ಶ್ರೀನಿವಾಸಪುರ ಬಿ.ಇ.ಒ. ಶಂಷುನ್ನಿಸಾ ಮುಂಬಡ್ತಿ : ರೇಣುಕಮ್ಮ ಪ್ರಭಾರಿ ಅಧಿಕಾರ ಸ್ವೀಕಾರ

ವರದಿ: ಶಬ್ಬೀರ್ ಅಹ್ಮದ್

ಶ್ರೀನಿವಾಸಪುರ ಬಿ.ಇ.ಒ. ಶಂಷುನ್ನಿಸಾ ಮುಂಬಡ್ತಿ : ರೇಣುಕಮ್ಮ ಪ್ರಭಾರಿ ಅಧಿಕಾರ ಸ್ವೀಕಾರ

ಶ್ರೀನಿವಾಸಪುರ: ಬಿ.ಇ.ಒ. ಶಂಷುನ್ನಿಸಾ ಮುಂಬಡ್ತಿ ಯನ್ನು ಪಡೆದು ವರ್ಗಾವಣೆಯಾಗಿರುವುದರಿಂದ ಇವರ ಸ್ಥಾನಕ್ಕೆ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ರೇಣುಕಮ್ಮ ಪ್ರಭಾರಿಯಾಗಿ ಅಧಿಕಾರವನ್ನು ಸ್ವೀಕರಿಸಿ ಪರಸ್ಪರ ಅಭಿನಂದನೆಗಳನ್ನು ಸಲ್ಲಿಸಿಕೊಂಡರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸುಮಾರು ಒಂದು ವರ್ಷ ಕಾಲ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸಿದ ಶಂಷುನ್ನಿಸಾ ಮುಂಬಡ್ತಿಯನ್ನು ಪಡೆದು ವರ್ಗಾವಣೆಯಾದ್ದರಿಂದ ತೆರುವಾದ ಬಿ.ಇ.ಒ. ಸ್ಥಾನಕ್ಕೆ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ರೇಣುಕಮ್ಮ ಪ್ರಭಾರಿಯಾಗಿ ಶಂಷುನ್ನಿಸಾ ಅವರಿಂದ ಅಧಿಕಾರವನ್ನು ಸ್ವೀಕರಿಸಿ ಪರಸ್ಪರ ಅಭಿನಂದನೆಗಳನ್ನು ಸಲ್ಲಿಸಿಕೊಂಡರು.
ಪ್ರಭಾರಿ ಅಧಿಕಾರವನ್ನು ಸ್ವೀಕರಿಸಿ ಮಾತನಾಡಿದ ರೇಣುಕಮ್ಮ, ನನಗೆ ಸಿಕ್ಕ ಈ ಅವಕಾಶದಲ್ಲಿ ಎಲ್ಲರ ಸಹಕಾರದಿಂದ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ಮೌಲಗಳನ್ನು ತುಂಬುವ ಕೆಲಸವನ್ನು ನಾವೆಲ್ಲರೂ ಸೇರಿ ನವ ಸಮಾಜವನ್ನು ಕಟ್ಟಲು ಮುಂದೆ ಪ್ರಯತ್ನ ಮಾಡೋಣ, ತಾಲ್ಲೂಕಿಗೆ ಒಳ್ಳೆಯ ಹೆಸರು ಬರುವಂತೆ ವಿದ್ಯಾರ್ಥಿಗಳಿಗೆ ಚೈತನ್ಯವನ್ನು ತುಂಬಿ ಪರೀಕ್ಷೆಗಳಲ್ಲಿ ಉತ್ತಮ ಸ್ಥಾನವನ್ನು ಪಡೆಯುವ ಹಾಗೆ ಶಿಕ್ಷಕರು ಶ್ರಮಿಸಬೇಕಾಗಿದೆ, ಸರ್ಕಾರದಿಂದ ಬರುವ ಎಲ್ಲ ಸೌಲಭ್ಯಗಳನ್ನು ಸಮಯಕ್ಕೆ ಸರಿಯಾಗಿ ಎಲ್ಲಾ ಸರ್ಕಾರಿ ಶಾಲೆಗಳಿಗೆ ತಲುಪಿಸುವ ಕೆಲಸವನ್ನು ಮಾಡುತ್ತೇನೆಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಶಂಷುನ್ನಿಸಾರವರಿಗೆ ಗೌರವಿಸಿ ಬೀಳ್ಕೋಡುಗೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕರಾದ ಸಿ.ವಿ. ನಾರಾಯಣಸ್ವಾಮಿ, ಬೈರೇಗೌಡ, ಸುಬ್ರಮಣಿ, ಚಂದ್ರಪ್ಪ, ಪಿ.ಪೆದ್ದಪ್ಪಯ್ಯ, ರಾಮಲಕ್ಷ್ಮಮ್ಮ, ಕೆ.ಪಿ. ನಾರಾಯಣಸ್ವಾಮಿ, ನಾಗರಾಜ್, ರಾಮಲಕ್ಷ್ಮಮ್ಮ ಮತ್ತಿತರರು ಹಾಜರಿದ್ದರು.