರವನ್ನು ವಿತರಿಸಿದರು.
ಇದೆ ಸಂದರ್ಭದಲ್ಲಿಅಧ್ಯಕ್ಷಿಣಿಅನಿತ, ಉಪಾಧ್ಯಕ್ಷರಾದಎನ್. ಶ್ರೀನಿವಾಸರೆಡ್ಡಿ, ಸದಸ್ಯರು ಮತ್ತುಗ್ರಾಮ ಪಂಚಾಯಿತಿ ಸಿಬ್ಬಂದಿ, ಬೆಸ್ಕಾಂ ಕಿರಿಯಇಂಜಿನಿಯರ್‍ಆನಂದ್, ಸ್ರೀ ಶಕ್ತಿ ಸಂಘದ ಸದಸ್ಯರು ಹಾಜರಿದ್ದರು